ಸ್ಟೆಲ್ಲಾರಿಯಮ್ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಸ್ಟೆಲ್ಲಾರಿಯಮ್ ಎಂಬುದು ಕಂಪ್ಯೂಟರ್‌ನಲ್ಲಿನ ಸಾರ್ವಜನಿಕ ಮತ್ತು ಮುಕ್ತ ಖಗೋಳ ವೀಕ್ಷಣಾ ಅನ್ವಯಕವಾಗಿದೆ. ಇದು ಆಕಾಶವನ್ನು ಬರಿಗಣ್ಣಿನಲ್ಲಿಯೇ, ಬೈನಾಕುಲರ್ ನಲ್ಲಿ ಅಥವಾ ಟೆಲಿಸ್ಕೋಪ್‌ ನಲ್ಲಿ ನೋಡಿದಂತೆಯೇ 3D ಮಾದರಿಯಲ್ಲಿ ತೋರಿಸುತ್ತದೆ. ಇದನ್ನು ತಾರಾಲಯದಲ್ಲಿನ ಪ್ರೊಜೆಕ್ಟರ್ ಗಳಲ್ಲಿ ಬಳಸಲಾಗುತ್ತದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಸ್ಟೆಲ್ಲಾರಿಯಮ್ ಮೂಲಕ ನಕ್ಷತ್ರಗಳ ಪಟ್ಟಿಯನ್ನು ಪಡೆಯಬಹುದು ಹಾಗು ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳು ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳು, ಗ್ರಹಗಳ ಚಿತ್ರಗಳು , ನೈಜ ಆಕಾಶ ವೀಕ್ಷಣೆ ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ,ಗ್ರಹ ಉಪಗ್ರಹಗಳ ಮಾಹಿತಿ ಪಡೆಯಬಹುದಾಗಿದೆ.
ಆವೃತ್ತಿ Stellarium Version - 0.14.3
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು ಕೆ-ಸ್ಟಾರ್
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಆಂಡ್ರಾಯಿಡ್ ಮೊಬೈಲ್‌ ಪೋನ್‌ಗಳಲ್ಲಿ ಸ್ಟೆಲ್ಲಾರಿಯಂ ಮಾದರಿಯ SkyMap ಅನ್ವಯಕ ಲಭ್ಯವಿದೆ.
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಅಧಿಕೃತ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

  1. ಸ್ಟೆಲ್ಲಾರಿಯಮ್ 600,000 ಕ್ಕೂ ಹೆಚ್ಚು ನಕ್ಷತ್ರಗಳ ಪಟ್ಟಿಯನ್ನು, 210 ಮಿಲಿಯನ್ ಕ್ಕೂ ಹೆಚ್ಚು ಹೆಚ್ಚುವರಿ ನಕ್ಷತ್ರಗಳ ಪಟ್ಟಿಯನ್ನು, ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳನ್ನು, 20ಕ್ಕೂ ಹೆಚ್ಚು ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳನ್ನು ಮತ್ತು ಗ್ರಹಗಳ ಚಿತ್ರಗಳನ್ನು ಹೊಂದಿದೆ.
  2. ಸ್ಟೆಲ್ಲಾರಿಯಮ್ ಮೂಲಕ ನೈಜ ಆಕಾಶ ವೀಕ್ಷಣೆಯನ್ನು, ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ ಮತ್ತು ಗ್ರಹ ಉಪಗ್ರಹಗಳನ್ನು ವೀಕ್ಷಿಸಬಹುದಾಗಿದೆ.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “Stellarium” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install stellarium

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು