Beautification of school environment Rajendra Bhat Kumta

ಶಾಲಾ ವಾತಾವರಣವನ್ನು ಆಕಷ೯ಣೆಗೊಳಿಸುವದು.

ಕ್ಯೂ .ಆಯ್. ಪಿ. ನೆನಪಾದಾಗಲೆಲ್ಲಾ ಮೊದಲು ನೆನಪಾಗುವದು ಶಾಲಾ ವಾತಾವರಣವನ್ನು ಆಕಷ೯ಣೆಗೊಳಿಸುವದು. ಏಕೆಂದರೆ ಇದು ನಾನು ಮಾಗ೯ದಶ೯ನ ಮಾಡಿದ ಮೊದಲ ಪ್ರಕಲ್ಪ .ತರಬೇತಿಯನ್ನು ಮುಗಿಸಿ ಉತ್ಸಾಹದಿಂದ ಹೋದ ನಾವು ,ಮೊದಲ ತಂಡಕ್ಕೆ ೬+=೧೦ ದಿನಗಳ ಎರಡು ಹಂತಗಳನ್ನು ಯಶಸ್ವಿಯಾಗಿ ಮುಗಿಸಿದೆವು.ನಂತರ ಸೇರಿದ್ದು ಸ್ಕೋಪಿಂಗ್ ಸಲುವಾಗಿ ೩ ದಿನ.ಆಗ ನನ್ನ ಪಾಲಿಗೆ ಮಾಗ೯ದಶ೯ನ ಮಾಡಲು ಸಿಕ್ಕಿದ್ದು ಶಾಲಾ ವಾತಾವರಣವನ್ನು ಆಕಷ೯ಣೆಗೊಳಿಸುವದು.ಅದರಲ್ಲಿ ಶ್ರೀ.ಎನ್.ಎಸ್.ನಾಯ್ಕ ಸಿ.ಆರ್.ಪಿ. & ಶ್ರೀ.ಜೀವನ ಹಬ್ಬು ಬಿ.ಆರ್.ಪಿ. ಹೊನ್ನಾವರರವರು ಮಾಡಿದ ಪ್ರಕಲ್ಪ. ಅವರು ಅನುಷ್ಠಾನಕ್ಕಾಗಿ ಆಯ್ಕೆ ಮಾಡಿ ಕೊಂಡ ಶಾಲೆ ಹೊನ್ನಾವರ ತಾಲ್ಲೂಕಿನ ಕಕಿ೯ ಕ್ಲಸ್ಟರ್ ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಳಿಕಾರ.

 

ಈ ಶಾಲೆ ಗ್ರಾಮೀಣ ಪ್ರದೇಶದಲ್ಲಿದ್ದು ಮೂಲಭೂತ ಸೌಕರ್ಯಗಳಿಂ ದ ವಂಚಿತವಾದ ಹಳ್ಳಿ ಇದಾಗಿದೆ. ಇಲ್ಲಿ ಹಿಂದುಳಿದ ಹಾಗೂ ಬುಡಕಟ್ಟು ಜನಾಂಗಕ್ಕೆ ಸೇರಿದ ಜನಾಂಗದವರು ಇದ್ದು ಆಥಿ೯ಕವಾಗಿ ತೀರಾ ಕಷ್ಟದಲ್ಲಿದ್ದಾರೆ. ಕೂಲಿಯನ್ನೆ ಬದುಕಿನ ಆಧಾರವಾಗಿಸಿ ಕೊಂಡ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಕಲ್ಪವನ್ನು ಮಾಡುವ ವೇಳೆ ಈ ಶಾಲೆಯಲ್ಲಿಯ ವಿದ್ಯಾಥಿಗಳ ಸಂಖ್ಯೆ ೭೬. ಶ್ರೀಮತಿ ಶಾರದಾ ನಾಯ್ಕ.ಆ ಶಾಲೆಯ ಮುಖ್ಯ ಶಿಕ್ಷಕರು.ಮತ್ತು ೪ಸಹ ಶಿಕ್ಷಕರಿದ್ದರು.

 

ಪ್ರಕಲ್ಪದಾರರು ಮೊದಲು ಯೋಜನೆಯನ್ನು ಉತ್ತಮರೀತಿಯಲ್ಲಿ ಮಾಡಿದರು. ಆ ಶಾಲೆಯ ಸಮಗ್ರ ಪ್ರಗತಿಗೆ ಸಂಭಂದಿಸಿದ೦ತೆ ವಿಸ್ತೃತವಾದ ಯೋಜನೆ(ಭೌತಿಕ,ಭೌದ್ದಿಕ ,ಭಾವನಾತ್ಮಕ, )ಯನ್ನು ಅವರು ಮಾಡಿದರು. ಆದರೆ ಅದೆಲ್ಲಾ ಅನುಷ್ಠಾನ ಮಾಡಲು ಸಾದ್ಯವೆ೦ಬ ಸಂಶಯ ಅವರಲ್ಲಿ ಕಾಡಿತ್ತಿತ್ತು. ಆದರೂ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿ ನಿಮ್ಮ ಜೊತೆಯಲ್ಲಿ ನಾನು ಇದ್ದೇನೆ ಎಬ ದೈಯ೯ವನ್ನು ತುಂಬಿ ಕಾರ್ಯವನ್ನು ಪ್ರಾರಂಭಿಸಲು ತಿಳಿಸಲಾಯಿತು.

ಶಾಲೆಯ ನಿಜವಾದ ಸ್ಥಿತಿಯನ್ನು ಅರಿಯಲು ಶಾಲಾ ಪ್ರಾರಂಬಕ್ಕೂ ಮುನ್ನ ಬೇಟಿ ನೀಡಿದರು. ವೀಕ್ಷಣೆ ಮತ್ತು ಚೆಕ್ ಲೀಸ್ಟ ನ ಸಹಾಯದಿಂದ ವಸ್ತು ಸ್ಥಿತಿಯನ್ನು ಅರಿತರು. ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಕಲೆಹಾಕಿದರು. ಯೋಜನೆಯನ್ನು ಅಂತಿಮಗೊಳಿಸಿ ಹಂತಹಂತವಾಗಿ ಅನುಷ್ಠಾನವನ್ನು ಪ್ರಾರಂಭಿಸಿದರು.

 

ಅವರು ಪ್ರಥಮವಾಗಿ ಶಾಲಾ ಪ್ರಾಥ೯ನೆಯಲ್ಲಿ ಅನೇಕ ಸುಧಾರಣೆಯನ್ನು ಮಾಡಿದರು.ಭಗವದ್ಗೀತೆಯನ್ನು ಹೇಳಿಸಲು ಪ್ರಾರ೦ಭಿಸಿದರು. ದಿನಾಲು ಒಬ್ಬರು ಇಂಗ್ಲೀಷ್ ಹೇಳಿಕೆಗಳನ್ನು ಹೇಳುವದು ಮತ್ತು ಅದನ್ನು ಉಳಿದವರು ಹೇಳುವದು .ವಯಕ್ತಿಕ ಸ್ವಚ್ಚತೆಯನ್ನು (ಉಗುರು,ಹಲ್ಲು ,ಕೂದಲುಗಳ)ದಿನಾಲು ವಿದ್ಯಾಥಿ೯ಸರಕಾರದ ಸಹಾಯದಿಂದ ಮಾಡಿಸಲಾಯಿತು. ಇರುವ ಯೂನಿಫಾರಂನ್ನು ಅಚ್ಚುಕಟ್ಟಾಗಿ ಧರಿಸಿ ಬರುವಂತೆ ತಿಳಿಸಲಾಯಿತು.ಪೇಪರ್ ಓದುವದು, ಅದರಲ್ಲಿಯ ಮುಖ್ಯಾಂಶಗಳನ್ನು ಶಾಲಾ ಪ್ರವೇಶದ ಕರಿಹಲಗೆಯ ಮೇಲೆ ಬರೆಯಲಾಯಿತು. ಇವೆಲ್ಲವೂ ಯಾವುದೇ ಖಚಿ೯ಲ್ಲದೇ ಅತೀಕಡಿಮೆ ಅವಧಿಯಲ್ಲಿ ಪ್ರಾರಂಭಮಾಡಿದೆವು.ಶಾಲೆಯಲ್ಲಿ ಓದುತ್ತಿರುವ ಮೊದಲ ತಲೆಮಾರಿನ ಮಕ್ಕಳಿಗೆ ಜನ್ಮದಿನದ ಆಚರಣೆ ಎದರೆ ಹೊಸತು. ಆದರೆ ಪ್ರಾಥ೯ನೆಯ ವೇಳೆ ಕೇವಲ ಚಪ್ಪಾಳೆಯ ಮೂಲಕ ಶುಭಾಷಯವನ್ನು ಕೋರಲಾಯಿತು. ಇದರ ಫಲ ಅನೇಕ ಪಾಲಕರು ಶಾಲೆಯ ಕಡೆ ಮುಖಮಾಡಲು ಅನೂಕೂಲವಾಯಿತು.ಬದಲಾವಣೆಯ ಪ್ರಾರಂಭ ಇಲ್ಲಿಂದ ಆಯಿತು.

 

ನಂತರ ಅಲ್ಲಿಯ ಪಾಲಕರ,ಎಸ್.ಡಿ.ಎ೦.ಸಿ.ಸದಸ್ಯರ,ಊರವರ ಸಭೆಯನ್ನು ಕರೆಯಲಾಯಿತು. ಈ ಸಭೆಯಲ್ಲಿ ಶಾಲೆಯ ಪ್ರಗತಿಗೆ ಪೂರಕವಾಗಿ ರಚಿಸಿದ ಯೋಜನೆಯನ್ನು ಮಂಡಿಸಲಾಯಿತು. ಅದಕ್ಕೆ ನಾವೆಲ್ಲರೂ ತಂಡವಾಗಿ ಹೇಗೆ ಕೆಲಸಮಾಡುವದು ಮತ್ತು ಜವಾಬುದಾರಿಯನ್ನು ತಿಳಿ ಹೇಳಲಾಯಿತು. ಶಾಲೆಗೆ ಅಗತ್ಯವಿದ್ದ ಶಾಲಾ ಆವಾರವನ್ನು ಸಮತಟ್ಟು ಮಾಡಲು ಶ್ರಮದಾನದ ಮೂಲಕ ಎಲ್ಲರೂ ಒಪ್ಪಿ ಅದರಂತೆ ಕೆಲವೇ ದಿನಗಳಲ್ಲಿ ಮಾಡಿದರು.

 

ಪ್ರತಿ ತರಗತಿಕೋಣೆಯನ್ನು ಅಂದವಾಗಿ ಕಾಣುವಂತೆ ,ಇರುವ ವಸ್ತುಗಳನ್ನು ವ್ಯವಸ್ಥಿತವಾಗಿ ಇಡಲು ಶಿಕ್ಷಕರಿಗೆ ಸಲಹೆ ಮತ್ತು ಮಾಗ೯ದಶ೯ನ ನೀಡಲಾಯಿತು. ಟಿ.ಎಲ್.ಎ೦.ಗಳನ್ನು ವ್ಯವಸ್ಥಿತವಾಗಿ ಮಕ್ಕಳೂ ಬಳಸುವಂತೆ ಇಡಲಾಯಿತು.ಹೀಗೆ ಚಿಕ್ಕ ಚಿಕ್ಕ ಕ್ರಮಗಳನ್ನು ಕೈಗೊಂಡೆವು. ಇದು ನಮಗೆ ಮುಂದಿನ ಕ್ರಮಗಳನ್ನು ಕೈಗೊಳ್ಳು ಅನೂಕೂಲವಾಯಿತು.ಪ್ರೇರಣೆಯಾಯಿತು.ಈ ಹಿಂದೆ ಯಾರೋ ಒಬ್ಬ ಶಿಕ್ಷಕರು ಮಾಡಿದ ಪ್ರಮಾದದಿಂದ ಶಾಲೆಯ ಬಗ್ಗೆ ಅಷ್ಟೊಂದು ಕಾಳಜಿಯನ್ನು ತೋರದ ಪಾಲಕರು,ಸಮುದಾಯದಿಂದ ತಿರುಗಿ ಶಾಲೆಯ ಕಡೆ ನೋಡಲು ಪ್ರಾರಂಭಿಸಿದರು.

 

ಶಿಕ್ಷಕರು ಆದಶ೯ ಹಾಗೂ ಉತ್ತಮ ಅಂಶಗಳನ್ನು ಹೊಂದಿದ ಶಿಕ್ಷಕರು ಮತ್ತು ತರಗತಿ ಕೋಣೆಯ ಶಿಕ್ಷಕರಾಗಿದ್ದರು.ಅದರಲ್ಲಿಯೂ ಮುಖ್ಯ ಶಿಕ್ಷಕರು ಕಳೆದ ನಾಲ್ಕು ವಷ೯ಗಳಿಂದ ಕೇವಲ ಸಿ.ಎಲ್. ಗಳನ್ನು ಮಾತ್ರ ಅನುಭವಿಸಿದ್ದರು. ಇರುವ ಎಲ್ಲಾ ಟಿ.ಎಲ್.ಎಮ್.ಗಳನ್ನು ಬಳಸಿ ಪಾಠಮಾಡಲು ಪ್ರಾರಂಭಿಸಿದರು.

 

ಮಕ್ಕಳಿಗೆ ಊರಿನಲ್ಲಿ ಲಭ್ಯವಿರುವ ಹಕ್ಕಿಗೂಡನ್ನು ತರಲು ತಿಳಿಸಿದರು.ಮಣ್ಣು ನಿಂದ ಅನೇಕ ವಸ್ತುಗಳನ್ನು ತಯಾರಿಸಲು ತಿಳಿಸಿದರು. ನಮ್ಮ ದೇಶದ ಗಣರಾಜ್ಯೋತ್ಸವದಲ್ಲಿ ಜಾನಪದ ಕಲೆಯನ್ನು ಪ್ರದಶಿ೯ಸಿದ ಊರಿನ ಹಿರಿಯರಾದ ಗಣಪು ಗೌಡ ಅವರು ಮಕ್ಕಳಿಗೆ ಸುಗ್ಗಿ ಕುಣಿತದ ಬಗ್ಗೆ ತರಬೇತಿಯನ್ನು ನೀಡಿದರು. ಇದರ ಫಲವಾಗಿ ಈ ಶಾಲೆಯ ವಿದ್ಯಾಥಿ೯ಗಳು ಕ್ಲಸ್ಟರ್,ತಾಲ್ಲೂಕಾ,ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಇತರ ಸ್ಪದೆಗಳಲ್ಲಿ ಬಹುಮಾನವನ್ನು ಪಡೆಯಲು ಕಾರಣವಾಯಿತು.

 

ನಾವು ಯೋಜನೆಯಲ್ಲಿ ಹಾಕಿಕೊಳ್ಳದ ಅನೇಕ ಕಾಯ೯ಕ್ರಮಗಳು ಅನುಷ್ಟಾನವಾದವೆಂದು ಹೇಳಲು ಸಂತೋಷವೆನಿಸುತ್ತದೆ. ಅದರಲ್ಲಿ ಅಲ್ಲಿಯ ಪೋಸ್ಟ ಆಪೀಸಿನಲ್ಲಿ ಉಳಿತಾಯ ಖಾತೆ (ಆರ್.ಡಿ)ಯನ್ನು ಎಲ್ಲಾ ವಿದ್ಯಾಥಿಗಳಿಗೆ ಮಾಡಿಸಿದ್ದಲ್ಲದೇ ಅದರ ನಿವ೯ಹಣೆಯನ್ನು ಶಿಕ್ಷಕರ ನೇತ್ರತ್ವದಲ್ಲಿ ಹಿರಿಯ ವಿದ್ಯಾಥಿ೯ಗಳೆ ನಿವ೯ಹಿಸುವ ಜವಾಬ್ದಾ ರಿಯನ್ನು ಮಾಡಿಸಲಾಯಿತು. ಬಡತನದಿಂದ ಕೂಡಿದ ಕುಟುಂಭದವರೂ ಸಹ ೧೦ ರೂ ದಿಂದ ಪ್ರಾರಂಭವಾದ ಈ ಯೋಜನೆ ಈಗ ಸರಾಸರಿ ೧೦೦ ರೂಗೆ ಏರಿದೆ ಎ೦ದರೆ ಅವರಲ್ಲಿಯೂ ಮಕ್ಕಳ ಭವಿಷ್ಯ ದ ಬಗ್ಗೆ ಕಾಳಜಿಯನ್ನು ತೋರಿಸುತ್ತದೆ. ಬಿಸಿಯೂಟದಲ್ಲಿ ದಿನಾಲು ಬಾಳೆಹಣ್ಣು ನೀಡಲು ಅನೇಕರು ಮುಂದಾದರು. ಹುಟ್ಟು ಹಬ್ಬದ ಆಚರಣೆಗೆ ಪೆನ್ನು ನೀಡಲು ದಾನಿಗಳು ಮುಂದಾದರು. ಆ ಊರಿನ ವರಾದ ಶ್ರೀ............... ರವರು ಶಾಲೆಗೆ ಎಜುಸ್ಯಾಟ್ ನೀಡಿರುವದು ನಿಜಕ್ಕೂ ಹೆಮ್ಎಯ ವಿಷಯವಾಗಿದೆ.ಇತ್ತೀಚೆಗೆ ಆ ಶಾಲೆಯ ಶತಮಾನೋತ್ಸವವನ್ನು ಅತ್ಯಂತ ಸಂಬ್ರಮದಿಂದ ಆಚರಿಸಲಾಯಿತು. ಅಂದು ತುಂಬಾಜನ ಸೇರಿದ್ದು ಶಾಲೆಗಾಗಿ ದುಡಿದ ಅನೇಕ ಮಹನೀಯರನ್ನು ಸನ್ಮಾನಿಸಲಾಯಿತು. ಹಬ್ಬದ ವಾತಾವರಣವಿತ್ತು. ಒಟ್ಟಿನಲ್ಲಿ ಶಾಲೆಯ ಸಂಪೂರ್ಣ ಚಿತ್ರಣವೇ ಬದಲಾಗಿದೆ. . ಇದಕ್ಕೆ ಅನೇಕ ಅಂಶಗಳು ಕಾರಣವಾಗಿದೆ.

 

ನಮ್ಮ ಶಾಲೆ ಎ೦ಬ ಬಾವನೆ ಬೆಳೆದಿದ್ದು, ತಂಡವಾಗಿ ಕಾರ್ಯನಿರ್ವಹಣೆ ,ಶಾಲಾ ವಸ್ತುಸ್ಥಿತಿಯ ಅಧ್ಯಯನ, ಜವಾಬ್ದಾರಿ ಹಂಚಿಕೆ, ನಾಯಕತ್ವದ ಗುಣಗಳ ಬೆಳವಣಿಗೆ,ಬುದ್ದಿಮಂಥನ,ಎಪ್.ಜಿ.ಡಿ. ಪ್ರಕ್ರಿಯಾ ನಕ್ಷಾಗಳ ಬಳಕೆ, ಇವೆಲ್ಲವೂ ಯಶಸ್ಸಿನ ದಾರಿಯಾಗಿತ್ತು. ಎನ್ನಬಹುದಾಗಿದೆ.