Beautification of school environment Sudha R V Chithradurga

 

ಶಾಲಾವಾವರಣವನ್ನು ಹೆಚ್ಚಿ ಸುವುದು.

ಶ್ರೀಮತಿ ಸುಧಾ ಆರ್.ವಿ.

ಉಪನ್ಯಾಸಕರು,

DIET, ಚಿತ್ರದುರ್ಗ .

ಪ್ರಥ ಮಬಾರಿಗೆ ನಮ್ಮ ರಾಜ್ಯ ದಲ್ಲಿ ಎಮಡಿಪಿ ತ ರಬೇತಿಯನ್ನು ಆಯೋಜಿಸಲು ನಮ್ಮ ಜಿಲ್ಲೆ ಯನ್ನು ಆರಿಸಿದಾಗ ತುಂಬಾ ಸಂತೋಷವಾಯಿತು. ಮೊದಲು ಮಾರ್ಗ ದರ್ಶನ ಮಾಡಿದ ಪ್ರಕಲ್ಪ ನನಗೆ ಸಾಕಷ್ಟು ಕಲಿಕೆಯನ್ನು ಉಂಟುಮಾಡಿದ್ದರಿಂದ ನಾನು ಅದನ್ನೇ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ಹಿರಿಯೂರಿನ ಬಿ.ಆರ್ .ಪಿ ಮಂಜುನಾಥ್ ಹಾಗೂ ಹೊಸದುರ್ಗ ದ ಸಿ.ಆರ್.ಪಿ ಚಂದ್ರಣ್ಣ ಇವರ ಹೊಂದಾಣಿಕೆಯಲ್ಲಿ ಹಿರಿಯೂರು ತಾಲ್ಲೂಕಿನ ಕೆ.ಎಮ್ .ಕೊಟ್ಟಿಗೆ ಯ ಸರ್ಕಾರಿ ಹಿರಿಯ ಪ್ರಾ ಥಮಿಕ ಶಾಲೆಯನ್ನು ಪ್ರಕಲ್ಪ ಶಾಲೆಯನ್ನಾಗಿ ಆಯ್ಕೆ ಮಾಡಿ ಭೇಟಿ ನೀಡಿದರು. ಆಗ ಆ

ಶಾಲೆಯ ಸಮಸ್ಯೆ ಗಳನ್ನು ಕಂಡಾಗ ಇದು ಸಾಧ್ಯವೇ ಎನ್ನುವ ಜಿಜ್ಞಾ ಸೆಗೆ ಒಳಗಾದರು .ಏಕೆಂ ದರೆ ಬಹುತೇಕ ಅನಕ್ಷರಸ್ಥ ಕೂಲಿವರ್ಗದವರೇ ಹೆಚ್ಚಾಗಿ ಇರುವ ಕೊಳಚೆ ಪ್ರದೇಶ.

 

ಇಬ್ಬರೂ ಸೇರಿ ತಮ್ಮ ಪ್ರಕಲ್ಪ ದ ಕ್ರಿಯಾ ಯೋಜನೆ ಯನ್ನು ಮತ್ತೊ ಮ್ಮೆ ಪರಿಶೀಲಿಸಿದರು. ನಂತರ ಅದನ್ನು ಶಿಕ್ಷಕರೊಂದಿಗೆ ಹಂಚಿಕೊಂಡರು. ಅದರಂತೆ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಪೋಷಕರ ಸಭೆ ಕರೆಯಲಾಯಿತು. ೧೧ ಗಂಟೆಯಾದರೂ ಯಾರೂ ಬರಲಿಲ್ಲ. ಇವರು ತಾಳ್ಮೆ ಯಿಂದ ಕಾಯುತ್ತಾ ಕೂತರು. ಆಗ ಒಬ್ಬೊ ಬ್ಬ ರಾಗಿ ಬರತೊಡಗಿದರು. ೧೧.೩೦ ರ ಸುಮಾರಿಗೆ ಮಹಿಳೆಯರೆಲ್ಲಾ ಬರತೊಡಗಿದರು. ಆಗ ನಮ್ಮ ಪ್ರಕಲ್ಪ ಗಾರರು ಎಲ್ಲರನ್ನು ಸಭೆಗೆ ಸ್ವಾಗತಿಸಿದರು . ಅವರ ಜೊತೆ "ನನ್ನ ಕನಸಿನ ಶಾಲೆ" "ನಮ್ಮೂರ ಶಾಲೆ" ಕುರಿತು ಚರ್ಚಿ ಸಲಾಯಿತು ಹಾಗೂಶಾ ಲಾ ಅಭಿವೃದ್ಧಿ ಯನ್ನು ಅವರ ಅಭಿಪ್ರಾಯಗ ಳನ್ನು ಪಡೆದು ಪಟ್ಟಿ ಮಾಡಿ ಆದ್ಯತೀಕರಿಸಲಾಯಿತು. ನಂತರ ಆ ಪಟ್ಟಿಯಲ್ಲಿ ನ ಅಂಶಗಳನ್ನು ಅನುಷ್ಠಾನಗೊಳಿಸಲು ಒಬ್ಬೊರಿಗೆ ಒಂದೊಂದು ವಿಷಯದ ಜವಾಬ್ದಾರಿ ನೀಡಲಾಯಿತು.

 

ಭೌತಿಕವಾಗಿ

ಕ್ರ.ಸಂ

ವಿವರ

ಜವಾಬ್ದಾರಿ

ಸಮಯ

ಷರಾ

ಶಾಲೆಗೆ ಮೈದಾನಸ್ವಚ್ಛತೆ

ಪುರ ಸಭೆ ಅಧ್ಯಕ್ಷರು

೧೦ ದಿ

 

2

ಶಾಲೆಗೆ ಎರಡು ಕೊಠಡಿಗಳು

ಪುರ ಸಭೆ ಅಧ್ಯಕ್ಷರು

೪ ತಿಂ

ಮಂಜೂರಾಯಿತು

3

ಪ್ರತ್ಯೇಕ ಸಮವಸ್ತ್ರ , ಟೈ, ಬೆಲ್ಟ್ ,ಗುರುತಿನ ಫೋಟೋ

ಸ್ತ್ರೀ ಶಕ್ತಿ ಸಂ

೧ ತಿಂ

 

4

ಶಾಲಾವನ

ಎಸ್.ಡಿ.ಎಂ .

೧ ತಿಂ

 

5

ಕಂಪ್ಯೂಟರ್

ಯುವಕ ಸಂಘ(ದಾನಿಗಳ ಸಹಾಯ ದಿಂದ)

೨ ತಿಂ

 

6

ಆಟೋಪಕರಣಗಳು

ಯುವಕ ಸಂಘ

೧ ತಿಂ

 

 

ಶೈಕ್ಷಣಿಕ

 

ಕ್ರ.ಸಂ

ವಿವರ

ಜವಾಬ್ದಾರಿ

ಸಮಯ

ಷರಾ

ಮಕ್ಕಳ ವೈಯಕ್ತಿಕ ಪ್ರಗತಿ ದಾಖಲೆ

ಎಲ್ಲಾ ತರಗತಿ ಶಿಕ್ಷಕರು

೭ ದಿನ

 

ಸಹ ಪಠ್ಯ ಚಟುವಟಿಕೆಗಳನ್ನು ಕ್ರಿಯಾ ಯೋಜನೆಯಂತೆ ಆಯೋಜನೆ

.ಶಿ.

೬ ತಿಂ

 

ಗ್ರಂಥಾಲಯ

.ಶಿ ೨

೬ತಿಂ

 

ಭಾವನಾತ್ಮಕ

ಕ್ರ.ಸಂ

ವಿವರ

ಜವಾಬ್ದಾರಿ

ಸಮಯ

ಷರಾ

ಪೋಷಕರು ಹಾಗೂ ಶಿಕ್ಷಕರಿಗೆ ಮನರಂ ಜನಾ ಆಟಗಳು

ದೈ.ಶಿ

೧ತಿಂ

 

ಮಕ್ಕಳಿಗೆ ಸ್ಥಳೀಯ ಕ್ರೀಡಾ ಪಟುಗಳಿಂದ ಶಾಲಾ ಸಮಯದ ನಂತರ ಅಭ್ಯಾಸ

ಯುವಕ ಸಂಘ

೪ ತಿಂ

 

ಮಾದರಿ ಶಾಲೆಗಳಿಗೆ ಭೇಟಿ

ಎಸ್.ಡಿ.ಎಂ.ಸಿ

೧೫ ದಿ

 

 

ಈ ಕೆಲಸದ ಹಂಚಿಕೆಯ ಜವಾಬ್ದಾರಿಯನ್ನು ಮುಖ್ಯ ಶಿಕ್ಷಕ ರಿಗೆ ವಹಿಸಲಾಯಿತು . ಮುಖ್ಯ ಶಿಕ್ಷಕರು ಪ್ರಗತಿಯನ್ನು ಪ್ರತೀ ದಿನ ಬಿ.ಆರ್.ಪಿ .ಇವರಿಗೆ ತಿಳಿಸಲು ಸೂಚಿಸಲಾಯಿತು.

ಈ ಎಲ್ಲಾ ಪ್ರಕ್ರಿಯೆಗಳಿಂದ ಇಡೀ ಶಾಲೆಯಲ್ಲಿ ಒಂದು ಹೊಸ ವಾತಾವರಣ ನಿರ್ಮಾ ಣವಾಯಿತು. ಶಿಕ್ಷಕರು ಇನ್ನಷ್ಟು ಉತ್ತೇಜಿತರಾದರು. ಶಾಲೆಯ ಅಗತ್ಯಗಳ ಪೂರೈಕೆ ಹಾಗೂ ಸಂಬಂಧ ಸುಧಾರಣೆಗಾಗಿ ಶಾಲೆಯ ಪೋಷಕ ವರ್ಗ ಹಾಗೂ ಭಾಗೀದಾರರಿಗೆ ಮನರಂಜನಾ ಆಟಗಳನ್ನು ಏರ್ಪ ಡಿಸಿ ವಿಜೇತರಿಗೆ ಬಹುಮಾನ ವಿತರಿಸಿದಾಗ, ಪೋಷಕರಲ್ಲಿ ಪ್ರಪಂ ಚವನ್ನೇ ಗೆದ್ದು ಬಂದಂಥ ಖುಷಿ ಅವರಲ್ಲಿತ್ತು.

 

 

ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರ ಸಭೆ ಕರೆದು ಕ್ರಿ ಯಾ ಯೋಜನೆಯಂ ತೆ ಚಟುವಟಿಕೆಗಳನ್ನು ಎಲ್ಲಾ ಶಿಕಕ್ಷಕರಿಗೆ ಹಂಚಲಾಯಿತು. ಪ್ರಕಲ್ಪಗಾರರಾದ ಮಂಜುನಾಥ ರವರು ಹೆಚ್ಚಿನ ಭೇಟಿಯನ್ನು ಇದೇ ಶಾ ಲೆಗೆ ನೀಡುವುದಾಗಿ ತಿಳಿಸಿದರು ಅಗತ್ಯ ಸಂದರ್ಭದಲ್ಲಿ ದೂರವಾಣಿ ಮೂಲಕ ಮುಖ್ಯ ಶಿಕ್ಷಕ ರನ್ನು ಸಂಪರ್ಕಿ ಸುವುದಾಗಿ ತಿಳಿಸಿದರು.

ಇವರೆಲ್ಲರ ಪರಿಣಾಮವಾಗಿ ಶಾಲೆಯು ಎಲ್ಲ ಕ್ಷೇತ್ರ ಗಳಲ್ಲಿ ಅಭಿವೃ ದ್ಧಿ ಹೊಂದುತ್ತಾ ಸಾಗತೊಡಗಿತು. ನೋಡ ನೋಡುತ್ತಿದ್ದಂತೆ ಈ ಶಾಲೆಯು ತಾಲ್ಲೂಕಿನಲ್ಲಿಯೇ ವಿಶಿಷ್ಠ ಸ್ಥಾನ ಪಡೆಯಿತು ಇಲಾಖೆಯ ಹಾಗೂ ಪೋಷಕರ ಪ್ರಶಂಸೆಗೆ ಒಳಗಾಯಿತು.ಪ್ರ ಕಲ್ಪ ಕೈಗೊಂಡ ಮಂಜುನಾಥ ಹಾಗೂ ಚಂದ್ರಣ್ಣ ಇ ವರಿಗೆ ಏನನ್ನೋ ಸಾಧಿಸಿದ ಸಂತೃ ಪ್ತ ಭಾವನೆ ತುಂಬಿತ್ತು. ನನಗೂ ಸಾಕಷ್ಟು ಹೊಸ ಕಲಿಕೆಯಾಗಿ, Training -Aplication -Coaching ಮಾದರಿಯ ಸ್ಪ ಷ್ಟತೆ ಉಂಟಾಗಿತ್ತು. ಇದೆಲ್ಲಾ ಕಲಿಸಿದ ಇಲಾಖೆ ಹಾಗೂ ELDPಗೆ ಧನ್ಯವಾದಗಳು.