ಬೆಂಗಳೂರು ದಕ್ಷಿಣ 3 ಶಿಕ್ಷಕರು ಆನ್‌ಲೈನ್ ತರಗತಿಗಳನ್ನು ನಡೆಸುವ ಕುರಿತು ಸಾಮರ್ಥ್ಯ ವೃದ್ಧಿ ಅಭ್ಯಾಸಕ್ರಮ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೩:೪೨, ೫ ಮೇ ೨೦೨೧ ರಂತೆ Pruthviraj (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: === ಹಿನ್ನೆಲೆ === ಪ್ರಸ್ತುತ ಸಾಂಕ್ರಾಮಿಕವಾಗಿ ರೋಗವು ಹರಡುತ್ತಿರುವ ಪರಿಸ್ಥಿ...)
Jump to navigation Jump to search

ಹಿನ್ನೆಲೆ

ಪ್ರಸ್ತುತ ಸಾಂಕ್ರಾಮಿಕವಾಗಿ ರೋಗವು ಹರಡುತ್ತಿರುವ ಪರಿಸ್ಥಿತಿಯಿಂದಾಗಿ, ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ಈ ಪರಿಸ್ಥಿತಿಯು ಕೆಲವು ದಿನಗಳ ಕಾಲ ಮುಂದುವರಿಯಬಹುದು. ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಜೂನ್‌ನಲ್ಲಿ ನಡೆಯಲಿದ್ದು ೧೦ ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ತಯಾರಿ ನಡೆಸಲು ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಕರ ನಿರಂತರ ಬೆಂಬಲ ಬೇಕಾಗುತ್ತದೆ.

ಕಲಿಕೆಯ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಹೆಚ್ಚಿನ ಶಾಲೆಗಳು ವಿದ್ಯಾರ್ಥಿಗಳಿಗೆ ವಾಟ್ಸಾಪ್ ಗುಂಪುಗಳನ್ನು ರಚಿಸಿವೆ. ಅನೇಕ ಶಾಲೆಗಳಲ್ಲಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದಾರೆ. ಕೆಲವು ಶಿಕ್ಷಕರಿಗೆ ಆನ್‌ಲೈನ್ ತರಗತಿಗಳನ್ನು ನೆಡೆಸಲು ಮಾರ್ಗದರ್ಶನ ಮತ್ತು ಬೆಂಬಲ ನೀಡಿದರೆ ಅವರು ಕೂಡ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಬಹುದು.

ಐಟಿ ಫಾರ್ ಚೇಂಜ್, “ ಶಿಕ್ಷಕರ ಕಲಿಕಾ ಸಮುದಾಯ” (ಟಿಸಿಒಎಲ್) ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವಲ್ಲಿ ಸಹಾಯ ಮಾಡಲು ಬಯಸಿದ್ದೆವೆ. ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಅನುಕೂಲಕರವಾಗಲು, ಶಿಕ್ಷಕರಿಗೆ ನಾವು ಆನ್‌ಲೈನ್ ಅಭ್ಯಾಸಕ್ರಮವನ್ನು ನಡೆಸಲು ಯೋಜಿಸಿದ್ದೇವೆ.