ರಾಸಾಯನಿಕ ಸಂಯೋಜನೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ರಾಸಾಯನಿಕ ಸಂಯೋಜನೆ

ಅಂದಾಜು ಸಮಯ

40 ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಗಂಧಕ ದ ಪುಡಿ (Sulphur powder)
ಚಮಚ, (Spoon)
ಉರಿಸುವ ಚಮಚ, (Defraglating Spoon)
ಮದ್ಯಸಾರ ದೀಪ, (Spirit lamp)
ಬೆಂಕಿ ಪೊಟ್ಟಣ, ( Match box)
ಪೆಟ್ರಿ ತಟ್ಟೆ ಇತ್ಯಾದಿ/ (Petri dish) etc.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಪ್ರಯೋಗ ಶಾಲೆಯಲ್ಲಿ ಎಪ್ರಾನ್ ಧರಿಸಬೇಕು./ wear apron in laboratory
  2. ಕೈಗಳಿಗೆ ಅಗ್ನಿ ನಿರೋಧಕ ಗ್ಲೌಸ್ ಧರಿಸಬೇಕು./ wear fire proof hand glouse
  3. ಶಿಕ್ಷಕರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಈ ಪ್ರಯೋಗವನ್ನು ಮಾಡಬೇಕು./ Perform this experiment in the presence of teacher
  4. ರಾಸಾಯನಿಕ ವಸ್ತುಗಳನ್ನು ಗಾಳಿಯಲ್ಲಿ ತೆರೆದಿಡಬಾರದು./ Don't expose chemicals to air
  5. ಈ ಪ್ರಯೋಗ ಮಾಡುವಾಗ ಮುಖ ಗವಸನ್ನು ಬಳಸಬೇಕು./ wear mask during the experiment
  6. ಪ್ರಯೋಗದ ನಂತರ ಉಪಕರಣಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸಬೇಕು./ Clean the apparatus properly after the experiment to avoid chemical reactions.


ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಒಂದು ಉರಿಸುವ ಚಮಚ ತೆಗೆದುಕೊಂಡು ಅದರಲ್ಲಿ ಸುಮಾರು 2 ಗ್ರಾಂ ನಷ್ಟು ಗಂಧಕದ ಪುಡಿಯನ್ನು ತೆಗೆದುಕೊಳ್ಳಿ . ಮದ್ಯಸಾರ ದೀಪವನ್ನು ಬೆಂಕಿ ಪೊಟ್ಟಣದ ಸಹಾಯದಿಂದ ಹೊತ್ತಿಸಿ. ಉರಿಸುವ ಚಮಚವನ್ನು ಮದ್ಯಸಾರ ದೀಪದ ಮೇಲಿಟ್ಟು ಕಾಯಿಸಿ, ಕೆಲವು ಸಮಯದ ನಂತರ ಚಮಚದಲ್ಲಿರುವ ಗಂಧಕವು ನಿಧಾನವಾಗಿ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವರ್ತಿಸಿ ನೀಲಿ ಜ್ವಾಲೆಯನ್ನು ಉಂಟು ಮಾಡುತ್ತಾ ಹೊತ್ತಿ ಉರಿಯುತ್ತದೆ. ಹಾಗೂ ಗಂಧಕದ ಡೈ ಆಕ್ಸೈಡ್ ನ ಧೂಮವನ್ನು ಉಂಟು ಮಾಡುತ್ತದೆ.
{{#ev:youtube|B5WHVOlI-SY| 400}}
https://youtu.be/B5WHVOlI-SY

ರಾಸಾಯನಿಕ ಸಮೀಕರಣ
S + O2 --> SO2

Take a defraglating spoon, put 2gms of Sulphur powder in it. Burn the Spirit lamp, keep the defraglating spoon with Sulphur powder on it. After sometime, Sulphur powder turns into liquid state and it combines with the oxygen present in air and becomes Sulphur dioxide with blue flames.

Chemical Equation:
S + O2 --> SO2

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ನಮ್ಮ ಜೀವನದಲ್ಲಿ ನಡೆಯುವ ಹಲವಾರು ರಾಸಾಯನಿಕ ಸಂಯೋಜನೆ ಕ್ರಿಯೆಗಳಿಗೆ ಇದೊಂದು ಉತ್ತಮ ನಿದರ್ಶನವಾಗಿದೆ.
It is a good example for various chemical reactions taking place around us in our daily life.

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಗಂಧಕವನ್ನು ಉರಿಸಿದಾಗ ಬೇಗನೇ ದ್ರವಿಸಲು ಕಾರಣವೇನು ? / why the sulphur liquifies quickly while heating ?
  2. ಈ ಪ್ರಯೋಗದಲ್ಲಿ ಬಿಡುಗಡೆಯಾಗುವ ಅನಿಲ ಯಾವುದು ? / which is the gas liberated during the experiment ?

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್