ಫೈರ್‌ಫಾಕ್ಸ್ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಚಯ

ಮೊಜಿಲ್ಲಾ ಫೈರ್‌ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್‌ಫಾಕ್ಸ್‌ ಜಿಎನ್‌ಯು/ಲಿನಕ್ಸ್‌, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್‌ ವಿಂಡೋಸ್‌ ಮತ್ತು ಇನ್ನಿತರ ಯುನಿಕ್ಸ್‌-ನಂತಹ ಆಪರೇಟಿಂಗ್ ಸಿಸ್ಟಮ್‌ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ. ಅಂಡ್ರಾಯಿಡ್‌ ಮೊಬೈಲ್‌ ಪೋನ್‌ಗಳಲ್ಲಿಯೂ ಸಹ ಫೈರ್‌ಫಾಕ್ಸ್‌ ಕಾರ್ಯನಿರ್ವಹಿಸುತ್ತದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಮೊಜಿಲ್ಲಾ ಫೈರ್‌ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಸಂಪರ್ಕ ಮತ್ತು ಕಲಿಕಾ ಪ್ರಕ್ರಿಯೆಯ ಅನ್ವಯಕವಾಗಿದೆ. ಶೈಕ್ಷಣಿಕ ಮಾಹಿತಿಯನ್ನು ಅಂತರ್ಜಾಲದಲ್ಲಿ ಶೋಧಿಸಲು ಈ ವೆಬ್‌ಬ್ರೌಸರ್ ನ್ನು ಬಳಸಬಹುದು.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಈ ಬ್ರೌಸರ್‌ ಮೂಲಕ ಹಲವು ಸಂಪನ್ಮೂಲಗಳನ್ನು, ಅನ್ವಯಕಗಳನ್ನು, ತಂತ್ರಾಂಶಗಳನ್ನು ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ಲಭ್ಯವಾಗಿಸಿಕೊಳ್ಳಬಹುದಾಗಿದೆ.
ಆವೃತ್ತಿ Firefox 49.02
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು 'Google Chrome, Opera'
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಫೈರ್‌ಫಾಕ್ಸ್ ನ ಆಂಡ್ರಾಯಿಡ್‌ ಆವೃತ್ತಿಯನ್ನು Fdroid ಮೂಲಕ ಡೌನ್‌ಲೋಡ್‌ ಮಾಡಿ ಬಳಸಬಹು.
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಮೊಜ್ಹಿಲ್ಲಾ ಪೌಂಡೇಷನ್

ಲಕ್ಷಣಗಳ ಮೇಲ್ನೋಟ

  1. ಫೈರ್‌ಫಾಕ್ಸ್‌ ವೆಬ್‌ಬ್ರೌಸರ್ xHTML, CSS, PNG ನಂತಹ ಎಲ್ಲಾ ಉನ್ನತ ನಮೂನೆಗಳ ಜೊತೆ ಕಾರ್ಯನಿರ್ವಹಿಸುತ್ತದೆ. ಇಂಟರ್‌ನೆಟ್‌ ಎಕ್ಸ್‌ಪ್ಲೋರರ್ ಮತ್ತು ನೆಟ್‌ಸ್ಕೆಪೆ ಗೆ ಹೋಲಿಸಿದಲ್ಲಿ ಫೈರ್‌ಫಾಕ್ಸ್‌ ವೆಬ್‌ಬ್ರೌಸರ್ ಸರಿಯಾದ ವೆಬ್‌ಪುಟಗಳನ್ನು ಒದಗಿಸುತ್ತದೆ.
  2. ಮೊಜಿಲ್ಲಾ ಫೈರ್‌ಫಾಕ್ಸ್ ಒಂದು ಉಚಿತ ಮತ್ತು ಮುಕ್ತ ವೆಬ್ ಬ್ರೌಸರ್ ಆಗಿದ್ದು ಅದನ್ನು ಮೊಜಿಲ್ಲಾ ಫೌಂಡೇಷನ್ ನಿರ್ವಹಿಸುತ್ತಿದೆ. ಫೈರ್‌ಫಾಕ್ಸ್‌ ಜಿಎನ್‌ಯು/ಲಿನಕ್ಸ್‌, ಮ್ಯಾಕ್ ಒಎಸ್ ಎಕ್ಸ್, ಮೈಕ್ರೋಸಾಫ್ಟ್‌ ವಿಂಡೋಸ್‌ ಮತ್ತು ಇನ್ನಿತರ ಯುನಿಕ್ಸ್‌-ನಂತಹ ಆಪರೇಟಿಂಗ್ ಸಿಸ್ಟಮ್‌ಗಳ ವಿವಿಧ ಆವೃತ್ತಿಗಳಲ್ಲಿ ಚಲಿಸುತ್ತದೆ.
  3. ಹೆಚ್ಚಿನ ಮಾಹಿತಿಗೆ ಫೈರ್‌ಫಾಕ್ಸ್‌ನ ಲಕ್ಷಣಗಳುಪುಟ ನೋಡಿ.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ Firefox ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install firefox

ಸಂಪನ್ಮೂಲ ರಚನೆಯ ಆಲೋಚನೆಗಳು

ನಿಮ್ಮ ವಿಷಯಕ್ಕೆ ತಕ್ಕಂತೆ ವೆಬ್‌ಬ್ರೌಸರ್‌ ಮೂಲಕ ನಿಮಗೆ ಬೇಕಾದ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಡೌನ್‌ಲೋಡ್‌ ಮಾಡಬಹುದು. (ಪಠ್ಯ, ಆಡಿಯೋ, ವೀಡಿಯೋ ಮತ್ತು ಚಿತ್ರಗಳು)

ಆಕರಗಳು

  1. ವಿಕಿಪೀಡಿಯಾ
  2. ವೆಬ್‌ ಬ್ರೌಸರ್