Cluster Development Nagarajaiah

ಗುಣಮಟ್ಟ ಸುಧಾರಣಾ ಪ್ರಕಲ್ಪಗಳು '

ಕ್ಲಸ್ಟರ್ ಸಂಪನ್ಮೂಲ ಕೇ೦ದ್ರವನ್ನು ಅಭಿವೃದ್ಧಿ ಗೊಳಿಸಿವುದು '

 

೨೦೦೭-೨೦೦೮ ನೇ ಶೈಕ್ಷಣಿಕ ವರ್ಷವು ಕರ್ನಾಟಕದ ಮಟ್ಟಿಗೆ ಒಂದು ಪರ್ವ ಕಾಲ. ಇಲ್ಲಿಯವರೆಗೂ ವ್ಯವಹಾರಿಕವಾಗಿ ಬಳಕೆಯಲ್ಲಿದ್ದ 'ನಿರ್ವಹಣಾ ಅಭಿವೃದ್ಧಿ ' ಎ೦ಬ ಪರಿಕಲ್ಪನೆಯನ್ನು ಶಿಕ್ಷಣ ಕ್ಷೇತ್ರಕ್ಕೆ ಪ್ರಾಯೋಗಿಕವಾಗಿ ಅಳವಡಿಸುವ ಭಾಗವಾಗಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಗಳಿಗೆ ಸುಧೀರ್ಘ ತರಬೇತಿಗಳನ್ನು ಆಯೋಜಿಸಲಾಯಿತು. ಇದರಲ್ಲಿ ಶೈಕ್ಷಣಿಕ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ ವು ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ವಾತಾ ವರಣವನ್ನು ನಿರ್ಮಾಣ ಮಾಡುವುದಕ್ಕಾಗಿ ಭೌತಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಉಪಯೋಗಿಕೊಳ್ಳಲು ಸಂಬಂಧಿಸಿದ ಸಿಬ್ಬಂದಿಯನ್ನು ತರಬೇತಿಗೊಳಿಸುವ ಭಾಗದ ಉ ದ್ದೇಶದಿಂದ ನೆರವಾಗಿ ಬಂದವು ಗುಣಮಟ್ಟ ಸುಧಾರ ಣಾ ಪ್ರಕಲ್ಪಗಳು .ಇದರ ಅಡಿಯಲ್ಲಿ ತರಬೇತಿ ಹೊಂದಿದ ಕ್ಲಸ್ಟರ್/ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳು ಇಲಾಖೆಯ ನೆರವಿನೊಂದಿಗೆ ತಮ್ಮ ವ್ಯಾಪ್ತಿಯಲ್ಲಿ ಒಂದು ಪ್ರಕಲ್ಪವನ್ನು ಅನುಷ್ಠಾನಕ್ಕಾಗಿ ತೆಗೆದುಕೊಂಡರು.

 

ಪ್ರಕಲ್ಪ ಅನುಷ್ಠಾನ : ' ಕ್ಲಸ್ಟರ್ ಸಂಪನ್ಮೂಲ ಕೇ೦ದ್ರವನ್ನು ಅಭಿವೃದ್ಧಿ ಗೊಳಿಸಿವುದು '

ಅನುಷ್ಠಾನಗಾರರು: ಪ್ರಾಕಾಶ್. ದೊರೆಸ್ವಾಮಿ- ಬಿ.ಆರ್.ಪಿ. ಚಂದ್ರ ಶೇಖ ರ್- ಸಿ.ಆರ್.ಪಿ

ಪ್ರಕಲ್ಪ ಕ್ಷೇತ್ರ : ಕಡಕೊಳ. ಸಿ.ಆರ್.ಸಿ ಮೈಸೂರು ತಾ.

ಮಾರ್ಗದರ್ಶಕರು : ಸಿ.ಆರ್. ನಾಗರಾಜಯ್ಯ, ಭಾರತಿ, ಸಿ.ಬಿ. ಸರಸ್ವತಿ, ಕೆ. ತ್ರಿ ವೇಣಿ

ಪ್ರಕಲ್ಪದ ಅನುಷ್ಠಾನದ ಅವಧಿ: ೨೦೧೦ ನೇ ನವೆ೦ಬರ್ ನಿಂದ ೨೦೧೧ ನೇ ಮಾರ್ಚ್.

ಪ್ರಕಲ್ಪ ದ ಅನುದಾನ: ೪೫೦೦-೦೦

ಶೈಕ್ಷಣಿಕ ಬೆ೦ಬಲ : ಕ್ಷೇತ್ರ ಶಿಕ್ಷಣಾಧಿಕಾರಿಗಳು /ಸಮನ್ವಯಾಧಿಕಾರಿಗಳು.

ಕ್ಷೇತ್ರ ಪರಿಸರ: ನಗರ ಪ್ರದೇಶದಿಂದ ೧೫. ಕಿ,ಮೀ .ಶಾಲಾವರಣದಲ್ಲಿ ಒಂದು ಕನ್ನಡ ಮತ್ತು ಒಂದು ಉರ್ದು ಮಾಧ್ಯಮದ ಸ.ಹಿ/ಕಿ/ಪ್ರಾ /ಶಾಲೆ ಗಳಿವೆ. ಆವರಣದಲ್ಲೇ ಸಿ.ಆರ್.ಸಿ. ಇದೆ.

ಸಹ ಭಾಗಿಗಳು : ಕ್ಷೇತ್ರ ಶಿಕ್ಷಣಾಧಿಕಾರಿಗಳು ,ಸಮನ್ವಯಾಧಿಕಾರಿಗಳು, ಮುಖ್ಯ ಶಿಕ್ಷಕರು

ಸಹ ಶಿಕ್ಷಕರು ,ವಿದ್ಯಾರ್ಥಿ ಗಳು , ಪೋಷಕರು, ಉದ್ಯೋಗಸ್ಥ ಹಿರಿಯ ವಿದ್ಯಾರ್ಥಿ ಗಳು,

ಸ್ವಯಂ ಸೇವಾ ಸಂ ಸ್ಥೆಗಳು , ಖಾಸಗಿ ಕಂಪನಿಗಳು, ಎಸ್.ಡಿ.ಎಸ್..ಸಿ.ಸೋದರ ಇಲಾಖೆಗಳು.

 

ಗುಣಮಟ್ಟ ಸುಧಾರಣಾ ಪ್ರಕಲ್ಪಗಳು ಅನು ಷ್ಠಾನಗೊಳ್ಳು ಮೊದಲುಎಲ್ಲಾ ಸಿ.ಆರ್.ಸಿ ಗಳಂತೆ ಮತ್ತು ಎಲ್ಲಾ ಸಿ.ಆರ್.ಪಿ ಗಳಂತೆಯೇ ಇಲ್ಲಿಯೂ ಯಥಾ ಸ್ಥಿತಿಯೇ ಮುಂದುವರೆದಿತ್ತು. ತರಬೇತಿಗೊಳ್ಳಿಸಿದ ನಂತರ ಸಿ.ಆರ್.ಸಿ ಗೆ ಹೊಸ ಕಾಯಕಲ್ಪ ಕೊಡುವ ನಿರ್ಧಾರಕ್ಕೆ ಬರಲಾಯಿತು.ಈ ಅವಧಿಯಲ್ಲಿ ಎರಡು

ಭಾರಿ ಸಿ .ಆರ್.ಸಿ ಗೆ ಭೇಟಿ ನೀಡಿ ಅಲ್ಲಿನ ಪ್ರಕಲ್ಪ ದಾರರು ಮತ್ತು ಶಾಲಾ ಸಿಬ್ಬಂದಿಯವರೊಡನೆ ಕ್ಲಸ್ಟರ್ ಸಂಪನ್ಮೂಲ ಕೇ೦ದ್ರವನ್ನು ಅಭಿವೃದ್ಧಿ ಗೊಳಿಸಿವುದು ವಿಷಯವಾಗಿ ಸುಧೀರ್ಘವಾಗಿ ಚರ್ಚಿಸಿ ಸಮಾಲೋಚನೆ ಮಾಡಲಾಯಿತು. ಹಾಗೂ ಇದರ ಅವಶ್ಯಕತೆನ್ನು ಮನದಟ್ಟು ಮಾಡಿಕೊಡಲಾಯಿತು.ನಂತರದ ಹಾದಿ ಸುಗಮವಾಗಿ ಸಾಗಿ ಪ್ರಕಲ್ಪ ಅನುಷ್ಠಾ ನವಾದದ್ದು ಹೆಮ್ಮೆಯ ಸಂಗತಿ. ಅದೊಂದು ಸಾಹಾಸ ಗಾಥಾ.

ಕ್ಲಸ್ಟರ್ ಕೇ೦ದ್ರವು ಮೊದಲು ಪ್ರಾಥಮಿಕ ಶಾಲೆಯ ಎಲ್ಲಾ ಚಟುವಟಿಕೆಗಳು ನಡೆವ ಶಾಲೆಯ ಭಾಗವಾಗಿತ್ತು. ಪ್ರಕಲ್ಪ ಅನುಷ್ಠಾ ನ ಮಾಡಬೇಕು ಎ೦ಬ ಕಲ್ಪನೆ ಬಂದ ನಂ ತರ ಸೂಕ್ತ ಕ್ರಿಯಾ ಯೋಜನೆ ಮತ್ತು ತಂತ್ರಗಳನ್ನು ರೂಪಿಸಿಕೊ ಳ್ಳಲಾಯಿತು.

.ಶಾಲಾ ಚಟುವಟಿಕೆಗಳ ಬೆ೦ಬಲ ಕೇ೦ದ್ರ.

.ಶಾಲಾ ಅನುದಾನದ ಸದ್ಬಳಕೆ

.ಕ್ಲಸ್ಟರ್ ಕೇ೦ದ್ರದ ಕೊರತೆಗಳ ನಿವಾರಣೆ

. ಶಾಲಾ ಸಹೋದ್ಯೋಗಿಗಳಿಂದ ಅಗತ್ಯ ಸಹಕಾರ ಕೋರಿಕೆ

.ದಾನಿಗಳಿಂದ ವಸ್ತು ರೂಪದ ಕೊಡುಗೆಗಳನ್ನು ಕೊರುವುದು

. ಸ್ವಯಂ ಸೇ ವಾ ಸಂಸ್ಥೆಗಳ ಸಹಕಾರ

. ಕ್ಲಸ್ಟರ್ ಕೇ೦ದ್ರದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಮತ್ತು ಇತರ ಉಪಯೋಗಿ ಚಟುವಟಿಕೆಗಳನ್ನು

ಹ ಮ್ಮಿಕೊಳ್ಳುವುದು

 

ಹಂತ ಹಂತವಾಗಿ ಇವುಗಳನ್ನು ಕಾರ್ಯಗತ ಗೊಳಿಸಿದಂತೆಲ್ಲಾ ನಿಜವಾದ ಅರ್ಥ ದಲ್ಲಿ ಸಿ.ಆರ್.ಸಿ ಎ೦ಬುದು ಬಹುಪಯೋಗಿ ಸಂಪನ್ಮೂಲ ಕೇ೦ದ್ರವಾಗಿ ರೂಪಗೊಳ್ಳುತ್ತ ಹೋಯಿತು. ಇಂದು ಕಡಕೊಳ ಸಿ.ಆರ್.ಸಿ ಯು ತನ್ನದೇ ಆದಂತಹ ವಿಶಿಷ್ಠತೆಗಳನ್ನು ಹೊಂದಿದೆ. ಮಾತ್ರವಲ್ಲದೆ ಇಲಾಖೆಯ ಸಂಸ್ಥೆ ಯೊಂದು ಹೀಗಿರಬೇಕು ಎ೦ಬತಿದೆ. ಅದು ತನ್ನ ಪ್ರಭಾವವನ್ನು ತತ್ ಕ್ಷಣದಿಂದಲೇ ಕಾಣಿಸುವಂತಿದೆ. ಇಲಾಖೆ ಅಮೂಲ್ಯ ಆಸ್ತಿಯಾಗಿದೆ.ಅದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯೂ ನಮ್ಮದಾಗಿದೆ.

. ಶೌಚಾಲಯ ಮತ್ತು ನೀರು

.ವಿದ್ಯುತ್- ಲೈಟ್ -ಫ್ಯಾನ್

.ಪೂರ್ಣ ವಾಗಿ ಸುಣ್ಣ ಬಣ್ಣ

. ಅವಶ್ಯಕ ಪೀಠೋಪಕರಣ

.ಒಳ ಮತ್ತು ಹೊರ ಆವರಣಕ್ಕೆ ಚಿತ್ರ ಸಹಿತ ಗೋಡೆ ಬರಹ

. ಮಾಸಿಕ ವಾ ಶೈಕ್ಷಣಿ ಕಾರ್ಯ ಯೋಜನೆ

. ಕ್ಲಸ್ಟರ್ ವ್ಯಾಪ್ತಿಯ ಅಂಕಿ-ಅಂಶಗಳು

.ಗ್ರಂಥಾಲಯ ಸ್ಥಾಪನೆ ಮತ್ತು ಪುಸ್ತಕಗಳ ಸಂಗ್ರಹ

. , ಆಲ್ಮೆರಾ ,ಕಪಾಟು ,ಕುರ್ಚಿಗಳ ಸಂಗ್ರಹ

೧೦. ಕಂಪ್ಯೂಟರ್, ಟಿವಿ, ರೇಡಿಯೋ ಜೋಡಣೆ

೧೧. ತರಬೇತಿಗಳು, ಮು.ಶಿ., ಶಿಕ್ಷಕರ ಸಮಾಲೋಚನೆ ಸಭೆ

೧೧. ಕಾರ್ಯಾವಧಿಯಲ್ಲಿ ಸಿ.ಆರ್.ಸಿ ತೆರೆದಿರುವುದು.

ಈ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮೈಸೂರು ತಾ// ಬಿ.., ಬಿ.ಆರ್.ಸಿ, ಬಿ.ಆರ್.ಪಿ ಸಿ.ಆರ್.ಪಿ ಗಳು ಮು.ಶಿ.ಡಿ.ಎ೦.ಸಿ ರವರು ಮತ್ತು ಪೋಷಕರು ನೋಡಿದ್ದಾರೆ ಹಾಗೂ ಪ್ರಕಲ್ಪದಾರರನ್ನು ಪ್ರಶಂಸಿದ್ದಾರೆ. ಯಾವ ಪ್ರತಿ ಫಲಾಪೇಕ್ಷೆ ಯಿಲ್ಲದೆ ಸದರಿ ಗುಣಮಟ್ಟ ಸುಧಾರಣಾ ಪ್ರಕಲ್ಪವನ್ನು ಶಕ್ತಿ ಮೀರಿ ಅನುಷ್ಠಾನ ಮಾಡಿದ್ದಾರೆ.ಗುಣಮಟ್ಟ ಸುಧಾರಣಾ ಪ್ರಕಲ್ಪದ ಪ್ರಾಯೋಗಿಕ ಅನುಷ್ಠಾನದಲ್ಲಿ ಕೆಲವೊಮ್ಮೆ ಆಕಸ್ಮಿಕ ಮತ್ತು ಸಹಸ ಎನ್ನುವಂತೆ ಕೆಲವು ಆಲಸ್ಯ ಮತ್ತು ಜಡತ್ವದಿಂದ ಕೂಡಿದ ಸಹೋದ್ಯೋಗಿಗಳಿಂದ ನಕಾರಾತ್ಮಕ ಟೀಕೆಗಳು , ವಿಮರ್ಶೆಗಳು ಕೇಳಿ ಬಂದಿವೆ.

.ಈ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸುತ್ತಿರುವಾಗ ಇವರಿಗಿರುವ ಉದ್ದೇಶವೇನು?

.ಈ ಕಾರ್ಯಕ್ರಮದಅನುಷ್ಠಾನಕ್ಕೆ ಸರಕಾರದಿಂದ ಅನುದಾನ ದೊರೆತ್ತಿದೆಯೆ ?

.ಸಿ.ಆರ್.ಸಿ ಯ ಈ ಕಾರ್ಯ ಕ್ರಮದ ಅನುಷ್ಠಾನದ ನಂತರ ನಾವೂ ಸಹ ಮಾಬೇಕಾ ಗುತ್ತ ದಲ್ಲಾ ?

. ಇದರ ಮುಂದುವರಿಕೆ ಸಾಧ್ಯವೇ?

ಈ ಎಲ್ಲಾ ಸಾಂಪ್ರದಾಯಿಕ ಮನೋಭಾವದ ವರಿಂದ ಕೀಳಿ ಬಂದಂಥ ಟೀಕೆಗಳನ್ನು ಮಾರ್ಗದರ್ಶಕರ ಬಳಿ ಸಂಬಂಧಿಸಿದ ಪ್ರಕಲ್ಪದಾರರು ಹಂಚಿಕೊಂಡಿದ್ದಾರೆ. ಹಿಂದಿನ ಅನುಭವಗಳ ಹಿನ್ನೆಲೆ ಯಲ್ಲಿ ಅಂಥವುಗಳಿಗೆ ಓಗೊಡಬಾರದಂದೂ, ಅವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಸಿ.ಆರ್.ಸಿ ಯನ್ನು ಶಿಕ್ಷಣಾಸಕ್ತರಆಸಕ್ತಿಯ ಕೇ೦ದ್ರವನ್ನಾಗಿ ಮಾಡಲು ಶ್ರಮಿಸಬೇಕಾದುದರ ಮಹತ್ವ ವನ್ನು ಮನವರಿಕೆ ಮಾಡಿಕೊಡಲಾಯಿತು. ಇದರಿಂದ ಉತ್ತೇಜಿತಗೊಂಡ ಪ್ರಕಲ್ಪದಾರರು ಹೊರಗಿನ ಯಾವ ಪ್ರಶಂಸೆಗಳು ಬಹುಮಾನಗಳು ಬೇಡವೆಂದೂ ಗುಣಮಟ್ಟ ಸುಧಾರಣಾ ಪ್ರಕಲ್ಪ ದ ಅನುಷ್ಠಾನದ ಮಾರ್ಗದರ್ಶಕರಿಂದ ದೊರೆತ ಪ್ರಶಂಸೆಯೊಂದೆ ಸಾಕೆಂದರು.. ಒಟ್ಟಾರೆ ಕಡಕೊಳ 'ಕ್ಲಸ್ಟರ್ ಸಂಪನ್ಮೂಲ ಕೇ೦ದ್ರವನ್ನು ಅಭಿವೃದ್ಧಿಗೊಳಿಸಿವುದು ' ಎ೦ಬ ಈ ಪ್ರಕಲ್ಪ ದ ಅನುಷ್ಠಾನದಿಂದ ಬದಲಾವಣೆ ಮತ್ತು ಅಭಿವೃದ್ಧಿ ಸಾಧ್ಯವಾಗಿರುವುದು ನಮಗೆಲ್ಲರಿಗೂ ಸಂತೋಷವಾಗಿದೆ ಮತ್ತು ಧನ್ಯತೆಯು ನಮ್ಮ ಮನಸ್ಸಿನಲ್ಲಿ ಮನೆ ಮಾಡಿದೆ.

"ಸತ್ಯ ಮೇವ ಜಯತೇ " ಸಿ.ಆರ್.ನಾಗರಾಜಯ್ಯ.

ಹಿರಿಯ ಉಪನ್ಯಾಸಕರು

ಡಯಟ್, ಮೈಸೂರು

ದಿ: ೧೨-೧೦-೨೦೧೧ ೯೪೪೯೦೨೪೦೧೩.