ಶಾಲೆಯನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
The printable version is no longer supported and may have rendering errors. Please update your browser bookmarks and please use the default browser print function instead.

ಶಾಲೆಯನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ

ಶಾಲೆಯ ಅಭಿವೃದ್ದಿಯೆಂದರೆ ಕೇವಲ ಶಾಲೆಯ ಭೌತಿಕ ಪರಿಸ್ಥಿತಿ ಮಾತ್ರವಲ್ಲ, ಬೋಧನಾ ಗುಣಮಟ್ಟ,ಮಕ್ಕಳ ಕಲಿಕಾ ಪರಿಸರ,ಶಿಕ್ಷಕರ ಗುಣಮಟ್ಟ,ವ್ಯವಸ್ಥೆಯ ಜೊತೆಗಿನ ಹೊಂದಾಣಿಕೆ,ಅಡಳಿತ ಮಂಡಳಿಯ ಜೊತೆಗಿನ ಸಮತೋಲನ,ಉತ್ತಮ ಕಲಿಕಾಫಲ ಹೀಗೆ ಹತ್ತು ಹಲವು ಮುಖಗಳನ್ನು ಹೊಂದಿದೆ. ಇದನ್ನು ಅರಿತು ಯಾವ ಕ್ಷೇತ್ರಕ್ಕೂ ಚ್ಯುತಿಬಾರದಂತೆ ಆಡಳಿತ ನಿರ್ವಹಿಸುವುದೇ ಆಗಿರುತ್ತದೆ. ವಿಫಲತೆಗೆ ಕಾರಣವನ್ನು ಹುಡುಕಿ ಜಾಣತನದಿಂದ ನಿಭಾಯಿಸಬೇಕೆ ವಿನಹ ದಂಡ,ಒತ್ತಡ,ಅತಿಯಾದ ಶಿಸ್ತಿನ ಕ್ರಮದಂತಹ ಮಾರ್ಗಗಳು ಪ್ರತಿಫಲವನ್ನು ನೀಡುವುದಿಲ್ಲ. ಆದರೆ ಫಾಲನ್‌ನ ಹೇಳಿಕೆಯಂತೆ "ವ್ಯವಸ್ಥೆಯು ಮೇಲಿನಿಂದ ಕೆಳಕ್ಕೆ ಹರಿಯುವಾಗ ಕೇವಲ ಫಲಿತಾಂಶವನ್ನಷ್ಟೇ ಗಣನೆಗೆ ತೆಗೆದುಕೊಳ್ಳುತ್ತಿದೆಯೇ ವಿನಃ ಪ್ರಕ್ರಿಯೆಗಳನ್ನಲ್ಲ" ಇದೊಂದು ದೊಡ್ದ ದುರಂತ. ವ್ಯವಸ್ಥೆಯು ಎಲ್ಲಾ ಸಮಸ್ಯೆಗೂ 'ಹಾಗಲಕಾಯಿಯನ್ನೆ ಮದ್ದಾಗಿ ನೀಡುತ್ತಿದ್ದಾರೆ'ಯೇ ಹೊರತು ಬೇರೆ ಬೇರೆ ಸಮಸ್ಯೆಗೆ ಬೇರೆ ಬೇರೆ ಪರಿಹಾರವನ್ನು ಒದಗಿಸುತ್ತಿಲ್ಲ. ಆದರೆ ಶಾಲಾ ಪರಿಸ್ಥಿತಿಯು ಮಕ್ಕಳ ಹಿನ್ನೆಲೆ,ಶಿಕ್ಷಕರ ತೊಡಗಿಸಿಕೊಳ್ಳುವಿಕೆ,ಶಾಲೆಯ ಸಾಮಾಜಿಕ ಪರಿಸರ ಇತ್ಯಾದಿ ಅನೇಕ ಮಜಲುಗಳನ್ನು ಹೊಂದಿದ್ದು ನಿರ್ವಹಿಸುವಾಗ ಇದನ್ನು ಮನಗಂಡು ನಾಜೂಕಿನಿಂದ ನಿಯಂತ್ರಣದಲ್ಲಿಡುವ ನಿರ್ವಹಣಾ ಕೌಶಲ್ಯವು ಶಾಲಾ ನಾಯಕನ ಜಾಣ ನಿರ್ವಹಣೆಯಲ್ಲಿ ಅಡಗಿದೆ. ಪ್ರತಿ ಶಾಲೆಯು ಅನನ್ಯವಾದ ಸಾಂದರ್ಭಿಕತೆಯನ್ನು ಹೊಂದಿದೆ. ಶಾಲೆಯು ಸಮಾಜದ ಮಾದರಿಯಾಗಿದ್ದು ವಿದ್ಯಾರ್ಥಿ,ಶಿಕ್ಷಕರು,ಆಡಳಿತವರ್ಗ, ಮತ್ತು ಪೋಷಕವರ್ಗ ಸಮಾಜ ಹೀಗೆ ಅನೇಕ ಪರಿಕಲ್ಪನೆಗಳು ಒಗ್ಗೂಡಿ ಶಾಲಾ ಪರಿಸರ

ನಿರ್ಮಾಣವಾಗಿರುತ್ತದೆ. ಇದನ್ನು ಒಂದೇ ತೆಕ್ಕೆಯಲ್ಲಿರಿಸಿ ಶಾಲೆಯ ಸುಧಾರಣೆಯ ಕನಸುಕಾಣುವುದು ಒಂದು ಸಾಹಸದ ಕೆಲಸ. ಪ್ರತಿ ಶಾಲೆಯು ತನ್ನ ಸುಧಾರಣೆಗಾಗಿ ಯಜಮಾನಿಕೆಯನ್ನು ವಹಿಸುವ ಅಗತ್ಯವಿದೆ. ಮೇಲೆನ ಪ್ರತಿಯೊಂದು ಪರಿಕಲ್ಪನೆಗಳೂ ಶಾಲೆಯನ್ನು ತನ್ನದೆಂದು ಭಾವಿಸಿ ಕೆಲಸನಿರ್ವಹಿಸುವುದು ಅಗತ್ಯವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಶಾಲೆಗಳ ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರುವುದು ಸರಿಯಲ್ಲ .ಅಭಿವೃಧಿಯ ಸಾಹಸವನ್ನು ಕೈ ಗೊಳ್ಳುವ ನಿಟ್ಟಿನಲ್ಲಿ ಮತ್ತು ಗರಿಷ್ಟಮಟ್ಟದ ಬದಲಾವಣೆಯನ್ನು ನಿರೀಕ್ಷಿಸುವಾಗ ನಂಬಿಕೆಯೂ ಸಹ ಅಷ್ಟೇ ಮುಖ್ಯವಾದ ಪಾತ್ರ ವಹಿಸುತ್ತದೆ. ನಂಬಿಕೆ ಇಲ್ಲದಿದ್ದರೆ ಶಿಕ್ಷಕರು ತಮ್ಮ ಆತ್ಮ ರಕ್ಷಣೆಗಾಗಿ ಸಮಯ ವ್ಯಯ ಮಾಡುತ್ತಿರುತ್ತಾರೆಯೇ ವಿನಹ ಅಭಿವೃದ್ದಿಯ ಕಡೆ ಗಮನಹರಿಸುವುದಿಲ್ಲ .ನಂಬಿಕೆಯ ಕೊರತೆಯಿಂದ ಶಿಕ್ಷಕರು ಕೂಲಿಗಷ್ಟೇ ಕೆಲಸ ಎಂಬತಾಗುತ್ತಾರೆ ಆದರೆ ಮನಃಪೂರ್ತಿಯಾಗಿ ವೃತ್ತಿ ನಿರ್ವಹಿಸಬೇಕು ಇದಕ್ಕೆ ಪರಸ್ಪರ ಉತ್ತಮ ಬಾಂಧವ್ಯವನ್ನು ಜೋಡಿಸುವ ಅಗತ್ಯವಿದೆ. ಇದು ರಾತ್ರೋ ರಾತ್ರಿ ಉಂಟಾಗುವುದಿಲ್ಲ .ಇದು ದೀರ್ಘಕಾಲೀನ ಪ್ರವೃತ್ತಿಯಾಗಿದ್ದು, ಶಾಲಾ ಸುಧಾರಣೆ ಮತ್ತು ಪ್ರಗತಿಯು ಅಲ್ಪಕಾಲದಲ್ಲಿ ಸಂಭವಿಸುವುದಿಲ್ಲ. ಸೂಕ್ತ ಬದಲಾವಣೆಯೊಂದಿಗೆ ಕಾಲದಿಂದ ಯೋಜನೆಗಳನ್ನು ಬದಲಿಸುತ್ತ ಸಾಗಬೇಕಾಗಿತ್ತದೆ.

ಸುಧಾರಣೆ ಹೇಗೆ ಉಂಟಾಗುತ್ತದೆ?

ಶಾಲಾ ಸಂಸ್ಕೃತಿ ಸುಧಾರಣೆಯಿಂದ; Hargreaves (1944) ಹರ್ಗ್ರೇವ್ಸ್ -ಶಾಲೆಯ ಆದರ್ಶ ಸಂಸ್ಕೃತಿಯು ಶೈಕ್ಷಣಿಕ ಒತ್ತಡ ಮತ್ತು ಸಾಮಾಜಿಕ ಹೊಂದಾಣಿಕೆಯನ್ನು ಸಮತೋಲನ ಗೊಳಿಸಿಕೊಳ್ಳುವುದರಲ್ಲಿದೆ ಶಿಕ್ಷಕರ ನಡುವೆ ಕೆಲಸದ ಸಹಯೋಗಾತ್ಮಕ ಸಂಸ್ಕೃತಿಯಿಂದ; ಪರಸ್ಪರ ಶಿಕ್ಷಕರು ಸಂಘಟಿತರಾಗಿ ಸಹಯೋಗದಿಂದ ಕೆಲಸಮಾಡಬೇಕು. ಇದಕ್ಕೆ ಶಾಲಾ ಮುಖ್ಯಸ್ಥನು ಅನುರಾಗವನ್ನು ಬೆಸೆವ ಕೊಂಡಿಯಾಗಿ ಕೆಲಸ ನಿರ್ವಹಿಸ ಬೇಕು ,ಮುಖ್ಯಶಿಕ್ಷಕರು,ಶಿಕ್ಷಕ ಮತ್ತು ವಿದ್ಯಾರ್ಥಿಗಳು,ಪೋಷಕರು (ಸಮಾಜ) ಒಗ್ಗಟ್ಟಾಗಿ ನಿಂತರೆ ಶಾಲಾ ಅಭಿವೃದ್ದಿ ಉತ್ತಮವಾಗಿತ್ತದೆ. ಇದನ್ನು ಸಂಘಟಿಸುವಲ್ಲಿ ಮುಖ್ಯ ಶಿಕ್ಷಕರ ಪಾತ್ರ ಮಹತ್ತರವಾದದ್ದು. ಸಂಸ್ಕೃತಿ ಸುಧಾರಣೆಯ ಪ್ರಕ್ರಿಯೆಗಳು; ಸಕಾರಾತ್ಮಕ ಬಾವನೆಯನ್ನು ಬಿತ್ತಬೇಕು.ಸಾಧನೆಯ ಹಾದಿಯಲ್ಲಿ ನಂಬಿಕೆಯೇ ಅಸ್ತ್ರವಾಗಬೇಕು. ಪರಸ್ಪರ ಕಷ್ಟಗಳುಗೆ ಸ್ಪಂದಿಸುವ ಪ್ರವೃತ್ತಿಯವರಾಗಬೇಕು. ಅನಾವಶ್ಯಕ ಕಾರಣಗಳಿಗಾಗಿ ಶಾಲಾ ಪರಿಸರವನ್ನು ಶೀತಲ ಸಮರದ ಬೀಡಾಗಿ ಮಾಡ ಬಾರದು. ಸಮಸ್ಯೆಗಳೇನಿದ್ದರು ಮುಖ್ಯ ಶಿಕ್ಷಕರ ಸಮ್ಮುಖದಲ್ಲಿ ಚರ್ಚಿಸಿ ಬಗೆಹರಿಸಿ ಕೊಳ್ಳುವಂತಿರಬೇಕು.

ನಿರ್ದೇಶನಗಳನ್ನು ಅಳವಡಿಸುವುದು (ಮಾರ್ಗಗಳನ್ನು) ಮುಖ್ಯ ಶಿಕ್ಷಕನು ಮಾರ್ಗದರ್ಶಿಯಾಗಿ ಮಾರ್ಗಕ್ಕೆ ಕೆಲವು ನಿರ್ದೇಶನಗಳನ್ನು ಅಳವಡಿಸಿ ಗುರಿ ಮತ್ತು ಉದ್ದೇಶದ ಸಾಧನೆಗೆ ತಂಡದ ಜೊತೆ ಮುನ್ನಡೆಯ ಬೇಕು.ಅನ್ವೇಷಣೆಯ ಹೊರೆ ಸಹೊದ್ಯೋಗಿಗಳ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಬೇಕು. ಶಿಕ್ಷಕರಿಗೆ ಹೊರೆ ಎನಿಸಿದಷ್ಟು ಗುರಿ ಮತ್ತು ಉದ್ದೇಶದ ಗುಣಮಟ್ಟ ಕುಸಿಯುತ್ತದೆ.

ಶಾಲಾ ಅಭಿವೃದ್ದಿ

ಹಪ್ಕಿನ್ಸ್ ೩ ವಿಧದಲ್ಲಿ ತಿಳಿಸಿದ್ದಾರೆ

೧ ವಿದ್ಯಾರ್ಥಿಗಳಿಗೆ ಶಾಲೆಯ ಉತ್ತಮ ಸ್ಥಿತಿ ಮತ್ತು ಕಲಿಕೆಗಾಗಿ ಸಾಮಾನ್ಯ ಪರಿಶ್ರಮ ೨.ತಾಂತ್ರಿಕ ಮತ್ತು ನಿರ್ಧಿಷ್ಟವಾಗಿ ತಿಳಿಸಿರುವಂತೆ ಶೈಕ್ಷಣಿಕ ಬದಲಾವಣಾ ತಂತ್ರವು ವಿದ್ಯಾರ್ಥಿಗಳ ಕಲಿಕಾ ಪ್ರತಿಫಲದ ಜೊತೆ ಬದಲಾವಣೆಯನ್ನು ನಿರ್ವಹಿಸಲು ಶಾಲಾ ಸಾಮರ್ಥ್ಯವನ್ನು ಶಕ್ತಿಶಾಲಿಗೊಳಿಸುವುದು. ಅಂದರೆ ಶಿಕ್ಷಕರ ಅಭಿವೃದ್ದಿ, ಉತ್ತಮ ನಾಯಕತ್ವದ ನಿರ್ವಹಣೆ,ಶಾಲಾ ಅಭಿವೃದ್ದಿಯ ಬಗೆಗಿನ ದೂರದೃಷ್ಟಿ ೩ ಶಾಲಾ ಅಭಿವೃದ್ದಿಗೆ ಸಂಬಂಧಿಸಿದಂತೆ ಯಾವುದೇ ನೀಲಾ ನಕಾಶೆಗಳಿವುದಿಲ್ಲ ಯಾಕೆಂದರೆ ಒಂದೇಗಾತ್ರ ಎಲ್ಲಾ ಪ್ರಮಾಣಕ್ಕೂ ಸರಿಹೊಂದುತ್ತದೆ ಎಂಬ ನಿಯಮದಂತಿರದೆ ಶಾಲೆಯಿಂದ ಶಾಲೆಗೆ ವಿಭಿನ್ನವಾಗಿರುತ್ತದೆ.

ಚಿಂತನಾ ಮಂತನಾ

೧ ನಿಮ್ಮ ನಿಮ್ಮ ಶಾಲೆಯ ಪರಿದಿಯ ಒಳಗೆ ಪ್ರಗತಿಯನ್ನು ಹೇಗೆ ವ್ಯಾಖ್ಯಾನಿಸುವಿರಿ? ೨. ಶಾಲೆಯು ಪ್ರಗತಿಯ ಸ್ಥಿತಿಯಲ್ಲಿದೆ ಎಂದು ಸಾಬೀತುಪಡಿಸಲು ನಿಮಗೆ ಬೇಕಾದ ದಾಖಲೆಗಳೇನು? ೩. ಶಾಲಾ ಪ್ರಗತಿಯನ್ನು ಸಾಧಿಸುವಲ್ಲಿ ನೀವು ಸೂಚಿಸುವ (ಸೂಚಕಗಳು)ಸೂಚಿತ ವ್ಯಕ್ತಿಗಳು ಯಾರು ಯಾರು ? ೪. ಶಾಲಾ ಪ್ರಗತಿಯನ್ನು ಸಾಧಿಸುವಲ್ಲಿ ನಿಮ್ಮ ಶಾಲೆಯಲ್ಲಿರುವ ಸವಾಲುಗಳೇನು?

- Adapted from Harris Alma 2002 School Improvement in Context