Cluster Development Paramesh Hasan

 

ಸಮೂಹ ಸಮಪನ್ಮೂಲ ಕೇಂದ್ರವನ್ನು ಆಕರ್ಷ

ಣೀಯಗೊಳಿಸುವುದು ಮತ್ತು ಅಭಿವೃದ್ದಿಗೊಳಿಸುವುದು

ಪೀಠಿಕೆ:-ಮಾನವ ಹುಟ್ಟಿ ನಿಂದ ಸಾಯುವವರೆಗೆ ತನಗೆ ಅಗತ್ಯ ಮತ್ತು ಅವಶ್ಯಕತೆ ಇರುವುದನ್ನೆಲ್ಲಾ ಸನ್ನಿವೇಶಕ್ಕೆ ತಕ್ಕಂತೆ ಕಲಿಯುತ್ತಾ ಹೋಗುತ್ತಾನೆ. ಹುಟ್ಟಿನಿಂದ ಶಾಲೆಗೆ ಸೇರುವವರೆಗೆ ತನ್ನ ಮನೆಯನ್ನೆ ಮೊದಲ ಪಾಠಶಾಲೆ ಎ೦ದು ತಿಳಿದಿರುತ್ತದೆ. ತಾಯಿಯೇ ಮೊದಲ ಗುರು ,ನೆರೆಹೊರೆಯವರೇ ಸ್ನೇಹಿತರು , ಬಂಧುಬಳಗವೇ ಹಿತೈಷಿಗಳು, ಹೀಗೆ ಅವರಿಂದ ಏನಲ್ಲಾ ಕಲಿತು ಔಪಚಾರಿಕ ವ್ಯವಸ್ಥೆ ಯಾದ ಶಾಲೆಗೆ ದಾಖಲಾಗುತ್ತದೆ. ಶಾಲೆಯಲ್ಲಿ ತನಗೆ ಬೇಕಾದ ವಾಯಾರಣ, ಪ್ರೀತಿ, ವಾತ್ಸಲ್ಯ , ಆಟಿಕೆಗಳು , ಅನುಕಂಪ , ಸಹಕಾರ , ಇಂತಹ ಅನೇಕ ಅಂಶಗಳನ್ನು ಎದುರು ನೋಡುವುದು ಸಾಮಾನ್ಯವಾಗಿರುತ್ತದೆ . ಅವುಗಳೆಲ್ಲಾ ಇದ್ದಲ್ಲಿ ಶಾಲಾ ಪರಿಸರಕ್ಕೆ ಹೊಂದಿಕೊಳ್ಳು ತ್ತದೆ . ಇಲ್ಲದಿದ್ದಲ್ಲಿ ಶಾಲೆಯ ಬಗ್ಗೆ ನಿರಾಸಕ್ತಿ ಹೊಂದುತ್ತದೆ . ಆದ್ದರಿಂದಲೇ NCF 2005 ಶಾಲಾ ವಾತಾವರಣದ ಬಗ್ಗೆ ಹೆಚ್ಚಿ ನ ಆಸಕ್ತಿಯನ್ನು ಬಿಂಬಿಸಿದೆ.

ಶಾಲೆ ಎ೦ದರೇನು? ಶಾಲೆ ಹೇಗಿರಬೇಕು? ಉತ್ತಮ ಶಾಲೆಯನ್ನು ಬಿಂಬಿಸುವ ಅಂಶಗಳು ಯಾವುವು? ಶಿಕ್ಷಣ ಹೇಗಿರಬೇಕು? ಶಿಕ್ಷಕ ಹೇಗಿರಬೇಕು ? ಶಿಕ್ಷಣದ ದೃಷ್ಟಿ ಕೋನಗಳು ಯಾವುವು? ಸಮುದಾಯದ ಮತ್ತು ಭಾಗೀದಾರರ ಭಾಗವಹಿಸುವಿಕೆಯ ಪ್ರಾಮುಖ್ಯತೆ ಕುರಿತಾಗಿ ಪ್ರತಿಯೊಂದು ಶಾಲೆಗೂ ಅಗತ್ಯ ಬೆಂಬಲ ಮತ್ತು ಮಾರ್ಗದರ್ಶನ ಮಾಡುವ ಸಂಸ್ಥೆ ಎ೦ದರೆ ಸಮೂಹ ಸಂಪನ್ಮೂಲ ಕೇಂದ್ರ ಈ ಸಂಒನ್ಮೂಲ ಕೇಂದ್ರವು ಬಲವರ್ದನೆಯಾದರೆ ಶಾಲೆಗಳ ಬಲವರ್ದನೆ ಸಾಧ್ಯ . ಹೇಗೆಂದರೆ ಜ್ಯೋ ತಿ ತಾನು ಬೆಳಗಿದರೇ ಮಾತ್ರ ಇನ್ನೊ೦ದು ಜ್ಯೋತಿ ಬೆಳಗಿಸಲು ಸಾಧ್ಯ. ಆದ್ದರಿಂದ ಸಿ.ಆರ್.ಸಿ.ಯ ಆಕರ್ಷಣೆ ಮತ್ತು ಅಭಿವೃದ್ಧಿಯಿ೦ದ ಅದರ ವ್ಯಾಪ್ತಿಯ ಎಲ್ಲಾ ಶಾಲೆಗಳು ಆಕರ್ಷಣೆ ಮತ್ತು ಅಭಿವೃದ್ಧಿ ಸಾಧ್ಯ.

ಹಾಸನ ಜಿಲ್ಲೆ ಯ ಹೊಳೆನರಸಿಪುರ ತಾಲ್ಲೂಕಿನ ದೊಡ್ಡ ಹಳ್ಳಿ ಸಿ.ಆರ್.ಸಿ.ಯನ್ನು QIP ಅಡಿಯಲ್ಲಿ ಅಭಿವೃದ್ಧಿಗೊಳಿಸಲು ನಿರ್ದರಿಸಲಾಯಿತು. ಆದರೆ ಸಿ.ಆರ್.ಪಿ. ಯರಿಗೆ ಅಷ್ಟೊ ಂದು ಆಸಕ್ತಿಯಿರಲಿಲ್ಲ . ಯಾವುದೇ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತಿರಲಿಲ್ಲ ಕಾರಣ ಆ ಭಾಗದ ಶಿಕ್ಷಕ ರೆಲ್ಲಾ ತಾಲ್ಲೂಕು ಕೇಂದ್ರದಲ್ಲೇ ವಾಸವಿದ್ದು ಶಿಕ್ಷಕರ ಮನವಿ ಮೇರೆಗೆ ಅತ್ತಿರದ ಶಾಲೆಯಲ್ಲೆ ಸಭೆ ಸಮಾರಂಭಗಳನ್ನು ನಡೆಸುತ್ತಿದ್ದರು . ಸಿ.ಆರ್. ಸಿ . ಅಭಿವೃದ್ಧಿ ಕುರಿತಂತೆ ಸಿ.ಆರ್. ಪಿ.ಯವರೇ ಹಣ ಎಷ್ಟಾದರೂ ನಾನೇ ಮಾಡುತ್ತೇನೆ ಎ೦ದು ಮುಂದೆಬಂದರು . ಸಿ.ಆರ್.ಸಿ ಯ ಫಲಾನುಭವಿಗಳಾದ ಶಿಕ್ಷಕರ ನಿರೀಕ್ಷೆ ಗಳು ಮತ್ತು ಅಭಿಪ್ರಾಯಗಳ ಆಧಾರದ ಮೇಲೆ ಅಭಿವೃದ್ಧಿಗೊಳಿಸುವುದು ಸೂಕ್ತ ಎ೦ಭ ಮಾರ್ಗದರ್ಶನ ಮಾಡಲಾಯಿತು.

ಶಿಕ್ಷಕರ ಸಭೆ ಕರೆದು ಸಿ.ಆರ್.ಸಿ ಆರಂಭ ,ಗುರಿ ಉದ್ದೇಶ, ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಲಾಯಿತು. ಚರ್ಚೆಯ ನಂತರ ಶಿಕ್ಷಕರ ಅಭಿಪ್ರಾಯಗಳಿಗೆ ಅನುಗುಣವಾಗಿ ಎರಡು ವಿಧದಲ್ಲಿ ಅಭಿವೃದ್ಧಿಗೊಳಿಸಲು ತೀರ್ಮಾನಿಸಲಾಯಿತು.

1.ಶೈಕ್ಷಣಿಕ ಅಭಿವೃದ್ಧಿ

2.ಭೌತಿಕ ಅಭಿವೃದ್ಧಿ

  1. ಶೈಕ್ಷಣಿಕ ಅಭಿವೃದ್ಧಿ :-

  • ಶಾಲೆಗಳಿಗೆ ಅಗತ್ಯ ಶೈಕ್ಷಣಿಕ ಮಾರ್ಗದರ್ಶನ ಮಾಡುವುದು.

  • ಶಾಲೆಗಳ ಆಡಳಿತಾತ್ಮಕ ಸಮಸ್ಸೆ ಗಳಿಗೆ ಸೂಕ್ತ ಪರಿಹಾರ ಒದಗಿಸುವುದು.

  • ಶಿಕ್ಷಕರಿಗೆ ಅಗತ್ಯವೆನಿಸಿದಾಗ ಸಭೆ/ತರಬೇತಿಗಳನ್ನು ಆಯೋಜಿಸುವುದು.

  • ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಸಹ ಪಠ್ಯ ಹಾಗೂ ಸಾಂಸ್ಕೃ ತಿಕ ಚಟುವಟಿಕೆಗಳನ್ನು ಆಯೋಜಿಸುವುದು.

  • ವಿಷಯವಾರು ಉತ್ತಮ ಸಂಪನ್ಮೂಲ ತಂಡವನ್ನು ರಚಿಸುವುದು.

2. ಭೌತಿಕ ಅಭಿವೃದ್ಧಿ :-

  • ಸಿ.ಆರ್.ಸಿ.ಯು ಆಕರ್ಷಣೀಯವಾಗಿರಬೇಕು.

  • ಉತ್ತಮ ಗ್ರಂಥಾಲಯ ವಿರಬೇಕು.

  • ಟಿ.ಎಲ್.ಎಮ್. ಸಂಗ್ರಹ ಣೆ ಮತ್ತು ಪ್ರದ ರ್ಶನ .

  • ಅಂಕಿ ಅಂಶಗಳ ಸಂಗ್ರಹಣೆ ಮತ್ತು ಪ್ರದರ್ಶನ.

  • ಶಾಲೆಗೊಂದು ಪ್ರತ್ಯೇಕ ಕಡತ.

ಈ ಮೇಲಿನ ಎಲ್ಲಾ ಅಂಶಗಳನ್ನು ಪ್ರಕಲ್ಪದ ಅವಧಿಯಲ್ಲಿ ಅನುಷ್ಠಾ ನಗೊಳಿಸಲಾಯಿತು.