ಹಗಲುಗನಸು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಂತೋಷಕ್ಕಾಗಿ ಓದುವುದು (ಮತ್ತು ನಮ್ಮ ವೃತ್ತಿಪರ ಅಭಿವೃದ್ಧಿಗೆ)

ಬೋಧನೆಗೆ ಹೆಚ್ಚಿನ ಸ್ಥಿರವಾದ ಶಕ್ತಿಯ ಅಗತ್ಯವಿದೆ

ಬೋಧನೆ ಮಾಡುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸದ ಕೆಲಸ. ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ, ತಿಂಗಳಿಂದ ತಿಂಗಳಿಗೆ , ಪ್ರತಿ ಶೈಕ್ಷಣಿಕ ವರ್ಷದಲ್ಲಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಕಲಿಯುವ ಸಂದರ್ಭಗಳನ್ನು ಪರಿಗಣಿಸಿ ತಮ್ಮ ಪಾಠ ಯೋಜನೆಗಳನ್ನು ರೂಪಸಿಕೊಂಡು, ಅವಶ್ಯಕ/ಉಪಯುಕ್ತ ಅಧ್ಯಾಪನ ಶಾಸ್ತ್ರ,ಬೋಧನಾ ಕ್ರಿಯೆ ? ಮತ್ತು ಮೌಲ್ಯಮಾಪನವಿಧಾನವನ್ನು ಗುರುತಿಸುವುದು ಅಗತ್ಯವಾಗಿರುತ್ತದೆ. ಒಬ್ಬ ಶಿಕ್ಷಕನು 25-30 ವಿದ್ಯಾರ್ಥಿಗಳ ತರಗತಿಯನ್ನು ಹೊಂದಿದ್ದರೆ ಇದು ಆಯಾಸಮಯ ವಾಗಬಹುದು ಅಂಥದರಲ್ಲಿ ಅನೇಕ ಶಿಕ್ಷಕರು 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ!

ಲಿಂಗ ತಾರತಮ್ಯ ಸಮಾಜವನ್ನು ಗಮನಿಸಿದರೆ, ಮಹಿಳಾ ಶಿಕ್ಷಕಿಯರು '?ಎರಡು ಕಡೆ ಕರ್ತವ್ಯದ ನಿರ್ವಹಣೆಯನ್ನು ' ಹೊಂದಿದ್ದಾರೆ, ಶಾಲೆಯಲ್ಲಿ ಮತ್ತು ಮನೆಯಲ್ಲಿ ಪೂರ್ಣ ಸಮಯ ಕೆಲಸ ಮಾಡುತ್ತಾರೆ.

ಇದರಿಂದಾಗಿ ಶಿಕ್ಷಕರು ತಮ್ಮ ಮುಂದುವರಿದ ವೃತ್ತಿಪರ ಅಭಿವೃದ್ಧಿಯತ್ತ ಗಮನಹರಿಸುವುದು ಕಷ್ಟಕರವಾಗಿರುತ್ತದೆ. ಬೋಧನೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಅರ್ಥಪೂರ್ಣವಾಗಿಸಲು ಸಹಾಯ ಮಾಡುವ ಹೊಸ ಪರಿವಿಡಿ /ವಿಷಯ ವಸ್ತುಗಳ ಮತ್ತು ಶಿಕ್ಷಣಶಾಸ್ತ್ರ ಗಳ ವಿಚಾರಗಳನ್ನು ಗುರುತಿಸುವುದನ್ನು ಮುಂದುವರಿಸಲು ಯಾವುದೇ ವೃತ್ತಿಪರರಿಗೆ ನಿಯಮಿತವಾಗಿ , ನಿರಂತರವಾಗಿ 'ರಿಚಾರ್ಜ್ ನ (recharge)?' ಅಗತ್ಯವಿದೆ.

ಆನ್-ಸೈಟ್ ಶಿಕ್ಷಕರ ಅಭಿವೃದ್ಧಿ

ಶಿಕ್ಷಕರ ಕಾರ್ಯಾಗಾರಗಳು ಉಪಯುಕ್ತವಾಗಿದ್ದರೂ, ಆನ್-ಸೈಟ್ ಅಭಿವೃದ್ಧಿ ಸಂಶೋಧನೆಯಿಂದ ಅಗತ್ಯವೆಂದು ಕಂಡುಬಂದಿದೆ.ಆನ್-ಸೈಟ್ ಅಭಿವೃದ್ಧಿಯು ಹಲವಾರು ಪ್ರಯೋಜನಗಳನ್ನು ಹೊಂದಿದೆ:

  • ಸಾಮೂಹಿಕ ಪ್ರಜ್ಞೆಯನ್ನು ಬೆಳೆಸುವುದು.
  • ಅಭಿವೃದ್ಧಿ ಪ್ರಕ್ರಿಯೆಗಳು 'ನಮ್ಮ ಸಮಸ್ಯೆಗಳನ್ನು' ಹೇಗೆ ಪರಿಹರಿಸಬಹುದು ಮತ್ತು 'ನಮ್ಮ ಅಗತ್ಯತೆಗಳನ್ನು' ಹೇಗೆ ಗುರುತಿಸಬಹುದು ಎಂಬುದರ ಬಗ್ಗೆ ಶೋಧಿಸುವುದು.

ಸರಿಪಡಿಸುವ ಬದಲು ನವೀಕರಣ

ಸಿಬ್ಬಂದಿ ಸಭೆಗಳು ಶಾಲೆಯ ಸವಾಲುಗಳ ಬಗ್ಗೆ ಸಾಮಾನ್ಯ ಚಿಂತನೆಗೆ ಅವಕಾಶ ನೀಡಬಹುದಾದರೂ, ಇವು ಸಾಮಾನ್ಯವಾಗಿ 'ಮೊದಲ ಚತುರ್ಥಕ ' - ತುರ್ತು ಹಾಗೂ ಪ್ರಮುಖ ಚಟುವಟಿಕೆಗಳು. ಪ್ರಜ್ಞಾಪೂರ್ವಕ ಶಾಲಾ ಅಭಿವೃದ್ಧಿಯು 'ಎರಡನೇ ಚತುರ್ಥಕ ದಲ್ಲಿರಬೇಕು - ಮುಖ್ಯವಾದರೂ ತುರ್ತು ಅಲ್ಲ. ಈ ಪ್ರಕ್ರಿಯೆಯು ಕಡಿಮೆ ಶ್ರೇಣೀಕೃತವಾಗಬಹುದು, ಏಕೆಂದರೆ ಇದು ಯಾವುದೇ ಅಲ್ಪಾವಧಿಯ ಫಲಿತಾಂಶದ ನಿರೀಕ್ಷೆಗಳನ್ನು ಹೊಂದಿರುವುದಿಲ್ಲ. ಪರಸ್ಪರ ಬೆಂಬಲ, ಸಂದರ್ಭ, ವಿಷಯ, ಶಿಕ್ಷಣಶಾಸ್ತ್ರ ಈ ಪ್ರಕ್ರಿಯೆಯನ್ನು ಸಹಕಾರಿ ಮಾಡುವುದು, ಕಲಿಯಲು ಅನುಕೂಲವಾಗುತ್ತದೆ. ಇದು ನಂಬಿಕೆ ಮತ್ತು ಒಗ್ಗಟ್ಟಿನ ಪ್ರಜ್ಞೆಯನ್ನು ಬೆಂಬಲಿಸುತ್ತದೆ.

ಸಂತೋಷಕ್ಕಾಗಿ ಓದುವುದು

ಅಂತ್ಯಂತ ಸರಳವಾದದ್ದು ಒಟ್ಟಿಗೆ ಓದುವುದು. ಓದುವಲ್ಲಿ ತುಂಬಾಆನಂದವಿದೆ, ಶಿಕ್ಷಕರು ಓದುವುದನ್ನು ಅನುಭವಿಸಿರಬಹುದು. ಆನಂದಕ್ಕಾಗಿ ಓದುವುದು ವಿದ್ಯಾರ್ಥಿಗಳ ಕಲಿಕೆಗೆ ಬಹಳ ಮುಖ್ಯವಾದ ಸಾಧನವೆಂದು ಗುರುತಿಸಲ್ಪಟ್ಟಿದೆ ಮತ್ತು ಶಿಕ್ಷಕರು ಅದರಿಂದ ಪ್ರಯೋಜನ ಪಡೆಯದಿರಲು ಯಾವುದೇ ಕಾರಣವಿಲ್ಲ.

ಒಟ್ಟಿಗೆ ಓದುವುದರಿಂದ ಒಟ್ಟಿಗೆ ಯೋಚಿಸುವುದನ್ನು ಬೆಂಬಲಿಸಬಹುದು, ಒಟ್ಟಿಗೆ ಇರುವುದು ಮತ್ತು ಒಟ್ಟಿಗೆ ಕಲಿಯುವುದು ಆನಂದವನ್ನು ನೀಡುತ್ತದೆ.

ಗುರುತಿಸಲಾದ ವಿಷಯವು (ಪುಸ್ತಕ) ನಮ್ಮ ವೃತ್ತಿಪರ ಜೀವನದೊಂದಿಗೆ ಸಂಪರ್ಕ ಹೊಂದಿದ್ದರೆ, ಅದು ಆಸಕ್ತಿದಾಯಕವಾಗಬಹುದು.

ಈ ಆಲೋಚನೆಯೊಂದಿಗೆ, ನಾವು ಗಿಜುಭಾಯ್ ಬದೇಕಾ ಅವರು ಬರೆದ ಕಥೆ ಪುಸ್ತಕ 'ದಿವ್ಯಸ್ವಪ್ನ ' ದ ಕನ್ನಡ ?ಭಾಷಾಂತರವನ್ನು(ಹಗಲು ಕನಸು) ಓದಲು ಪ್ರಾರಂಭಿಸಿವೆವು.

ಒಂದು ಗಂಟೆಯ ಮೊದಲ ಅಧಿವೇಶನದಲ್ಲಿ, ನಾವು ಮೊದಲ ಅಧ್ಯಾಯ ಮತ್ತು ಎರಡನೆಯ ನಾಲ್ಕು ವಿಭಾಗಗಳನ್ನು ಓದುತ್ತೇವೆ.