ಪ್ರವೇಶದ್ವಾರ:ವಿಜ್ಞಾನ/ಘಟನೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
The printable version is no longer supported and may have rendering errors. Please update your browser bookmarks and please use the default browser print function instead.

ಜುಲೈ 2013

ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ

ರಾಯಚೂರು : ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್‌ನ ಆನಂದ ಪ್ರೌಢಶಾಲೆ ಮತ್ತು ಡಯಟ್‌ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ.

ಪ್ರದರ್ಶನವನ್ನು ಬೆಂಗಳೂರು ಗ್ರಾಮಾಂತರ ,ಮಂಡ್ಯ , ಉತ್ತರ ಕನ್ನಡದಲ್ಲಿ ಹಮ್ಮಿಕೊಳ್ಳಲಾಯಿತು.ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.

೯ನೇ ತರಗತಿ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ: ೯ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ . ಇದು ೨೦ ಜುಲೈ,೨೦೧೩ ರಂದು ಬಾಗಲಕೋಟೆಯಲ್ಲಿ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಯಾಗಿ ಸಂಜೀವ್ ಕುಮಾರ ಇಸರಡ್ಡಿ ಅವರು ನಿರ್ವಹಿಸಲಿದ್ದಾರೆ.

ಆಗಸ್ಟ್ 2013

ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ಪ್ರಥಮ ಬಾರಿಗೆ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ದಿನಾಂಕ :31-08-2013ರಂದು 'ವಿಜ್ಞಾನ' ಹಾಗೂ 'ಗಣಿತ' ವಿಷಯಗಳಲ್ಲಿ ಒಲಿಂಪಿಯಾಡ್ ಪರೀಕ್ಷೆಯನ್ನು ಶಾಲಾ ಹಂತದಲ್ಲಿ ಆಯೋಜಿಸಿದೆ.

ಸೆಪ್ಟಂಬರ್ 2013

ಜೀವಶಾಸ್ತ್ರ ಒಲಿಂಪಿಯಾಡ್ ಅನಾವರಣ ಶಿಬಿರ: ಇದೊಂದು ಜೀವಶಾಸ್ತ್ರ ಪ್ರಯೋಗಗಳ ಅನಾವರಣ ಶಿಬಿರ ಮತ್ತು ಜೀವಶಾಸ್ತ್ರದ ಒಲಿಂಪಿಯಾಡ್ ಸಿದ್ಧಾಂತವಾಗಿದೆ ಹಾಗೂ ಇದು ಹೋಮಿ ಬಾಬಾ ವಿಜ್ಞಾನ ವಿದ್ಯಾ ಕೇಂದ್ರದಲ್ಲಿ ೪ ರಿಂದ ೬,೨೦೧೩ ರ ವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.

MIT eDX ಇಂದ ಶಾಸ್ತ್ರೀಯ ಯಂತ್ರ(ಕ್ಲಾಸಿಕಲ್ ಮೆಕ್ಯಾನಿಕ್ಸ್) ಮೇಲೆ ಆನ್ ಲೈನ್ ಕೋರ್ಸ್ : ದಂಥಕಥೆಯಾದ ಪ್ರಾಧ್ಯಾಪಕ ವಾಲ್ಟರ್ ಲೆವಿನ್ ಅವರು eDX ಮೇಲೆ ಈ ಕೋರ್ಸನ್ನು ಪ್ರಸ್ತಾಪಿಸುವರು.ಇವರು ಭೌತಶಾಸ್ತ್ರವನ್ನು ತಮ್ಮ ನಿದರ್ಶನಗಳಿಂದ ಜೀವಂತಗೊಳಿಸುವರು ಮತ್ತು ಕಲಿಯುವವರನ್ನು ಭೌತಶಾಸ್ತ್ರದ ಸುಂದರತೆಯನ್ನು ಮೆಚ್ಚುವಂತೆ ಮಾಡುತ್ತಾರೆ. ಆನ್ ಲೈನ್ ಕೋರ್ಸ್ ಸೆಪ್ಟಂ ಬರ್ ೯,೨೦೧೩ ರಿಂದ ಪ್ರಾರಂಭವಾಗುವುದು. ಹೆಚ್ಚಿನ ವಿವರಗಳು ಇಲ್ಲಿ ದೊರಕುವುದು.

ಸೆಪ್ಟೆಂಬರ್ -5 : 'ಭಾರತೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಮರೆಯಲಾಗದ ದಿನ' "ಶಿಕ್ಷಕರ ದಿನಾಚರಣೆ" ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಷಯಗಳು


ಡಿಸೆಂಬರ್ 2013

ಅಂತರಾಷ್ಟ್ರೀಯ ಕಿರಿಯ ವಿಜ್ಞಾನ ಒಲಿಂಪಿಯಾಡ್ ೧೫ ವರ್ಷದ ಒಳಗಿನ ಮಕ್ಕಳಿಗಾಗಿ JISO ವಾರ್ಷಿಕ ಸ್ಪರ್ಧೆಯಾಗಿದೆ. ಪ್ರತಿವರ್ಷವು ಇದನ್ನು ಭಾಗವಹಿಸುವ ಒಂದು ದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುವುದು ಹಾಗೂ ಈ ಬಾರಿ ಪುಣೆಯಲ್ಲಿ ಡಿಸೆಂಬರ್ ನಲ್ಲಿ ನಡೆಸಲಾಗುವುದು.ಹೆಚ್ಚಿನ ವಿವರಗಳಿಗಾಗಿ ಇಲ್ಲಿಕ್ಲಿಕ್ಕಿಸಿ

ಡಿಸೆಂಬರ್-೨ ರಾಯಚೂರು ಜಿಲ್ಲೆ

ದಿನಾಂಕ ೨-೧೨-೨೦೧೩ ರಿಂದ ೬-೧೨-೨೦೧೩ ರವರೆಗೆ ಡಯಟ್ ಯರಮರಸ್ ನಲ್ಲಿ ನಡೆಯುತ್ತಿರುವ ೨೦೧೩ - ೧೪ ನೇ ಶೈಕ್ಷಣಿಕ ಸಾಲಿನ ೫ ದಿನದ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಪ್ರಾರಂಭದ ದಿನವಾದ ೨-೧೨-೨೦೧೩ ರಂದು ಡಯಟ್ ನ ಪ್ರಾಂಶುಪಾಲರಾದ ಶ್ರೀ ಕೆಂಚನ ಗೌಡ ಅವರ ಅಧ್ಯಕ್ಷತೆಯಲ್ಲಿ ಉದ್ಘಾನೆಯಾಗಿ KOER ನ ಆಶಯಗಳನ್ನು ಪೂರೈಸಲು ರಾಯಚೂರಿನ ವಿವಿಧ ತಾಲೂಕಿನ ಎಲ್ಲಾ ಶಿಕ್ಷಕರು ಸಭೆ ಸೇರಿದ್ದಾರೆ.