HTF 2014-15

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

See in English

  • ಮುಖ್ಯಶಿಕ್ಷಕರ ವೇದಿಕೆ ಕಾರ್ಯಾಗಾರ, ಅಕ್ಟೋಬರ್ 14-18,2014.ಮೊದಲನೇ ತಂಡ , ಬೆಂಗಳೂರು ಗ್ರಾಮಾಂತರ ಡಯಟ್
  • Please fill up the Participant Information Form

ಕಾರ್ಯಸೂಚಿ

  1. ಈ ಕಾರ್ಯಾಗಾರದ ಕಾರ್ಯಸೂಚಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
  2. ಸಂಪನ್ಮೂಲ ವ್ಯಕ್ತಿಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
  3. ಜಿಲ್ಲಾ ಹಂತದ ಡಯಟ್‌ಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
  4. ಮುಖ್ಯಶಿಕ್ಷಕರ ವೇದಿಕೆ ಎಂದರೇನು ? ಇದು ಯಾಕೆ ಬೇಕು

ಅಭಿಪ್ರಾಯ

ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಸಂಪನ್ಮೂಲಗಳಯ ಮತ್ತು ಕೈಪಿಡಿಗಳು

ದಿನ 1

  1. ಸಮಾಜದ ಮೇಲೆ ಐ.ಸಿ.ಟಿ ಯ ಪರಿಣಾಮ
  2. ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
  3. ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
  4. ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
  5. ಬೇಸಿಕ್_Ubuntu_ಕೈಪಿಡಿ
  6. ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  1. ಓದಲು ಲೇಖನಗಳು
    1. ಶಿಕ್ಷಣದ ಗುರಿಗಳು
    2. ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ
    3. ಭಾಗೀದಾರರ ಭಾಗವಹಿಸುವಿಕೆ ಪರಿಕಲ್ಪನಾ ಪತ್ರ
    4. ಶಾಲಾ ಮತ್ತು ತರಗತಿ ವಾತಾವರಣ ಪರಿಕಲ್ಪನಾ ಪತ್ರ
    5. ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ
    6. ಪ್ರಕರಣ ಅಧ್ಯಯನಗಳು

ದಿನ 2

  1. E-mail ಕೈಪಿಡಿಗಾಗಿ ಇಲ್ಲಿ ಒತ್ತಿ
  2. Adding email id to googlegroups
  3. ವೃತ್ತಿಪರ ಕಲಿಕಾ ಸಮುದಾಯಗಳು
  4. ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
  5. ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  6. Picasa ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
  7. ಯೂಟ್ಯೂಬ್ ಅಪ್ಲೋಡ್ ವಿಧಾನದ ಕೈಪಿ


ದಿನ 3

  1. Additional / optional readings
    1. NCF 2005 ಗಣಿತ ಪೊಷೀಷನ್ ಪೇಪರ್
    2. NCF 2005 ವಿಜ್ಞಾನ ಪೊಷೀಷನ್ ಪೇಪರ್
    3. NCF 2005 ಸಮಾಜ ವಿಜ್ಞಾನ ಪೊಷೀಷನ್ ಪೇಪರ್
    4. NCF 2005 ಭಾರತೀಯ ಭಾಷಾ ಬೋಧನೆ ಪೊಷೀಷನ್ ಪೇಪರ್
    5. NCF 2005 ಪರೀಕ್ಷಾ ನಿಯಮಗಳು ಪೊಷೀಷನ್ ಪೇಪರ್
    6. NCF 2005 ಆಂಗ್ಲ ಭಾಷೆ ಪೊಷೀಷನ್ ಪೇಪರ್


ದಿನ 4

  1. ಕೊಯರ್_ಹಿನ್ನೆಲೆ_ಟಪ್ಪಣಿ
  2. ಪ್ರೀಮೈಂಡ್ ಕೈಪಿಡಿ
  3. ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ

ದಿನ 5

    1. Subject Teacher Forum
    2. ವಿಷಯ ಶಿಕ್ಷಕರ ವೇದಿಕೆ ಕಾರ್ಯಕ್ರಮದ ಬಗೆಗಿನ ಪ್ರಸ್ತುತಿ
    3. ಶಾಲಾಹಂತದ ಐ.ಸಿ.ಟಿ
  1. ಹೆಚ್ಚುವರಿ ಲೇಖನಗಳು - ಶೈಕ್ಷಣಿಕ ಪರಿಕರಗಳು
    1. Learning Geogebra
    2. Social Science Useful websites
    3. Science Useful websites
    4. Mathematics Useful websites
  2. ವಿಕೀ, ಇಂಟರ್ನೆಟ್, ಕೊಯರ್ ಬಗೆಗಿನ ಟಿಪ್ಪಣಿ

ಕಾರ್ಯಗಾರದಲ್ಲಿ ರಚಿಸಿದ ಸಂಪನ್ಮೂಲಗಳು

ಶಾಲಾನಾಯಕತ್ವ ಬಗೆಗಿನ ಚರ್ಚೆ

ಚಿತ್ರ:School EducationHTF2014.mm

ಲೇಖನಗಳ ಚರ್ಚೆಯ ಪ್ರಸ್ತುತಿ

  • ಬೆಂಗಳೂರು ಗ್ರಾಮಾಂತರ - ಶಾಲೆಯಿಂದ ಹೊರಗುಳಿದ ಮಕ್ಕಳು
  • ಚಾಮರಾಜನಗರ- ಪ್ರಭಾವ ವಲಯ ಮತ್ತು ಕಾಳಜಿ ವಲಯ
  • ಗುಲಬರ್ಗಾ= ಶಾಲಾ ನಾಯಕತ್ವ - ಧ್ಯೇಯ ಕೈಮಿಂಗ್ ಚೆಂಗ್
  • ಕೊಡಗು- ಶಿಕ್ಷಣದ ಗುರಿಗಳು
  • ಕೋಲಾರ-ಸಮುದಾಉದ ಭಾಗವಹಿಸುವಿಕೆ- ಪ್ರಕರಣ ಅಧ್ಯಯನ
  • ರಾಮನಗರ- ಸಮುದಾಯ ಮತ್ತು ಶಾಲೆ , ಪ್ರಕರಣ ಅಧ್ಯಯನ

ಶಾಲಾಭಿವೃದ್ದಿ ಯೋಜನೆಗಳ ಪ್ರಸತುತಿ

  • ಬೆಂಗಳೂರು ಗ್ರಾಮಾಂತರ - ಶಿಕ್ಷಕರ ಶೈಕ್ಷಣಿಕ ಅಭಿವೃದ್ದಿ
  • ಚಾಮರಾಜನಗರ- ಪ್ರಭಾವ ವಲಯ ಮತ್ತು ಕಾಳಜಿ ವಲಯ
  • ಗುಲಬರ್ಗಾ= ಶಾಲಾ ನಾಯಕತ್ವ - ಧ್ಯೇಯ ಕೈಮಿಂಗ್ ಚೆಂಗ್
  • ಕೊಡಗು- ಶಿಕ್ಷಣದ ಗುರಿಗಳು
  • ಕೋಲಾರ-ಸಮುದಾಯದ ಭಾಗವಹಿಸುವಿಕೆ
  • ರಾಮನಗರ-ಸಮುದಾಯದ ಭಾಗವಹಿಸುವಿಕೆ

ಜಿಲ್ಲಾ ಅನುಕ್ರಮ ಕಾರ್ಯಗಾರ

  1. ಜಿಲ್ಲಾ ಹಂತದ ಅನುಕ್ರಮ ಕಾರ್ಯಗಾರಗಳ ಪುಟಗಳು

ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ

See us at the Workshop

ಕಾರ್ಯಾಗಾರದ ವರದಿ

ಮೊದಲನೇ ದಿನದ ವರದಿ

ವರದಿ ತಯಾರಿಸಿದವರು -ಕೊಡಗು ತಂಡ ಎಚ್‌. ಟಿ. ಎಫ್. ಕಾರ್ಯಾಗಾರ.ಮೊದಲ ದಿನದ ವರದಿ -ಗ್ರಾಮಾಂತರ ಡಯಟ್ ರಾಜಾಜಿನಗರ-ಬೆಂಗಳೂರು.

ದಿನಾಂಕ 14.10.2014ರಿಂದ18.10.2014 ರವರೆಗೆ ರಾಜ್ಯದ ಕೊಡಗು, ಕೋಲಾರ, ಚಾಮರಾಜನಗರ, ಗುಲ್ಬರ್ಗ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಡಯಟ್ ಉಪನ್ಯಾಸಕರು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಎಚ್‌.ಟಿ.ಎಫ್., ಎಂ.ಆರ್‌.ಪಿ. ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಒಟ್ಟು 30 ಶಿಬಿರಾರ್ಥಿಗಳು ಭಾಗವಹಿಸಿರುತ್ತಾರೆ. ಶ್ರೀ. ಮಂಜುನಾಥ್. ಹಿರಿಯ ಸಹಾಯಕ ನಿರ್ದೇಶಕರು ಡಿ.ಎಸ್‌.ಇ.ಆರ್‌.ಟಿ. ಬೆಂಗಳೂರು ಇವರು ಕಾರ್ಯಾಗಾರದ ಉದ್ದೇಶವನ್ನು ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಆರು ಜಿಲ್ಲೆಯಿಂದ ಆಗಮಿಸಿರುವ ಶಿಬಿರಾರ್ಥಿಗಳು ಕಂಪ್ಯೂಟರ್‌ನಲ್ಲಿ ನೇರ ಸಂಪರ್ಕದ ಸಹಕಾರದಿಂದ ತಮ್ಮ ತಮ್ಮ ಪ್ರಾಥಮಿಕ ವಿವರಗಳನ್ನು ಭರ್ತಿ ಮಾಡುವುದರೊಂದಿಗೆ ತರಬೇತಿಗೆ ಚಾಲನೆ ನೀಡಲಾಯಿತು.

ಐ. ಟಿ ಫಾರ್ ಚೇ0ಜ್ ಸಂಸ್ಥೆಯ ಶ್ರೀ. ವೆಂಕಟೇಶ್ ಅವರು ಕಂಪ್ಯೂಟರ್‌ ಶಿಕ್ಷಣ ಪಡೆಯಲೇ ಬೇಕಾದ ಅಗತ್ಯತೆ, ಉಬುಂಟು ಎಂದರೇನು? ವಿಂಡೋಸ್ ಮತ್ತು ಉಬುಂಟುವಿಗಿರುವ ವ್ಯತ್ಯಾಸ ಬಳಸುವ ವಿಧಾನ ಮೊದಲಾದವುಗಳ ಬಗ್ಗೆ ಮಾಹಿತಿ ನೀಡಿದರು.

ಎರಡನೇ ಅವಧಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಕಂಪ್ಯೂಟರ್‌ ಅಥವಾ ಲ್ಯಾಪ್ಟ್ ಟಾಪ್‌ ನೀಡಿ ಎಲ್ಲರೂ ಒಂದೊಂದು ಫೋಲ್ಡರ್ ತೆರೆದು ಅದಕ್ಕೆ ಒಂದು ಹೆಸರನ್ನು ನೀಡಲು ತಿಳಿಸಿದರು. ಆ ಫೋಡರ್‌ನಲ್ಲಿ ನಮಗೆ ಬೇಕಾದ ವಿಷಯವನ್ನು ಟೈಪ್‌ಮಾಡಿ ಸೇವ್‌ ಮಾಡುವ ಪ್ರಕ್ರಿಯೆಯನ್ನು ಪ್ರಯೋಗಿಕವಾಗಿ ಮಾಡಿಸಿದರು. ನಮ್ಮ ಗುಂಪಿನಲ್ಲಿ ಕಂಪ್ಯೂಟರ್‌ ಕಲಿಕೆಯ ಜ್ಞಾನವನ್ನು ಹೊಂದಿರುವವರಿಗೆ ಇದು ಉಬುಂಟು ಬಳಕೆಯನ್ನು ಸುಲಭವಾಗಿ ಅಳವಡಿಸಿಕೊಳ್ಳಲು ಮಾರ್ಗದರ್ಶನವಾದರೆ ಹೊಸ ಕಲಿಕಾರ್ಥಿಗಳಿಗೆ ಕಲಿಕೆಯ ಮೊದಲ ಹೆಜ್ಜೆಯಾಯಿತು.

ಭೋಜನದ ವಿರಾಮದ ನಂತರ ದಿನದ ಮೂರನೇ ಅವಧಿಯಲ್ಲಿ ಎರಡನೇ ಅವಧಿಯ ಪ್ರಕ್ರಿಯೆಯನ್ನು ಅಭ್ಯಾಸಿಸಿ ಮತ್ತಷ್ಟು ಕಲಿಕೆಯನ್ನುಂಟುಮಾಡಿಕೊಂಡೆವು.

ಕೊನೆಯ ಅವಧಿಯಲ್ಲಿ ಶ್ರೀ ಗುರುಮೂರ್ತಿಯವರು ಕಂಪ್ಯೂಟರ್‌ ಕಲಿಕೆಯ ವಿವಿಧ ಆಯಾಮಗಳನ್ನು ತಿಳಿಸಿದರು. ಅಂತರ್ಜಾಲ ಬಳಕೆ ಮಾಡಲೇ ಬೇಕಾದ ಅವಶ್ಯಕತೆಯನ್ನು ತಿಳಿಸಿದರು. ಗೂಗಲ್‌ ಪ್ರಪಂಚದಲ್ಲೊಮ್ಮೆ ನಮ್ಮನ್ನು ಸುತ್ತಾಡಿಸಿದರು. ಈ ಕಲಿಕೆಯ ಒಡೆತನ ನಮ್ಮದಾಗಲೇ ಬೇಕೆಂಬ ಮನೋಧೋರಣೆಯನ್ನು ನಮ್ಮಲ್ಲಿ ಮೂಡಿಸಿದರು. ಇದರೊಂದಿಗೆ ಪ್ರತಿಯೊಬ್ಬರೂ ಕಂಪ್ಯೂಟರ್‌/ಲ್ಯಾಪ್‌ಟಾಪ್‌ನ್ನು ಸ್ವತಃ ಖರೀದಿಸಿ ಬಳಸಲೇಬೇಕೆಂದು ಒತ್ತಾಯಿಸಿದರು.

ಒಟ್ಟಿನಲ್ಲಿ ಐ.ಟಿ ಫಾರ್‌ ಚೇಂಜ್‌ ನಮ್ಮಲ್ಲೂ ಉಂಟಾಗಲಿ ಎಂಬ ಆಶಯದೊಂದಿಗೆ ಇಂದಿನ ಕಾರ್ಯಕ್ರಮ ಮುಕ್ತಾಯವಾಯಿತು.

ಎರಡನೇ ದಿನದ ವರದಿ

ಕೋಲಾರ ತಂಡದವರು ರಚಿಸಿದ ಮುಖ್ಯಶಿಕ್ಷಕರ ವೇದಿಕೆ ಎರಡನೇ ದಿನದ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೂರನೇ ದಿನದ ವರದಿ

ವರದಿ ತಯಾರಿಸಿದವರು ರಾಮನಗರ ತಂಡ HTF ತರಬೇತಿಯ ಮೂರನೇ ದಿನದ ವರದಿ HTF

ದಿನಾಂಕ 16/10/2014 ರಂದು HTF ರ ತರಬೇತಿಯ ಮೂರನೇ ದಿನವಾದ ಇಂದು ಬಳಗ್ಗೆ 10ಗಂಟೆಗೆ ರಾಕೇಶ್ರವರು ತರಗತಿ ಆರಂಭಿಸಿದರು Tux Typing and Tux Paint ಮಾಡುವ ಬಗ್ಗೆ ತಿಳಿಸಿಕೊಟ್ಟರು ಮತ್ತು ನಾವೆಲ್ಲರು ಪ್ರಾಯೋಗಿಕವಾಗಿ ಕಲಿತೆವು ಸ್ವಲ್ಪ ಸಮಯಸ ನಾವೆಲ್ಲರು ಶಾಲಾ ಸಂದಭ೯ಕ್ಕೆ ಹೊಗಿದ್ದೆವು ಎನಿಸುತಿತ್ತು .

ಹಿಂದಿನ ದಿನ ನಮ್ಮ ತಂಡಕ್ಕೆ ನೀಡಿದ ವಿಷಯವಾರು ಚಚೆ೯ಮಾಡಲಾಯಿತು ಬೇರೆಬೇರೆ ಆಯಾಮಗಳಲ್ಲಿ ಹೇಗೆ ಚಚೆ೯ಮಾಡಬೇಕೆಂಬುದನ್ನು ವೆಂಕಟೇಶವರು ತಿಳಿಸಿಕೊಟ್ಟರು ಅದರಂತೆ ಚಚಿ೯ಸಲಾಯಿತು ಮಾಡಲಾಯಿತು. Google search ಬಗ್ಗೆ ತಿಳಿದುಕೊಂಡೆವು.ಮತ್ತು image save ಮಾಡುವ ಬಗ್ಗೆ ಕಲಿತುಕೊಡೆವು.ಊಟದ ವಿರಾಮದ ನಂತರ ಹಿಂದಿನದಿನ ನೀಡಿದ್ದ ವಿಷಯವನ್ನು ಪ್ರತಿ ತಂಡದಿಂದಲೂ ಮಂಡಿಸಲಾಯಿತು. ಕೊಡಗು ತಂಡದ ವತಿಯಿಂದ ಸಾವಿತ್ರಿಯವರು ಶಿಕ್ಷಣದ ಗುರಿಗಳು ವಿಷಯ ಕುರಿತು ಮಂಡಿಸಿದರು ಮತ್ತು ಆ ವಿಷಯ ಕುರಿತಂತೆ ಎಲ್ಲರು ಚಚಿ೯ಸಲಾಯಿತು.ಕೋಲಾರ ತಂಡದಿಂದ ಸಮುದಾಯದ ಪಾಲ್ಗೊಳ್‌ಳವಿಕೆ ಕುರಿತಂತೆ ಚಚಿ೯ಸಿದರು.ಗುಲ್ಬಗ೯ ತಂಡದವರು ವಿಷಯ ಮಂಡಿಸಿದರು.

ಒಟ್ಟಾರೆಯಾಗಿ ಈ ದಿನದ ತರಬೇತಿ ಉಪಯುಕ್ತವಾಗಿತ್ತು. ಇಂದ; ಶ್ಯೆಲಾ.ಪಿ , ಮುಖ್ಯೋಪಾಧ್ಯಾಯರು, ಸಕಾ೯ರಿ ಬಾಲಕಿಯರ ಪ್ರೌಢ ಶಾಲೆ ಕಲ್ಯಾಗೆಟ್ ಮಾಗಡಿ, ರಾಮನಗರ ಜಿಲ್ಲೆ.

ನಾಲ್ಕು ದಿನದ ವರದಿ

ಮುಖ್ಯಶಿಕ್ಷಕರ ವೇದಿಕೆ ,4 ನೇ ದಿನದ ವರದಿ . ಚಾಮರಾಜನಗರ

ಚಾಮರಾಜನಗರ ಜಿಲ್ಲೆಯ ತಂಡದಿಂದ ೪ ನೇ ದಿನದ ವರದಿಯನ್ನು ತಮ್ಮ ಮುಂದೆ ಪ್ರಸ್ತುತಗೊಳಿಸುತ್ತಿದ್ದೇವೆ.

ಪ್ರತಿ ದಿನದಂತೆ ಬೆಳಿಗ್ಗೆ 9.30 ಕ್ಕೆ ಎಲ್ಲಾ ತರಬೇತಿದಾರರಿಗೆ ಸಂಪನ್ಮೂಲ ವ್ಯಕ್ತಿಯಾದ ರಾಕೇಶ್ ರವರಿಂದ ಗೂಗಲ್ ವೆಬ್ ತಾಣಗಳನ್ನು ಹುಡುಕುವ ಬಗ್ಗೆ ಸವಿವರವಾದ ಮಾ ಹಿತಿಗಳನ್ನು ತಿಳಿಸಲಾಯಿತು. ಉಬಂಟು ಸಾಪ್ಟ್‌ವೇರ್ ಪ್ರಾರಂಬವಾದ ಕೂಡಲೇ ನಮಗೆ ಕಾಣುವ ಟೈಟಲ್ ಬಾರ್ ,ಮೆನು ಬಾ , ಅಡ್ರೆಸ್ ಬಾರ್ ಹಾಗೂ ಅವುಗಳ ಪೂರಕ ಬಾರ್‌ಗಳ ಬಗ್ಗೆ ಮತ್ತು Google.in ಮತ್ತು google.com ಗಳ ವ್ಯತ್ಯಾಸವನ್ನು ತಿಳಿಸಿದರು. Gmail ಗೆ login ಆಗುವ ಬಗ್ಗೆ ಹಾಗೂ logout ಆಗುವ ಬಗ್ಗೆ ಮಾಹಿತಿ ನೀಡಿದರು emailನಲ್ಲಿ ಬರುವ compose , inbox, standard draft , sent mail, more, draft ಇವುಗಳ ಬಗ್ಗೆ ಮಾಹಿತಿ ನೀಡಿದರು ನಂತರ email ನಿಂದ ಬೇರೆಯವರಿಗೆ ಮಾಹಿತಿ ಕಳುಹಿಸುವ ಅದಕ್ಕೆ ಮಾಹಿತಿಗಳನ್ನು attach ಮಾಡುವ reply ಹಾಗೂ forward ಮಾಡುವ ಮಾಹಿತಿ ನೀಡಿದರು email ನಲ್ಲಿ ಇರುವ CC ಮತ್ತು BCC ಹಾಗೂ google drive ,insert link , smile ,photoinsert ಇವುಗಳ ಬಗ್ಗೆ ಮಾಹಿತಿ ನೀಡಿದರು ಟೀ ವಿರಾಮದ ನಂತರ ಎಲ್ಲಾ ಶಿಬಿರಾರ್ಥಿಗಳು school development , school and society ಮತ್ತಿತರ ವಿಷಯಗಳ ನ್ನು ಬೇರೆಯವರಿಗೆ email ನಲ್ಲಿ ಮಾಹಿತಿ ರವಾನಿಒಸುವ ಕುರಿತು ತಿಳಿಸಿದರು. ಗುರುಮೂರ್ತಿ ರವರ ಸಮ್ಮುಖದಲ್ಲಿ ರಾಮನಗರ , ಬೆಂಗಳೂರು ಗ್ರಾಮಾತರ ವಿಭೌಆಗದ ಶಿಬಿರಾರ್ಥಿಗಳಿಗೆ ನೀಡಿದ ವಿಷಯದ ಮೇಲೆ ಮಂಡನೆ ಹಾಗೂ ಚೆರ್ಚೆ ನಡೆಸಲಾಯಿತು. ಶ್ರೀ ಗುರುಮೂರ್ತಿ ರವರು KOER ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. HTF 2014-15 ಗೆ ಸಂಬಂದಿಸಿದತೆ ಜಿಲ್ಲಾ ಹಂತದಲ್ಲಿ ಕೈಗೊಳ್ಳಬೇಕಾದ ಮಾಹಿತಿಯಿರುವ CD ಬಗ್ಗೆ ವಿವರಿಸಿದರು. ಪ್ರತಿಯೊಂದೂ ಜಿಲ್ಲೆಗಳಿಗೆ ವಿಜ್ಙಾನ ಪ್ರಯೋಗಾಲಯ ,ಶಿಕ್ಷಣದ ಗುರಿಗಳು ,ಸಹಪಠ್ಯ ಚಟುವಟಿಕೆ , ವಿಜ್ಙಾನ ಕೇಂದ್ರ , ಸಮುದಾಯದ ಸಹಬಾಗಿತ್ವ ಈ ವಿಷಯಗಳ ಮುಖಾಂತರ ಶೈಕ್ಷಣಿಕ ಅಭಿವ್ಋದ್ಧಿ ಹೇಗೆ ಮಾಡಬಹುದು ಎಂಬುದರ ಬಗ್ಗೆ ಪ್ರತಿ ಜಿಲ್ಲಾ ತಂಡವು ಅಂತರ್ಜಾಲದಿಂದ ಮಾಹಿತಿಗಳನ್ನು ಸಂಗ್ರಹಿಸಿ ನಂತರ ಚೆರ್ಚಿಸಲು ತಿಳಿಸಿದರು.

DSERTಯ ಶ್ರೀಮತಿ ಲಲಿತಾ ಚಂದ್ರಶೇಖರ್‌ರವರು ವಿವಿಧ ಜಿಲ್ಲೆಗಳಿಗೆ ಸಂಬಂದಿಸಿದಂತೆ ಕಂಪ್ಯೂಟರ್ ಯೋಜನೆಗೆ ಸಂಭಂದಿಸಿದ ಮಾಹಿತಿಗಳನ್ನು ಸಂಗ್ರಹಿಸಿದರು ಹಾಗೂ ಅಲ್ಲಾ ಮುಖ್ಯೋಪಾಧ್ಯಾಯರು ಒಬ್ಬ ಶಾಲಾ ನಾಯಕರಾಗಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಸಲ ಹೆ ಗ ಳನ್ನು ನೀಡಿದ ರು . ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀ ಗುರುಮೂರ್ತಿ ರವರು ಮಂದಿನ ತರಬೇತಿಗೆ ಕಡ್ಡಾಯವಾಗಿ ಲ್ಯಾಪ್‌ಟ್ಯಾಪ್‌ ಗಳನ್ನು ಕಡ್ಡಾಯವಾಗಿ ತರುವಂತೆ ತಿಳಿಸಿದರು. ಅಂತಿಮವಾಗಿ 4ನೇ ದಿನದ ಕಾರ್ಯಾಗಾರಕ್ಕೆ ತೆರೆ ಎಳೆಯಲಾಯಿತು.

ಐದನೇ ದಿನದ ವರದಿ

ದಿನಾಂಕ : 18-10-2014 ರಂದು ಮುಂಜಾನೆ 9.30 ಕ್ಕೆ ಎಲ್ಲಾ ಎಂ.ಆರ.ಪಿ.ಯವರು ತರಬೇತಿ ಹಾಲನಲ್ಲಿ ಸೇರಿದೇವು. ಕಂಪ್ಯೂಟರಗಳನು ಆನ್ ಮಾಡಲಾಯಿತ್ತು. ಅಷ್ಟರಲ್ಲಿ ವೇಂಕಟೇಶ ಸರ್ ಆಗಮಿಸಿ ಕಂಪ್ಯೂಟರಗಳನು ಆಫ್ ಮಾಡಿಸಿ, GMAIL,EMAIL GDRIVEಬಗ್ಗೆ ಎಲ್.ಸಿ.ಡಿ.ಪ್ರೋಜೇಕ್ಟರ ಬಳಸಿ ವಿವರವಾಗಿ ತಿಳಿಸಿದರು. ಮಧ್ಯದಲ್ಲಿ ನಾವೇಲ್ಲರು ಅನೇಕ ಸಮಸ್ಯೆಗಳನ್ನು ಕೇಳಿದಾಗ ಅವುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಮನವರಿಕೆ ಮಾಡಿಸಿದರು. ನಂತರ ಎಲ್ಲರನ್ನು ತಮ್ಮ ಶಾಲೆಯ id ಮಾಡಿಕೊಳ್ಲುವಂತೆ ತಿಳಿಸಿದರು. ಅಷ್ಟರಲ್ಲಿ ಚಹಾ ಬಂದಿತ್ತು . ಎಲ್ಲರು ಚಹಾ ಕುಡಿದು ಬಂದ್ದೇವು.ಎಲ್ಲರು GMAIL,EMAIL ,GDRIVE ಗಳನ್ನು ಪ್ರಾಯೋಗಿಕವಾಗಿ ಮಾಡಲಾಯಿತ್ತು. ನಂದಿಶ ರವರು ಎಲ್ಲರಿಗೆ ಸಹಾಯ ಮಾಡಿದರು.

ಗುರುಮೂರ್ತಿ ಸರ್ ಬಂದು ನಿನ್ನೆ ತಂಡದವರಿಗೆ ನೀಡಲಾದ ಪ್ರಜೆಂಟೇಷನಗಳನ್ನು ಪ್ರತಿಯೊಂದು ತಂಡ ದಿಂದ ಎಲ್.ಸಿ.ಡಿ.ಪ್ರೋಜೇಕ್ಟರ ಬಳಸಿ ಪ್ರಜೆಂಟೇಷನ ಮಾಡಿಸಿದರು.ಅಷ್ಟರಲ್ಲಿ ಊಟ ಬಂದಿತ್ತು,ಎಲ್ಲರೂ ಊಟಕ್ಕೆ ಹೊದೇವು.

ಊಟ ಮಾಡಿದ ಬಳಿಕ ಎಲ್ಲ ತಂಡದವರು ದಿನದ ವರದಿಗಳು, ತಂಡಗಳು ಮಂಡನೆ ಮಾಡಿದ ವರದಿ ಬರೇದು mail ಮಾಡಲು ತಿಳಿಸಿದರು. ಎಲ್ಲರು ವರದಿಗಳನ್ನು ಬರೇದು mail ಮಾಡಲಾಯಿತ್ತು.

ಸಂಯೋಜಿತ ಕಾರ್ಯಾಗರ ವರದಿ

ಹೆಚ್ ಟಿ ಎಫ್ - ಎಮ್ ಆರ್ ಪಿ ; ಸಂಯೋಜಿತ ತರಬೇತಿ ವರದಿ 2014-15

ಈ ಕಾರ್ಯಾಗಾರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಯಟ್ ನಲ್ಲಿ ದಿ-14-10-2014ರಿಂದ ದಿ-18-10-2014ರವರೆಗೆ ನಡೆಯಿತು. ಬೆಂಗಳೂರು ಗ್ರಾಮಾಂತರ , ಕೊಡಗು, ಕೋಲಾರ, ಚಾಮರಾಜನಗರ, ಗುಲ್ಬರ್ಗ, ರಾಮನಗರ ಜಿಲ್ಲೆಗಳಿಂ ದ ಒಟ್ಟು 28 ಶಿಬಿರಾರ್ಥಿಗಳು ಭಾಗವಹಿಸಿದ್ದರು. ತರಬೇತಿಯು ತಂತ್ರಜ್ಞಾನದ ಪ್ರಾಯೋಗಿಕ ಜ್ಞಾದೊಂದಿಗೆ ಬಹಳ ಉತ್ತಮವಾಗಿ ನಡೆಯಿತು. ಮೊದಲ ದಿನ ಆಗಮಿಸಿದ್ದ ಸರ್ವರಿಗೂ ಸ್ವಾಗತವನ್ನು ಮಂಜುನಾಥ್ ಡಿ ಎಸ್ ಇ ಆರ್ ಟಿ ಯವರು ಕೋರಿದರು. ಹಾಗೂ ಪರಿಚಯ ಕಾರ್ಯಕ್ರಮ ನಡೆಯಿತು.

ಮೊದಲ ದಿನದ ತರಬೇತಿಯು ಸಮಾಜದ ಮೇಲೆ ಐ ಟಿ ಸಿ ಯ ಪರಿಣಾಮದಿಂದ ಪ್ರಾರಂಭವಾಗಿ ಕೊನೆಯ 5ನೆಯ ದಿನದವರೆಗೆ ಪ್ರಾಯೋಗಿಕವಾಗಿ ಅತ್ಯುತ್ತಮವಾಗಿ ತರಬೇತಿಯನ್ನು ಪಡೆದೆವು. ಒಂದು ಶಾಲಾ ಪ್ರಗತಿ ಹಾಗೂ ಮಗುವಿನ ಕಲಿಕೆ ಹಾಗೂ ಸರ್ವಾಂಗೀಣ ಬೆಳವಣಿಗೆಗೆ ಕಂಪ್ಯೂಟರ್ ಜ್ಞಾನ ಹಾಗೂ ಇಂಟರ್ ನೆಟ್ ಬಳಕೆ ಸಮಗ್ರವಾಗಿ ಹಾಗೂ ಅಮೂಲಾಗ್ರವಾಗಿ ಕೆ ಒ ಇ ಆರ್ ಬಳಕೆ ಉಪಯುಕ್ತತೆ ಹೆ ಚ್ ಟಿ ಎಫ್ ಹಾಗೂ ಎಸ್ ಟಿ ಎಫ್ ನ ಬಳಕೆ ಪ್ರಭಾವ ಎಲ್ಲವನ್ನೂ ಗುರು ಸರ್ , ವೆಂಕಟೇಶ್, ರಾಕೇಶ್, ನಂದೀಶ್ ರವರು ಸ್ನೇಹಿತರಂತೆ ಮಾರ್ಗದರ್ಶಿಸಿದರು .

ಗುರು ಸರ್ ರವರು ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಹಾಗೂ ಮಕ್ಕಳು ಪ್ರತಿದಿನ ಹಲ್ಲು ಬ್ರಶ್ ಮಾಡುವಂತೆ ಪ್ರತಿ ದಿನ ಇಂಟರ್ ನೆಟ್ ಬಳಸಬೇಕು ಮಾಹಿತಿ ಪಡೆಯಬೆಕು , ತಮ್ಮ ಈ-ಮೇಲ್ ಗಳನ್ನು ಗಮನಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳುವುದರೊಂದಿಗೆ ತಾವೂ ಬೆಳೆಯಬೇಕು ಇತರರನ್ನು ಬೆಳೆಸಬೇಕು ಹಾಗೂ ಎಲ್ಲರೂ ಮುಂದಿನ ತರಬೇತಿ ವೇಳೆಗೆ ಸ್ಮಾರ್ಟ್ ಫೋನ್ ಹಾಗೂ ಲ್ಯಾಪ್ ಟಾಪ್ ಖರೀದಿಸಿರಬೇಕು ಎಂದು ಎಲ್ಲರ ಕಣ್ಣು ತೆರೆಸಿದರು. ಶಿಇರಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು. ಊಟ ಹಾಗೂ ಟೀ ವ್ಯವಸ್ಥೆ ಉತ್ತಮವಾಗಿತ್ತು. ತರಬೇತಿಯು ವಿಭಿನ್ನ ಹಾಗೂ ವಿಶಿಷ್ಠವಾಗಿತ್ತು. ವಂದನೆಗಳು.

ಮುಂದಿನ ಕಾರ್ಯಯೋಜನೆಗಳು

ಜಿಲ್ಲಾ ಹಂತದ ಮುಖ್ಯ ಶಿಕ್ಷಕರ ವೇದಿಕೆ ಕಾರ್ಯಕ್ರಮಗಳು

ಮುಂದಿನ ೨ನೇ ಹಂತದ ಕಾರ್ಯಾಗಾರಕ್ಕೂ ಮುನ್ನ

  1. ಕಂಪ್ಯೂಟರ್ ನಲ್ಲಿ ಐ.ಸಿ.ಟಿ ಪಾಠಗಳನ್ನು ಪ್ರಾಕ್ಟೀಸ್ ಮಾಡುವುದು (Tux Typing, Ubuntu, LibreOffice, Firefox)
  2. ಅಂತರ್ಜಾಲ ಬಳಕೆ ಮತ್ತು ಕೊಯರ್ ಬಳಕೆ ಮಾಡುವುದು . ಕೊಯರ್ ನಲ್ಲಿನ ಉಪಯುಕ್ತ ವೆಬ್ ತಾಣಗಳಿಗೆ ಬೇಟಿ ನೀಡುವುದು
  3. htfkarnataka@googlegroups.com ಮೂಲಕ ಪ್ರತಿದಿನ ಇಮೇಲ್ ನೋಡುವುದು ಮತ್ತು ಕಳುಹಿಸುವುದು (Brush your teeth at least once every day)
  4. ಈ ಕೆಳಗಿನ ಡಾಕ್ಯುಮೆಂಟ್ ತಯಾರಿಸಿ ಇಮೇಲ್ ನಲ್ಲಿ ಹಂಚಿಕೊಳ್ಳುವುದು
    1. ಪ್ರಕರಣ ಅಧ್ಯಯನಗಳು
      1. ನಿಮ್ಮ ಶಾಲಾ ಪ್ರಕರಣ ಆದ್ಯಯನ ವರದಿ ಮಾಡುವುದು (ಶಾಲಾ ನಾಯಕತ್ವ)
      2. ಪೋಟೋಗಳನ್ನು ಸೇರಿಸುವುದು
      3. ಭಾಗೀದಾರರನ್ನು ಸಂದರ್ಶಿಸುವುದು ಹಾಗು ಮೊಬೈಲ್ ಮೂಲಕ ಸಂಭಾಷಣೆಯನ್ನು ರೆಕಾರ್ಡ್ ಮಾಡುವುದು.
    2. ಶಾಲಾ ನಾಯಕತ್ವದ ಲೇಖಹನಗಳನ್ನು ಓದುವುದು (1 page)
  5. ಸ್ವಂತ ಲ್ಯಾಪ್‌ಟಾಪ್ ಕೊಂಡುಕೊಳ್ಳಲು Buy_a_laptop_or_netbook ವೀಕ್ಷಿಸಿ. I_want_to
  6. ಸ್ಮಾರ್ಟ್ ಪೋನ್ ಕೊಂಡುಕೊಳ್ಳಲು website ಸ್ಮಾರ್ಟ್ ಪೋನ್ ಕೊಂಡುಕೊಳ್ಳಲು ಇಲ್ಲಿ ವೀಕ್ಷಿಸಿ . ಆಂಡ್ರಾಯಿಡ್ ಪೋನ್ ಮೂಲಕ ನೀವು ಇಮೇಲ್ ಮತ್ತು ಇಂಟರ್‌ನೆಟ್ ಬಳಸಬಹುದು.
    1. ಮುಂದಿನ ಹಂತದ ತರಬೇತಿಗೆ ಬರುವ ಮೊದಲು ಈ ಮೇಲಿನ ಕಾರ್ಯಗಳನ್ನು ಪೂರ್ಣಗೊಳಿಸಿ, ಮುಂದಿನ ಹಂತದ ೩ ದಿನದ ಕಾರ್ಯಾಗಾರ December 1-3, 2014ಕ್ಕೆ ಯೋಜಿಸಲಾಗಿದೆ.
    2. ಕಲಿಕಾರ್ಥಿಗಳ ಮಾಹಿತಿ ಇಲ್ಲಿ ನೋಡಬಹುದು

ಸಾರ್ವಜನಿಕ ತಂತ್ರಾಂಶ ಭಿತ್ತಿಚಿತ್ರ


_FORCETOC__

*ಮುಖ್ಯಶಿಕ್ಷಕರ ವೇದಿಕೆ ಕಾರ್ಯಾಗಾರ ಹಂತ-2, ಬೆಂಗಳೂರು ನಗರ ಡಯಟ್, ಡಿಸೆಂಬರ್ 1-3, 2014

ಕಾರ್ಯಸೂಚಿ

  1. ಈ 3 ದಿನದ ಕಾರ್ಯಗಾರದ ಅಜೆಂಡಾ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಕಾರ್ಯಗಾರದ ವರದಿಗಳು

1ನೇ ದಿನದ ವರದಿ

2ನೇ ದಿನದ ವರದಿ

3ನೇ ದಿನದ ವರದಿ

ಕಾರ್ಯಾಗರದ ಪೂರ್ಣ ವರದಿ

ಪ್ರಕರಣ ಅಧ್ಯಯನ

ಪ್ರಕರಣ ಅಧ್ಯಯನ ಬಗೆಗಿನ ಟೆಂಪ್ಲೇಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

  1. ಶಾಲಾ ನಾಯಕತ್ವ ಬಗೆಗಿನ ಪ್ರಕರಣ ಅಧ್ಯಯನಗಳು

ಅಭಿಪ್ರಾಯ

ನಿಮ್ಮ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

"https://karnatakaeducation.org.in/KOER/index.php?title=HTF_2014-15&oldid=22319" ಇಂದ ಪಡೆಯಲ್ಪಟ್ಟಿದೆ