Parent Teacher Dialogue Ravindranatha Chithradurga

ಪ್ರಕಲ್ಪ ; ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಶಿಕ್ಷಕ ಹಾಗೂ ಪೋಷಕರ ನಡುವೆ ಸಂವಾದ ಏರ್ಪಡಿಸುವುದು.

 

 

ಶಾಲೆ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೋಮ್ಮಲಿಂಗನಹಳ್ಳಿ ,ಮೊಳಕಾಲ್ಮುರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ

 

 

 

ಧ್ಯಯನಕಾರರು ;

 

ಶ್ರೀ ಕೆ. ಗುರುಪ್ರಸಾದ ಬಿ. ಅರ್,ಪಿ, ಮೊಳಕಾಲ್ಮುರು ತಾಲ್ಲೂಕು ಚಿತ್ರದುರ್ಗ

 

ಶ್ರೀ ಟಿ.ಜಿ.ರಾಜಶೇಖರ , ಬಿ. ಅರ್,ಪಿ, ಮೊಳಕಾಲ್ಮುರು ತಾಲ್ಲೂಕು ಚಿತ್ರದುರ್ಗ

 

ಅವಧಿ; ನಾಲ್ಕು ತಿಂಗಳು ೨೦೦೯ರಲ್ಲಿ

 

 

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ತರುವ ನಿಟ್ಟಿನಲ್ಲಿ ಶೈಕ್ಷಣಿಕ ನಾಯಕತ್ವ ಅಭಿವ್ರ ಧ್ದಿ ಕಾರ್ಯಕ್ರಮದ ಅಡಿಯಲ್ಲಿ ಬಿ. ಅರ್,ಪಿ/ಸಿ.ಅರ್.ಪಿ ಗಳಿಗೆ ೨೦ ದಿನಗಳ ೫ಹಂತಗಳಲ್ಲಿ ತರಬೇತಿಯನ್ನು ನೀಡಲಾಯಿತು. ಇದರ ಅನ್ವಯ ತರಬೇತಿಪಡೆದ ಬಿ. ಅರ್,ಪಿ/ಸಿ.ಅರ್.ಪಿ ಗಳು ತಮ್ಮ ವ್ಯಾಪ್ತಿಯ ಒಂದು ಶಾಲೆಯಲ್ಲಿ ಪ್ರಕಲ್ಪವನ್ನು ಅನುಷ್ಟಾನಗೊಳಿಸಬೇಕಾಗಿತ್ತು

 

೫ಹಂತಗಳಲ್ಲಿ ತರಬೇತಿಯಅವಧಿಯಲ್ಲಿ ಪ್ಪ್ರಕಲ್ಪದ ಉದ್ದೇಶ, ಏನು,ಏಕೆ,ಯಾರು,ಎಲ್ಲಿ,ಯಾವಾಗ, ಹೇಗೆ ಎನ್ನುವ ಬಗ್ಗೆ ಚರ್ಚೆನಡೆಸಲಾಗಿತ್ತು ,

 

ಅದ್ಯಯನಕಾರರು ತಮ್ಮ ಅಯ್ದ ಶಾಲೆಗೆ ಬೇಟಿನೀಡಿ ಭಾಗಿದಾರರೊಡನೆ (ಎಸ್.ಡಿ.ಎಮ್.ಸಿ ಸದಸ್ಯರು, ಮುಖ್ಯಶಿಕ್ಷಕರು,ಸಹಶಿಕ್ಷಕರು , ಪೋಷಕರ ಮತ್ತು ಮಕ್ಕಳು) ಸಂವಾದನಡೆಸಲಾಯಿತು. ಮೊದಲ ಬೇಟಿಯಲ್ಲಿ ಶಾಲೆಯ ಪ್ರತಿಯೊಂದು ತರಗತಿಯ ಮಕ್ಕಳ (ಕಲಿವಿನ ಸಾಮರ್ಥ್ಯ ) ಪ್ರಗತಿಯನ್ನು ಕುರಿತು ಪರಿಶೀಲನೆ ಮಾಡಲಾಯಿತು. ಇದರ ಆಧಾರದ ಮೇಲೆ ಶಿಕ್ಷಕರು ತಮ್ಮಗುರಿಯನ್ನು ನಿಗದಿಪಡಿಸಿಕೊಳ್ಳಲಾಯಿತು.

ಶಾಲೆ ಶೈಕ್ಷಣಿಕ ಪ್ರಗತಿಯ ಕುರಿತು ಭಾಗೀದಾರರಿಗೆ ಮನವರಿಕೆ ಮಾಡಿಕೊಡಲಾಯಿತು.

 

ಶಾಲೆ ಶೈಕ್ಷಣಿಕ ಪ್ರಗತಿಯತ್ತ ಮುನ್ನೆಡೆಯಲು ಶಾಲೆಯ ಭೌತಿಕ. ಶೈಕ್ಷಣಿಕ,ಮತ್ತು ಹಾಗೂ ಭಾವನಾತ್ಮಕ ಅಂಶಗಳು ಮಹತ್ವವನ್ನು ಪಡೆದಿದೆ. ಹಾಗಾಗಿ ಈ ಕೆಳಕಂಡ ಅಂಶಗಳು.

 

  • ಭೌತಿಕ. ;

  • ಕೂಠಡಿ ಕೋಣೆಗಳ ಸ್ವಚ್ಚತೆ

  • ಟಿ.ಎಲ್.ಎಮ್.ತಯಾರಿಸಿಕೂಳ್ಳುವಿಕೆ

  • ಸಂಪನ್ನೂಲ ಸಾಹಿತ್ಯ ಗಳ ಕ್ರೋಡಿಕರಣ

  • ಕ್ರೀಡಾ ಸಾಮಗ್ರಿಗಳ ಕ್ರೋಡಿಕರಣ

  • ದಾನಿಗಳಿಂದ ವಿವಿಧ ಸಾಮಗ್ರಿಗಳ ಸಂಗ್ರಹ

  •  

ಭಾವನಾತ್ಮಕ

 

  • ಎಸ್.ಡಿ.ಎಮ್.ಸಿ.ಸಭೆ.

  • ತಾಯಂದಿರ ಸಭೆ.

  • ಪೋಷಕರ ಸಭೆ. .

  • ಮುಖ್ಯಶಿಕ್ಷಕರ/ಸಹಶಿಕ್ಷಕರ ಸಭೆ.

  • ಧಾನಿಗಳ/ಶಿಕ್ಷಣ ಆಶಕ್ತರ ಸಭೆ.

  • ಆರೋಗ್ಯ ಕಾರ್ಯಕರ್ತರು/ಅಂಗನವಾಡಿ ಕಾರ್ಯಕರ್ತರ ಸಭೆ.

  • ಚುನಾಯಿತ ಪ್ರತಿನಿಧಿಗಳ ಸಭೆ.

 

 

ಶೈಕ್ಷಣಿಕ ಅಂಶಗಳು

 

  • ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ

  • ಟಿ.ಎಲ್.ಎಮ್.ತಯಾರಿಕಾ ಕಾರ್ಯಗಾರ

  • ಸಂಪನ್ಮೂಲ ಸಾಹಿತ್ಯ ಗಳ ಸಂಗ್ರಹ

  • ಮಕ್ಕಳ ಆರೋಗ್ಯ ತಪಾಸಣೆ

  •  

 

ಸಮುದಾಯವನ್ನು ಶಾಲೆಯ ಕಡೆ ಸಳೆಯಲು ಪೋಷಕರಿಗೆ ಕ್ರೀಡಾಕೂಟಗಳನ್ನು ( running race , musical chair , lemon and spoon etc...)ರಂಗೋಲಿ ,ರಸಪ್ರಶ್ನೆ ಇತ್ಯಾದಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಯಿತು.

 

 

ಸಮುದಾಯದತ್ತ ಶಾಲೆ ಕಾರ್ಯಕ್ರಮದಂದು ಪೋಷಕರು ತಮ್ಮ ಮಕ್ಕಳು ಶಿಕ್ಷಕರ ಜೊತೆಯಲ್ಲಿ ಶೈಕ್ಷಣಿಕ ಅಂಶಗಳ ಕುರಿತು ಚರ್ಚೆ .

 

 

ಮಕ್ಕಳಿಗೆ ರಸಪ್ರಶ್ನೆ ಸಾಂಸ್ಕೃತಿಕ ಇತ್ಯಾದಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಯಿತು.

 

ಎಸ. ಡಿ ಎಮ್ ಸಿ ಯವರಿಗೆ ಉತ್ತಮ ಶಾಲೆಗಳ ಭೇಟಿ ಏರ್ಪಡಿಸಲಾಯಿತು.

 

ಈ ಎಲ್ಲಾ ಕಾರ್ಯಕ್ರಮಗಳಿಂದ ಪ್ರಭಾವಿತರಾದ ಸಮುದಾಯದವರನ್ನು ದಿನಕಳೆದಂತೆ ಶಾಲೆಯ ಕಡೆಗೆ ಕರೆತರುವಲ್ಲಿ ಸಫಲತೆಯನ್ನು ಪಡೆಯಲಾಯಿತು.ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಫೋಷಕರು ತಮ್ಮ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಗಮನಿಸಿದರು. ಹಾಗೂ ಶಿಕ್ಷಕರೂಂದಿಗೆ ಸಂವಾದ ನಡೆಸಿದರು. ಶಾಲೆಯ ಪ್ರಗತಿಗೆ ತಮ್ಮ ಕೈಲಾದ ಸಹಾಯ ಒದಗಿಸಲು ಮನಸ್ಸು ಮಾಡಿದರು. ಈ ಪ್ರಕಲ್ಪ ದ ಅವದಿಯಲ್ಲಿ ೭-೮ ಬಾರಿ ಶಾಲೆಗೆ ಭೇಟಿನೀಡಲಾಯಿತು. ಸಮುದಾಯದವರೂಡನೆ ಸಂವಾದ /ಸಂಪರ್ಕ ಇಟ್ಟುಕೂಳ್ಳುಲಾಗಿತ್ತು

 

 

ಈ ಪ್ರಕಲ್ಪದ ನಂತರ ಈ ಎಲ್ಲಾ ಕಾರ್ಯಕ್ರಮಗಳ ಮುಂದುವರಿಕೆ ಕಾರ್ಯ ನಡೆಯುತ್ತಿದೆ.ಅ ಶಾಲೆಯ ನಿರಂತರ ಸಂಪರ್ಕ ಇಟ್ಟುಕೂಳ್ಳಲಾಗಿದೆ.ಅವರಿಗೆ ಮಾಹಿತಿ , ಮಾರ್ಗದರ್ಶನ , ಸಲಹೆ ಸೂಚನೆ, ಸಂಪನ್ಮೂಲ ಸಾಹಿತ್ಯ, ನಿರಂತರವಾಗಿ ನೀಡಲಾಗುತ್ತಿದೆ. ಶಾಲೆಗೆ ಸಂಬಂದ ಪಟ್ಟ ಇಲಾಖೆ, ಜನಪ್ರತಿನಿದಿಗಳು, ಅಧಿಕಾರಿಗಳು, ಸಮುದಾಯ,ದಾನಿಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೂಳ್ಳಲಾಗಿದೆ. ಎಲ್ಲ ಶಿಕ್ಷಕರು ಮತ್ತು ಮಕ್ಕಳು ತಮ್ಮ ಜವಾಬ್ದಾರಿಯನ್ನು ಅರಿತು ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ.

 

 

ಪ್ರತಿ ತಿಂಗಳ ಎರಡನೆ ಶನಿವಾರ ಫೋಷಕರ ಸಭೆ ನಡೆಸಲಾಗುತ್ತಿದೆ.

 

ಎರಡು ತಿಂಗಳಿಗೊಮ್ಮೆ ನಡೆಯುವ ತಾಯಂದಿರ ಸಬೆಯಲ್ಲಿ ಗರಿಷ್ಟಪ್ರಮಾಣದಲ್ಲಿ ಮಾತೆಯರು ಭಾಗವಹಿಸುತ್ತಿದ್ದಾರೆ .

 

ಶಾಲೆಯ ಎಲ್ಲಾ ಶಿಕ್ಷಕರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಲು ತೊಡಗಿರುತ್ತಾರೆ. ಶಾಲೆಯ ಆಗು ಹೋಗುಗಳ ಬಗ್ಗೆ ಸಮುದಾಯ ಗಮನಹರಿಸುತ್ತಿದೆ.ಶಾಲೆಗಳ ಬೇಕು-ಬೇಡಗಳ ಬಗ್ಗೆ ಗಮನಕೊಡುತ್ತಿದ್ದಾರೆ.ಶಾಲೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಸಮುದಾಯ ಸಕ್ರೀಯವಾಗಿ ಭಾಗವಹಿಸುತ್ತಿದೆ.

ಪ್ರಕಲ್ಪದ ಅವದಿಯಲ್ಲಿ ಶಾಲೆಗೆ

 

  • ೫೦೦ ರೂಪಾಯಿಗಳ ಕ್ರೀಡಾ ಸಾಮಗ್ರಿಗಳ ಸಂಗ್ರಹಣೆ

  • ೧೦೦ - ರೂಪಾಯಿಗಳ ಶಾಲೆಗೆ ಬೇಕಾಗುವ ಸಮಾಗ್ರಿಗಳ ಕೂಡುಗೆ.

 

.

                      ಶಾಲೆಯಲ್ಲಿನ ಗ್ರಂಥಾಲಯದಲ್ಲಿರುವ ಎಲ್ಲಾ ಪುಸ್ತಕ ಗಳು ಎಲ್ಲರಿಗೊ ಸಿಗುವಂತೆ ಪ್ರದರ್ಶನ ಮಾಡಿ, ಅವುಗಳ ಬಳಕೆ ಮಾಡುವಂತೆ ಅನುಕೂಲಮಾಡಿಕೂಡಲಾಗಿದೆ

ಶಾಲೆಯಲ್ಲಿರುವ ಗ್ರಂಥ