ಶಕ್ತಿಯ ಪರ್ಯಾಯ ಆಕರಗಳು ಯೋಜನೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ – ವಿಷಯ: ಭವಿಷ್ಯದಲ್ಲಿ ಡೀಸೆಲ್‍ಗಾಗಿ ಬಳಸುವ ಬೀಜಗಳ ಸಂಗ್ರಹಣೆ ಮತ್ತು ಅವುಗಳ ಕಿರುಮಾಹಿತಿ
ವಿಧಾನ: ವಿದ್ಯಾರ್ಥಿಗಳಿಗೆ ಗುಂಪುಚಟುವಟಿಕೆ ಮೂಲಕ ಬೇವು, ಹಿಪ್ಪೆ, ಹರಳು, ಹೊಂಗೆ ಮತ್ತು ಜಟ್ರೋಪಾ ಸಸ್ಯಗಳ ಬೀಜಗಳನ್ನು ಸಂಗ್ರಹಿಸುವುದು
ಸಂಗ್ರಹಿಸಿದ ಬೀಜಗಳನ್ನು ಪ್ರಯೋಗಶಾಲೆಯಲ್ಲಿ ಶೇಖರಿಸಿಡುವುದು
ಸಂಗ್ರಹಿಸಿದ ಪ್ರತಿ ಬೀಜಗಳ ಮಾಹಿತಿಯನ್ನು ಈ ಕೆಳಗಿನಂತೆ ಸಂಗ್ರಹಿಸುವುದು (ಮಾಹಿತಿ ಸಂಗ್ರಹಣೆಗೆ ಗ್ರಂಥಾಲಯದಲ್ಲಿನ ವಿಜ್ಞಾನ ತಂತ್ರಜ್ಞಾನ ಪದವಿವರಣ ಕೋಶದ ಬಳಕೆ ಮಾಡುವುದು) 1. ಸಸ್ಯದ ಸಾಮಾನ್ಯ ಹೆಸರು: 2. ವೈಜ್ಞಾನಿಕ ಹೆಸರು: 3. ಕುಟುಂಬ: 4. ಏಕದಳ / ದ್ವಿದಳ: 5. ಆವಾಸ: 6. ಹೂ-ಬಿಡುವ ಕಾಲ (ತಿಂಗಳು): ಮೌಲ್ಯಮಾಪನ ವಿಧಾನ: 1. ಬೀಜಗಳ ಸಂಗ್ರಹಣೆಗೆ – 2 ಅಂಕ 2. ಮೇಲೆ ತಿಳಿಸಿದ ಮಾಹಿತಿ ಸಂಗ್ರಹಣೆಗೆ 3 ಅಂಕಗಳು ( ವಿದ್ಯಾರ್ಥಿಗಳು ಕನಿಷ್ಟ ಮೂರು ವಿಧವಾದ ಬೀಜಗಳನ್ನು ಸಂಗ್ರಹಿಸಿ, ಅವುಗಳ ಮಾಹಿತಿಯನ್ನು ಬಿಳಿಹಾಳೆಯಲ್ಲಿ ಬರೆದಿರಬೇಕು, ಪ್ರತಿಯೊಂದಕ್ಕೂ 5 ಅಂಕಗಳಂತೆ 3ವಿಧವಾದ ಬೀಜಗಳಿಗೆ ಒಟ್ಟು ಹದಿನೈದು ಅಂಕಗಳು) (ದಾಖಲೆ: ವಿದ್ಯಾರ್ಥಿಗಳು ಸಂಗ್ರಹಿಸಿದ ಬೀಜಗಳು ಮಾಹಿತಿ ರಚನೆಯ ಹಾಳೆಗಳು)

ಚಟುವಟಿಕೆ-2: ಶಕ್ತಿಯ ಸಂರಕ್ಷಣೆಯ ವಿಧಾನಗಳ ಕೊಲ್ಯಾಜ್ ಕೆಲಸ: (ವೈಯಕ್ತಿಕ ಅಥವಾ ಗುಂಪು ಚಟುವಟಿಕೆ) ವಿಧಾನ: ವಿವಿಧ ಬಗೆಯ ಶಕ್ತಿಯ ಪರ್ಯಾಯ ಆಕರಗಳ ಚಿತ್ರಗಳನ್ನು ಸಂಗ್ರಹಿಸಿ ಕಾರ್ಡ್‍ಬೋರ್ಡ್ ಹಾಳೆಯಲ್ಲಿ ಅಂಟಿಸಿ ಅದರ ಬಗ್ಗೆ ಕಿರು ಮಾಹಿತಿ ರಚಿಸುವುದು ಮೌಲ್ಯಮಾಪನ ವಿಧಾನ: ಸೌರಶಕ್ತಿಯ ವಿವಿಧ ರೂಪಾಂತರಗಳ ಬಗ್ಗೆ ಮಾಹಿತಿ ಸಂಗ್ರಹಿಸಿರ ಬೇಕು ಜೈವಿಕ ಇಂಧನ ಸಸ್ಯಗಳ ಚಿತ್ರಗಳು ಮತ್ತು ಅವುಗಳ ಬಗ್ಗೆ ಕಿರು ಮಾಹಿತಿ ರಚಿಸಿರಬೇಕು ಗಾಳಿಯಂತ್ರಗಳ ಬಗ್ಗೆ ಕಿರುಮಾಹಿತಿ ಸಂಗ್ರಹಣೆ ರಚನೆ ಘನ ತ್ಯಾಜ್ಯವಸ್ತುಗಳ ವಿಲೇವಾರಿ ಮತ್ತು ಅವುಗಳನ್ನು ಶಕ್ತಿಯಾಗಿ ಪರಿವರ್ತಿಸುವ ವಿಧಾನಗಳ ಬಗ್ಗೆ ಮಾಹಿತಿ ರಚನೆ (ದಾಖಲೆ: ವಿದ್ಯಾರ್ಥಿಗಳು ತಯಾರಿಸಿದ ಕೊಲ್ಯಾಜ್ ಕಾರ್ಯ ಮತ್ತು ಮೌಲ್ಯಮಾಪನದ ಮಾನಕಗಳ ಹಾಳೆ)