ಸಮಾಜ ವಿಜ್ಞಾನದ: ತತ್ವಶಾಸ್ತ್ರ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಈ ಲೇಖನವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇತಿಹಾಸ ಭೋದನೆಯ ಬಗೆಗಿನ ಲೇಖನ

"ಬಾಳಿಲ"ರ ಅಣಿಮುತ್ತುಗಳು

ದಿನಾಂಕ 09/07/2014ರಂದು ನಡೆದ ಕುಂದಾಪುರ ಪ್ರೌಢಶಾಲಾ ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶಿಕ್ಷಣ ತಜ್ಞ,ಚಿಂತಕ ಶ್ರೀ ಹೆಚ್ ಕೃಷ್ಣಶಾಸ್ತ್ರಿ ಬಾಳಿಲ ಇವರು ಸಮಾಜ ವಿಜ್ಞಾನ ಶಿಕ್ಷಕರಿಗೆ ತಿಳಿಸಿದ ಮಾರ್ಗದರ್ಶಿ ಸೂತ್ರಗಳು.

1.ಮಾತು ಉಪದೇಶಕ್ಕೆ ಬದಲಾಗಿ ಆಚರಣೆಯಾಗಿ ಬದಲಾಗಬೇಕು. 2.ವಿವೇಚನೆ,ವಿವೇಕ ಇಲ್ಲದೇ ,ಯಾಕೆ ? ಎಂದು ಗೊತ್ತಿಲ್ಲದೆ, ಯಾವುದನ್ನೂ ಮಕ್ಕಳಿಗೆ ದಾಟಿಸಬೇಡಿ. 3.ಸಹಶಿಕ್ಷಣವೇ ಅತ್ಯಂತ ಪೂರಕವಾದ ಶೈಕ್ಷಣಿಕ ವಾತಾವರಣ. 4."ಹಿಂದಿನದನ್ನು ಮರೆಯುವುದು ಹೊಸದನ್ನು ಕಲಿಯುವುದಕ್ಕಿಂತ ಕಷ್ಟ.” 5.ತರಗತಿಯಲ್ಲಿ ಮಕ್ಕಳನ್ನು ಕೂರಿಸಿಯೇ ಪ್ರಶ್ನೆ ಕೇಳಿ.ಬದಲಾವಣೆ ಗಮನಿಸಿ. 6.ತಪ್ಪು ಕಲಿಕೆಯ ಬಾಗಿಲು ತೆರೆಯುತ್ತದೆ. 7.ಮಕ್ಕಳಲ್ಲಿ ಹಿಂಜರಿಕೆ ದೂರಮಾಡಿ. 8.Approach ಎಂದರೆ ವಸ್ತು ವಿಷಯದ (ಬೋಧನಾ ವಿಧಾನದ) ಸಮೀಪನ. 9.ಸಮಾಜ ವಿಜ್ಞಾನವೆಂದರೆ "ಗತ ಚರಿತ್ರೆಯನ್ನು ವರ್ತಮಾನದಲ್ಲಿ ಸೂಕ್ತವಾಗಿ ನಿರ್ಣಯಿಸಿ ಮುಂದುವರಿ ಎಂದರ್ಥ. 10.ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಸಿ,ಉತ್ತರಿಸುವ ಧೈರ್ಯ ಬೆಳೆಸಿ. 11.Silence doesnot guarantee any learning.ಮೌನ ಕಲಿಕೆಯನ್ನು ಖಾತ್ರಿಗೊಳಿಸದು. 12.ಇತಿಹಾಸದಿಂದ ಪಾಠ ಕಲಿಯದೇ ಇದ್ದರೆ ಅದು ಮರುಕಳಿಸುತ್ತದೆ(ನಿರ್ಣಯ ಸರಿ ಇಲ್ಲದಿದ್ದಾಗ ಇತಿಹಾಸ ಮರುಕಳಿಸುತ್ತದೆ. 13.ಸಮಾಜ ವಿಜ್ಞಾನ ಶಿಕ್ಷಕನಿಗೆ ಅತ್ಯಂತ ಅಗತ್ಯ -ವಿಷಯ ಪ್ರಭುತ್ವ (Subject grip)

ತರಗತಿಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರ ಕಾರ್ಯ 1.ಅಂದಿನ ಅವಧಿಗೆ ಬೇಕಾದದ್ದನ್ನು ಮಾತ್ರ ಮೈಗೆ ಅಂಟಿಸಿಕೊಳ್ಳದೇ, ಮೈಗೂಡಿಸಿಕೊಳ್ಳಿ.. 2.ಪಠ್ಯದಲ್ಲಿರುವುದನ್ನು ಮಾತ್ರ ಹೇಳಬೇಡಿ.ಹೊಸದನ್ನು ಹೇಳಿ. 3.ನಿಜವಾದ ಜ್ಞಾನ ಪಠ್ಯಪುಸ್ತಕದ ಹೊರಗೆ ಇದೆ ಎನ್ನುವುದು ನೆನಪಿರಲಿ. 4.ವಿದ್ಯಾರ್ಥಿಗೆ ಮೊದಲೇ ಪಾಠ ಓದಿಕೊಂಡು ಬರಲು ತಿಳಿಸಿರಿ. 5.ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ ಬೆಳೆಸಿ. 6.ತರಗತಿಗೆ ನಕಾಶೆ ತೆಗೆದುಕೊಂಡು ಹೋಗುವ ಬದಲಿಗೆ ನಾವೇ ಅದನ್ನು ಬಿಡಿಸಿದರೆ ಉತ್ತಮ. 7.ಕಲಿಯುವುದು ಹೇಗೆ ? ಎಂಬುದನ್ನು ಮೊದಲು ಕಲಿ. 8.ಮಕ್ಕಳಿಗೆ ಪರಾಮರ್ಶನ ಕೌಶಲ ಕಲಿಸಿ. 9.Self learning/Auto learning is more important. 10.Spoon feeding is ultimately leads the size of the spoon. 11.ಜ್ಞಾನ ಕಟ್ಟಿಕೊಳ್ಳುವ ಕೌಶಲ ಬೆಳೆಸಿ. 12.Social Science is a dull subject in the hands of dull teacher. 13.Text Book is a clutches(ಕ್ಲಚಸ್), teacher cannot walk. 14.Text books are the tools in the hands of the teacher. 15.Every child has a natural curiosity to learn. 16.ಮಗುವಿಗೆ ಉಸಿರಾಡಲು ಕೊಡಿ.ಕಲಿಯದಂತೆ ಮಾಡಬೇಡಿ. 17.ಮಕ್ಕಳನ್ನು ಹತ್ತಿಕ್ಕಬೇಡಿ.ಮಾತನಾಡಲು ಬಿಡಿ. 18.ನಾವು ಬೆಲ್ಲವಾದರೆ ಮಕ್ಕಳು ಸಕ್ಕರೆಯಾಗುವರು. 19.ಮಕ್ಕಳಿಗೆ intellectual stemina ಕೊಡಿ. 20."ವಾರ್ಷಿಕೋತ್ಸವ ನಿಮ್ಮ ಶಾಲೆಯ ನಿತ್ಯೋತ್ಸವವಾಗಲಿ”. 21.ಬೋಧನೆಯಲ್ಲಿ ವೈವಿಧ್ಯತೆ ಇರಲಿ.Variety creates interest.

ಸಮಾಜ ವಿಜ್ಞಾನದಲ್ಲಿ ನಡೆಸಬಹುದಾದ(ನಡೆಸಿರುವ) ಚಟುವಟಿಕೆಗಳು

List of Activities

1.Team teaching 2.Teaching by student 3.Mono Acting 4.Auto biographical narration 5.Narration in the story form.(Ex.River) 6.Notes taking &Making 7.Reading the text with expression 8.Role play 9.ಹರಿಕಥೆ(ಕೀರ್ತನೆ) 10.ಯಕ್ಷಗಾನ 11.ತಾಳಮದ್ದಲೆ 12.Discussion 13.Interview 14.Question &answer (Student question &teachers answer) 15.Phone in programme 16.Dramatisation 17.ಪತ್ರಲೇಖನ 18.Paper ಪ್ರೆಸೆಂಟೇಷನ್ 19.Songs by teacher(Any story related to history, geography(Ex:Solar system) 20.Dance (ನೃತ್ಯರೂಪಕ) 21.Demonstration 22.Shouting Slogans 23.Puppet Show 24.Plip Chart 25.Group Discussion 26.Field Visit. 27.Play card 28. ಗ್ರಾಮ ಚಾವಡಿ 29.ಮಕ್ಕಳ ಪಂಚಾಯತ್

ಬೆಂದು ಹೋಗಬೇಕು ಹೊರತು ,ತುಕ್ಕು ಹಿಡಿದು ಹೋಗಬಾರದು( It is better to roast out, before rust out)


ಐತಿಹಾಸಿಕ ಚಿಂತನೆ ಮತ್ತು ಇತರ ಅಸ್ವಾಭಾವಿಕ ಕ್ರಿಯೆಗಳು

ಅಮೆರಿಕದ ಮಕ್ಕಳಿಗೆ ಇತಿಹಾಸವನ್ನು ಯಾವ ರೀತಿ ಕಲಿಸಬೇಕು ಮತ್ತು ಇತಿಹಾಸ ಏಕೆ ಬೇಕು ಎನ್ನುವುದರ ವಿಶ್ಲೇಷಣೆಯೆ ಈ ಲೇಖನದ ಪ್ರಮುಖವಾದ ಅಂಶವಾಗಿದೆ. ಇದು ಮುಖ್ಯವಾಗಿ ಮಕ್ಕಳಿಗೆ ಇತಿಹಾಸವನ್ನು ಕಲಿಸಬೇಕಾದಾಗ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಲಿಸಬೇಕು ಎಂಬುದರ ಬಗ್ಗೆ ಕೂಡ ತಿಳುವಳಿಕೆಯನ್ನು ನೀಡುತ್ತದೆ. ಇತಿಹಾಸವನ್ನು ಕಲಿಸಬೇಕಾದಾಗ ಮಕ್ಕಳಿಗೆ ಗೆದ್ದವರು ಮತ್ತು ಸೋತವರ ಕಥೆಯನ್ನು ಹೇಳಬೇಕಾ? ಇತಿಹಾಸವನ್ನು ಕಾಲಕ್ಕೆ ಅನುಗುಣವಾಗಿ ಆ ಕಾಲಕ್ಕೆ ನಡೆದ ಘಟನೆಗಳ ಆಧಾರದ ಮೇಲೆ ಕಲಿಸಬೇಕಾ? ಎಂಬ ಸಂಘರ್ಷಣೆ ಮೂಡುತ್ತಿದೆ. ಅಮೇರಿಕಾದಲ್ಲಿ ಇತಿಹಾಸವು ಪಠ್ಯಕ್ರಮದಲ್ಲಿ ಇದ್ದರೂ ಅದು ಹೆಸರಿಗಷ್ಟೆ ಮಾತ್ರ ಇತ್ತು ಅಲ್ಲಿನ ಮಕ್ಕಳು ಸಹ ಅದನ್ನು ಉತ್ತೀರ್ಣರಾಗಬೇಕೆಂಬ ಉದ್ದೇಶದಿಂದ ಮಾತ್ರ ಕಲಿಯುತ್ತಿದ್ದರು. ಇದಲ್ಲದೆÉ ಅಮೇರಿಕಾದಲ್ಲಿ ಸೇವಾ ಪೂರ್ವ ಶಿಕ್ಷಣದಲ್ಲಿ ಕೂಡ ಇತಿಹಾಸ ಬೋಧಾನ ವಿಧಾನಗಳು ಇರಲಿಲ್ಲ ಕೇವಲ ಬೆರಳಣಿಕೆಯಷ್ಟು ಮಾತ್ರ ಬೋಧನಾ ವಿಧಾನಗಳನ್ನು ಮಾತ್ರ ನೋಡಬಹುದಾಗಿತ್ತು, ಆದರೆ ವಿಜ್ಞಾನ, ಗಣಿತ ಮತ್ತು ಸಾಹಿತ್ಯಕ್ಕೆ ಅನೇಕ ಬೋಧನಾ ವಿಧಾನಗಳು ಇದ್ದವು, ಸಂವಿಧಾನಲ್ಲಿ ಹೇಳಿದರೂ ಸಹ ಇತಿಹಾಸ ಬೋಧನೆಗೆ ಅಷ್ಟು ಮಹತ್ವ ನೀಡಿರಲಿಲ್ಲ. ಇತಿಹಾಸ ಏಕೆ ನಮಗೆ ಬೇಕು? ಮತ್ತು ನಾವು ಶಾಲೆಯಲ್ಲಿ ಮಕ್ಕಳಿಗೆ ಏಕೆ ಈಗಲೂ ಇತಿಹಾಸವನ್ನು ಕಲಿಸಬೇಕು? ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಇತಿಹಾಸದ ಬೋಧನೆ ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಪ್ರತಿ ಪೀಳಿಗೆಯೂ ಅರ್ಥಮಾಡಿಕೊಳ್ಳÀಬೇಕು ಎಂದರೆ ಭೂತಕಾಲವನ್ನು ಏಕೆ ಅರ್ಥಮಾಡಿಕೊಳ್ಳಬೇಕು ಮತ್ತು ಇತಿಹಾಸವು ನಮ್ಮನ್ನು ಏಕೆ ಒಗ್ಗೂಡಿಸುವ ಕೆಲಸ ಮಾಡುತ್ತದೆ. ಮಕ್ಕಳಿಗೆ ಯಾವ ಇತಿಹಾಸವನ್ನು ಬೋಧಿಸುತ್ತೇವೆ ಎನ್ನುವುದು ಮುಖ್ಯವಲ್ಲ, ಯಾವ ಇತಿಹಾಸ ಮಕ್ಕಳ ಜೀವನಕ್ಕೆ ಮುಖ್ಯ ಎನ್ನುವುದನ್ನು ಆಲೋಚನೆ ಮಾಡಬೇಕು ಅದನ್ನು ಮಕ್ಕಳಿಗೆ ಏಕೆ ಮುಖ್ಯವಾಗುತ್ತದೆ ಎನ್ನುವುದು ಗೊತ್ತಾದಾಗ ಮಾತ್ರ ಇತಿಹಾಸವನ್ನು ಏಕೆ ಬೋಧಿಸಬೇಕು ಮತ್ತು ಇತಿಹಾಸದ ಮಹತ್ವ ತಿಳಿಯಲು ಸಾಧ್ಯವಾಗುತ್ತದೆ.

ಇತಿಹಾಸ ಕಲಿಕೆಯ ಪ್ರಾಮುಖ್ಯತೆ

ಇತಿಹಾಸವನ್ನು ನಾವು ಸ್ವಲ್ಪ ಮಾತ್ರ ಅರ್ಥಮಾಡಿಕೊಂಡಿದ್ದೇವೆ, ಇತಿಹಾಸದಲ್ಲಿ ನಡೆದ ಎಷ್ಟೋ ಘಟನೆಗಳು ದಾಖಲೆಯಾಗಿಲ್ಲ ಅಂತಹ ಘಟನೆಗಳು ನಮಗೆ ಬಹಳ ಮುಖ್ಯ ಇರಬಹುದು, ಈಗ ಸಿಕ್ಕಿರುವ ಎಲ್ಲಾ ವಿಷಯಗಳನ್ನು ನಾವು ಅರ್ಥ ಮಾಡಿಕೊಳ್ಳಲು ಕಷ್ಟಸಾಧ್ಯ, ಆ ಕಾರಣದಿಂದ ನಮಗೆ ಇತಿಹಾಸದಲ್ಲಿ ತಿಳಿದುಕೊಳ್ಳುವ ಕ್ರಿಯೆ ನಿರಂತರವಾಗಿರಬೇಕೆನಿಸುತ್ತದೆ ಇತಿಹಾಸವನ್ನು ತಿಳಿಯುವುದರಿಂದ ಮನುಷ್ಯನು ಅಖಂಡತೆಯಿಂದ ಮಾನವ ಏನ್ನೆಲ್ಲ ಸಾಧನೆಗಳನ್ನು ಮಾಡಿದ್ದಾನೆ ಎಂಬುದನ್ನು ತಿಳಿಸುತ್ತದೆ ಮತ್ತು ಈಗ ಆದ ಬದಲಾವಣೆಗಳ ಬಗ್ಗೆ ತಿಳಿಸುತ್ತದೆ.

ಇತಿಹಾಸವನ್ನು ಕಲಿಸಬೇಕದಾಗ ಎದುರಾಗುವ ಸವಾಲುಗಳು

ಮಕ್ಕಳಿಗೆ ಗೊತ್ತಿಲ್ಲಿದ ಮತ್ತು ಗೊತ್ತಿರುವ ವಿಷಯಗಳ ತಿಳಿಯುವಿಕೆಗಳಲ್ಲಿ ಗೊಂದಲವಾಗುವ ಸಾಧ್ಯತೆಯಿದೆ.. ನಮ್ಮ ಪೂರ್ವಜರ ಭಾವನೆಗಳನ್ನು ಕೆಲವೊಂದು ಅರ್ಥವಾಗುತ್ತವೆ, ಕೆಲವೊಂದು ಅರ್ಥವಾಗುವುದಿಲ್ಲ, ಅವುಗಳನ್ನು ಹೇಗೆ ಮಕ್ಕಳಿಗೆ ತಿಳಿಸಬೇಕು ಎಂಬುದರ ನಡುವೆ ಗೊಂದಲವಿದೆ. ಇತಿಹಾಸದಲ್ಲಿ ಸಿಕ್ಕಿರುವ ಆಧಾರಗಳು ಸತ್ಯಕ್ಕೆ ಎಷ್ಟು ಸಮೀಪವಾಗಿವೆ ಮತ್ತು ಆಧಾರಗಳು ಸಿಕ್ಕರೆ ಅವು ಎಷ್ಟರ ಮಟ್ಟಿಗೆ ವಾಸ್ತವ ಸಂಗಾತಿಗಳಿಗೆ ಸಂಬಂಧಹೊಂದಿವೆ ಎಂಬ ಗೊಂದಲವಿದೆ. ನಮಗೆ ಗೊತ್ತಿರದ ವಿಷಯವನ್ನು ಎಷ್ಟು ಬುದ್ಧಿವಂತಿಕೆಯ ಮೇರೆಗೆ ಅರ್ಥಮಾಡಿಕೊಳ್ಳುತ್ತೆವೆ ಎನ್ನುವುದರ ಆಧಾರದಮೇಲೆ ಇತಿಹಾಸವು ಅರ್ಥವಾಗುತ್ತದೆ ಮತ್ತು ಗೊತ್ತಿರುವ ವಿಷಯಗಳ ಆಧಾರದ ಮೇಲೆ ಗೊತ್ತಿರದ ವಿಷಯಗಳ ನಡುವೆ ಸಂಬಂಧವನ್ನು ಮತ್ತು ಊಹೆಯನ್ನು ಮಾಡುತ್ತೇವೆ. ಇತಿಹಾಸವನ್ನು ಕಂಡುಕೊಳ್ಳುವುದರಿಂದ ನಾವು ಆಧುನಿಕ ಯುಗದಲ್ಲಿ ಹೇಗೆ ಇದ್ದೇವೆ ಮತ್ತು ಯಾವ ಪರಿಸ್ಥಿಯಲ್ಲಿ ಇದ್ದೇವೆ ಎಂಬುದನ್ನು ತಿಳಿದುಕೊಳ್ಳುತ್ತೇವೆ.
ಉದಾಹರಣೆ:

 1. ನಮ್ಮ ಸಂಸ್ಕøತಿಯನ್ನು ನಾವು ಇತಿಹಾಸವನ್ನು ಓದುವುದರಿಂದ ಅರ್ಥಮಾಡಿಕೊಳ್ಳಬಹುದು.
 2. ಸಿಂಧೂ ನಾಗರಿಕತೆಯನ್ನು ಅಭ್ಯಾಸ ಮಾಡುವಾಗ ಅಲ್ಲಿ ಒಳಚರಂಡಿಯ ವ್ಯವಸ್ಥೆ ಇತ್ತು ಎನ್ನುವುದನ್ನು ನೋಡುತ್ತೇವೆ ಮತ್ತು ಈಗ ಮತ್ತೆ ನಾವು ಆಧುನಿಕ ಯುಗದಲ್ಲಿ ಕೂಡ ಒಳಚರಂಡಿಯ ವ್ಯವಸ್ಥೆಯನ್ನು ಕಾಣುತ್ತಿದ್ದೇವೆ. ಅಂದರೆ ಸಿಂಧೂ ನಾಗರಿಕತೆಯಲ್ಲಿ ಜನ ಅಷ್ಟು ಸುವ್ಯವಸ್ಥೆಯಿಂದ ಜೀವನ ನಡೆಸುತ್ತಿದ್ದರು ಎನ್ನುವುದು ತಿಳಿದು ಬರುತ್ತದೆ.
 3. ಹೋಯ್ಸಳರ ಕಾಲದಲ್ಲಿ ನಿರ್ಮಾಣವಾದ ಬೇಲೂರು ಮತ್ತು ಹಳೇಬಿಡು ದೇವಾಲಯಗಳಲ್ಲಿ ಅತ್ಯುನ್ನತವಾದ ಕಲೆ ಮತ್ತು ವಾಸ್ತುಶಿಲ್ಪಗಳನ್ನು ನೋಡಬಹುದು, ಆದರೆ ಈಗ ನಿರ್ಮಾಣವಾಗುತ್ತಿರುವ ದೇವಾಲಯಗಳಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ.
 4. ಆಧುನಿಕ ಕಾಲದಲ್ಲಿ ಎಷ್ಟೆ ತಂತ್ರಜ್ಞಾನ ಬೆಳೆದಿದ್ದರು ಅದಕ್ಕೆ ಬುನಾದಿ ಹಾಕಿಕೊಟ್ಟದ್ದು ಮಾತ್ರ ನಮ್ಮ ಪೂರ್ವಜರು.

ನಮಗೆ ಇತಿಹಾಸ ಗೊತ್ತಿದ್ದರೆ ಮಾತ್ರ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಹೇಗೆ ಅದನ್ನು ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ, ನಮಗೆ ಇತಿಹಾಸ ತಿಳಿದುಕೊಳ್ಳುವುದು ಬಹಳ ಅಗತ್ಯವಾಗಿದೆ ಇಲ್ಲವಾದರೆ ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದು ಬಹಳ ಕಠಿಣವಾಗುತ್ತದೆ.
ಉದಾಹರಣೆ: ಹಿಂದಿನ ಕಾಲದಲ್ಲಿ ಮಾಡಿರುವ ಬೇಸಾಯ ಪದ್ದತಿಗಳನ್ನು ನಾವು ಆಧುನಿಕ ಕಾಲದಲ್ಲಿ ಮತ್ತೆ ಬಳಕೆಯನ್ನು ಮಾಡುತ್ತಿದ್ದೇವೆ, ಸಾವಯವ ಕೃಷಿಯನ್ನು ಮತ್ತೆ ಬಳಕೆಗೆ ತರುತ್ತಿದ್ದೇವೆ. ಇತಿಹಾಸವನ್ನು ಆಗಿನ ಘಟನೆಗೆ ಅನುಗುಣವಾಗಿ ಅರ್ಥಮಾಡಿಕೊಳ್ಳಬೇಕೆ ವಿನಃ ಅದನ್ನು ನಮ್ಮ ಅನುಕೂಲತೆಗೆ ತಕ್ಕಂತೆ ಅರ್ಥಮಾಡಿಕೊಳ್ಳಬಾರದು ಮತ್ತು ಅದರಲ್ಲಿ ಆದ ಬದಲಾವಣೆಗಳನ್ನು ಕಂಡುಕೊಳ್ಳಬೇಕು.
ಉದಾಹರಣೆ:

 1. ಇತಿಹಾಸದಲ್ಲಿ ವರದಕ್ಷಿಣೆ ಪದ್ಧತಿ ಜಾರಿಯಲ್ಲಿ ಇತ್ತು ಆದರೆ ಆಗ ಹುಡುಗಿಯರ ತಂದೆ ಸಂತೋಷದಿಂದ ಹುಡುಗನಿಗೆ ಕೊಡುತ್ತಿದ್ದರು ಆದರೆ ಕಾಲ ಬದಲಾದಂತೆ ಅದು ಹುಡುಗರ ಮನೆಯವರೆ ಬಲವಂತವಾಗಿ ತೆಗೆದುಕೊಳ್ಳುವ ಕಾಲ ಬಂದಿದೆ. ಈಗ ವರದಕ್ಷೀಣೆ ಒಂದು ಪಿಡುಗಾಗಿ ಮಾರ್ಪಟು ಹೊಂದಿದೆ.
 2. ಆನಾದಿ ಕಾಲದಲ್ಲಿ ಪರಿಸರವನ್ನು ದೇವರೆಂದು ಬಾವಿಸಿ ಪೂಜೆ ಮಾಡಿ ಅದನ್ನು ರಕ್ಷಣೆ ಮಾಡಿ ತಮಗೆ ಅಗತ್ಯವಿದ್ದಷ್ಟು ಮಾತ್ರ ಬಳಕೆ ಮಾಡುತ್ತಿದ್ದರು ಆದರೆ ಈಗ ಪರಿಸರವನ್ನು ನಮ್ಮ ಅಗತ್ಯಕ್ಕಿಂತೂ ಹೆಚ್ಚು ಬಳಕೆ ಮಾಡಿ ಭೂಮಿಯ ವಿನಾಶಕ್ಕೆ ಮನುಷ್ಯ ಕಾರಣನಾಗುತ್ತಿದ್ದಾನೆ.

ಇತಿಹಾಸವು ಘಟನೆ ನಡೆದ ಕಾಲ ಸ್ಥಳ ಮತ್ತು ಪರಿಕಲ್ಪನೆಗಳ ಬಗ್ಗೆ ಹೇಗೆ ಅದರ ಆಲೋಚನೆಗಳು ಇದ್ದವು ಎಂದು ತಿಳಿಸುತ್ತಲೆ ಅವುಗಳನ್ನು ಅನುಸರಿಸತ್ತೇವೆ, ಇತಿಹಾಸದ ಘಟನೆಗಳು ಆ ಕಾಲಕ್ಕೆ ಮತ್ತು ಮನುಷ್ಯನಿಗೆ ತಕ್ಕಂತೆ ನಡೆಯುತ್ತವೆ, ಅದು ಹೇಗೆ ಸಂಬಂಧ ಹೊಂದಿರುತ್ತದೆ ಎಂದು ಹೇಳುವುದು ಕಷ್ಟವಾಗುತ್ತದೆ.
ಇತಿಹಾಸಕ್ಕೆ ಹೋಲಿಕೆ ಮತ್ತು ಅದರ ಅಗತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಒಂದನ್ನು ಬಿಟ್ಟು ಇನ್ನೋಂದು ಇರಲು ಸಾಧ್ಯವಿಲ್ಲ, ಇವುಗಳ ನಡುವಿನ ಸಂಬಂಧಗಳನ್ನು ಅರ್ಥಮಾಡಿಕೊಳ್ಳಬೇಕು ಹಾಗೂ ಇತಿಹಾಸವು ಒಂದು ಸಂಸ್ಕ್ರತಿ ಮತ್ತು ಪರಂಪರೆಯಿಂದ ಬಂದಿದೆ ಅದರಲ್ಲಿ ಆದ ಬದಲಾವಣೆಗಳನ್ನು ಕಂಡು ನಾವು ಅದರಲ್ಲಿ ಇರುವ ಒಳ್ಳೆಯದನ್ನು ತಿಳಿಸಲು ಮತ್ತು ಕೆಟ್ಟದನ್ನು ಕೈ ಬಿಡಲು ಇತಿಹಾಸ ಸಹಾಯಕವಾಗುತ್ತದೆ. ಇತಿಹಾಸವನ್ನು ತಿಳಿದುಕೊಳ್ಳುವುದರಿಂದ ನಮ್ಮ ಬಗ್ಗೆ ಅಷ್ಟೆ ಅಲ್ಲದೆ ನಮ್ಮ ಪರಂಪರೆ , ಸಂಪ್ರದಾಯ, ಮೌಲ್ಯಗಳು ತಿಳಿದುಕೊಂಡು ವಿಶ್ವ ಮಾನವನಾಗಿ ಸದಸ್ಯತ್ವವನ್ನು ಪಡೆಯಲು ಮಾತ್ರ ಅದು ಸಾಧ್ಯವಾಗುತ್ತದೆ. ಇದಕ್ಕೆ ಅನುಗುಣವಾಗಿಯೇ ಇತಿಹಾಸದ ವಿಷಯವನ್ನು ಆಲೋಚನೆ ಮಾಡುವುದು ಹೇಗೆ ಎಂಬುದಕ್ಕೆ 3 ವ್ಯಕ್ತಿ ಅಧ್ಯಯನವನ್ನು ಮಾಡಲಾಗಿದೆ.

 1. ಪೌಢಶಾಲೆ ವಿದ್ಯಾರ್ಥಿ– ಕ್ರಾಂತಿಕಾರಿ ಯುದ್ಧ
 2. ಪ್ರಾಥಮಿಕ ಶಾಲಾ ಮುಖ್ಯಗುರುಗಳಿಗೆ- ಸೂಲಗಿತ್ತಿ ದಿನಚರಿ
 3. ಇತಿಹಾಸ ತಜ್ಞರು- ಅಬ್ರಹಾಂ ಲಿಂಕನ್

ಇತಿಹಾಸ ಹೆಸರು, ಕಾಲ, ಘಟನೆ ಮತ್ತು ಸ್ಥಳಗಳ ಕಥೆ ಅಲ್ಲ ಅದು ಮಾನಸಿಕ ಆಲೋಚನೆಯ ಬದಲಾವಣೆ ಮತ್ತು ಘಟನೆಯ, ಕಾರಣಗಳನ್ನು ಅರ್ಥಮಾಡಿಕೊಳ್ಳುವುದರಿಂದ ಅಲ್ಲಿ ನಡೆದಿರುವ ಘಟನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಮಕ್ಕಳಲ್ಲಿ ಪ್ರಶ್ನೆ ಕೇಳುವ ಮನೋಭಾವ, ವಿಮರ್ಶಾತ್ಮಕ ಚಿಂತನೆಗೆ ಅವಕಾಶ ಮತ್ತು ಇತಿಹಾಸವನ್ನು ನೋಡುವ ದೃಷ್ಠಿಕೋನದಲ್ಲಿ ಬದಲಾವಣೆ ಆಗುವ ರೀತಿಯಲ್ಲಿ ಇತಿಹಾಸದ ಕಲಿಕೆ ಮಕ್ಕಳಲ್ಲಿ ಆಗಬೇಕು. ಇದರಿಂದ ಮಕ್ಕಳಲ್ಲಿ ಐತಿಹಾಸಿಕ ದೃಷ್ಠಿಕೋನ ಬೆಳವಣಿಗೆ ಆಗಲು ಸಾಧ್ಯವಾಗುತ್ತದೆ.

ಪೌಢಶಾಲಾ ವಿಧ್ಯಾರ್ಥಿಯ ವ್ಯಕ್ತಿ ಅಧ್ಯಯನ:1

ಒಬ್ಬ ಪ್ರೌಢಶಾಲೆ ವಿದ್ಯಾರ್ಥಿಗೆ ಬ್ರಿಟಿಷ್ ಮತ್ತು ಲೆಕ್ಸಟನ್ ರ ಮಧ್ಯೆ ನಡೆದ ಒಂದು ಯುದ್ಧದ ಸಂಧರ್ಭದ ಘಟನೆಯನ್ನು ನೀಡÀಲಾಯಿತು. ಅದರಲ್ಲಿ ಬ್ರಿಟಿಷ್ ಸೈನ್ಯ ಬಹಳ ದೊಡ್ಡದಾಗಿತ್ತು ಆದರೆ ಆ ಕಾಲೋನಿ ಅವರು 17 ಜನ ಸೈನಿಕರು ಮಾತ್ರ ಇದ್ದರು ಬ್ರಿಟಿಷ್ ಅವರು ಎಲ್ಲಾ ಸಿದ್ದತೆಗಳ ಮೇರೆಗೆ ಬೆಟ್ಟಗಳ ಮೇಲೆ ನಿಂತು ಯುದ್ದವನ್ನು ಮಾಡುತ್ತಿದ್ದರು. ಈ ಯುದ್ದದಲ್ಲಿ ಕಾಲೊನಿಯವರು ಎಂಟು ಜನ ಮರಣ ಹೊಂದಿದ್ದರು ಆದರೆ ಬ್ರಿಟಿಷ್ ಸೈನಿಕರಲ್ಲಿ ಒಬ್ಬರು ಮಾತ್ರ ಮರಣವನ್ನು ಹೊಂದಿದ್ದರು. ಇದನ್ನು ಹೇಳಿದ ಮೇಲೆ ವಿದ್ಯಾರ್ಥಿಗೆ ಯುದ್ಧಕ್ಕೆ ಸಂಬಂಧಿಸಿದಂತೆ ಕೆಲವು ಚಿತ್ರಗಳನ್ನು ನೀಡಲಾಯಿತು. ಚಿತ್ರಗಳಲ್ಲಿ ಕೆಲವನ್ನು ಆಯ್ಕೆ ಮಾಡಲು ತಿಳಿಸಿದರು, ವಿದ್ಯಾರ್ಥಿ ಅದರಲ್ಲಿ ಕಾಲೋನಿ ಸೈನಿಕರು ಗೋಡೆಯ ಹಿಂದಿ ನಿಂತು ಯುದ್ಧ ಮಾಡುತ್ತಿರುವ ಚಿತ್ರವನ್ನು ಆಯ್ಕೆ ಮಾಡಿದನು. ಅದರ ಅರ್ಥ ಆ ವಿಧ್ಯಾರ್ಥಿ ಯುದ್ಧ ಮಾಡುತ್ತಾ ಬ್ರಿಟಿಷರಿಂದ ಬರುವ ಗುಂಡುಗಳಿಗೆ ಕಾಲೋನಿಯವರು ಹೇಗೆ ತಪ್ಪಿಸಿಕೊಂಡು ಯುದ್ಧ ಮಾಡುತ್ತಿರುವ ಆ ಸನ್ನಿವೇಶ ಮಗುವಿಗೆ ಯೋಚನೆಗೆ ಹಚ್ಚಿತು. ಮಗು ಯುದ್ಧದ ಸಂದಂರ್ಭವನ್ನು ಕೇಳುವಾಗ ಆದ ಸಾವು- ನೋವುಗಳ ನೋಡಿಲ್ಲ ಅವರು ತಮ್ಮ ರಕ್ಷಣೆ ಮತ್ತು ಯುದ್ಧ ನಡೆಸಿದ ರೀತಿಯಲ್ಲಿ ಯೋಚನೆ ಮಾಡಿದ್ದಾನೆ. ಆ ಕಾರಣದಿಂದ ಇತಿಹಾಸವನ್ನು ಪ್ರತಿಯೊಬ್ಬರು ಬೇರೆ ಬೇರೆ ಆಯಾಮಗಳಿಂದ ನೋಡುತ್ತಾರೆ ಅವುಗಳನ್ನು ವ್ಯಕ್ತ ಪಡಿಸಲು ನಾವು ಅವಕಾಶವನ್ನು ಮಾಡಿಕೋಡಬೇಕು ಆಗ ಮಾತ್ರ ಮಕ್ಕಳಲ್ಲಿ ಇತಿಹಾಸವನ್ನು ನೋಡುವ ಅದರ ಬಗ್ಗೆ ಚಿಂತನೆ ಮಾಡುವ ದೃಷ್ಠಿಕೋನದಲ್ಲಿ ಬದಲಾವಣೆ ಆಗಲು ಸಾಧ್ಯವಾಗುತ್ತದೆ. ಇತಿಹಾಸವನ್ನು ಪೂರ್ವಗ್ರಹ ಪೀಡಿತರಾನ್ನಾಗಿ ನೋಡಬಾರದು ಮತ್ತು ಇತಿಹಾಸಜ್ಞರು ಹೇಳಿದನ್ನಷ್ಟೆ ಅಲ್ಲ, ಅಲ್ಲಿ ಸಿಕ್ಕಿರುವ ಆಧಾರಗಳ ಮೇಲೆ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯವನ್ನು ಮಕ್ಕಳಿಗೆ ಬೆಳೆಸಬೇಕು. ಇತಿಹಾಸವನ್ನು ಊಹೆ ಮಾಡುವ/ ಚಿಂತನೆ ಮಾಡುವ ಅವಕಾಶ/ ಐತಿಹಾಸಿಕ ದೃಷ್ಠಿಕೋನ ಬೆಳೆಸಲು ಅವಕಾಶವನ್ನು ನೀಡಬೇಕು. ಇತಿಹಾಸ ಪ್ರಸ್ತತ ಸನ್ನಿವೇಶಕ್ಕೆ ಸಂಬಂಧ ಹೊಂದಿರಬೇಕು ಅಂತ ಏನೂ ಇಲ್ಲ, ಅದು ಸಂಬಂಧ ಇಲ್ಲದೆನೂ ಇರಬಹುದು. ಇತಿಹಾಸ ಬೋಧನೆಯಲ್ಲಿ ವಿದ್ಯಾರ್ಥಿಗಳು ಒಂದೇ ಘಟನೆಯನ್ನು ವಿಭಿನ್ನ ದೃಷ್ಠಿಕೋನದಲ್ಲಿ ನೋಡುವ ಅವಕಾಶವನ್ನು ಕಲ್ಪಿಸಿ ಕೋಡಬೇಕು ಇತಿಹಾಸ ಹೇಗೆ ಪ್ರತಿನಿಧಿಸುತ್ತದೆ ಎಂಬ ಕಲ್ಪನೆಗೆ ಅವಕಾಶ ಕೊಡುತ್ತದೆ ಮತ್ತು ಇತಿಹಾಸ ರಚನೆಯಾಗುತ್ತದೆ ಎಂದು ಮಕ್ಕಳಿಗೆ ಅರ್ಥಮಾಡಿಸಬೇಕು. ಇತಿಹಾಸ ಗತಕಾಲ ಘಟನೆಗಳು ಆಗಿರುವುದ್ದರಿಂದÀ ಅದನ್ನು ಹೇಗೆ ನಡೆದಿದೆ ಎಂದು ಹೇಳುವುದು ಕಠಿಣವಾಗುತ್ತದೆ, ಅದನ್ನು ಹೇಳಲು ಸಾಧ್ಯ ಆಗದಿರುವುದರಿಂದ ಇದನ್ನು ಈಗಿನ ಪರಿಸ್ಥಿತಿಗೆ ಸಂಬಂಧಿಕರಿಸಲು ಸಾಧ್ಯವಿಲ್ಲ, ಆ ಸಹಸಂಬಂಧ ನಮಗೆ ಸಿಗುವುದು ಕಷ್ಟವಾಗುತ್ತದೆ ಮತ್ತು ನಮಗೆ ನಮ್ಮ ಜೀವನದಲ್ಲಿ ನಿನ್ನ ನಡೆದಿರುವ ಎಲ್ಲ ವಿಷಯಗಳನ್ನು ಕ್ರಮವಾಗಿ ಹೇಳಲು ಅಸಾಧ್ಯವಾಗಿರುವುದರಿಂದ ಶತಮಾನದ ಹಿಂದೆ ಇತಿಹಾಸದಲ್ಲಿ ನಡೆದಿರುವ ಪ್ರತಿಯೊಂದು ವಿಷಯಗಳನ್ನು ಹೇಳುವುದು ಕಷ್ಟ ಸಾಧ್ಯವಾಗುತ್ತದೆ.

ಸೂಲಗಿತ್ತಿಯ ದಿನಚರಿ ವ್ಯಕ್ತಿ ಅಧ್ಯಯನ: 2

ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಿಗೆ ಈ ಕಾರ್ಯಾಗಾರವನ್ನು ಮಾಡಲಾಯಿತು, ಅದರಲ್ಲಿ ಇತಿಹಾಸ ಬೋಧನೆ ಮಾಡುವಾಗ ಮಕ್ಕಳಿಗೆ ಸಮಸ್ಯೆ ಮತ್ತು ಪ್ರಶ್ನೆ ಕೇಳುವ ಸಾಮಥ್ರ್ಯವನ್ನು ಬೆಳೆಸಬೇಕು . ಇತಿಹಾಸದ ಪಠ್ಯಪುಸ್ತಕದಲ್ಲಿ ಇತಿಹಾಸದ ಘಟನೆಗಳು ಹೀಗೆ ನಡೆಯಿತು ಎಂದು ಹೇಳುತ್ತವೆ ವಿನಃ ಹೀಗೆ ಆಗಿರಬಹುದು ಎಂದು ಹೇಳುವುದಿಲ್ಲ, ನಮ್ಮ ಪಠ್ಯಪುಸ್ತಕಗಳು ಅಲ್ಲಿರುವ ವಿಷಯಗಳ ಬಗ್ಗೆ ಮಾತ್ರ ಆಲೋಚನೆ ಮಾಡುತ್ತವೆ ವಿನಃ ಅಲ್ಲಿಂದ ಒಂದು ಹೆಜ್ಜೆ ಮುಂದೆ ಹೋಗಿ ಶಿಕ್ಷಕರು ಮತ್ತು ಮಕ್ಕಳು ಆಲೋಚನೆ ಮಾಡುವಂತಾ ಅವಕಾಶವನ್ನು ಮಾಡಿಕೊಡುವುದಿಲ್ಲ. ಇಂಥ ಅರ್ಥಗರ್ಭಿತವಾದ ಪಠ್ಯಕ್ರಮವನ್ನು ಅಧ್ಯಯನಗೈಯ್ಯುವಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಮರ್ಶಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ನಮ್ಮ ರಾಷ್ಟ್ರೀಯ ಫಠ್ಯಕ್ರಮ ಚೌಕಟ್ಟು 2005 ಸಮಾಜ ವಿಜ್ಞಾನದ ಬಗ್ಗೆ ಹೇಳಲಾಗಿದೆ.

ಇತಿಹಾಸದ ಪಠ್ಯಕ್ರಮವನ್ನು ರಚನೆ ಮಾಡುವಾಗ ಇತಿಹಾಸಕಾರರು ಬರೆದಿರುವಂತೆಯೇ ಬರೆದಿರುವುದಿಲ್ಲ. ಮಕ್ಕಳಿಗೆ ಕಲಿಯಲು ಎಷ್ಟು ಸಾಮಥ್ರ್ಯವಿದೆ ಎಂದು ತಿಳಿದು ಅದಕ್ಕೆ ಅನುಸಾರವಾಗಿ ಪಠ್ಯಕ್ರಮದ ರಚನೆಯನ್ನು ಮಾಡಲಾಗುತ್ತದೆ. ಆದ್ದರಿಂದ ಆ ಇತಿಹಾಸವನ್ನು ಪೂರ್ಣವಾಗಿ ಮಕ್ಕಳಿಗೆ ಮುಟ್ಟಿಸಲು ಸಾಧ್ಯವಾಗುತ್ತಿಲ್ಲ. ಚರಿತ್ರೆಯಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ಅಧ್ಯಯನಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಜನಾಂಗಗಳ ಕೊಡುಗೆ, ಆಧುನಿಕ ಪ್ರಪಂಚದ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಧುನಿಕ ಚರಿತ್ರೆಯನ್ನಿರಿಸಬೇಕು. ಸೂಲಗಿತ್ತಿ ಜೀವನ ಚರೀತ್ರೆ: ಪ್ರತಿದಿನ ಹಳ್ಳಿಯಲ್ಲಿ ಅನೇಕ ಹೆಂಗಸರಿಗೆ ಹೆರಿಗೆಯನ್ನು ಮಾಡಿಸುವುದು ಅವಳ ಕೆಲಸವಾಗಿತು.್ತ ಅದಕ್ಕೆ ಪ್ರತಿಯಾಗಿ ಅವರು ಕೊಟ್ಟ ಹಣವನ್ನು ತೆಗೆದುಕೊಳ್ಳುತ್ತಿದ್ದಳು. ನಂತರದ ದಿನಗಳಲ್ಲಿ ಆಸ್ಪತ್ರೆಗಳು ಬಳಕೆಗೆ ಬಂದ ನಂತರ ಇವಳು ಯಾರಿಂದ ಇಂತಹ ವೈದ್ಯವನ್ನು ಕಲಿತರು ಎನ್ನುವುದನ್ನು ತಿಳಿಯುವ ಆಸಕ್ತಿಯು ಹುಟ್ಟಿತು, ಆ ಕಾರಣದಿಂದ ಅವರ ಇತಿಹಾಸವನ್ನು ಬರೆಯಲು ಆರಂಭ ಮಾಡಿದರು. ಇದನ್ನು ಓದಿದ ಮುಖ್ಯ ಶಿಕ್ಷಕಿ ತನ್ನ ಪ್ರೌಢಶಾಲೆಯ ದಿನಗಳನ್ನು ನೆನಪಿಸಿಕೊಂಡಳು. ಇಂತಹ ಸಾಮಾನ್ಯರ ಇತಿಹಾಸವನ್ನು ನಾವು ಹೇಳುತ್ತಿವಲ್ಲ ಎನ್ನುವುದು ಅವಳ ಭಾವನೆಯಾಗಿತ್ತು. ಸೂಲಗಿತ್ತಿ ಡೈರಿಯನ್ನು ಪ್ರಾಥಮಿಕ ಮುಖ್ಯಗುರುಗಳ ಕಾರ್ಯಾಗಾರದಲ್ಲಿ ಓದಲು ನೀಡಲಾಯಿತು. ಅದನ್ನು ಓದಿದ ಮೇಲೆ ಚರಿತ್ರೆ ಎಂದರೆ, ಕೇವಲ ರಾಜ- ರಾಣಿ ಮಾತ್ರವಲ್ಲ. ಇಂತಹ ಜನಸಾಮನ್ಯರ ಇತಿಹಾಸವನ್ನು ಕೂಡ ಓದಲು ಇತಿಹಾಸದಲ್ಲಿ ಅವಕಾಶವನ್ನು ನೀಡಬೇಕು, ಇದನ್ನು ಓದಿದ ಮುಖ್ಯಗುರುಗಳಿಗೆ ಆಲೋಚನೆಯಲ್ಲಿ ಬಂದಿದು ಇಂತವರ ಇತಿಹಾಸವನ್ನೂ ಓದಲು ನಮಗೆ ಅವಕಾಶವನ್ನು ನೀಡುತ್ತಿಲ್ಲ ಎನ್ನುವುದು ಅವರ ದುಃಖಕ್ಕೆ ಕಾರಣವಾಯಿತು. ಅವರು ಓದಿದ ಮತ್ತು ಅವರು ಪಾಠಮಾಡುತ್ತಿರುವ ಮಕ್ಕಳಿಗೆ ಕೂಡ ಇಂತಹ ಇತಿಹಾಸವನ್ನು ಹೇಳುತ್ತಿಲ್ಲ ಎನ್ನುವುದನ್ನು ಅವರು ಹೇಳಲು ಪ್ರಯತ್ನಿಸುತ್ತಿದ್ದರು. ಈ ಕಾರಣದಿಂದ ಇತಿಹಾಸ ಕೇವಲ ಉಳ್ಳವರ ಕಥೆಯಲ್ಲ ಅದು ಎಲ್ಲಾರ ಕಥೆಯಾಗಿದೆ ಇದರಿಂದ ಕಲಿಯುವುದು ಕೂಡ ಬಹಳ ಇದೆ ಉದಾಹರಣೆಗಾಗಿ ಈ ವ್ಯಕ್ತಿ ಅಧ್ಯಯನ ಕೂಡ ಅಷ್ಟೆ ಅವಳು ಜನರ ಸೇವೆಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದಾಳೆ ಅದರೆ ನಾವು ಇತಿಹಾಸವನ್ನು ಓದುವಾಗ ಅವರ ಬಗ್ಗೆ ಎಲ್ಲೂ ಓದುವುದಿಲ್ಲ ಇದು ಚಿಂತಾಜನಕ ವಿಷಯವಾಗಿದೆ. ಉದಾಹರಣೆ: ಅದು ಅಲ್ಲದೆ ಇತಿಹಾಸದಲ್ಲಿ ಶಿಕ್ಷಿತ ಮತ್ತು ಅಶಿಕ್ಷಿತರ ಮಾಡಿದ ಸಾಧನೆಗಳ ಮೇಲೆ ಬಹಳ ಪ್ರಭಾವವನ್ನು ಬೀರುತ್ತದೆ. 1066 ರಲ್ಲಿ ಇಂಗ್ಲೇಡ್ ಮೇಲೆ ನಡೆದ ಯುದ್ದದಲ್ಲಿ ನಾರ್ವೆ ಜಯವನ್ನು ಸಾಧಿಸಿತು. ಆದಕ್ಕೆ ಕಾರಣವಾದ ವ್ಯಕ್ತಿಗಳ ಬಗ್ಗೆ ನಾವು ಇತಿಹಾಸದಲ್ಲಿ ಕಾಣುವುದಿಲ್ಲ ಆದರೆ ಅದೇ ಸಮಯದಲ್ಲಿ ಆದ ಡಾರ್ವಿನ್ ವಿಕಾಸವಾದ ಬಗ್ಗೆ ಇತಿಹಾಸದಲ್ಲಿ ನಮೂದಿಸಲಾಯಿತು. ಇತಿಹಾಸದ ಕಥೆಗಳು ನಮಗೆ ಗೊತ್ತಿದ್ದರೂ ಸಹ ಇಂದಿನ ವಿಷಯಗಳೊಂದಿಗೆ ಅವುಗಳನ್ನು ಸಹಸಂಬಂಧ ಮಾಡಿಕೊಂಡು ಯೋಚನೆಯನ್ನು ಮಾಡುತ್ತೇವೆ, ಗೊತ್ತಿರುವ ವಿಷಯಗಳ ಬಗ್ಗೆ ತಿಳಿದುಕೊಂಡು ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ. ಇತಿಹಾಸದ ಬೆಳವಣಿಗೆಯನ್ನು ನಾವು ಈಜಿಪ್ಟ್ ಕಾಲದ ಮಮ್ಮಿ, ಮಧ್ಯಕಾಲಿನ ಶಿಲಾಯುಗ, ರೇಡಿಯೋ, ಟಿ ವಿ, ಕಾರ್ ಗಳನ್ನು ಹೇಗೆ ಇಂದಿನ ಜೀವನಕ್ಕೆ ಹೊಸ ವಿಷಯಗಳನ್ನು ಪ್ರಸ್ತತ ಪಡಿಸುತ್ತೇವೆ ಎಂಬುದ ಬಹಳ ಮುಖ್ಯವಾಗುತ್ತದೆ. ನಮ್ಮ ಸಮಾಜದಲ್ಲಿ ಬರುವ ಪೂರ್ವಗ್ರಹಪೀಡಿತ ಯೋಚನೆಗಳು, ಸಮಾನತೆಗಳು ಮತ್ತು ನಂಬಿಕೆಗಳು ಕಾಲಾನುಕ್ರಮದಲ್ಲಿ ಬಂದವು ಅಥವಾ ಒಂದು ಸ್ಥಿರವಾದ ಘಟನೆಯಿಂದ ಅವುಗಳು ಹುಟ್ಟಿಕೊಂಡವು ಎಂಬುದು ಮುಖ್ಯವಾಗುತ್ತದೆ.


ಅಬ್ರಹಾಂ ಲಿಂಕನ ವ್ಯಕ್ತಿ ಅಧ್ಯಯನ:3

ಪ್ರಸ್ತುತ ಲೇಖನಗಳಲ್ಲಿ ಅಬ್ರಹಂ ಲಿಂಕನ್ ಮತ್ತು ಡೌಗ್ಲಾಸ್ (ಅಬ್ರಹಂ ಲಿಂಕನ್ ಅವರ ಬಗ್ಗೆ ನಕಾರಾತ್ಮಕ ಭಾವನೆಯನ್ನು ಹೊಂದಿರುತ್ತಾನೆ) ಇದರಲ್ಲಿ ಅಬ್ರಹಂ ಲಿಂಕನ್ ಜಾತಿಯವಾದಿ ತತ್ವವನ್ನು ಹೇಳುತ್ತಿದ್ದಾನೆ. ಅದರಲ್ಲಿ ಕಪ್ಪು ಜನರ ಮುಕ್ತಿಗಾಗಿ ಹೋರಾಟವನ್ನು ನಡೆಸುತ್ತಿದ್ದಾನೆ. ಎಂದು ಹೇಳಲಾಗುತ್ತಿತ್ತು. ಅವರು ಅವರ ಮುಕ್ತಿಗಾಗಿ ಬೈಬಲ್ ನಲ್ಲಿರುವ ಕೆಲವು ವಿಚಾರಗಳನ್ನು ಕೂಡ ತಮ್ಮ ವಿಚಾರಗಳಲ್ಲಿ ಮಂಡಣೆ ಮಾಡುತ್ತಿದ್ದರು. ಇಂತಹ ಲೇಖನಗಳನ್ನು ಒಳಗೊಂಡಿರುವ ಒಂದು ಪುಸ್ತಕದಲ್ಲಿನ 5 ದಾಖಲೆಗಳನ್ನು ತೆಗೆದುಕೊಂಡು ಅವುಗಳನ್ನು ಒಂದು ಕಾಲೇಜಿನ ವೃತ್ತಿಪರ ಶಿಕ್ಷಣವನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಅವುಗಳನ್ನು ಓದಿ ಅದರಲ್ಲಿನ ಅಂಶಗಳನ್ನು ಚರ್ಚೆ ಮಾಡಿದರು, ಚರ್ಚೆ ಮಾಡಿದರಲ್ಲಿ ನಾವು 2 ವಿಭಾಗಗಳಲ್ಲಿ ಅವರ ಅಭಿಪ್ರಾಯಗಳನ್ನು ವಿಂಗಡಣೆ ಮಾಡಬಹುದಾಗಿತ್ತು.

 1. ಲಿಂಕನ್ ಅವರ ಲೇಖನವನ್ನು ಓದಿ ಅದರಲ್ಲಿ ಇರುವಂತೆ ಅವರು ಅರ್ಥ ಮಾಡಿಕೊಳ್ಳುವುದು.: ಲೇಖನದಲ್ಲಿ ಕೊಟ್ಟಿರುವಂತೆ ಲಿಂಕನ್ ಒಬ್ಬ ಜಾತಿಯವಾದಿ ಎಂದರೆ ಓದುಗರಲ್ಲಿ ಕೂಡ ಅದನ್ನು ನಂಬುವುದು ಅದರ ಬಗ್ಗೆ ಯಾವುದೇ ಯೋಚನೆ ಮಾಡದೇ ಅಲ್ಲಿ ಕೊಟ್ಟಿರುವ ಎಲ್ಲಾ ಅಂಶಗಳನ್ನು ನಿಜ ಎಂದು ನಂಬುವುದು.
 2. ಲಿಂಕನ್ ಅವರು ಮಾತಾನಾಡಿದ ಸಂದಂರ್ಭ ಮತ್ತು ಸ್ಥಳಕ್ಕೆ ಅನುಗುಣವಾಗಿ ಲೇಖನವನ್ನು ಅವರು ಅರ್ಥಮಾಡಿಕೊಳ್ಳುವುದು.

ಉದಾಹರಣೆ: 1860 ರ ಸುಮಾರಿನಲ್ಲಿ ಸಮೂಹ ಮಾಧ್ಯಮಗಳ ಪ್ರಭಾವ ಅಷ್ಟು ಇರಲಿಲ್ಲ ಆದರೂ ಆಗಿನ ರಾಜಕಾರಣಿಗಳು ಮಾಡಿದ ಭಾಷಣಗಳನ್ನು ಕೇಳಲು ಅವಕಾಶ ಇರುತ್ತಿತ್ತು ಮತ್ತು ಇಂದಿನ ರಾಜಕಾರಣಿಗಳು ಮಾತಾನಾಡುವ ಭಾಷಣವನ್ನು ನಾವು ಟಿ ವಿ ಗಳ ಮೂಲಕ ನೋಡಬಹುದು ಹೀಗೆ ಭಾಷಣ ಮಾಡುತ್ತಿರುವ ರಾಜಕಾರಣಿಗಳ ಮಾತುಗಳನ್ನು ಹಿಂದಿನ ಕಾಲದಲ್ಲಿ ಮಾಡಿದ ಭಾಷಣಕ್ಕೆ ಹೋಲಿಕೆ ಮಾಡಿ ನಾವು ಯೋಚನೆಯನ್ನು ಮಾಡುತ್ತೇವೆ. ನಾವು ಕೂಡ ರಾಜಕಾರಣಿಗಳು ಭಾಷಣ ಮಾಡುವಾಗ ಅವರು ಹಿಂದೆ ಮಾಡಿದ ಬಾಷಣಕ್ಕೂ ಇಂದು ಮಾಡಿದ ಭಾಷಣಕ್ಕೂ ಇರುವ ಸಂಬಂಧವನ್ನು ಗಮನಿಸುತ್ತೇವೆ ಮತ್ತು ಅದರಲ್ಲಿ ಹೋಲಿಕೆಗಳನ್ನು ಕಾಣುತ್ತೇವೆ ಇದು ಮಾನವನ ಸ್ವಾಭಾವಿಕ ಗುಣವಾಗಿದೆ. ಅದೇ ರೀತಿ ಲಿಂಕನ್ ಭಾಷಣ ಮಾಡುವಾಗ ಕೂಡ ಅಲ್ಲಿ ಇದ್ದ ಜನರು ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಅವನು ಬಾಷಣವನ್ನು ಮಾಡುತ್ತಿದ್ದನು, ಕಪ್ಪು ಜನರ ಮಧ್ಯೆದಲ್ಲಿ ಭಾಷಣ ಮಾಡುತ್ತಿದ್ದಾಗ ಅವರ ಮುಕ್ತಿಗಾಗಿ ನಾನು ಹೋರಾಟ ಮಾಡುತ್ತೇನೆ ಎಂದು ಹೇಳುತ್ತಿದ್ದ, ಅದೇ ರೀತಿ ಇಂದಿನ ರಾಜಕಾರಣಿಗಳು ಕೂಡ ಅವರು ಹೋದ ಸ್ಥಳಕ್ಕೆ ಅನುಗುಣವಾಗಿ ಮಾತಾನಾಡುತ್ತಾರೆ. ವಿದ್ಯಾರ್ಥಿಗಳ ನಂತರ ಆ ದಾಖಲೆಗಳನ್ನು ಇತಿಹಾಸಜ್ಞರಿಗೆ ನೀಡಲಾಯಿತು, ಅದರಲ್ಲಿ 2 ವಿಧದಲ್ಲಿ ಇತಿಹಾಸತಜ್ಞರು ಇದ್ದರು.

 1. ಲಿಂಕನ್ ಅವರು ಬಗ್ಗೆ ತಿಳಿದು ಅವರ ಬಗ್ಗೆ ಪುಸ್ತಕಗಳನ್ನು ಬರೆದವರು.
 2. ಲಿಂಕನ್ ಅವರ ಬಗ್ಗೆ ಒಂದು ಗಂಟೆಯ ಉಪನ್ಯಾಸ ನೀಡುವಷ್ಟು ಅವರ ಬಗ್ಗೆ ಜ್ಞಾನವನ್ನು ಹೊಂದಿದವರು.

ಅದರಲ್ಲಿ ಆಲ್ಸ್ಟನ್ ಎಂಬುವವರ ಅಭಿಪ್ರಾಯವನ್ನು ಸಂಗ್ರಹ ಮಾಡಲಾಯಿತು ಇವರಿಗೆ ಲಿಂಕನ್ ಅವರ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದಿರಲಿಲ್ಲ, ಇವರು ಕೊಟ್ಟಿರುವ ಎಲ್ಲಾ ದಾಖಲೆಗಳ್ನು ಓದಿ ಕಾಲೇಜಿನ ವಿದ್ಯಾರ್ಥಿಗಳಂತೆ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ, 2ನೇ ದಾಖಲೆಯಲ್ಲಿ ಡೌಗ್ಲಾಸ್ ಅವರು ಲಿಂಕನ್ ಒಬ್ಬ ಜಾತಿವಾದಿ ಎಂದು ಹೇಳಿದ್ದಾರೆ ಆದರೆ ನನಗೆ ಲಿಂಕನ್ ಬಗ್ಗೆ ಎಷ್ಟು ಗೊತ್ತಿದೆ ಮತ್ತೆ ಇನ್ನು ಎಷ್ಟು ತಿಳಿಯಬೇಕಿದೆ. ಎಂಬುದು ನನಗೂ ಅಷ್ಟು ಸ್ಪಷ್ಟವಾಗಿಲ್ಲ ಆದರೆ ಇದರಲ್ಲಿ ಲಿಂಕನ್ ಅವರು ಬಿಳಿ ಮತ್ತು ಕಪ್ಪು ಎರಡು ಜನಾಂಗದವರನ್ನು ಎಷ್ಟು ನಂಬುತ್ತಾರೆ ಎಂಬುದು ನನಗೆ ಸ್ಪಷ್ಟವಿಲ್ಲ ಮತ್ತು ಬಿಳಿ ಮತ್ತು ಕಪ್ಪು ಜನಾಂಗದವರು ಇಬ್ಬರು ಒಂದೇ ಎಂದು ಹೇಳುತ್ತಿದ್ದಾರೆ. ಅವರು ಅದನ್ನು ಯಾವ ಉದ್ದೇಶದಿಂದ ಹೇಳುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ಆಲ್ಸ್ಟನ್ ಹೇಳುತ್ತಿದ್ದಾರೆ. ಒಂದೊಂದು ದಾಖಲೆಗಳನ್ನು ಓದುತ್ತಾ ಹೊದಂತೆ ಅವನು ತನಗೆ ತಾನೆ ಪ್ರಶ್ನೆಗಳನ್ನು ಕೇಳಿಕೊಳುತ್ತಾ ಹೋದನು, ಇದರಿಂದ ಅವನು ಲಿಂಕನ್ ಬಗ್ಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು, ಈ ಐದು ದಾಖಲೆಗಳನ್ನು 8 ಬಾರಿ ಓದಿದನು. ಜಾನ್ ಬೆಲ್ ಅವರು ಇವೆಲಾ ದೇವರ ಸೃಷ್ಟಿ ಅವನು ಮಾಡಿದಂತೆ ಮಾನವರೆಲ್ಲಾ ಇದ್ದಾರೆಎಂದ ಹೇಳಿದನು ಆದರೆ ಲಿಂಕನ್ ಮಾತ್ರ ಎಲ್ಲಾ ಮಾನವರು ಒಂದೆ ಎಂದು ಹೇಳಿದರು ಮತ್ತು ಕಪ್ಪು ಜನಾಂಗದವರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಮಾತ್ರ ವಿವರಣೆಯನ್ನು ನೀಡಿದ್ದಾನೆ. ಆಲ್ಸ್ಟನ್ ಅವರು 5 ಲೇಖನಗಳನ್ನು ಓದಿದನು ಅದರಲ್ಲಿ ಕಪ್ಪು ಜನಾಂಗದವರು ಅವರೇ ತಯಾರಿಸಿದ ಬ್ರೆಡ್‍ನ್ನು ತಿನ್ನುವ ಅಧಿಕಾರ ಅವರಿಗೆ ಇದೆ ಅದನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಅವರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಸಿಗಬೇಕು ಎನ್ನುವುದು ಇವರ ವಾದವಾಗಿತ್ತು. ಆಲ್ಸ್ಟನ್ ಒಬ್ಬ ಇತಿಹಾಸಗಾರನಾಗಿದ್ದರೂ ಕೂಡ ಅವನಿಗೆ ಲಿಂಕನ್ ಬಗ್ಗೆ ಹೆಚ್ಚಿನ ಜ್ಞಾನ ವಿರಲಿಲ್ಲ ಅದಕ್ಕಾಗಿ ಅವನು ಓದುತ್ತಾ ಹೊದಂತೆ ಕಾಲಾನುಕ್ರಮದಲ್ಲಿ ವಿಷಯಗಳನ್ನು ಸಹಂಬಂಧ ಮಾಡುತ್ತಾ ಹೋದನು ಓದಿದ ವಿಷಯಕ್ಕೂ ಹಿಂದೆ ನಡೆದ ಘಟನೆಗೂ ಹೊಲಿಕೆಯನ್ನು ಮತ್ತು ಕಲಿಕೆಯ ಹಾದಿಯನ್ನು ನಿರ್ಮಿಸುತ್ತಾ ಹೊಸ ವಿಷಯಗಳನ್ನು ಕಲಿಯುತ್ತಾ ಹೋದನು, ಅದರಲ್ಲಿ ಹೊಸ ಕೌಶಲ್ಯ, ತಂತ್ರ ಮತ್ತು ಹೇಗೆ ವಿಷಯಗಳನ್ನು ನೋಡಬೇಕು ಎಂಬುದನ್ನು ತಿಳೀದುಕೊಂಡನು.

ಆಲ್ಸ್ಟನ್ ಇತಿಹಾಸವನ್ನು ಅಂದಿನ ಪರಿಸ್ಥಿತಿಯಲ್ಲಿ ಇದ್ದು ಅದರ ಬಗ್ಗೆ ಊಹೆ ಮಾಡಿ ಅರ್ಥಮಾಡಿಕೊಂಡಿದ್ದಾನೆ. ಅದಕ್ಕಾಗಿ ಅವನಿಗೆ ಒಂದು ತಿರ್ಮಾನಕ್ಕೆ ಬರಲು ಸಾಧ್ಯವಾಯಿತು. ನಾವು ಕೂಡ ಇತಿಹಾಸವನ್ನು ಓದುವಾಗ ಅಲ್ಲಿನ ಪರಿಸ್ಥಿತಿಯಲ್ಲಿ ಹೇಗೆ ನಡೆದಿರಬೇಕು ಎಂದು ಯೋಚನೆ ಮಾಡಿ ಅದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ, ಇದರಿಂದ ಮಕ್ಕಳಿಗೆ ಮತ್ತು ನಮಗೆ ಹೊಸ ವಿಷಯಗಳನ್ನು ಕಲಿಯಲು ಐತಿಹಾಸಿಕವಾಗಿ ಆಲೋಚನೆ ಮಾಡಲು ಸಾಧ್ಯವಾಗುತ್ತದೆ.

ಉಪಸಂಹಾರ

ಇತಿಹಾಸವನ್ನು ರಚನೆ ಮಾಡುವಾಗ ಇತಿಹಾಸಕಾರರು ಹೃದಯ ಪೂರ್ವಕವಾಗಿ ಅದನ್ನು ಅನುವಾದ ಮಾಡುವುದಿಲ್ಲ ಅದಕ್ಕಾಗಿ ಅವರು ಹೊಸ ಹೆದ್ದಾರಿಗಳನ್ನು ಹುಡುಕುತ್ತಾರೆ ಆ ಕಾರಣದಿಂದ ಇತಿಹಾಸದಲ್ಲಿ ನಂಬಲು ಅರ್ಹವಾದ ನಿಜಾಂಶವನ್ನು ಸ್ವಲ್ಪ ಮಟ್ಟಿಗೆ ಮಾತ್ರ ನೋಡಬಹುದಾಗಿದೆ. ಕಳೆದ ಇತಿಹಾಸವನ್ನು ನಾವು ಕೆಲವು ಕಾರಣಗಳಿಂದ ಮತ್ತು ಉದಾಹರಣೆಗಳಿಂದ ನಡೆದ ಘಟನೆಗಳನ್ನು ಸಮರ್ಥನೆ ಮಾಡಿಕೊಂಡು ಬಂದಿದ್ದೆವೆ, ಆದರೆ ಹಿಂದಿನ ನಾಯಕರು ಹೊಂದಿದ ಐತಿಹಾಸಿಕ ಜ್ಞಾನದ ನಂಬಿಕೆ ಆಧಾರದ ಮೇಲೆ ನಾವು ಇಂದು ವ್ಯತ್ಯಾಸವನ್ನು ಕಾಣುತ್ತಿದ್ದೇವೆ. ಇತಿಹಾಸದ ರಚನೆಯ ಸಮಯದಲ್ಲಿ ಅಲ್ಲಿನ ಕಾನೂನು ಅಥವಾ ವ್ಯವಹಾರ ಪ್ರಚಾರ ಉತ್ತಮ ವಿದ್ಯಾರ್ಥಿಗಳ ಜ್ಞಾನವನ್ನು ಬಳಸಿಕೊಳ್ಳಲಾಗಿದೆ ಇಂದು ಚೀನಾದಲ್ಲಿ ಸ್ಕ್ರಿನಿಂಗ್ ಸಾಧನೆಗಳ ಬಳಕೆಗೆ ಯುನೈಟೆಡ್ ಸ್ಟೇಟ್ಸ್ ಅವರ ಜ್ಞಾನವನ್ನು ಉಪಯೋಗಿಸಿಕೊಳ್ಳುತ್ತಾರೆ. ಇತಿಹಾಸದ ಅಧ್ಯಯನ ಮಾಡುವುದು ಪ್ರಮುಖವಾಗಿದೆ. ಇದು ವ್ಯಕ್ತಿ ಮತ್ತು ಸಮಾಜದ ಸೌಂದರ್ಯದ ಪರಿಕಲ್ಪನೆಯ ತಿಳಿಸುತ್ತದೆ ಮತ್ತು ಇತಿಹಾಸವನ್ನು ಚರ್ಚೆ ಮಾಡಲು ವಿವಿಧ ಮಾರ್ಗಗಳು ಇವೆ. ಇದರಿಂದ ನೈಜವಾದ ಇತಿಹಾಸವನ್ನು ತಿಳಿಯಲು ಸಾಧ್ಯ. ಇವು ಮತ್ತು ಅನೇಕ ಇತಿಹಾಸತಜ್ಞಾರು ಕೂಡ ಇತಿಹಾಸದ ಬಗ್ಗೆ ಅರ್ಥ ವ್ಯಾಖ್ಯೆಗಳನ್ನು ನೀಡಿದ್ದಾರೆ.


ಮೂಲ ಲೇಖನ : historical thinking and other unnatural acts 1518_ch1
ಕನ್ನಡ ಅನುವಾದ ; ರಾಧ ದಾಸರಿ , It For Change