ಶಿಕ್ಷಕರು ಆನ್‌ಲೈನ್ ತರಗತಿಗಳನ್ನು ನಡೆಸುವ ಕುರಿತು ಸಾಮರ್ಥ್ಯ ವೃದ್ಧಿ ಅಭ್ಯಾಸಕ್ರಮ - ಮೇ ೨೦೨೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

Click to see in English

ಹಿನ್ನೆಲೆ

ಪ್ರಸ್ತುತ ಸಾಂಕ್ರಾಮಿಕವಾಗಿ ರೋಗವು ಹರಡುತ್ತಿರುವ ಪರಿಸ್ಥಿತಿಯಿಂದಾಗಿ, ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ಈ ಪರಿಸ್ಥಿತಿಯು ಕೆಲವು ದಿನಗಳ ಕಾಲ ಮುಂದುವರಿಯಬಹುದು. ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಜೂನ್‌ನಲ್ಲಿ ನಡೆಯಲಿದ್ದು ೧೦ ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ತಯಾರಿ ನಡೆಸಲು ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಕರ ನಿರಂತರ ಬೆಂಬಲ ಬೇಕಾಗುತ್ತದೆ.

ಕಲಿಕೆಯ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಹೆಚ್ಚಿನ ಶಾಲೆಗಳು ವಿದ್ಯಾರ್ಥಿಗಳಿಗೆ ವಾಟ್ಸಾಪ್ ಗುಂಪುಗಳನ್ನು ರಚಿಸಿವೆ. ಅನೇಕ ಶಾಲೆಗಳಲ್ಲಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದಾರೆ. ಕೆಲವು ಶಿಕ್ಷಕರಿಗೆ ಆನ್‌ಲೈನ್ ತರಗತಿಗಳನ್ನು ನೆಡೆಸಲು ಮಾರ್ಗದರ್ಶನ ಮತ್ತು ಬೆಂಬಲ ನೀಡಿದರೆ ಅವರು ಕೂಡ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಬಹುದು.

ಐಟಿ ಫಾರ್ ಚೇಂಜ್, “ ಶಿಕ್ಷಕರ ಕಲಿಕಾ ಸಮುದಾಯ” (ಟಿಸಿಒಎಲ್) ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವಲ್ಲಿ ಸಹಾಯ ಮಾಡಲು ಬಯಸಿದ್ದೆವೆ. ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಅನುಕೂಲಕರವಾಗಲು, ಶಿಕ್ಷಕರಿಗೆ ನಾವು ಆನ್‌ಲೈನ್ ಅಭ್ಯಾಸಕ್ರಮವನ್ನು ನಡೆಸಲು ಯೋಜಿಸಿದ್ದೇವೆ.

ಉದ್ದೇಶಗಳು

  1. ಶಿಕ್ಷಕರಿಗೆ ಮೂಲವಾಗಿ ಡಿಜಿಟಲ್ ಸಾಕ್ಷರತಾ ಕೌಶಲ್ಯಗಳನ್ನು ಹೆಚ್ಚಿಸುವುದು.
  2. ಅಂತರ್ಜಾಲದಲ್ಲಿ ಅಸ್ತಿತ್ವದಲ್ಲಿರುವ ಮು.ಶ್ಯೆ.ಸಂ (ಮುಕ್ತ ಶೈಕ್ಷಣಿಕ ಸಂಪನ್ಮೂಲ) ಗಳನ್ನು ಬಳಸಲು ಶಿಕ್ಷಕರಿಗೆ ಸಹಾಯ ಮಾಡುವುದು.
  3. ತರಗತಿಯ ಬೋಧನೆಗಾಗಿ ಡಿಜಿಟಲ್ ಸಂಪನ್ಮೂಲಗಳನ್ನು ರಚಿಸಲು ಶಿಕ್ಷಕರಿಗೆ ಸಹಾಯ ಮಾಡುವುದು
  4. ತರಗತಿಗಳನ್ನು ನಡೆಸಲು ಆನ್‌ಲೈನ್ ವೆಬಿನಾರ್ ಪರಿಕರಗಳೊಂದಿಗೆ ಪರಿಚಿತರಾಗಲು ಶಿಕ್ಷಕರಿಗೆ ಸಹಾಯ ಮಾಡುವುದು
  5. ಆನ್‌ಲೈನ್ ತರಗತಿಗಳನ್ನು ನಡೆಸಲು ಶಾಲೆಗಳು / ಸಂಸ್ಥೆಗಳಿಗೆ ಎಫ್.ಓ.ಎಸ್.ಎಸ್ ವೆಬಿನಾರ್ ವೇದಿಕೆಯನ್ನು ಬಳಸಲು ಸಹಾಯ ಮಾಡುವುದು

ವಿಧಾನ

  1. ಅಭ್ಯಾಸಕ್ರಮವು ೪ ವೆಬಿನಾರ್ ಅಧಿವೇಶನಗಳಲ್ಲಿ ನಡೆಯಲಿದೆ.
  2. ಪ್ರತಿ ವೆಬ್‌ನಾರ್ ಅಧಿವೇಶನವು ಬಿಗ್‌ಬ್ಲೂಬಟನ್ ಎಫ್.ಓ.ಎಸ್.ಎಸ್ ವೆಬ್‌ನಾರ್ ಉಪಕರಣದ ಮೂಲಕ ೧೨೦ ನಿಮಿಷಗಳ ಕಾಲ ನಡೆಯುತ್ತದೆ
  3. ಎಲ್ಲಾ ಅಭ್ಯಾಸಕ್ರಮದ ಸಂಪನ್ಮೂಲಗಳನ್ನು ಕೆ.ಒ.ಇ.ಆರ್ ಆನ್‌ಲೈನ್ ಭಂಡಾರದ ಮೂಲಕ ಹಂಚಿಕೊಳ್ಳಲಾಗುತ್ತದೆ
  4. ಪ್ರತಿ ಅಧಿವೇಶನದ ವಿಷಯವು ಬೇರೆಯಾಗಿರುತ್ತದೆ (ಪ್ರತಿ ಅಧಿವೇಶನಕ್ಕೆ ಒಂದು ವಿಷಯ)
  5. ನೋಂದಾಯಿತ ಶಿಕ್ಷಕರು ವಾಟ್ಸಾಪ್ ಗುಂಪಿನ ಸದಸ್ಯರಾಗುತ್ತಾರೆ, ಅಲ್ಲಿ ಅಭ್ಯಾಸಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಅಧಿಸೂಚನೆಗಳನ್ನು ಸಂವಹನ ಮಾಡಲಾಗುತ್ತದೆ. ಯಾವುದೇ ಆನ್‌ಲೈನ್ ಬೆಂಬಲ ಮತ್ತು ಶಿಕ್ಷಕರೊಂದಿಗೆ ತ್ವರಿತ ಸಂಪನ್ಮೂಲ ಹಂಚಿಕೆಗಾಗಿ ಕೂಡ ಇದನ್ನು ಬಳಸಲಾಗುತ್ತದೆ.

ಅಧಿವೇಶನಗಳ ಬಗ್ಗೆ ಮಾಹಿತಿ

ಬ್ಯಾಚ್‌ಗಳನ್ನು ಪ್ರಾರಂಭಿಸಲು ಕೆಲವು ಯೋಗ್ಯವಾದ ದಿನಾಂಕಗಳು ಮತ್ತು ಸಮಯ:
ಬ್ಯಾಚ್‌ಗಳನ್ನು ಪ್ರಾರಂಭಿಸಲು ತಾತ್ಕಾಲಿಕ ದಿನಾಂಕಗಳು ಬ್ಯಾಚ್‌ಗಳನ್ನು ಪ್ರಾರಂಭಿಸಲು ತಾತ್ಕಾಲಿಕ ಸಮಯ ಅಧಿವೇಶನಗಳಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಜೂನ್ 10 ರ ಬ್ಯಾಚ್ 10.30 am to 12.30 pm ಪ್ರತಿ ಅಧಿವೇಶನಗಳ ವೆಬ್‌ನಾರ್ ಕೊಂಡಿಯನ್ನು ಆಯಾ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲಾಗುವುದು.
11 am to 1 pm
2.30 pm to 4.30 pm
3 pm to 5 pm
ಜೂನ್ 16 ರ ಬ್ಯಾಚ್ ಗುಂಪು 8 - 10.30 am to 12.30 pm ಪ್ರತಿ ಅಧಿವೇಶನಗಳ ವೆಬ್‌ನಾರ್ ಕೊಂಡಿಯನ್ನು ಆಯಾ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲಾಗುವುದು.
ಗುಂಪು 9 - 11 am to 1 pm
ಗುಂಪು 10 - 2.30 pm to 4.30 pm
ಗುಂಪು 15 - 3 pm to 5 pm

ಅಭ್ಯಾಸಕ್ರಮದ ಕಾರ್ಯಸೂಚಿ

ಕ್ರಮ ಸಂಖ್ಯೆ ವಿವರ ಚಟುವಟಿಕೆಗಳು ಸಂಪನ್ಮೂಲಗಳು
1 ಕಾರ್ಯಕ್ರಮದ ಪರಿಚಯ
  1. ಅಭ್ಯಾಸಕ್ರಮವನ್ನು ಪರಿಚಯಿಸುವುದು
  2. ಅಭ್ಯಾಸಕ್ರಮದ ಕಾರ್ಯಸೂಚಿಯ ಮೂಲಕ ಮುಂದೆವರಿಯುವುದು
  3. ಶಿಕ್ಷಕರು ಅಭ್ಯಾಸಕ್ರಮದದಿಂದಾಗುವ ನಿರೀಕ್ಷೆ ಮತ್ತು ಅವಶ್ಯಕತೆಗಳನ್ನು ಹಂಚಿಕೊಳ್ಳುವುದು
2 ಮು.ಶ್ಯೆ.ಸಂ ಸಂಪನ್ಮೂಲಗಳನ್ನು ಬಳಸುವುದು
  1. ಮು.ಶ್ಯೆ.ಸಂ ಅನ್ನು ಅರ್ಥಮಾಡಿಕೊಳ್ಳುವುದು ಮತ್ತು ಬಳಸುವುದು
  2. ಅಂತರ್ಜಾಲದಲ್ಲಿನ ವಿಭಿನ್ನ ಮು.ಶ್ಯೆ.ಸಂ ಸಂಪನ್ಮೂಲಗಳನ್ನು ಬಳಸುವುದು
  3. ಮು.ಶ್ಯೆ.ಸಂ ಸಂಪನ್ಮೂಲಗಳನ್ನು (ಪಠ್ಯ, ಚಿತ್ರ, ವಿಡಿಯೋ ಮತ್ತು ಆಡಿಯೋ) ಡೌನ್‌ಲೋಡ್ ಮಾಡುವುದು.
ಮು.ಶ್ಯೆ.ಸಂ

ಪಠ್ಯ ಮು.ಶ್ಯೆ.ಸಂ

3 ಪ್ರಸ್ತುತಿಯನ್ನು ರಚಿಸುವುದು
  1. ಒಂದು ವಿಷಯದ ಮೇಲೆ ಪ್ರಸ್ತುತಿಯನ್ನು ರಚಿಸುವುದು
  2. ಪ್ರಸ್ತುತಿಗೆ ಚಿತ್ರಗಳು ಮತ್ತು ವೀಡಿಯೊಗಳನ್ನು ಸೇರಿಸುವುದು ಮತ್ತು ಸ್ವರೂಪವನ್ನು ಬದಲಾಯಿಸಬಹುದು
  3. ಪಠ್ಯವನ್ನು ಸೇರಿಸುವುದು ಮತ್ತು ಪಠ್ಯವನ್ನು ಸ್ವರೂಪಗೊಳಿಸುವುದು
  4. ಚಿತ್ರಗಳನ್ನು ಸ್ಲೈಡ್ ಮತ್ತು ಚಿತ್ರ ಸ್ವರೂಪದಲ್ಲಿ ಸೇರಿಸಿ
  5. ಪ್ರಸ್ತುತಿಯನ್ನು ತೆರೆಯಲು ಬೇರೆ ಸ್ವರೂಪಕ್ಕೆ ರಫ್ತು ಮಾಡುವುದು ಅಥವಾ ಇತರ ವೇದಿಕೆಗಳಲ್ಲಿ ಹಂಚಿಕೊಳ್ಳುವುದು
ಪಠ್ಯ ಮು.ಶ್ಯೆ.ಸಂ

ಲಿಬ್ರೆ ಆಫೀಸ್ ಇಂಪ್ರೆಸ್ ಕರಪತ್

4 ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ಗೂಗಲ್ ಫಾರ್ಮ್ ಬಳಸುವುದು
  1. ನಿಮ್ಮ ಎಲ್ಲಾ ಕಡತಗಳನ್ನು ಕ್ಲೌಡನಲ್ಲಿ ಉಳಿಸಲು ಮತ್ತು ಹಂಚಿಕೊಳ್ಳಲು ಗೂಗಲ್ ಡ್ರೈವ್ನ ಕಲಿಕೆ
  2. ಆನ್‌ಲೈನ್ ಪರೀಕ್ಷೆಗಳನ್ನು ನಡೆಸಲು ಗೂಗಲ್ ಫಾರ್ಮ್ ಬಳಸಿ
  3. ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ಗೂಗಲ್ ಫಾರ್ಮ್ ಮತ್ತು ಶೀಟ್ ಬಳಸುವುದು
ಮು.ಶ್ಯೆ.ಸಂ ವನ್ನು ಪ್ರಕಟಿಸಿ
5 ಆನ್‌ಲೈನ್ ತರಗತಿಗಳನ್ನು ನಡೆಸಲು ವೆಬಿನಾರ್ ಎಫ್.ಓ.ಎಸ್.ಎಸ್ ಉಪಕರಣವನ್ನು ಬಳಸುವುದು
  1. ಬಿಗ್‌ಬ್ಲೂಬಟನ್ (ಬಿ.ಬಿ.ಬಿ) ಸಾಧನ ಏಕೆ?
  2. ವೇದಿಕೆಯನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿ ತರಹ ಬಿ.ಬಿ.ಬಿಯನ್ನು ಬಳಸಿ
  3. ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ತರಗತಿ ಕೊಂಡಿಗಳನ್ನು ರಚಿಸಿಸುವುದು
  4. ಬಿ.ಬಿ.ಬಿಯನ್ನು ಶಿಕ್ಷಕರಾಗಿ ಬಳಸಿ ಮತ್ತು ಎಲ್ಲಾ ವೈಶಿಷ್ಟ್ಯಗಳೊಂದಿಗೆ ಪರಿಚಿತರಾಗುವುದು
  5. ಆನ್‌ಲೈನ್ ತರಗತಿಯಲ್ಲಿ ಸಂವಹನ ನಡೆಸಲು “ಬಿಗ್‌ಬ್ಲೂಬಟನ್” ಎಫ್.ಓ.ಎಸ್.ಎಸ್ ವೆಬ್‌ನಾರ್ ವೇದಿಕೆ ಬಳಸುವುದು
ಬಿಗ್‌ಬ್ಲೂಬಟನ್ ಕರಪತ್ರ

ಸಂಪನ್ಮೂಲಗಳು

ತಂತ್ರಜ್ಞಾನ ಕರಪತ್ರಗಳು

  1. ಮೊಜಿಲ್ಲಾ ಫೈರ್‌ಫಾಕ್ಸ್ ಕರಪತ್ರ – ಅಂತರ್ಜಾಲದಲ್ಲಿ ಸಂಪನ್ಮೂಲಗಳಿಗೆ ಹುಡುಕುವುದು, ಸಂಪನ್ಮೂಲಗಳನ್ನು ಡೌನ್‌ಲೋಡ್ ಮಾಡಲು
  2. ಲಿಬ್ರೆ ಆಫೀಸ್ ಇಂಪ್ರೆಸ್ ಕರಪತ್ರ - ಪ್ರಸ್ತುತಿಗಳನ್ನು ರಚಿಸಲು
  3. ಬಿಗ್‌ಬ್ಲೂಬಟನ್ ಕರಪತ್ರ - ಆನ್‌ಲೈನ್ ತರಗತಿಗಳನ್ನು ನಡೆಸಲು
  4. ಕಜಮ್ ಕರಪತ್ರ - ಸ್ಕ್ರೀನ್‌ಕಾಸ್ಟಿಂಗ್ ಮಾಡಲು
  5. ಆಡಾಸಿಟಿ ಕರಪತ್ರ - ಆಡಿಯೊ ಫೈಲ್‌ಗಳನ್ನು ರಚಿಸಲು / ಸಂಪಾದಿಸಲು
  6. ವಿಷಯ ಆಧಾರಿತ ಸಾಧನಗಳನ್ನು ಅನ್ವೇಷಿಸಿವುದು
  7. ಅಪ್ಲಿಕೇಶನ್ ಅನ್ನು ಅನ್ವೇಷಿಸಿವುದು
  8. ವಿಡಿಯೊ ಟ್ಯುಟೋರಿಯಲ್ಗಳು
    1. ಜಿಯೋಜೆಬ್ರಾ ಟ್ಯುಟೋರಿಯಲ್
    2. ಫೈರ್ಫಾಕ್ಸ್
    3. ಲಿಬ್ರೆ ಆಫೀಸ್ ರೈಟರ್
  9. ಜಿಯೋಜೆಬ್ರಾ ಟ್ಯೂಬ್ - ರಚಿಸಿದ ಜಿಯೋಜೆಬ್ರಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು
  10. ಮು.ಶ್ಯೆ.ಸಂ ಸಂಪನ್ಮೂಲಗಳನ್ನು ರಚಿಸಲು ಎಫ್.ಓ.ಎಸ್.ಎಸ್ ಅಪ್ಲಿಕೇಶನ್‌ಗಳು

ಮತ್ತಿತರ ಸಂಪನ್ಮೂಲಗಳು

  1. ಮು.ಶ್ಯೆ.ಸಂ ಸಂಪನ್ಮೂಲ
  2. ಎಫ್.ಓ.ಎಸ್.ಎಸ್ ಪ್ರಾಮುಖ್ಯತೆ
  3. ಎಫ್.ಓ.ಎಸ್.ಎಸ್ ಬಳಸಿ ಮು.ಶ್ಯೆ.ಸಂ ಅನ್ನು ರಚಿಸಲು ಮತ್ತು ಮರು-ಉದ್ದೇಶಿಸಲು ಶಿಕ್ಷಕರ ಟೂಲ್ ಕಿಟ್
  4. ಜಿಯೋಜೆಬ್ರಾ ಟ್ಯೂಬ್ - ರಚಿಸಿದ ಜಿಯೋಜೆಬ್ರಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು
  5. ನಿಮ್ಮ ಸ್ವಂತ ಲ್ಯಾಪ್‌ಟಾಪ್ ಖರೀದಿಸಿ

ಅಭ್ಯಾಸಕ್ರಮದ ಪ್ರತಿಕ್ರಿಯೆ ಫಾರ್ಮ್

ಅಭ್ಯಾಸಕ್ರಮದ ಪ್ರತಿಕ್ರಿಯೆ ಫಾರ್ಮ್ ಅನ್ನು ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ