ಸಪ್ತಾಕ್ಷರಿ ಮಂತ್ರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಕಲಿಕೋದ್ದೇಶಗಳು

ಕವಿ ಪರಿಚಯ

ಮುದ್ದಣ್ಣ ಎಂದು ಪ್ರಖ್ಯಾತರಾದ ನಂದಳಿಕೆ ಲಕ್ಷ್ಮೀ ನಾರಣಪ್ಪನವರು ದಿನಾಂಕ 24 ಜನವರಿ 1870ರಂದು ಉಡುಪಿ ಮತ್ತು ಕಾರ್ಕಳದ ಮಧ್ಯದಲ್ಲಿರುವ ನಂದಳಿಕೆ ಗ್ರಾಮದಲ್ಲಿ ಜನಿಸಿದರು.ನಂದಳಿಕೆ ತಂದೆ ಪಾಠಾಳಿ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಷ್ಮಮ್ಮ. ನಾರಣಪ್ಪನವರ ಪ್ರಾಥಮಿಕ ಶಿಕ್ಷಣ ನಂದಳಿಕೆಯಲ್ಲಿಯೇ ಆಯಿತು. ಮುಂದಿನ ವ್ಯಾಸಂಗಕ್ಕೆ ಉಡುಪಿಯ ಮಠವನ್ನು ಆಶ್ರಯಿಸಿದರು. ಇಂಗ್ಲಿಷ್ ಶಾಲೆಗೆ ಸೇರಲು ಫೀಸು ಕೊಡಲಾರದೆ ಕನ್ನಡ ಶಾಲೆಗೆ ಸೇರಿದರು. ಪ್ರೌಢ ಶಿಕ್ಷಣ ಮುಗಿಸಿ ಉಪಾಧ್ಯಾಯರ ತರಬೇತು ಪಡೆದರು. ನಾರಾಣಪ್ಪನವರ ದೇಹದಾರ್ಢ್ಯ ನೋಡಿ ವ್ಯಾಯಾಮ ಶಿಕ್ಷಕ ತರಬೇತಿಗಾಗಿ ಅವರನ್ನು ಮದರಾಸಿಗೆ ರವಾನೆ ಮಾಡಲಾಯಿತು. ತರಬೇತಿ ಮುಗಿಸಿ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಯಾಮ ಶಿಕ್ಷಕರಾದರು. ಇದೇ ಶಾಲೆಯಲ್ಲಿದ್ದ ಮಳಲಿ ಸುಬ್ಬರಾಯರ ಸಾಹಿತ್ಯ ಮಾರ್ಗದರ್ಶನದ ಸೌಭಾಗ್ಯ ನಾರಣಪ್ಪನವರಿಗೆ ಲಭಿಸಿತು. ಬಾಲ್ಯದ ಆಸಕ್ತಿಗನುಗುಣವಾಗಿ ಯಕ್ಷಗಾನ ನಾಟಕಗಳ ರಚನೆಯಲ್ಲಿ ತೊಡಗಿಕೊಂಡರು.

ಮುದ್ದಣನವರ ಪ್ರಥಮಕೃತಿ ‘ರತ್ನಾವತೀ ಕಲ್ಯಾಣ’. ನಂತರದಲ್ಲಿ ಮೂಡಿದ್ದು ‘ಕುಮಾರ ವಿಜಯ’(ಯಕ್ಷಗಾನ ಕೃತಿಗಳು). ತಮ್ಮ ಮಾರ್ಗದರ್ಶಕ ಗುರುಗಳಾದ ಸುಬ್ಬರಾಯರಿಗೆ ಕುಂದಾಪುರಕ್ಕೆ ವರ್ಗಾವಣೆಯಾದಾಗ ಅವರ ಸಾನಿಧ್ಯ ಬಯಸಿದ ಮುದ್ದಣ್ಣ ತಾವೂ ವರ್ಗ ಮಾಡಿಸಿಕೊಂಡರು.ಮುಂದೆ ಸಂಸ್ಕೃತ ಕಲಿಯಲು ಪ್ರಾರಂಭಿಸಿದರು. ಅದ್ಭುತ ರಾಮಾಯಣವನ್ನು ಹೇಳಿಸಿಕೊಂಡು ಹಳಗನ್ನಡದಲ್ಲಿ ರಚನೆ ಮಾಡಿದರು. ಮೈಸೂರಿನ ‘ಕಾವ್ಯಮಂಜರಿ ಪತ್ರಿಕೆ’ಯ ಸಂಪಾದಕರಲ್ಲಿ ಪ್ರಕಟಣೆಯ ಕೋರಿಕೆ ಸಲ್ಲಿಸಿ ಕರ್ತೃ ಗೊತ್ತಿಲ್ಲವೆಂದು ತಿಳಿಸಿದರು. ಈ ಕೃತಿ 1895ರಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡು ಸಂತೋಷ ಪಟ್ಟರು. ‘ಶ್ರೀರಾಮ ಪಟ್ಟಾಭಿಷೇಕಂ’ ಎಂಬ ಕೃತಿಯನ್ನು ಷಟ್ಪದಿಯಲ್ಲಿ ರಚಿಸಿದರು. ಮಹಾಲಕ್ಷ್ಮಿ ಎಂಬ ಕವಯಿತ್ರಿ ಹೆಸರಿನಲ್ಲಿ ಈ ಕೃತಿ ಪ್ರಕಟಣೆಗೊಂಡಿತು. ಎರಡೂ ಪುಸ್ತಕಗಳೂ ಮದರಾಸು ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ ಪಠ್ಯಪುಸ್ತಕಗಳಾದವು. ಕೃತಿಕಾರನ ಹೆಸರು ತಿಳಿಸದಿದ್ದುದರಿಂದ ಮುದ್ದಣನವರಿಗೆ ಇದಕ್ಕೆ ಸಲ್ಲಬೇಕಾದ ಹಣ ಮಾತ್ರ ಸಲ್ಲಲಿಲ್ಲವೆಂಬುದು ದುರಂತವೇ ಸರಿ.

‘ಓರ್ವ ಕನ್ನಡಿಗ’, ‘ಚಕ್ರಧಾರಿ’, ‘ರಂಗಭಟ್ಟನಾತ್ಮಜೆ’, ‘ಲಕ್ಷ್ಮೀನಾರಾಯಣ’ ಎಂಬ ಹೆಸರಿನಿಂದ ಮುದ್ದಣ್ಣ ಕೃತಿ ರಚನೆ ಮಾಡಿದರು. ‘ರಾಮಾಶ್ವಮೇಧ’ವನ್ನು ರಚಿಸುವಾಗ ಯಾವ ರೀತಿಯಲ್ಲಿ ಕಾವ್ಯವನ್ನು ರಚಿಸಲಿ 'ಪದ್ಯದಲ್ಲೋ ಗದ್ಯದಲ್ಲೋ' ಎಂದಾಗ ‘ಪದ್ಯವದ್ಯಂ, ಗದ್ಯ ಹೃದ್ಯಂ. ಹೃದ್ಯಮಪ ಗದ್ಯದೊಳೆ ಪೇಳ್ವುದು’ ಎಂದಾಗ ಮುದ್ದಣ-ಮನೋರಮ ಎಂಬ ನಲ್ಲ ನಲ್ಲೆಯರ ಸರಸ ಸಂಭಾಷಣೆಯ ಮೂಲಕ ಈ ಕೃತಿ ಅನಾವರಣಗೊಳ್ಳುವುದು ‘ಕನ್ನಡ ನವೋದಯದ ಮುಂಜಾನೆ ಕೋಳಿ’ ಎಂಬ ಕೀರ್ತಿಯನ್ನು ಮುದ್ದಣ್ಣನವರಿಗೆ ಸಲ್ಲಿವಂತೆಮಾಡಿದೆ. ಇದನ್ನೇ ‘ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು’ ಎಂದು ವಿದ್ವಾಂಸರಾದ ಎಸ್.ವಿ. ರಂಗಣ್ಣನವರು ಪ್ರಶಂಸಿಸಿದ್ದಾರೆ.

ಮುದ್ದಣ್ಣನವರು ಕ್ಷಯರೋಗ ತಗುಲಿದ ಕಾರಣ ತಮ್ಮ 32ನೇ ವಯಸ್ಸಿನಲ್ಲಿ (16-2-1901) ನಿಧನರಾದರು. ಇವರ 75ನೆಯ ವರ್ಷದ ಸ್ಮರಣೆಯ ನೆನಪಿಗಾಗಿ 1976ರಲ್ಲಿ ‘ಮುದ್ದಣ ಪ್ರಶಸ್ತಿ’ ಗ್ರಂಥವನ್ನು ಪ್ರಕಟಿಸಲಾಯಿತು.

ವಿಕಿಪೀಡಿಯಾದಲ್ಲಿರುವ ಮುದ್ದಣ್ಣನ ಮಾಹಿತಿ

ಶಿಕ್ಷಕರಿಗೆ ಟಿಪ್ಪಣಿ

ಹೆಚ್ಚುವರಿ ಸಂಪನ್ಮೂಲ

'ಕನ್ನಡ ದೀವಿಗೆ'ಯಲ್ಲಿನ 'ಅಂತರಾಳ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ

ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ