ಮೌಖಿಕ ಚರಿತ್ರೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಮತ್ತಷ್ಟು ಮಾಹಿತಿ

  1. ಗಿಗಿ ಪದ
  2. ಮಂಟೇಸ್ವಾಮಿ ಪದ
  3. ಡೊಳ್ಳಿನ ಕುಣಿತ
  4. ಸೋಬಾನೆ ಹಾಡು
  5. ಜಾನಪದ ಕುರಿತು TV9 ವರದಿ
  6. ಡೊಳ್ಳಿನ ಕುಣಿತ ದ ಚಿತ್ರ
  7. ನಿಂಬಿಯ ಬನದ ಮ್ಯಾಗಳ ಜನಪದ ಹಾಡು
  8. ಜನಪದ ಚರಿತ್ರೆ ಕುರಿತು ವಿಕಿಪಿಡಿಯಾ ಮಾಹಿತಿ
  9. ಪುಣ್ಯಕೋಟಿ ಹಾಡು
  10. ಓನಕೆ ಓಬವ್ವನ ಹಾಡು

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

  1. ೧೨ನೇ ತರಗತಿಯ ಇತಿಹಾಸ ಪುಸ್ತಕದ ೫ನೇ ಪಾಠ

ಉಪಯುಕ್ತ ವೆಬ್ ಸೈಟ್ ಗಳು

  1. ಜಾನಪದ ವಿಶ್ವವಿದ್ಯಾಲಯ ಗೊಟಗೂಡೆ
  2. ಸಂಗೊಳ್ಳಿ ರಾಯಣ್ಣ ಕುರಿತ ಲಾವಣಿ ಪದ
  3. ಲಾವಣಿಗಳ ಸ್ವರೂಪ ಕುರಿತು ವಿವರಣೆ

ಸಂಬಂಧ ಪುಸ್ತಕಗಳು

ಗರತಿಯ ಹಾಡು
  1. ನಮ್ಮ ಪರಿಸರದ ಲಂಬಾಣಿಗರು -ಡಾ. ಮಲ್ಲಿಕಾರ್ಜುನ ಕುಂಬಾರ
  2. ತುಳುನಾಡಿನ ಜನಪದ ಕಥೆಗಳು -ಸಂ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್
  3. ನಮ್ಮ ಗಿಡಮರಬಳ್ಳಿಗಳು -ಶ್ರೀಮತಿ ಶಾಂತಿ ನಾಯಕ
  4. ತುಳುನಾಡಿನ ಜನಪದ ಕುಣಿತಗಳು -ವ್ಸಂ. ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್
  5. ದೇಶೀಯ ಕೃಷಿ ಹತೋಟಿ ಹಾಗೂ ಸಂರಕ್ಷಣಾ ಕ್ರಮಗಳು - ಪ್ರೊ.ಟಿ.ಎನ್. ಪ್ರಕಾಶ ಕಮ್ಮರಡಿ
  6. ಕರಾವಳಿ ಜನಪದ ಕಥೆಗಳು ಭಾಗ-1 -ಸಂ. ಶ್ರೀಮತಿ ಶಾಂತಿ ನಾಯಕ
  7. ಕಾಡುಗೊಲ್ಲರ ಕೋಲಾಟದ ಪದಗಳು -ಸಂ. ಎನ್. ಮೋಹನ್ ಕುಮಾರ್
  8. ಕರ್ನಾಟಕ ಸಂಶೋಧನಾ ಜಾನಪದ -ಸಂ. ಪ್ರೊ.ಎ.ವಿ. ನಾವಡ





ಬೋಧನೆಯ ರೂಪರೇಶಗಳು

ಪರಿಕಲ್ಪನೆ #1ಚರಿತ್ರೆಯ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನ.

ಕಲಿಕೆಯ ಉದ್ದೇಶಗಳು

  1. ಜನಪದ ಚರಿತ್ರೆಯು ಇತಿಹಾಸದ ಒಂದು ಆಧಾರ ಎಂದು ತಿಳಿಯುವುದು.
  2. ಚರಿತ್ರೆ ಕುರಿತು ಇರುವ ಹೊಸ ಆಯಾಮವನ್ನು ಪರಿಚಯಿಸುವುದು.
  3. ಇತಿಹಾಸದಲ್ಲ್ಲಿ ಜನಪದ ಚರಿತ್ರೆಯ ಅವಶ್ಯಕತೆಯನ್ನು ಅರಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ಆತ್ಮಿಯರೇ, ಇಲ್ಲಿಯವರೆಗೆ ಚರಿತ್ರೆ ಎಂಬುದನ್ನು ಕೇವಲ ರಾಜರು, ಅವರ ಸಾಮ್ರಾಜ್ಯ ವಿಸ್ತಾರದ ಯುದ್ಧಗಳು,ಆಡಳಿತ ,ಇಸ್ವಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತಿತ್ತು.ಆದರೆ ಇತ್ತಿಚಿನ ದಿನಗಳಲ್ಲಿ ಜನಸಾಮಾನ್ಯರ ಚರಿತ್ರೆಗೆ ಆದ್ಯತೆ ನೀಡಬೇಕು ಎಂಬುದನ್ನು ಎನ್.ಸಿ.ಇ.ಆರ್.ಟಿ. ಮತ್ತು ಎನ್.ಸಿ.ಎಫ್. ಹೇಳುತ್ತಿವೆ.ಈ ನಿಟ್ಟಿನಲ್ಲಿ ಇದೊಂದು ಹೊಸ ಪರಿಕಲ್ಪನೆಯಾಗಿದ್ದು ,ವಿದ್ಯಾರ್ಥಿಗಳಿಗೆ 'ಜನಸಾಮಾನ್ಯರ ಚರಿತ್ರೆ 'ಕುರಿತು ಅರಿವು ಮೂಡಿಸುವುದರ ಅಗತ್ಯವಿದೆ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " ಮೌಖಿಕ_ಚರಿತ್ರೆ_ಚರಿತ್ರೆಯ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನ_ ಚಟುವಟಿಕೆ 1
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "ಮೌಖಿಕ_ಚರಿತ್ರೆ_ಚರಿತ್ರೆಯ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನ_ ಚಟುವಟಿಕೆ 2

ಪರಿಕಲ್ಪನೆ #2 ಜನಪದ ಚರಿತ್ರೆ ಅರ್ಥ

ಕಲಿಕೆಯ ಉದ್ದೇಶಗಳು

  1. ಜನಪದ ಚರಿತ್ರೆ ಅರ್ಥ ತಿಳಿಯುವುದು
  2. ಜನಪದ ಚರಿತ್ರೆಯು ಜನಸಾಮಾನ್ಯರ ಚರಿತ್ರೆ ಎಂಬುದನ್ನು ಮನಗಾಣಿಸುವುದು.

ಶಿಕ್ಷಕರಿಗೆ ಟಿಪ್ಪಣಿ

ಜನಪದ ಚರಿತ್ರೆಯು ಜನಸಾಮಾನ್ಯರ ಚರಿತ್ರೆಯಾಗಿದ್ದು, ಇದು ಸಮಾಜದ ಎಲ್ಲಾ ವರ್ಗಗಳಾದ ರೈತರು,ಮಹಿಳೆಯರು,ಕೂಲಿಕಾರ್ಮಿಕರು,ಕುಶಲ ಕರ್ಮಿಗಳು,ಅಸೃಶ್ಯರು ಎಂದು ಭಾವಿಸಲಾದ ಸಮುದಾಯಗಳು,ಬುಡಕಟ್ಟು ಸಮುದಾಯಗಳು,ಸಮಾಜದ ವಿವಿಧ ಮುಖಗಳ ಪರಿಚಯ ಮಾಡಿಕೊಡುತ್ತದೆ ಎಂಬುದನ್ನು ಗಮನದಲ್ಲಿಡಬೇಕು.

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "ಮೌಖಿಕ_ಚರಿತ್ರೆ_ಜನಪದ ಚರಿತ್ರೆ ಅರ್ಥ_ಚಟುವಟಿಕೆ 1
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "ಮೌಖಿಕ_ಚರಿತ್ರೆ_ಜನಪದ ಚರಿತ್ರೆ ಅರ್ಥ_ಚಟುವಟಿಕೆ 2

ಪರಿಕಲ್ಪನೆ #3 ಜನಪದ ಚರಿತ್ರೆಯ ಸ್ವರೂಪ ಮತ್ತು ಲಕ್ಷಣಗಳು

ಕಲಿಕೆಯ ಉದ್ದೇಶಗಳು

  1. ಜನಪದ ಚರಿತ್ರೆ ವಿವಿಧ ಆಯಾಮಗಳನ್ನು ಅರಿಯುವುದು.
  2. ಜನಪದ ಚರಿತ್ರೆಯು ಪ್ರಚಲಿತ ಚರಿತ್ರೆಯಿಂದ ಭಿನ್ನತೆಯಿಂದ ಕೂಡಿರುತ್ತದೆ ಎಂಬುದನ್ನು ತಿಳಿಯುವುದು.
  3. ಆಫ್ರಿಕನ್ ಸಮುದಾಯಗಳು ಹಾಗೂ ಇತರೆ ಸಮುದಾಯಗಳು ಹೇಗೆ ತಮ್ಮ ಮೌಖಿಕ ಚರಿತ್ರೆ ರೂಪಿಸಿ ಕೊಂಡಿವೆ ಎಂಬುದನ್ನು ತಿಳಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ಜನಪದ ಚರಿತ್ರೆಯ ಸ್ವರೂಪ ಆಯಾ ಸಮಾಜದಲ್ಲಿ ಲಭ್ಯವಿರುವ ಮೌಖಿಕ ಆಕರಗಳನ್ನು ಅವಲಂಬಿಸಿರುತ್ತದೆ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಜನಪದ ಚರಿತ್ರೆಯ ಸ್ವರೂಪ ಮತ್ತು ಲಕ್ಷಣಗಳು_ಚಟುವಟಿಕೆ 1
  2. ಚಟುವಟಿಕೆ ಸಂ 2,ಜನಪದ ಚರಿತ್ರೆಯ ಸ್ವರೂಪ ಮತ್ತು ಲಕ್ಷಣಗಳು_ಚಟುವಟಿಕೆ 2

ಪರಿಕಲ್ಪನೆ #4 ಸರಳ ರೇಖಾತ್ಮಕ ಕಲಿಕೆ ಬಿಟ್ಟು ಕಾಲಚಕ್ರ ಕಲಿಕೆ

ಕಲಿಕೆಯ ಉದ್ದೇಶಗಳು

  1. ಚರಿತ್ರೆ ಬರವಣಿಗೆಯ ಮೇಲೆ ಪಾಶ್ಚಿಮಾತ್ಯರ ಪ್ರಭಾವವನ್ನು ಗುರುತಿಸುವುದು.
  2. ಚರಿತ್ರೆ ಅಧ್ಯಯನದಲ್ಲಿ ಕಾಲಚಕ್ರ ಮಾದರಿ ಕಲಿಕೆಗೆ ಆದ್ಯತೆ ನೀಡುವುದು.

ಶಿಕ್ಷಕರಿಗೆ ಟಿಪ್ಪಣಿ


ಸರಳ ರೇಖಾತ್ಮಕ ಚರಿತ್ರೆಯ ಕಲಿಕೆ - ಪಾಶ್ಚಿಮಾತ್ಯರ ವಿಧಾನವಾಗಿದೆ.
metric_ruler_scale.gif
ಕಾಲಾಚಕ್ರ ಕಲಿಕೆ - ಭಾರತೀಯ ಪಾರಂಪರಿಕ ವಿಧಾನವಾಗಿದೆ.
dino_290_01.jpg

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಸರಳ ರೇಖಾತ್ಮಕ ಕಲಿಕೆ ಬಿಟ್ಟು ಕಾಲಚಕ್ರ ಕಲಿಕೆ_ಚಟುವಟಿಕೆ 1
  2. ಚಟುವಟಿಕೆ ಸಂ 2,ಸರಳ ರೇಖಾತ್ಮಕ ಕಲಿಕೆ ಬಿಟ್ಟು ಕಾಲಚಕ್ರ ಕಲಿಕೆ_ಚಟುವಟಿಕೆ 2

ಪರಿಕಲ್ಪನೆ #5 ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನ

ಕಲಿಕೆಯ ಉದ್ದೇಶಗಳು

  1. ಚರಿತ್ರೆಕಾರ ವಸ್ತುನಿಷ್ಟವಾಗಿ ಇತಿಹಾಸ ರಚನೆ ಮಾಡಬೇಕೆನ್ನುವುದನ್ನು ತಿಳಿಸುವುದು.
  2. ಚರಿತ್ರೆಕಾರ ಲಭ್ಯವಿರುವ ಆಕರಗಳನ್ನು ಪರೀಶಿಲನೆ ಒಳಪಡಿಸುವುದರ ಅಗತ್ಯವನ್ನು ತಿಳಿಸುವುದು.
  3. ಚರಿತ್ರೆಕಾರ ಜನಸಾಮಾನ್ಯರ ಚರಿತ್ರೆ ರಚನೆಗೆ ಆದ್ಯತೆ ನೀಡಬೇಕು .
  4. ಲಭ್ಯವಿರುವ ಸ್ಥಳೀಯ ಇತಿಹಾಸಕ್ಕೆ ಪ್ರಾಧನ್ಯತೆ ನೀಡುವುದು.
  5. ಸಂಶೋಧನಾ ಭಾವನೆಯನ್ನು ಬೆಳೆಸುವುದು.

ಶಿಕ್ಷಕರಿಗೆ ಟಿಪ್ಪಣಿ

ಚರಿತ್ರೆ ಬರವಣಿಗೆಯಲ್ಲಿ ಆಗಿರುವ ಲೋಪದೋಷಗಳನ್ನು ವಿದ್ಯಾರ್ಥಿಗಳಿಗೆ ನಿರ್ದಶನದೊಂದಿಗೆ ತಿಳಿಸುವುದು ಉತ್ತಮ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನ ೧
  2. ಚಟುವಟಿಕೆ ಸಂ 2ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನ ೨

ಪರಿಕಲ್ಪನೆ #6 ಸ್ವಾತಂತ್ರ್ಯ ಹೋರಾಟದಲ್ಲಿ ಜನಪದ ಚರಿತ್ರೆಯ ಪಾತ್ರ

ಕಲಿಕೆಯ ಉದ್ದೇಶಗಳು

  1. ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರ ಭಾಗವಹಿಸುವಿಕೆ ಕುರಿತು ತಿಳಿಯುವುದು.
  2. ಜನಸಾಮಾನ್ಯರಲ್ಲಿ 'ಸ್ವಾತಂತ್ರ್ಯ ಹೋರಾಟ'ಕುರಿತು ಇರುವ ಪರಿಕಲ್ಪನೆ ತಿಳಿಯುವುದು.
  3. ಜನಸಾಮಾನ್ಯರಲ್ಲಿ ಸ್ವಾತಂತ್ರ್ಯ ಭಾವನೆ ಮೂಡಿಸುವಲ್ಲಿ ಜನಪದ ಚರಿತ್ರೆಯ ಪಾತ್ರ ಅರಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ಭಾರತದ ಸ್ವಾತಂತ್ರ್ಯ ಹೋರಾಟ ಸಾವಿರ ತೊರೆಗಳ ಸಂಗಮ , ಇದರಲ್ಲಿ ಜನಪದ ಚರಿತ್ರೆಯು ಮುಖ್ಯ ತೊರೆ ಎನ್ನುವುದನ್ನು ಬಿಂಬಿಸಬೇಕಾಗಿದೆ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1ಸ್ವಾತಂತ್ರ್ಯ ಹೋರಾಟದಲ್ಲಿ ಜನಪದ ಚರಿತ್ರೆಯ ಪಾತ್ರ ೧
  2. ಚಟುವಟಿಕೆ ಸಂ 2ಸ್ವಾತಂತ್ರ್ಯ ಹೋರಾಟದಲ್ಲಿ ಜನಪದ ಚರಿತ್ರೆಯ ಪಾತ್ರ ೨

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

  1. ಜನಪದ ಗೀತೆಗಳನ್ನು ಹಾಡಿ.
  2. ಜನಪದ ಗೀತೆಗಳನ್ನು ಸಂಗ್ರಹಿಸಿ.

ಯೋಜನೆಗಳು

  1. ವಿದ್ಯಾರ್ಥಿಗಳಿಗೆ ಊರಿನ ಹಿರಿಯರನ್ನು ಸಂಪರ್ಕಿಸಿ ತಮ್ಮ ಊರಿನ ಐತಿಹ್ಯ ರಚಿಸಲು ತಳಿಸುವುದು.
  2. ಸ್ಥಳಿಯರಿಗೆ ಭೇಟಿಯಾಗಿ ವಿವಿಧ ಪ್ರಕಾರದ ಜನಪದ ಗೀತೆಗಳನ್ನು ಸಂಗ್ರಹಿಸಿರಿ.
  3. ಬೀಸುವ-ಕುಟ್ಟುವ ಹಾಡುಗಳನ್ನು ಸಂಗ್ರಹಿಸಿ ವಿವರಣೆ ಬರೆಯಿರಿ.

ಸಮುದಾಯ ಆಧಾರಿತ ಯೋಜನೆಗಳು

  1. ಹೇಳವರನ್ನು ಸಂದರ್ಶಿಸಿ,ಅವರು ವಂಶಾವಳಿಗಳನ್ನು ಹೇಗೆ ಸಂಗ್ರಹಿಸುತ್ತಾರೆ ಎಂಬುದನ್ನು ವರದಿ ತಯಾರಿಸಿ.
  2. ಸ್ಥಳೀಯರಿಂದ ಸೊಬಾನೆ ಪದಗಳನ್ನು ಸಂಗ್ರಹಿಸಿ ವಿಶ್ಲೇಷಿಸಿ.
  3. ಗ್ರಾಮದ ರೈತರನ್ನು ಭೇಟಿಮಾಡಿ 'ರೈತಾಪಿ ವರ್ಗದ ಚರಿತ್ರೆ ರಚಿಸಿ.

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಈ ಘಟಕ ಈ ಬಾರಿಯ ಇತಿಹಾಸ ಪಠ್ಯಕ್ರಮದಲ್ಲಿ ನೂತನ ಘಟಕವಾಗಿದೆ. ಆದರೆ

  1. ಈ ಘಟಕವನ್ನು ೩ನೇ ಘಟಕವನ್ನಾಗಿ ಕೊಟ್ಟಿರುವದರಿಂದ ,ಈ ಘಟಕದ ಹಿಂದಿನ ಪಾಠ ಹಾಗೂ ಮುಂದಿನ ಪಾಠಗಳಿಗೆ ಸಹ ಸಂಬಂಧವಿದೆಯೇ? ಅಥವಾ ಈ ಘಟಕವನ್ನು ಪ್ರತ್ಯೇಕ ಘಟಕ ಎಂದು ಪರಿಗಣಿಸ ಬೇಕೇ? ಎಂಬುದರ ಕುರಿತು ಗೊಂದಲವಾಗುತ್ತಿದೆ. ಘಟಕವನ್ನು ಅಧ್ಯಯನ ಮಾಡಿದ ನಂತರ ನನಗೆ ಈ ಘಟಕ ಆರಂಭದಲ್ಲಿ ೧ನೇ ಘಟಕವಾಗಿ ಇರಬೇಕಿತ್ತು ಅನ್ನಿಸುತ್ತಿದೆ.
  2. ಕಾಲಚಕ್ರ ಮಾದರಿಯ ಚರಿತ್ರೆ ಕಲಿಕೆ ಕುರಿತು ಸ್ಪಷ್ಟನೆ ನೀಡಬೇಕೆಂದು ಕೋರಿಕೆ.