ಸಮಾಜ ವಿಜ್ಞಾನದ: ತತ್ವಶಾಸ್ತ್ರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

'=ಸಮಾಜ ವಿಜ್ಞಾನ ನುಡಿ ಮುತ್ತುಗಳ ಖಜಾನೆ.ಶ್ರೇಷ್ಠ ಹೇಳಿಕೆಗಳು= ಸಮಾಜ ವಿಜ್ಞಾನವೂ ಸೇರಿದಂತೆ ಹತ್ತು ಹಲವು ಚಿಂತಕರ ಉಪಯುಕ್ತ ನುಡಿಗಳು .


ಒಂದು ಹನಿ ಮೊಸರು ಸೇರಿದರೆ ಹೇಗೆ ಒಂದು ಹಾಲಿನ ಬಟ್ಟಲಿನ ಸಾವಿರ ಹನಿಗಳೂ ಕದಡಿಹೋಗುತ್ತವೆಯೋ ಹಾಗೆ ಸಾವಿರ ಸಕಾರಾತ್ಮಕ ಆಲೋಚನೆಗಳನ್ನೂ ಒಂದು ನಕಾರಾತ್ಮಕ ಯೋಚನೆ ಕದಡಿಬಿಡತ್ತದೆ, ಹಾಗಾಗಿ ನಕಾರಾತ್ಮಕತೆಯಿಂದ ಜಾಗ್ರತೆಯಾಗಿರಬೇಕು - ಅನಾಮಿಕ

ಯಾವ ಒತ್ತಡವೂ ಇಲ್ಲದೆ, ಯಾರೊಂದಿಗೂ ಘರ್ಷಣೆ ಇಲ್ಲದೆ, ಯಾವ ರಸಸ್ಪೂರ್ತಿಯು ಇಲ್ಲದೆ ಬದುಕುವುದು ಒಂದು ಬದುಕೇ ಅಲ್ಲ.

ಪ್ರತಿನಿತ್ಯ ಒಂದು ಜಿಂಕೆ ಹುಲಿಯಿಂದ ತಪ್ಪಿಸಿಕೊಳ್ಳಲು ಮತ್ತು ಆ ಹುಲಿ ಆ ಜಿಂಕೆಯನ್ನು ಹಿಡಿಯಲು, ವೇಗವಾಗಿ ಓಡುತ್ತವೆ. ಬದುಕಿನ ನಿಯಮವೂ ಅಷ್ಟೇ!. ನಾವು ಜಿಂಕೆಯಾಗಲೀ ಅಥವಾ ಹುಲಿಯಾಗಲೀ ಓಡುವುದಂತೂ ತಪ್ಪಿದ್ದಲ್ಲ - ಅನಾಮಿಕ

ಜೀವನದಲ್ಲಿ ದೊಡ್ಡ ಕೆಲಸ, ಕಾರ್ಯವೆಂಬುದು ಇಲ್ಲವೇ ಇಲ್ಲ. ದೊಡ್ಡ ಪ್ರೀತಿಯಿಂದ ಮಾಡಿದ ಎಷ್ಟೇ ಸಣ್ಣ ಕೆಲಸವಾದರೂ ಅದು ದೊಡ್ಡ ಕೆಲಸ, ಕಾರ್ಯವೇ.

ಜೀವನವೆಲ್ಲಾ ಬೇವೂ ಬೆಲ್ಲ ,ಎರಡೂ ಸವಿದವನೇ ಕವಿ ಮಲ್ಲ.. - ಕುವೆಂಪು

ಸರಸ್ವತಿಯೇ, ನಿನ್ನ ಬಳಿ ವಿದ್ಯೆಯೆಂಬ ಅಪರೂಪದ ಭಂಡಾರವೊಂದಿದೆ. ಬೇರೆಲ್ಲ ಸಂಪತ್ತುಗಳೂ ಹಂಚಿಕೊಂಡಷ್ಟೂ ಕ್ಷೀಣಿಸುತ್ತವೆ. ಆದರೆ (ನಿನ್ನ ಬಳಿಯಿರುವ) ವಿದ್ಯೆಯೆಂಬ ಸಂಪತ್ತು ಮಾತ್ರ ಹಂಚಿಕೊಂಡಷ್ಟೂ ವೃದ್ಧಿಸುತ್ತದೆ ಮತ್ತು ಗೋಪ್ಯವಾಗಿಟ್ಟಷ್ಟೂ ಕ್ಷೀಣಿಸುತ್ತದೆ! - ಸಂಸ್ಕೃತ ಸುಭಾಷಿತ

ಕಾದ ಕಾವಲಿಯ ಮೇಲೆ ಬಿದ್ದ ನೀರ ಹನಿಯೊಂದು ಆವಿಯಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ. ಕಮಲದೆಲೆಯ ಮೇಲೆ ಬಿದ್ದ ಅದೇ ನೀರ ಹನಿಯು ಸೂರ್ಯನ ಬೆಳಕಿನಲ್ಲಿ ಮುತ್ತಿನಂತೆ ಕಂಗೊಳಿಸುತ್ತದೆ. ಸ್ವಾತಿ ನಕ್ಷತ್ರದಲ್ಲಿ ಕಪ್ಪೆಚಿಪ್ಪನ್ನು ಪ್ರವೇಶಿಸಿದ ಅದೇ ನೀರ ಹನಿಯು ಅನರ್ಘ್ಯವಾದ ಮುತ್ತೇ ಆಗುತ್ತದೆ. ಹೀಗೆ ಉತ್ತಮ, ಮಧ್ಯಮ ಮತ್ತು ಅಧಮವೆಂಬ ಮೂರು ಗುಣಗಳೂ ಸಹವಾಸದಿಂದ ಉಂಟಾಗುತ್ತವೆ! - ಭರ್ತೃಹರಿಯ ನೀತಿಶತಕ (ಸಂಗ್ರಹ- ರವಿ ಅಹೇರಿ)

ಕಾಗೆ ಕಪ್ಪು. ಕೋಗಿಲೆ ಕೂಡಾ ಕಪ್ಪು. ಹಾಗಾದರೆ ಕಾಗೆ-ಕೋಗಿಲೆಗಳ ನಡುವಣ ವ್ಯತ್ಯಾಸ ತಿಳಿಯುವುದು ಹೇಗೆ? ಬಹಳ ಸುಲಭ; ವಸಂತಮಾಸ ಬಂದೊಡನೆ ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೇ! (ವಸಂತಮಾಸದಲ್ಲಿ ಮಾವು ಚಿಗುರುವುದರಿಂದ ಕೋಗಿಲೆ ಇಂಪಾದ ದನಿಯಲ್ಲಿ ಹಾಡುತ್ತದೆ. ಕಾಗೆಗದು ಅಸಾಧ್ಯ ಎಂಬರ್ಥದಲ್ಲಿ) - ಸಂಸ್ಕೃತ ಸುಭಾಷಿತ (ಸಂಗ್ರಹ- ಶ್ರೀ ರವಿ ಅಹೇರಿ)