ವಿಷಯಶಿಕ್ಷಕರವೇದಿಕೆ ಸದಸ್ಯರ ಇಮೇಲ್ ಮಾರ್ಗಸೂಚಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

See in Englishclick here

STF ಗುಂಪಿನಲ್ಲಿ ಸದಸ್ಯರಾಗುವುದು ಹೇಗೆ.?

ನೀವು ಬೋಧಿಸುವ ವಿಷಯದ STF ಗುಂಪಿನ ಸದಸ್ಯರಾಗಲು ಗೂಗಲ್ ಫಾರಂ ಅನ್ನು ಭರ್ತಿಮಾಡಿ ರವಾನಿಸಿರಿ.ಒಂದು ವಾರದ ಒಳಗಾಗಿ ನಿಮ್ಮನ್ನು ಗುಂಪಿಗೆ ಸೇರಿಸಲಾಗುತ್ತದೆ.ಗೂಗಲ್ ಫಾರ್ಮ್‌ಗಾಗಿ ಇಲ್ಲಿ ಕ್ಲಿಕ್ಕಿಸಿರಿ

WhatsApp,Hike,telegram ಗುಂಪುಗಳಲ್ಲಿ (ಆಂಡ್ರಾಯಿಡ್ ಫೋನ್ ಆಧಾರಿತ ಗುಂಪುಗಳು)ಸದಸ್ಯರಾಗುವುದು ಹೇಗೆ.?

ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಚಾಲನೆಯಲ್ಲಿರುವ WhatsApp,Hike,teligram ಗುಂಪುಗಳ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. ಈ ಪಟ್ಟಿಯಲ್ಲಿರುವ ಗುಂಪುಗಳನ್ನು ಸೇರಲು ಆಯಾ ಗ್ರೂಪ್ ನ ಅಡ್ಮಿನ್ ರವರ ಮೊಬೈಲ್ ಸಂಖ್ಯೆಗೆ ನಿಮ್ಮ ಪೂರ್ಣ ಹೆಸರು, ನಿಮ್ಮ ಶಾಲಾ / ಸಂಸ್ಥೆ ಹೆಸರು , ನೀವು ಬೋಧಿಸುವ ವಿಷಯ, ಜಿಲ್ಲಾ / ತಾಲೂಕಿನ ಹೆಸರು, ಮೊಬೈಲ್ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ಯನ್ನು ಒಳಗೊಂಡ ಸಂದೇಶವನ್ನು ರವಾನಿಸಿ.(ಇದಕ್ಕೆ ದಯಮಾಡಿ ಮೇಲ್ ಮಾಡುವ ಅಗತ್ಯವಿಲ್ಲ). ಇದಕ್ಕೆ ಪೂರಕವಾಗಿ WhatsApp,Hike,telegram ಗುಂಪುಗಳ ಅಡ್ಮಿನ್ ಗಳು ತಮ್ಮ ಗುಂಪುಗಳ ಬಗೆಗೆ ಮಾಹಿತಿ ನೀಡಬಹುದು, ಈ ಮೂಲಕ ಇನ್ನು ಹೆಚ್ಚಿನ ಶಿಕ್ಷಕರಿಗೆ ಈಗಾಗಲೇ ಚಾಲನೆಯಲ್ಲಿರುವ ಗುಂಪುಗಳ ಮಾಹಿತಿ ದೊರೆಯುತ್ತದೆ. ಅಡ್ಮಿನ್‌ಗಳು ತಮ್ಮ ಗುಂಪುಗಳ ಬಗೆಗೆ ಮಾಹಿತಿ ನೀಡಲು ಈ ಲಿಂಕ್‌ನ್ನು ಕ್ಲಿಕ್ ಮಾಡಿ.ತಮ್ಮ ತಮ್ಮ ಗುಂಪಿನಲ್ಲಿ ಸದಸ್ಯತ್ವ ನೀಡುವ ಅಥವ ನಿರಾಕರಿಸುವ ಅಧಿಕಾರ ಆಯಾ ಗುಂಪುನ ಅಡ್ಮಿನ್ ಗಳಿಗೆ ಬಿಟ್ಟದ್ದು. ಆದರೂ ಕರ್ನಾಟಕ ಎಲ್ಲಾ ಶಿಕ್ಷಕರಿಗೂ ಮುಕ್ತ ಅವಕಾಶವಿರುತ್ತದೆ. Google doc ನಲ್ಲಿ ವಿವಿಧ ಸೆಲ್ ಗುಂಪುಗಳ ಹೆಸರು ಮತ್ತು ಅಡ್ಮಿನ್ ಗಳ ಹೆಸರನ್ನು ಪ್ರಕಟಿಸಲಾಗಿದೆ . ಒಂದು ಗುಂಪು ಆರಂಭಿಸಲು ಅಥವ ಒಂದು ಗುಂಪು ಸೇರಲು ಬಯಸುವ ಮುನ್ನ ಈ ಪುಟಕ್ಕೆ ಭೇಟಿ ನೀಡಿ.

ವೇದಿಕೆ ಸದಸ್ಯರಿಗೆ ಮೇಲಿಂಗ್ ಮಾರ್ಗಸೂಚಿ

  1. ಪ್ರತಿ ಗುಂಪು ಸಹ ಶೈಕ್ಷಣಿಕ ಉದ್ದೇಶವುಳ್ಳದ್ದಾಗಿದೆ .ಆದ್ದರಿಂದ ತಮ್ಮ ಎಲ್ಲಾ ಇ ಮೇಲ್ ಗಳು ಶೈಕ್ಷಣಿಕ ಕಾಳಜಿ ಇರುವಂತವಾಗಿರಬೇಕು. ವೈಯಕ್ತಿಕ ಮೇಲ್‌ಗಳು , ಶೈಕ್ಷಣಿಕ ದೃಷ್ಟಿಕೋನಗಳಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲದ ಮೇಲ್‌ಗಳನ್ನು ವೇದಿಕೆಯಲ್ಲಿ ಹಂಚಿಕೊಳ್ಳುವಂತಿಲ್ಲ.
  2. ನಿಮಗೆ ಮೇಲ್ ಕಳುಹಿಸಿದ ವ್ಯಕ್ತಿಗೆ ಮಾತ್ರ ಪ್ರತ್ಯುತ್ತರ ನೀಡಬೇಕಾದಲ್ಲಿ ಗುಂಪಿನೊಡನೆ ಹಂಚಿಕೊಳ್ಳುವ ಬದಲಿಗೆ ಸಂಬಂಧಪಟ್ಟವ್ಯಕ್ತಿಯ ಜೊತೆ ಮಾತ್ರ ಹಂಚಿಕೊಳ್ಳಿರಿ. ಉದಾಹರಣೆಗೆ ನೀವು WhatsApp ಗುಂಪು ಸೇರಲು ಬಯಸಿದರೆ ಗುಂಪನ್ನು ರಚಿಸಿರುವ ಅಡ್ಮಿನ್‌ಗೆ ಮಾತ್ರ ಮನವಿಯನ್ನು ಕಳುಹಿಸಿರಿ.ನೀವು 'REPLY'ಆಯ್ಕೆ ಮಾಡಿದರೆ ಗುಂಪಿನ ವಿಳಾಸವನ್ನು ತೆಗೆದುಕೊಳ್ಳುತ್ತದೆ, ಆಗ ಗುಂಪಿನ ವಿಳಾಸವನ್ನು ತೆಗೆದು, ಸಂಬಂಧಪಟ್ಟವ್ಯಕ್ತಿಯ ಮೇಲ್ ವಿಳಾಸವನ್ನು 'copy'ಮಾಡಿ 'paste'ಮಾಡಿರಿ. ಆಗ ಗುಂಪಿನ ಎಲ್ಲಾ ಸದಸ್ಯರಿಗೂ ಅನಾವಶ್ಯಕವಾಗಿ ರವಾನೆಯಾಗುವುದು ತಪ್ಪುತ್ತದೆ.
  3. ಯಾವುದೇ ಇಮೇಲ್ ಗೆ ರಿಪ್ಲೈ ಮಾಡುವಾಗ ಆ ಇಮೇಲ್‌ನ "ಸಬ್ಜೆಕ್ಟ್‌"ನ್ನು ಗಮನಿಸಿ, ಒಂದು "ಸಬ್ಜೆಕ್ಟ್‌" ಬಗೆಗೆ ಚರ್ಚೆ ನಡೆಯುವಾಗ ಮದ್ಯೆದಲ್ಲಿ ಇನ್ಯಾವುದೋ ವಿಷಯವನ್ನು ಅದೇ "ಸಬ್ಜೆಕ್ಟ್‌" ಅಡಿಯಲ್ಲಿ ರಿಪ್ಲೈ ಮಾಡಬೇಡಿ. ಅದೇ ರೀತಿ ಅಟ್ಯಾಚ್‌ಮೆಂಟ್ ಅಥವಾ ಪೋಟೋಗಳನ್ನು ಕಳುಹಿಸುವಾಗ ದಯವಿಟ್ಟು ಗಮನವಹಿಸಿ ಅದಕ್ಕೆ ಸೂಕ್ತವಾಗುವ "ಸಬ್ಜೆಕ್ಟ್‌" ಹಾಗು ಅದರ ಬಗೆಗಿನ ಮಾಹಿತಿಯನ್ನು ನಮೂದಿಸಿ. ಇಲ್ಲದಿದ್ದಲ್ಲಿ ನಿಮ್ಮ ಇಮೇಲ್ ತುಂಬಾ ಉಪಯುಕ್ತವಾದ ಸಂಪನ್ಮೂಲ ಹೊಂದಿದ್ದರೂ ಸಹ ಗುಂಪಿನಲ್ಲಿ ಕಡೆಗಣನೆಗೆ ಒಳಪಡಬಹುದು.
  4. ನಿಮ್ಮ ಇಮೇಲ್ ಗೆ ಸರಿಯಾದ 'ವಿಷಯ'ವನ್ನು ನೀಡಿರಿ.'ಹಾಯ್ಹಲೋ'ನಂತಹ ಅಸಂಬದ್ದ ವಿಷಯ ನೀಡುವುದು ಸರಿಯಲ್ಲ.ಸರಿಯಾದ ವಿಷಯವನ್ನು ನಮೂದಿಸಿದರೆ ನಿಮ್ಮ ಮೇಲ್‌ಅನ್ನು ಓದಬೇಕೋ? ಬೇಡವೂ ಎಂಬುದನ್ನು ನಿರ್ಧರಿಸಲು ಸಹಾಯವಾಗುತ್ತದೆ.ನಮಗೆ ನೀವು ಕಳುಹಿಸಿರುವ ವಿಷಯದಮೇಲೆ ಆಸಕ್ತಿ ಇಲ್ಲದಿದ್ದರೆ,ಬೇಡವಾದರೆ ಅದನ್ನು ತ್ಯಜಿಸಬಹುದು ಅಥವ ನಂತರ ಓದಬಹುದು.ಉದಾಹರಣೆಗೆ ನೀವು ರೂಪಣಾತ್ಮಕ ಮೌಲ್ಯಮಾಪನದ ಬಗ್ಗೆ ಕೆಲವು ಮಾಹಿತಿ ಬಯಸುವಾಗ "ಗುಂಪುಗಳಿಗೆ ಸೇರಿಸಿ" ಹೇಳುವ ವಿಷಯ ನೀಡಿದರೆ ಯಾವ ಸದಸ್ಯರು ಸಹ ನಿಮ್ಮ ಇಮೇಲ್ ನೋಡದೇ ಇರಬಹುದು. ಆದ್ದರಿಂದ ಅರ್ಥಬದ್ದವಾದ ವಿಷಯವನ್ನು ನೀಡುವುದು ಮೇ‌ಲ್‌ ‌‌ನ ಆದ್ಯತೆಗೆ ತಕ್ಕಂತೆ ಓದಲು ಅಥವ ಓದದಿರಲು ಸಹಾಯಕವಾಗಿದೆ.ಉದಾ:ಒಬ್ಬ CBZ ಶಿಕ್ಷಕ "Direct common tangent Geogebra file" ಎಂಬ ವಿಷಯದ ಮೇಲ್‌ಅನ್ನು ಓದುವ ಅವಶ್ಯಕತೆ ಇಲ್ಲವೆಂದು ನಿರ್ಧರಿಸಬಹುದು.
  5. ನೀವು ಕಡತಗಳನ್ನು ಲಗತ್ತಿಸುವಾಗ ಕಡತಕ್ಕೆ ಹೊಂದಾಣಿಕೆಯಾಗುವಂತೆ ಅರ್ಥಪೂರ್ಣ ಹೆಸರೊಂದನ್ನು ನೀಡಿರಿ.'Doc1.odt' ಅಥವಾ 'harish.odt'ಎಂಬ ಹೆಸರುಗಳನ್ನು ನೀಡುವುದು ಅರ್ಥಹೀನ.ಕಡತದ ಹೆಸರು ಲಗತ್ತಿಸಿರುವ ಕಡತವು ಒಳಗೊಡಿರುವ ಅಂಶವನ್ನು ಸಂಕ್ಷಿಪ್ತವಾಗಿ ತಿಳಿಸುವಂತಿರಬೇಕು. ಉದಾ:'Congruent triangles.ggb'.ಜೊತೆಗೆ ನೀವು ಲಗತ್ತಿಸಿರುವ ಕಡತಕ್ಕೆ ಪೂರಕವಾಗಿ ವಿಷಯದ ವಿವರಣೆಯನ್ನು ಜೊತೆಗೆ ಒದಗಿಸಬೇಕು.
  6. ನಿಮ್ಮ ಪ್ರತಿ ಮೇಲ್ ನ ಕೊನೆಯಲ್ಲಿ ನಿಮ್ಮ ಹೆಸರು,ಶಾಲೆಯ ಹೆಸರು,ತಾಲೂಕಿನ ಹೆಸರು ಹಾಗೂ ನಿಮ್ಮ ಸೆಲ್‌ಫೂನ್ ಸಂಖ್ಯೆಯೊಂದಿಗಿನ ಪೂರ್ಣವಾದ ವಿವರವುಳ್ಳ ವಿಳಾಸದೊಂದಿಗೆ ನಿಮ್ಮ ಮೇಲ್ ಕೊನೆಗೊಳ್ಳುವಂತಿರಬೇಕು.ಇದನ್ನು ಸ್ವಯಂ ಚಾಲಿತವಾಗಿ ರೂಪುಗೊಳ್ಳುವಂತೆ ಮಾಡಲು 'settings'ನಲ್ಲಿ 'signature'ಅಯ್ಕೆಯನ್ನು ಚಾಲನೆ ಗೊಳಿಸಿಕೊಳ್ಳಬೇಕು.ಇದು ಎಲ್ಲರಿಗೂ ತುಂಬಾ ಸಹಕಾರಿಯಾಗುತ್ತದೆ. ನಿಮ್ಮ ಇಮೇಲ್‌ಗೆ ಸಿಗ್ನೇಚರ್ ಅಳವಡಿಸಿಕೊಳ್ಳುವ ವಿಧಾನವನ್ನು ಈ ಲಿಂಕ್ ಮೂಲಕ ತಿಳಿಯಬಹುದು
  7. STFನಲ್ಲಿ ಇ-ಮೇಲ್‌ನ ಪ್ರಮಾಣ ಬಹಳವಾಗಿದ್ದು ಪ್ರತಿ ಗುಂಪಿನ ಇ-ಮೇಲ್ ಗಳನ್ನು filter ಮಾಡಿ ಪ್ರತ್ಯೇಕವಾದ Folder ನಲ್ಲಿ ಇರಿಸಿ ಕೊಳ್ಳ ಬಹುದು ಆಗ 'Gmail'ಅಥವ 'ThunderBird'ಮೇಲ್ ಗಳನ್ನು ಗುಂಪುಗಳಿಗೆ ಅನ್ವಯವಾಗಿ ಜೋಡಿಸಿಕೊಳ್ಳುವುದರಿಂದ ಮಹತ್ವಕ್ಕೆ ಅನುಗುಣವಾಗಿ ಶೀಘ್ರವಾಗಿ ಮತ್ತು ಸುಲಭವಾಗಿ ಮೇಲ್‌ಗಳನ್ನು ನೋಡಬಹುದು. ನಿಮ್ಮ ಇಮೇಲ್ ನಲ್ಲಿ ಫಿಲ್ಟರ್ ಅಳವಡಿಸಿಕೊಳ್ಳುವ ಬಗೆಗಿನ ವಿಧಾನವನ್ನು ತಿಳಿಯಲು ಈ ಲಿಂಕ್ ನ್ನು ನೋಡಬಹುದು 
  8. ನಿಮಗೆ ಯಾರದರು ಶಿಕ್ಷರರು ಅನಗತ್ಯವಾದ ಅಥವ ನಿಮಗೆ ಆಸಕ್ತಿ ಇಲ್ಲದ ಮೇಲ್ ಕಳುಹಿಸುತ್ತಿರುವುದು ಕಂಡುಬಂದರೆ, ನೀವು 'filter'ಆಯ್ಕೆಯಡಿ ಒಂದು 'folder'ರಚಿಸಿ ಕೊಂಡರೆ ಅದು ಪ್ರತ್ಯೇಕವಾಗಿತ್ತದೆ ಮತ್ತು ಮೇಲ್ ನ ಇನ್ಬಾಕ್ಸ್ ಗೆ ಬರುವುದಿಲ್ಲ.ಜೊತೆಗೆ 'filter'ಬಳಸುವುದರಿಂದ ಸಮಯವನ್ನು ಉಳಿಸ ಬಹುದು ಮತ್ತು ನಮ್ಮ ಆದ್ಯತೆಗೆ ತಕ್ಕಂತೆ ಮೇಲ್ ಗಳನ್ನು ನೋಡಬಹುದು.ಈ ರೀತಿ ಮೇಲ್ ನ ತಾಂತ್ರಿಕ ಸಾಧನವನ್ನು ಬಳಸಿ,ಇನ್ಬಾಕ್ಸ್ ನ ಹೊರೆಯನ್ನು ತಗ್ಗಿಸಬಹುದು.
  9. ನಿಮ್ಮ Gmailನಲ್ಲಿ search ಆಯ್ಕೆಯನ್ನು ಬಳಸಿ ನಿಮ್ಮ ಇನ್‌ಬಾಕ್ಸ್‌ನಲ್ಲಿ ಬಯಸುವ ಸಂಪನ್ಮೂಲ ಸುಲಭವಾಗಿ ಹುಡುಕಬಹುದು. ಉದಾಹರಣೆಗೆ 'ಕಾರ್ಯ ಯೋಜನೆ' ಎಂಬ ವಿಷಯದ ಇಮೇಲ್‌ನ್ನು ನೋಡಬಯಸಿದರೆ, ಸರ್ಚ್‌ನಲ್ಲಿ "ಕಾರ್ಯಯೋಜನೆ" ಎಂದು ನಮೂದಿಸಿ ಹುಡುಕಿ, ನಂತರ 'ಕಾರ್ಯ ಯೋಜನೆ'ಯ ಎಲ್ಲಾ ಮೇಲ್ ಗಳು ನಿಮಗೆ ತೋರಿಸಲ್ಪಡುತ್ತದೆ. ಎಲ್ಲಾ ಮೇಲ್ ಗಳನ್ನು ನೋಡಿದ ನಂತರ ಅಗತ್ಯಮಾಹಿತಿ ಸಿಕ್ಕಬಹುದು ನಂತರ ಸಿಗದಿದ್ದ ಪಕ್ಷದಲ್ಲಿ ನಿಮ್ಮ ಅವಶ್ಯಕತೆಯನ್ನು ಅಪೇಕ್ಷಿಸಬಹುದು. ಆದರಿಂದ ಸರಿಯಾದ 'ವಿಷಯ'ವನ್ನು ನೀಡಿ ಕಳುಹಿಸಬೇಕು. ನೀವು ಹುಡುಕುತ್ತಿರುವ ವಿಷಯ ನೀವು ವೇದಿಕೆಗೆ ಸೇರುವ ಮೊದಲೇ ಹಂಚಿಕೆಯಾಗಿದ್ದಲ್ಲಿ, ಈ ಹಿಂದಿನ ಇಮೇಲ್ ಗಳನ್ನು ಇಲ್ಲಿ ನೋಡಬಹುದಾಗಿದೆ
  10. ಇಮೇಲ್ ಮಾದ್ಯಮವು SMS ಮತ್ತು WhatsApp ಮಾದ್ಯಮಗಳಿಗಿಂತ ಹೆಚ್ಚು ನಿಖರ ಮತ್ತು ಪರಿಣಾಮಕಾರಿಯಾದ ಉಪಯುಕ್ತ ಸಂವಹನ ಮಾದ್ಯಮವಾಗಿದೆ.ಆದ್ದರಿಂದ ಇಮೇಲ್‌ನ್ನು ಸಹ ನೀವು ಪತ್ರ ಬರೆಯಲು ಹೇಗೆ ನಿಯಮ ಪಾಲಿಸುತ್ತಿರೊ ಹಾಗೆ ವಿವರಣಾತ್ಮಕವಾಗಿ ಬಳಸಿರಿ. ನೀವು ಹಂಚಿಕೊಳ್ಳುವ SMS ಅಥವಾ WhatsApp ಸಂದೇಶಗಳಿಗೆ ಕೆಲವು ಅಕ್ಷರದ ಮಿತಿಗಳಿವೆ ಆದರೆ ಇಮೇಲ್‌ನಲ್ಲಿ ಆ ರೀತಿ ಇಲ್ಲ. ಇಮೇಲ್ ನಲ್ಲಿ ಬಹು ವಿಧವಾದ ಕಡತಗಳನ್ನು ಲಗತ್ತಿಸಬಹುದು. ನೀವು ಇತರ ಶಿಕ್ಷಕರೊಂದಿಗೆ ಹಂಚಿಕೊಳ್ಳಲು ಬಯಸುವ ಉತ್ತಮ ಸಂಪನ್ಮೂಲ ಹೊಂದಿದ್ದರೆ, STFನಲ್ಲಿ ಹಂಚಿಕೊಳ್ಳುವುದು ಉತ್ತಮ. WhatsApp ಹಂಚಿಕೆಮಾಡುವುದ ಜೊತೆಗೆ STF ನಲ್ಲಿ ಹಂಚಿಕೊಳ್ಳುವುದರಿಂದ ಇದರಲ್ಲಿ ಹೆಚ್ಚು ಶಿಕ್ಷಕರು ಉಪಯೊಗ ಪಡೆದುಕೊಳ್ಳಬಹುದು. ಅಂತೆಯೇ, ನೀವು Whats App ಅಥವಾ Hike ನಿರ್ವಹಣೆ ಮಾಡುವವರಾಗಿದ್ದಲ್ಲಿ , ಈ ಗುಂಪುಗಳಲ್ಲಿ ಹಂಚಿಕೆಯಾಗುವ ಸಂಪನ್ಮೂಲಗಳನ್ನು ಮತ್ತೆ ಇಮೇಲ್ ಮೂಲಕ ವೇದಿಕೆಗೆ ಹಂಚಿಕೊಳ್ಳಿ-ಇದರಿಂದ ಬಹಳಷ್ಟು ಶಿಕ್ಷಕರಿಗೆ ಉಪಯೋಗವಾಗುತ್ತದೆ.

ಇಮೇಲ್ ನಲ್ಲಿ ವಿಷಯ ಹಂಚಿಕೊಳ್ಳುವ ಬಗೆಗಿನ ಮಾರ್ಗಸೂಚಿ

ಈ ವಿಭಾಗದಲ್ಲಿ STF ಶಿಕ್ಷಕರು ವೇದಿಕೆಯಲ್ಲಿ ಯಾವ ಮಾದರಿಯ ವಿಚಾರಗಳನ್ನು ಹಂಚಿಕೊಳ್ಳುವುದು ಉತ್ತಮ ಮತ್ತು ಯಾವುದು ನಿಷೇದಿತ ಎಂಬ ಅಂಶಗಳ ಬಗ್ಗೆ ಚರ್ಚಿಸಲಾಗಿದ್ದು, ಇದು ಶಿಕ್ಷಕರ ನಡುವೆ ವಿಷಯ ಹಂಚಿಕೆಗೆ ನಿರ್ದಿಷ್ಟ ಚೌಕಟ್ಟನ್ನು ರೂಪಿಸುತ್ತದೆ.

  1. ಆಚರಣೆ -ಈ ರೀತಿಯ ಇಮೇಲ್‌ಗಳು ನಾವೆಲ್ಲರೂ ತುಂಬಾ ತೃಪ್ತಿಯಿಂದ ಸ್ವೀಕರಿಸುವ ಇಮೇಲ್‌ಗಳಾಗಿವೆ. ಕೆಲವು ಸಂಪನ್ಮೂಲಗಳು ಶಿಕ್ಷಕರಿಂದ ರಚಿಸಲ್ಪಟ್ಟವು ಅಥವಾ ಬಳಸಲ್ಪಟ್ಟವು ಅಥವಾ ಹಂಚಿಕೊಳ್ಳಲ್ಪಟ್ಟವಾಗಿರುತ್ತವೆ. ಕೆಲವು ಸಂಪನ್ಮೂಲಗಳು ಕಲಿಕಾ ಬೋಧನಾ ಪ್ರಕ್ರಿಯೆಯ ಯೋಚನೆಗೆ ತೊಡಗುವಂತಹವಾಗಿರುತ್ತವೆ. ಕೆಲವು ಸಂಪನ್ಮೂಲಗಳು ಸಾಮಾಜಿಕ ಸಮಸ್ಯೆಗಳ ಬಗೆಗಿನ ಅಭಿಪ್ರಾಯಗಳು ಆಗಿರುತ್ತವೆ.ವಿಷಯ ಶಿಕ್ಷಕರ ವೇದಿಕೆಯ ಉದ್ದೇಶ ಶಿಕ್ಷಕರಿಗೆ ಸಹವರ್ತಿ ಕಲಿಕೆಯಲ್ಲಿ ತೊಡಗಲು, ಸಂಪನ್ಮೂಲ ಹಂಚಿಕೊಳ್ಳಲು ಅವಕಾಶ ನೀಡುವುದಾಗಿದೆ. ವೇದಿಕೆಯಲ್ಲಿ ನ ಬಹುತೇಕ ಇಮೇಲ್ ಗಳು ಈ ಉದ್ದೇಶಕ್ಕೆ ಪೂರಕವಾಗಿರುತ್ತವೆ.ಕೆಲವು ಇಮೇಲ್‌ಗಳ ಉದಾಹರಣೆ,
    1. ಪಠ್ಯ ಪುಸ್ತಕದ ಭೋಧನ ವಿಷಯಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಸಮಸ್ಯೆ ಚರ್ಚೆ,
    2. ಗಣಿತ ವಿಷಯಕ್ಕೆ ಸಂಬಂಧಿಸಿದ ವಿಶಾಲ ಸಮಸ್ಯೆಗಳಾದ -ಗಣಿತದ ಇತಿಹಾಸ , ಪ್ರಸಿದ್ಧ ವಿಜ್ಞಾನಿಗಳು,ಬರಹಗಾರರು ಇತ್ಯಾದಿ
    3. ಶಿಕ್ಷಣಕ್ಕೆ ಸಂಬಂಧಿಸದ ಇನ್ನೂ ವಿಶಾಲ ಸಮಸ್ಯೆಗಳು ಉದಾಹರಣೆಗೆ, ಪರಿಸರ ಮಾಲಿನ್ಯ, ಜೀವನ ಕೌಶಲ್ಯ ಇತ್ಯಾದಿ
    4. ಇನ್ನೂ ವಿಶಾಲವಾದ ಸಾಮಾಜಿಕ ಸಮಸ್ಯೆಗಳಾದ    ಚುನಾವಣೆ, ರಾಷ್ಟ್ರೀಯ ದುರಂತಗಳ ಬಗ್ಗೆ ಚರ್ಚಿಸುವು.ಕೇವಲ ಬೋಧಿಸುವ ವಿಷಯದ ಜೊತೆಗೆ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆಯೂ ಗಮನ ಹರಿಸುವುದು. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ತಿಳಿದಿರ ಬೇಕಾದ ಸಾಮನ್ಯ ಜ್ಞಾನ ವನ್ನು ಚರ್ಚಿಸುವುದು.ಶಿಕ್ಷಕರ ಬಗ್ಗೆ ವಿಶಾಲವಾದ ಮನೋಭಾವವನ್ನು ಬಿತ್ತುವುದು ಮತ್ತು ಬೆಳೆಸುವುದೇ ಈ ವೇದಿಕೆ ಗುರಿ. ಆದರೆ ಕಾಳಜಿಯುತ ನಾಗರೀಕರಾಗಿ ಜವಾಬ್ದಾರಿಯುತ ನಾಗರೀಕರನ್ನು ಸೃಷ್ಟಿಸುವುದು ಶಿಕ್ಷಕರ ಬಹು ದೊಡ್ಡ ಜವಾಬ್ದಾರಿಯಾಗಿದೆ.
  2. ಒಪ್ಪಿಕೊಳ್ಳುವಿಕೆ - ಎಲ್ಲಾ ಇಮೇಲ್‌ಗಳು ಜ್ಞಾನಾಧಾರಿತವಾಗಿರುವುದಿಲ್ಲ, ಆದರೆ ಕೆಲವು ಮಾಹಿತಿಯನ್ನು ಉಳ್ಳವಾಗಿರುತ್ತವೆ, ಅಥವಾ ಕೆಲವು ಶಿಕ್ಷಕರ ಅನುಭವ/ಅಲೋಚನೆಗಳಾಗಿರುತ್ತವೆ, ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಬೇಕು.
    1. ನಾವು ಬೋಧನಾ ವೃತ್ತಿಯನ್ನು ವಿಶಾಲವಾಗಿ ವ್ಯಾಖ್ಯಾನಿಸಬೇಕು.ನಾವು ಆಳವಾದ ವಿಷಯದ ಜ್ಞಾನ ಹೊಂದಿರಬೇಕು. ನಾವು ಉತ್ತಮ ಬೋಧನೆ ಕೌಶಲಗಳನ್ನು ಹೊಂದಿರಬೇಕು. ಆದಾಗ್ಯೂ, ಎರಡೂ ಮೀರಿ, ಶಿಕ್ಷಕನಾಗಿ, ನಾವು ಜವಾಬ್ದಾರಿಯುತ ನಾಗರೀಕರಾಗಿ ಜವಾಬ್ದಾರಿಯುತ ನಾಗರೀಕರನ್ನು ಸೃಷ್ಠಿಸಬೇಕು.ಶಿಕ್ಷಕರು ಶೈಕ್ಷಣಿಕವಾಗಿ ವ್ಯಾಪಕ ಹಾಗೂ ಸಾಮಾಜಿಕ ಸಮಸ್ಯೆಗಳತ್ತ ಕಾಳಜಿವಹಿಸಬೇಕು. ಉದಾ STFನಲ್ಲಿ ಅನೇಕ ವಿಷಯಗಳ ಸಾದಕ ಬಾದಕಗಳ ಬಗ್ಗೆ ಚರ್ಚೆಯಾಗಿದೆ. ನಾವು ಜೀವನ ಕೌಶಲ್ಯ ಎಲ್ಲಾ ವಿಷಯಗಳ ಪಠ್ಯಕ್ರಮದ ಪ್ರಮುಖ ಭಾಗವಾಗಿದೆ ಎಂದು ಭಾವಿಸಿದರೆ, ಹೌದು ಈಗ ಪ್ರಸ್ತುತವಾಗಿದೆ. ಹಾಗೆಯೇ NCFನ ಅಂಶಗಳು, ಬೋಧನೆಗೆ ಬಹು ಶಿಸ್ತಿನ ವಿಧಾನ ಗಳ ಅವಶ್ಯಕತೆ ಯಿದೆ ಎನ್ನುವುದನ್ನು ತಿಳಿಸುತ್ತದೆ. ವಿವಿದ ವಿಷಯಗಳು ಕಲಿಕಾರ್ಥಿಗೆ ಬೋಧನೆಯಾಗಬೇಕು ಎಂದು ಹೇಳುತ್ತದೆ. ಈ ಯಾವುದೇ ವಿಷಯದ ಶಿಕ್ಷಕನಿ, ಇತರ ವಿಷಯಗಳಲ್ಲಿ ಆಸಕ್ತಿ ಇರಬೇಕು,ಇರಬಹುದು . ಉದಾ:'ನೀರು' ಎಂಬ ವಿಷಯವನ್ನು ಗಣಿತ, ವಿಜ್ಞಾನ, ಸಮಾಜ ಶಾಸ್ತ್ರ, ಭಾಷೆ (ಬಹುಶಃ ಎಲ್ಲಾ ವಿಷಯಗಳ !!) ಕೋನಗಳಿಂದ ಚರ್ಚಿಸಲಾಗುವುದು.
    2. ಕೆಲವೊಮ್ಮೆ ನಮಗೆ ಉಪಯೋಗಲಿಲ್ಲದ  ಶೈಕ್ಷಣಿಕವಾಗಿ ಯಾವುದೇ ವಿಚಾರಗಳನ್ನು ಹೊಂದಿರದ ಮೇಲ್ ಗಳು ಬರಬಹುದು. ಪ್ರತಿದಿನ ಹೊಸಶಿಕ್ಷಕರು ಸೇರ್ಪಡೆಯಾಗುತ್ತಿದ್ದು ನಮ್ಮ ಗುಂಪಿನ ನಿಯಮಗಳಿಗೆ ಹೊಂದಿಕೊಳ್ಳಲು ಸಮಯವಾಗುತ್ತದೆ. ಈ ಸಮಯದಲ್ಲಿ ಅವರು ಅಸಂಬದ್ಧ ಮೇಲ್ ಕಳುಹಿಸಬಹುದು. ನಾವು ನಿಧಾನವಾಗಿ STFನ ಉದ್ದೇಶ ಹಂಚಿಕೆ ಮತ್ತು ಚರ್ಚೆಗಳನ್ನು ಪೂರೈಸುವಬಗ್ಗೆ ಅವರಿಗೆ ಮಾರ್ಗದರ್ಶನ ಮಾಡಬೇಕು.ಒಂದು ಶಿಕ್ಷಕ ಪದೇಪದೇ ಅರ್ಥಹೀನ ಮೇಲ್ ಕಳುಹಿಸುತ್ತಿದ್ದರೆ ಮೊದಲಿಗೆ ಅವರ ಇಮೇಲ್‌ನ್ನು ಮೊಡರೇಟರ್ ಸ್ಥಿತಿಯಲ್ಲಿ ಇಡಲಾಗುವುದು, ವ್ಯವಸ್ಥಾಪಕರು ಅಪ್ರೋವ್ ಮಾಡಿದ ನಂತರವೇ ಅವರು ಕಳುಹಿಸುವ ಇಮೇಲ್ ಗುಂಪಿಗೆ ಬರುತ್ತದೆ. ಆದಾಗ್ಯೂ ಯಾವುದೇ ಶಿಕ್ಷಕ ಅನವಶ್ಯಕ ಇಮೇಲ್ ಕಳುಹಿಸುತ್ತಲೇ ಇದ್ದಲ್ಲಿ , ನಿಮ್ಮ ಪ್ರತಿಕ್ರಿಯೆಯೊಂದಿಗೆ KOER@Karnatakaeducation.org.in ಇಲ್ಲಿಗೆ ಮೇಲ್ ಅನ್ನು ದಯವಿಟ್ಟು ಕಳುಹಿಸಿರಿ.
    3. ಇಲ್ಲಿ ಕೆಲವು ಆಡಳಿತಾತ್ಮಕ ಇಮೆಲ್‌ಗಳ ಬಗ್ಗೆ ನೋಡೋಣ, ಶಿಕ್ಷಕ ವರ್ಗಾವಣೆ ಕೇಳುವುದು,ದಾಖಲಾತಿ ನಿರ್ವಹಣೆ ಇತ್ಯಾದಿ ಇಮೇಲ್‌ಗಳು STF ವೇದಿಕೆಯಲ್ಲಿ ಹೆಚ್ಚಾಗಿ ಚರ್ಚೆಯಾಗಿಲ್ಲ. ಆದೇಶಗಳನ್ನು,ಸುತ್ತೋಲೆಗಳನ್ನು ಸಾಂದರ್ಭಿಕವಾಗಿ ಹಂಚಿಕೊಳ್ಳುವುದರಿಂದ ಶಿಕ್ಷಕರಿಗೆ ಬಹಲ ಉಪಯುಕ್ತವಾಗಲಿದೆ. ಪರಸ್ಪರ ವರ್ಗಾವಣೆ ಬಗೆಗಿನ ಇಮೇಲ್‌ಗಳು ಬಹಳ ಸಂಖ್ಯೆಯಲ್ಲಿರಬಹುದು, ಈ ರೀತಿಯ ಮೇಲ್‌ಗಳನ್ನು ವೇದಿಕೆಗೆ ಕಳುಹಿಸುವ ಬದಲು ಚರ್ಚಾ ವೇದಿಕೆಗಳಲ್ಲಿ ಹಂಚಿಕೊಳ್ಳಬಹುದು ಇಲ್ಲಿ ಯಾರಿಗೆ ವರ್ಗಾವಣೆಯಲ್ಲಿ ಆಸಕ್ತಯಿರುತ್ತದೆಯೋ ಆ ಶಿಕ್ಷಕರು ಮಾತ್ರ ನೋಡಬಹುದು.
  3. ತಿರಸ್ಕರಿಸು-ಆಕ್ಷೇಪಣಿಯ ಅಥವಾ ಆಕ್ರಮಣಕಾರಿ ಮೇಲ್ಗಳು ಅನುಮತಿಸುವುದಿಲ್ಲ . ಇಡೀ ರಾಜ್ಯಾದ್ಯಂತ ವೈವಿಧ್ಯಮಯ ಗುಂಪುಗಳಲ್ಲಿನ ಶಿಕ್ಷಕರಲ್ಲ ಅಭಿಪ್ರಾಯ ಭೇದಗಳು ಇರುತ್ತದೆ , ಹಾಗೆಂದು ಅಸಭ್ಯ ಅಥವಾ ಆಕ್ರಮಣಕಾರಿಯಾಗಿ ಮೇಲ್ ಮಾಡಬಾರದು. ನಮ್ಮ ವಿಚಾರಗಳನ್ನು /ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಪ್ರಸ್ತುತಪಡಿಸಬೇಕು. ಇತರರಿಗೆ ಅಭಿಪ್ರಾಯ ನೀಡುವಾಗ ನೇರವಾಗಿ ನೋವು ಮಾಡದಂತೆ ಸಂರಂಚನಾ ಮಾದರಿಯಲ್ಲಿ ಹಿಮ್ಮಾಹಿತಿ ನೀಡುವುದು ಒಂದು ಕವಶಲವಾಗಿದ್ದು, ಅದನ್ನು ನಾವು ಅನುಸರಿಸಬೇಕಿದೆ. ಈ ಕೆಳಗಿನ ಇಮೇಲ್ ಗಳನ್ನು ಪ್ರೋತ್ಸಾಹಿಸಬಾರದು.
    1. ಸಂಪೂರ್ಣವಾಗಿ ವೈಯಕ್ತಿಕ ಸಮಸ್ಯೆಗಳು
    2. ಸಂಪೂರ್ಣವಾಗಿ ಅಸಂಬದ್ಧ ವಿಷಯಗಳ
    3. ಖಾಲಿ ಅಥವಾ ಅರ್ಥಹೀನ ಇಮೇಲ್ಗಳನ್ನು
    4. ಆಕ್ರಮಣಕಾರಿ, ಅಸಭ್ಯ ಇಮೇಲ್ಗಳನ್ನು
    5. ಪದೇ ಪದೇ ಅದೇ ಮಾಹಿತಿ ಕಳುಹಿಸುವ

ವೇದಿಕೆಯಲ್ಲಿ ಯಾವ ರೀತಿಯ ಇಮೇಲ್‌ಗಳು ಹಂಚಿಕೆಯಾಗಬೇಕು ಎಂಬುದರ ಬಗೆಗಿನ ಮೈಂಡ್ ಮ್ಯಾಪ್ ನೀಡಲಾಗಿದೆ ಚಿತ್ರ:STF Mail.mm

ಎಷ್ಟು ಗುಂಪುಗಳು?

ಒಂದು ಗುಂಪು ಒಂದು ಸಮುದಾಯವಾಗಿದೆ. ವಾಸ್ತವ ಜಗತ್ತಿನಲ್ಲಿ ಮೇಲಿಂಗ್ ಗುಂಪುಗಳು, ಫೋನ್ ಆಧಾರಿತ ಗುಂಪುಗಳು - ನೈಜ ಪ್ರಪಂಚದಲ್ಲಿ ಅನೇಕ ಸಮುದಾಯಗಳು ಇರುತ್ತದೆ ಹಾಗೆ, ಅನೇಕ ವರ್ಚುವಲ್ ಸಮುದಾಯಗಳು ಇರುತ್ತದೆ. ಇವು ಜಿಲ್ಲೆಗಾಗಿ ಇರಬಹುದು ಅಥವಾ ವಿಷಯಕ್ಕಾಗಿ ಇರಬಹುದಾಗಿದೆ. ಇಲ್ಲಿ ಎಲ್ಲರೂ ಒಟ್ಟಾಗಿ ಕಲಿಯಲು ಅವಕಾಶವಾಗಬೇಕು ಎಂಬುದನ್ನು ಬಿಟ್ಟು ಬೇರೇನೂ ಕಟ್ಟು ನಿಟ್ಟು ಗಳಿರುವುದಿಲ್ಲ. ವಿಷಯ ಶಿಕ್ಷಕರ ವೇದಿಕೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರು ಒಂದೇ ವೇದಿಕೆಯಲ್ಲಿದ್ದಾರೆ. ಇಲ್ಲಿ ವಿಜ್ಞಾನದ ಭೌತಶಾಸ್ತ್ರ ಶಿಕ್ಷಕರು ತಮಗೇ ಪ್ರತ್ಯೇಕ ವೇದಿಕೆ ಇರಲಿ ಎನ್ನಬಹುದು. ಅವರು ಬೇಕಾದರೆ ಪ್ರತ್ಯೇಕ ಇಮೇಲ್ ಗುಂಪು ಅಥವಾ ವಾಟ್ಸಪ್ ಗುಂಪು ರಚಿಸಿಕೊಳ್ಳಬಹುದು. ಆದರೆ ಹಲವು ಗಣಿತ ಶಿಕ್ಷಕರು ಸಹ ವಿಜ್ಞಾನ (ಭೌತಶಾಸ್ತ್ರ) ಬೋಧನೆ ಮಾಡುತ್ತಿರುವುದರಿಂದ ಒಂದೇ ವೇದಿಕೆ ಸೂಕ್ತವಾಗಿರುತ್ತದೆ. ಈ ವಿಷಯದಲ್ಲಿ ಶಿಕ್ಷಕರು ಮತ್ತು ಮಕ್ಕಳ ಕಲಿಕೆಗೆ ಪೂರಕವಾಗಿ ಏಕೀಕೃತವಾಗಿ ಒಂದೇ ವೇದಿಕೆಯಲ್ಲಿ ಸಂಪನ್ಮೂಲಗಲಳನ್ನು ಹಂಚಿಕೊಳ್ಳುವಂತೆ ವಿಜ್ಞಾನ ಶಿಕ್ಷಕರನ್ನು ಮನವೋಲಿಸಬೇಕಿದೆ. ಗಣಿತ / ಭೌತಶಾಸ್ತ್ರ / CBZ ವಿಷಯಗಳ ವಿವಿಧ ಗುಂಪುಗಳಲ್ಲಿನ ಸದಸ್ಯರು ಮತ್ತು ಅಡ್ಮಿನ್‌ಗಳು ಉಪಯುಕ್ತ ಚರ್ಚೆಗಳನ್ನ ಮತ್ತು ಸಂಪನ್ಮೂಲಗಳನ್ನು ರಾಜ್ಯಮಟ್ಟದ ವೇದಿಕೆಯೊಡನೆ ಹಂಚಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು,

ವಿಷಯ ಶಿಕ್ಷಕರ ವೇದಿಕೆ ಇಮೇಲ್‌ಗಳ ವಿಶ್ಲೇಷಣೆ

ಇಲ್ಲಿವರೆಗೆ ನಾವು ನೋಡಿರುವ ಇಮೇಲ್‌ಗಳನ್ನು ವಿಶ್ಲೇಷಿಸಿದಾಗ ಶೇ.80 ಕ್ಕಿಂರ ಹೆಚ್ಚು ಇಮೇಲ್‌ಗಳು ವೃತ್ತಿಪರ ಹಿತಾಸಕ್ತಿಗಳಿಗೆ ಸೂಕ್ತವಾದುವುಗಳು ಮತ್ತು ತರಗತಿ ಕೋಣೆ ಪ್ರಕ್ರಿಯೆಗೆ ಪೂರಕವಾದವುಗಳಾಗಿವೆ. ಕೆಲವೇ ಕೆಲವು ಸಂದರ್ಭಗಳಲ್ಲಿ ಮಾತ್ರ ಅನವಶ್ಯಕ ಇಮೇಲ್‌ಗಳು / ಅನುಪಯುಕ್ತ ಇಮೇಲ್‌ಗಳು ಬಂದಿರುತ್ತವೆ, ಇದಕ್ಕೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ . ಹೆಚ್ಚಿನ ಸಂಖ್ಯೆಯ ಶಿಕ್ಷಕರಿ ಭಾಗವಹಿಸುತ್ತಿರುವ ವೇದಿಕೆಯಲ್ಲಿ ಇದು ಸಾಮಾನ್ಯವಾಗಿರುತ್ತದೆ.ಅದರೂ ಬಹುತೇಕ ಇಮೇಲ್‌ಗಳು ಒಪ್ಪಿಕೊಳ್ಳುವಂತವಾಗಿರುತ್ತವೆ, ಇದರಿಂದ ಶಿಕ್ಷಕರು ಖುಷಿಯಾಗಿ ವೇದಿಕೆ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿದೆ.ಅದೇ ರೀತಿ ಇನ್ನೂ ಹೆಚ್ಚು ಶಿಕ್ಷಕರು ಭಾಗವಹಿಸಬೇಕಿದೆ. ಇಮೇಲ್ ಪಿಲ್ಟರ್ ಬಳಸುವುದರಿಂದ ಇನ್‌ಬಾಕ್ಸ್‌ನಲ್ಲಿ ತುಂಬಿಕೊಳ್ಳುವ ಇಮೇಲ್‌ಗಳನ್ನು ಕಡಿಮೆ ಮಾಡಬಹುದು. ಹಾಗೆಯೇ ಹೊಸದಾಗಿ ಸದಸ್ಯರನ್ನು ಸೇರಿಸಲು ಕೋರಿಕೆ ಕಳುಹಿಸುವ ಮೇಲ್‌ಗಳೇ ವೇದಿಕೆಯಲ್ಲಿ ಹೆಚ್ಚಾಗಿದ್ದು ಅದಕ್ಕಾಗಿ ಪ್ರತ್ಯೇಕ ಪಾರ್ಮ್ ರಚಿಸಲಾಗಿದೆ.