ಲಿಬ್ರೆ ಆಫೀಸ್ ಕ್ಯಾಲ್ಕ್ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಚಯ

ಈ ಹಿಂದೆ, ಲೆಕ್ಕಿಗರು ಕಾಗದದ ಲೆಕ್ಕಪತ್ರಗಳ ಮೂಲಕ ವೆಚ್ಚಗಳು, ಪಾವತಿಗಳು, ತೆರಿಗೆ ಮತ್ತು ಆದಾಯಗಳನ್ನು ಪೂರ್ಣ ಹಣಕಾಸು ಸ್ಥಿತಿಗತಿಯನ್ನುತಿಳಿಯುವ ಉದ್ದೇಶದಿಂದ ದಾಖಲಿಸುತ್ತಿದ್ದರು. ಈ ಕಾಗದಗಳನ್ನು ದತ್ತಾಂಶ ಕೋಷ್ಟಕಗಳು (ಸ್ಪ್ರೆಡ್‌ಶೀಟ್‌ಗಳು) ಎನ್ನುತ್ತಿದ್ದರು. ಈಗ ಅದೇ ರೀತಿಯ ಲೆಕ್ಕಪತ್ರಗಳನ್ನು ನಾವು ವಿದ್ಯುನ್ಮಾನವಾಗಿ ದಾಖಲಿಸುತ್ತಿದ್ದೇವೆ. ಈ ವಿದ್ಯುನ್ಮಾನ ಲೆಕ್ಕಪತ್ರವು ಅಡ್ಡಗರೆ ಮತ್ತು ಲಂಬಗೆರೆಯ ಕೋಷ್ಟಕ ಮಾದರಿಯಲ್ಲಿ ದಾಖಲೆಯನ್ನು ಸಂಗ್ರಹಿಸುತ್ತದೆ. ಅಡ್ಡಗೆರೆ ಮತ್ತು ಲಂಬಗೆರೆ ಕೂಡುವ ಜಾಗವನ್ನು "ಸೆಲ್" ಎಂದು ಕರೆಯುತ್ತೇವೆ, ಇಲ್ಲಿ ಸಂಖ್ಯೆಗಳನ್ನು ಹಾಗು ಪಠ್ಯಗಳನ್ನು ನಮೂದಿಸಬಹುದಾಗಿದೆ.

ಐ.ಸಿ.ಟಿ ಸಾಮರ್ಥ್ಯ

ಇದೊಂದು ಸಾರ್ವತ್ರಿಕ ಸಂಪನ್ಮೂಲ ರಚನೆಯ ಅನ್ವಯಕವಾಗಿದ್ದು. ದತ್ತಾಂಶಗಳನ್ನು ಸಂಗ್ರಹಿಸುವ, ವಿಶ್ಲೇಷಿಸುವ ಹಾಗು ವಿಶ್ಲೇಷಿಸಿದ ದತ್ತಾಂಶವನ್ನು ಕೋಷ್ಟಕಗಳ ಮೂಲಕ ಪ್ರಕಟಿಸುವ ಕಾರ್ಯ ನೆಡೆಸುತ್ತವೆ.

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ವಿದ್ಯುನ್ಮಾನ ದತ್ತಾಂಶ ಕೋಷ್ಟಕದ ಪ್ರಮುಖ ಉಪಯುಕ್ತತೆ ಎಂದರೆ, ಈ ಕೋಷ್ಟಕದಲ್ಲಿ ನಮೂದಿಸಿದ ಮಾಹಿತಿಯನ್ನು ಹಲವು ರೀತಿಯ ಪ್ರಕ್ರಿಯೆಗೆ ಒಳಪಡಿಸಬಹುದು. ಗಣಿತ ಶಿಕ್ಷಕರಿಗೆ ಬೀಜಗಣಿತದ ಕೆಲವು ಕಾರ್ಯಗಳನ್ನು ಸುಲಭವಾಗಿಸುತ್ತದೆ. ಹಾಗು ಬೇರೆ ಬೇರೆ ವಿಷಯಗಳಿಗೆ ಸಾಂಖ್ಯಿಕ ವಿಶ್ಲೇಷಣೆ ನಡೆಸಬಹುದು. ಈ ಕೈಪಿಡಿಯಲ್ಲಿ ಉದಾಹರಣೆಯಾಗಿ :

  1. ದತ್ತಾಂಶ ಕೋಷ್ಟಕದ ಮೂಲಕ ವಿವಿಧ ಪ್ರದೇಶಗಳ ಮಳೆ ಪ್ರಮಾಣದ ದತ್ತಾಂಶವನ್ನು ನಿರ್ವಹಣೆ ಮಾಡುವುದನ್ನು ನೋಡಬಹುದು.
  2. ಗಣನೆಗಳ ಮೂಲಕ ಮಾಹಿತಿ ವಿಶ್ಲೇಷಣ
  3. ವಿಶ್ಲೇಷಿಸಿದ ಮಾಹಿತಿಗಳ ಆಧಾರದ ಮೇಲೆ ವರದಿಗಳನ್ನು ರಚಿಸುವುದು. (ವಿವಿಧ ಪ್ರದೇಶಗಳಲ್ಲಿನ ಮಳೆ ಬೀಳುವ ಪ್ರಮಾಣ)
  4. ದತ್ತಾಂಶವನ್ನು ಚಿತ್ರಸಹಿತವಾಗಿ ವಿವರಿಸಲು ಸಾಧ್ಯವಾಗುವಂತಹ ಗ್ರಾಫ್‌ಗಳನ್ನು ರಚಿಸುವುದು.

ಆವೃತ್ತಿ

LibreOffice Calc, Version: 5.2.0.4 (LibreOffice Calc is also available on the Windows and Macintosh operating systems)

ಸಂರಚನೆ

ಲಕ್ಷಣಗಳ ಮೇಲ್ನೋಟ

ದತ್ತಾಂಶ ಕೋಷ್ಟಕ ಅನ್ವಯಕವು ದತ್ತಾಂಶವನ್ನು ಸಂಗ್ರಹಿಸಲು, ದತ್ತಾಂಶವನ್ನು ವಿವಿಧ ರೀತಿಯಲ್ಲಿ ಪ್ರಕ್ರಿಯೆಗೊಳಿಸಲು, ದತ್ತಾಂಶವನ್ನು ವಿಶ್ಲೇಷಿಸಲು, ಪಠ್ಯ ರಚಿಸಲು ಮತ್ತು ಗ್ರಾಫಿಕ್ ರಚಿಸಲು ಬಳಸಲಾಗುತ್ತದೆ. ಈ ಅನ್ವಯಕವು ಸಂಖ್ಯಾಶಾಸ್ತ್ರ, ಅಂಕಗಣಿತ ಮತ್ತು ಪಠ್ಯ ಪ್ರಕ್ರಿಯೆಯ ಹಲವು ಕಾರ್ಯಗಳನ್ನು ಹೊಂದಿದೆ. ದತ್ತಾಂಶವನ್ನು ವಿಭಿನ್ನ ಕೋಷ್ಟಕಗಳ ಜೊತೆಗೆ ವಿಂಗಡಿಸಬಹುದು(Sort), ಶೋಧಿಸಬಹುದು (filter) ಪ್ರಕ್ರಿಯೆಗೊಳಿಸಬಹುದು.

ಇತರೇ ಸಮಾನ ಅನ್ವಯಕಗಳು

Other spreadsheet software applications include Microsoft Excel, OpenOffice Calc, Google spreadsheet etc.

ಅಭಿವೃದ್ದಿ ಮತ್ತು ಸಮುದಾಯ ಸಹಾಯ

Developer(s) -The Document Foundation Stable release: "Fresh" version: 5.2.2 (September 29, 2016; 14 days ago[1]) [±] "Still" version: 5.1.5 (August 3, 2016; 2 months ago[1]) [±] Development status- Active Operating system-Linux, OS X, Microsoft Windows[2] and FreeBSD[3] Type - Spreadsheet License-GNU LGPLv3[4] Website-www.libreoffice.org/discover/calc/

ಅನ್ವಯಕ ಬಳಕೆ

ಕಾರ್ಯಕಾರಿತ್ವ

ಲಿಬ್ರೆ ಆಪೀಸ್ ಕ್ಯಾಲ್ಕ್ ಉಬುಂಟು ಕಸ್ಟಂನ ಭಾಗವಾಗಿದೆ. ಇದನ್ನು Application - Office - Libreoffice Calc ಮೂಲಕ ತೆರೆಯಬಹುದು. ಒದು ಒಂದು ‘work book’ ನ ಮೂಲಕ ತೆರೆಯುತ್ತದೆ. ಈ ವರ್ಕ್‌ಬುಕ್ ಹಲವು ‘sheets’ ಗಳನ್ನು ಹೊಂದಿರುತ್ತದೆ.




ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು. ಈ ಮೇಲಿನ ಉದಾಹರಣೆಯಲ್ಲಿ ನಾವು ಕಡತಕ್ಕೆ ಈ ರೀತಿಯಾಗಿ ಹೆಸರಿಸುತ್ತೇವೆ - ““Rainfall information for cities in South India, October 2016.ods”. ದಿನಾಂಕವನ್ನು ಸಹ ಕಡತದ ಹೆಸರಿನೊಂದಿಗೆ ಸೇರಿಸುವುದರಿಂದ ಈ ಕಡತವನ್ನು ಯಾವಾಗ ರಚಿಸಿದ್ದೆಂದು ತಿಳಿಯಲು ಸಾಧ್ಯವಾಗುತ್ತದೆ.

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಪಿಡಿಎಪ್ ಗೆ ಎಕ್ಸ್‌ಪೋರ್ಟ್‌ ಮಾಡಬಹುದು. ಇದು ನೀವು ಯಾವುದೇ ರೀತಿಯ ಬದಲಾವಣೆ ಮಾಡದೇ ಕೇವಲ ಮುದ್ರಿಸುವ ಸಲುವಾಗಿ ಬಳಕೆಯಾಗುತ್ತದೆ.

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ Search Libreoffice
ಟರ್ಮಿನಲ್‌ನಿಂದ sudo apt-get install libreoffice
ವೆಬ್‌ಪುಟದಿಂದ Go to libreoffice.org and download files to install
ವೆಬ್‌ಆಧಾರಿತ ನೊಂದಣಿ Not Applicable

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಅಂಡ್ರಾಯಿಡ್‌ ಮೊಬೈಲ್‌ ನಲ್ಲಿ ಈ ಅನ್ವಯಕವನ್ನು ಓಪನ್ ಡಾಕ್ಯುಮೆಂಟ್ ವ್ಯೂವರ್ ಮತ್ತು WPS ಆಪೀಸ್ ಮೂಲಕ ಬಳಸಬಹುದು.

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು