School Leadership Shailajakumari Mandya

      ಶ್ರೀಮತಿ ಶೈಲಜಾಕುಮಾರಿ ಉಪನ್ಯಾಸಕರು ಡಯಟ್ ಮಂಡ್ಯ

ಇಬ್ಬರು ಬಿ.ಆರ್.ಪಿ/ಸಿ.ಆರ್.ಪಿಗಳು ಒಬ್ಬ ಮುಖ್ಯಶಿಕ್ಷಕರನ್ನು ಸಮರ್ಥ ಶೈಕ್ಷಣಿಕ ನಾಯಕರನ್ನಾಗಿ ಬೆಳೆಸುವುದು.

ಸ್ಥಳ : ತಮ್ಮಡಹಳ್ಳಿ ,ಮಳ್ಳವಳಿ ತಾ ಮಂಡ್ಯ .

ಕೈಗೊಂಡವರು: ಶ್ರೀ ಶಿವಲಿಂಗಯ್ಯ ಮತ್ತು ಶ್ರೀ ನಾಗೇಂದ್ರಪ್ಪ ಬಿ.ಆರ್.ಪಿ

ಬಿ.ಆರ್.ಪಿಗಳು ಶೈಕ್ಷಣಿಕವಾಗಿ ಹಾಗೂ ತಾಲ್ಲೂಕು ಕೇಂದ್ರಕ್ಕೆ ಹತ್ತಿರವಾಗಿರುವ, ಹಿಂದುಳಿದ ಪ್ರದೇಶದಲ್ಲಿರುವ ಶಾಲೆಯನ್ನು ಆಯ್ಕೆ ಮಾಡಿಕೊಂಡು ಶಾಲಾ ಭೇಟಿಮಾಡಿ ಶಾಲೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ಕೈಗೊಳ್ಳಬೇಕಾದ ಕಾರ್ಯಕ್ರಮದ ಪ್ರವಾಹ ನಕ್ಷೆ ಸಿದ್ಧಪಡಿಸಿಕೊಂಡು ಅನುಷ್ಠಾನಗೊಳಿಸಲು ಕ್ರಮಕೈಗೊಂಡರು. ನಂತರ ಪೊಷಕರಿಗೆ, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಶ್ನಾವಳಿಯನ್ನು ಸಿದ್ದಪಡಿಸಿಕೊಂಡು ಶಾಲೆಗೆ ಭೇಟಿ ನೀಡಿ, ಎಲ್ಲರೊಂದಿಗೆ ಸಂದರ್ಶನ ನಡೆಸಿ ಶಾಲೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ ಶಾಲೆ ಬಗ್ಗೆ ಹೆಚ್ಚಿನ ವಿಷಯವನ್ನು ಸಂಗ್ರಹಿಸಿದರು.

ಶಿಕ್ಷಕರಲ್ಲಿ ಇರುವ ಭಿನ್ನಭಿಪ್ರಾಯಳನ್ನು ಗಮನಿಸಿ ಅವರ ಮನಪರಿವರ್ತನೆಗಾಗಿ ಶಾಲೆಯ ನಂತರ ಅವದಿಯಲ್ಲಿ Attitude clipping ತೋರಿಸಿ,ಚರ್ಚಿಸಿ. ಅವರಿಗೆ ಸ್ವಲ್ಪ ಮನಪರಿವರ್ತನೆ ಡುವುದರಲ್ಲಿ ಯಶ್ವಸಿಯಾದರು. ಪದೇ ಪದೇ ಶಾಲೆಗೆ ಭೇಟಿ ನೀಡಿ ಮುಖ್ಯಶಿಕ್ಷಕರು ನಿರ್ವಹಿಸ ಬೇಕಾದ ವಹಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವುಗಳ ನಿರ್ವಹಣೆಯನ್ನು ಇತರ ಶಿಕ್ಷಕರ ನೆರವಿನೊಂದಿಗೆ ನಿರ್ವಹಿಸುವ ಬಗ್ಗೆಯನ್ನು ತಿಳಿಸಿಕೊಟ್ಟು .ಮುಂದಿನ ಭೇಟಿಯೊಳಗೆ ಉತ್ತಮವಾಗಿ ನಿರ್ವಹಿಸಿರಲು ತಿಳಿಸಿದರು. ಮುಂದಿನ ಭೇಟಿಯಲ್ಲಿ ಮುಖ್ಯಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಸಭೆಕರೆದು ಹಲವು ವಿಚಾರ ಗಳನ್ನು ಹಂಚಿಕೊಂಡು, Sand & stone clipping ತೋರಿಸಿ ವಿವರಿಸಿದರು.ಮುಖ್ಯಶಿಕ್ಷಕರು ಪಾಠ ವೀಕ್ಷಣಾ ವಹಿ ನಿರ್ವಹಿಸಲು ತಿಳಿಸಿದರು.ಮುಂದಿನ SDMC ಸಭೆಗೆ ಬೇಕಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡು ವ್ಯವಸ್ಥಿತವಾಗಿ ನಡೆಸುವಂತೆ ಎಲ್ಲರಿಗೂ ತಿಳಿಸಿದರು. SDMC ಸಭೆಗೆ ನಿರೀಕ್ಷೆಗೂ ಮೀರಿದಂತೆ ಮುಖ್ಯಶಿಕ್ಷಕರು ಉತ್ತಮವಾಗಿ ನಡೆಸಿದರು. ಸಭಾ ನಡಾವಳಿಯನ್ನು ಬರೆದು ಅನುಮೋಧನೆ ಪಡೆದರು. ಸಭೆಯಲ್ಲಿ ಶಾಲಾ ಕೈತೋಟ ಅಭಿವೃದ್ಧಿಗೆ ಯೋಜನೆ ಹಾಕಿಕೊಂಡರು.ಶಾಲೆಯಲ್ಲಿರುವ ಸಮಸ್ಯೆಗಳ ಪಟ್ಟಿ ಮಾಡಿ ಆದ್ಯತೀಕರಣಗೊಳಿಸಿಕೊಂಡರು. ಶಾಲೆಯ ಆವರಣದಲ್ಲಿ ಭತ್ತದ ಹೊಕ್ಕಣೆ ಹಾಕಬಾರದೆಂದು ಮುಖ್ಯಶಿಕ್ಷಕರು ಮನವಿ ಮಾಡಿ ಕೊಂಡಾಗ, ಪೋಷಕರ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತ್ತು. ನಂತರ ಮಾರ್ಗದರ್ಶಕರು ಬಿ.ಆರ್.ಪಿಗಳ ಮಧ್ಯಸ್ತಿಕೆಯಿಂದ ಚರ್ಚೆ ಸಮಾಧಾನಕರವಾಗಿ ಮುಕ್ತಾಯವಾಯಿತ್ತು. ನಂತರ ಪೋಷಕರು ಶಾಲಾ ಹಿಂಭಾಗದಲ್ಲಿ ಹೊಕ್ಕಣೆ ಹಾಕಲು ಒಪ್ಪಿಕೊಂಡರು. ಶಾಲಾ ಶೌಚಲಯ ದುರಸ್ಥಿ ಹಾಗು ಬಳಕೆ ಬಿ.ಆರ್.ಪಿಗಳ ಮಾರ್ಗದರ್ಶನದಲ್ಲಿ ಮುಖ್ಯಶಿಕ್ಷಕರು ಮುಂದಾಳತ್ವವಹಿಸಿ ಬಳಕೆಗೆ ಯೋಗ್ಯವಾಗುವಂತೆ ಮಾಡುವಲ್ಲಿ ಯಶ್ವಸಿಯಾದರು.

ಮುಂದಿನ ದಿನಗಳಲ್ಲಿ ಮುಖ್ಯಶಿಕ್ಷಕರು ಮುಂದಾಳತ್ವವಹಿಸಿಕೊಂಡು ಶಾಲಾ ಕೈತೋಟ ಅಭಿವೃದ್ಧಿ , ಶಾಲಾವಹಿಗಳ ನಿರ್ವಹಣೆ ಹಾಗೂ ಶಾಲೆಯಲ್ಲಿ ಎಲ್ಲ ಶಿಕ್ಷಕರು ಒಟ್ಟಿಗೆ ಕುಳಿತು ಊಟ ಮಾಡುವುದು. ತಂಡವಾಗಿ ಕಾರ್ಯ ನಿರ್ವಹಣೆ ಮುಂತಾದ ಅಂಶಗಳನ್ನು ಅಳವಡಿಸಿಕೊಂಡರು.

ಮುಂದಿನ SDMC ಹಾಗೂ ಪೋಷಕರ ಸಭೆಯನ್ನು ಕರೆದು ಮುಖ್ಯಶಿಕ್ಷಕರು ಉತ್ತಮವಾಗಿ ಸಭೆಯನ್ನು ನಡೆಸಿದರು.ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಚರ್ಚಿಸಿದಾಗ ಶಾಲೆಗೆ EDUSATಅಳವಡಿಸಬೇಕೆಂಬ ಬೇಡಿಕೆ ಬಂದು ಶಿಕ್ಷಕರು,

ಪೋಷಕರು ಹಣದ ಸಹಕಾರ ನೀಡಿ ಅದೇ ದಿನ ೬೦೦೦/ರೂ ಸಂಗ್ರಹವಾಗಿ ಉಳಿದ ೫೦೦೦/ರೂಗಳನ್ನು ಸ್ಥಳೀಯ ಮುಖಂಡರಿಂದ ಕೇಳಲು ಮುಖ್ಯಶಿಕ್ಷಕರು ನಾವು ಎಲ್ಲರು ಹೋಗಿ ಕೇಳಲು ತಕ್ಷಣದಲ್ಲಿ EDUSATಅಳವಡಿಸಲು ಬೇಕಾದ ಹಣದ ವ್ಯವಸ್ಥೆಯಾಯಿತ್ತು.EDUSATಅಳವಡಿಸಿ ಉದ್ಘಾಟನಾ ಕಾರ್ಯಕ್ರಮ ನಡೆಸಲು ಸಿದ್ದತೆ ಮಾಡಿಕೊಳ್ಳಲು ಮುಖ್ಯಶಿಕ್ಷಕರಿಗೆ ತಿಳಿಸಲಾಯಿತ್ತು ಹಾಗೂ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಲಾಯಿತ್ತು. ಪ್ರೇರಣೆಗೊಂಡ ಮುಖ್ಯಶಿಕ್ಷಕ ಉದ್ಘಾಟನಾ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲ ಬಿ.ಆರ್.ಪಿ, ಸಿ.ಆರ್.ಪಿ, ಹಾಗೂ ಡಯಟ್ ಉಪನ್ಯಾಸಕರನು ಕರೆದು ಬೆಳಿಗ್ಗೆ ಪೋಷಕರಿಗೆ ಆಟೋಟ ಸ್ಪರ್ಧೆ ,ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು,ಮಧ್ಯಾನ್ನ EDUSATಉದ್ಘಾಟನಾ ಕಾರ್ಯಕ್ರಮ ವನ್ನು ಡಯಟ್ ಉಪನ್ಯಾಸಕರುಗಳಿಂದ ನಡೆಸಿ,ಸಸಿ ನೆಡಿಸಿದರು.

ಇಂದಿಗೂ ಆ ಶಾಲೆಯಲ್ಲಿ EDUSAT ಪಾಠಬೋಧನೆ ಚಾಲನೆಯಲ್ಲಿದೆ. ಶೌಚಲಯ ಬಳಕೆಗೆ ಯೋಗ್ಯವಾಗಿದೆ.

ನಿರಾಸಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದ್ದ ಒಬ್ಬ ಮುಖ್ಯಶಿಕ್ಷಕರು ಆಸಕ್ತಿಯಿಂದ ಕಾರ್ಯ ನಿರ್ವಹಿಸುವಂತೆಯಾಗಿದೆ.

ಇಲ್ಲಿನ EDUSAT ಪಾಠಬೋಧನೆಯ ಅನುಕೂಲಗಳ ಬಗ್ಗೆ ಸಿ.ಆರ್.ಪಿ ಸಮಾಲೋಚನಾಸಭೆಗಳಲ್ಲಿ ತಿಳಸಲಾಗಿ ಇಂದು ಮಳ್ಳವಳಿ ತಾಲ್ಲೂಕಿನಲ್ಲಿ ಬಿ.ಆರ್.ಪಿ/ಸಿ.ಆರ್.ಪಿಗಳ ನಾಯಕತ್ವದಲ್ಲಿ ಒಟ್ಟು ೨೬ ಶಾಲೆಗಳಲ್ಲಿ EDUSATಅಳವಡಿಸಿಕೊಂಡು ಅದರ ಪ್ರಯೋಜನ ಪಡೆಯುತ್ತಿದ್ದಾರೆ.