ಸಂಗೀತವೆಂಬ ಮಹಾಸಾಗರ - 22/06/2013

ಸಂಗೀತವೆಂಬ ಮಹಾಸಾಗರ

 

ಸಂಗೀತವೆಂಬದೊಂದು ಚುಂಬಕ ಶಕ್ತಿ,

ಸಂಗಿತಕೆ ಮರುಳಾಗದಿವರಿಲ್ಲ.

ಇದರಿಂದ ದೊರೆಯುವುದು ಸಂತೋಷ ಎಲ್ಲರಿಗೂ,

ಇದುವೇ ಸಂಗೀತ ಸುಧೆಯ ಪರಿಯು.

ಸಂಗೀತ ಕಲಿಯಲು ಬೇಕು ಆಸಕ್ತಿ.,

ಇದೊಂದು ಕಲೆಯ ಬಲೆಯ ಶಕ್ತಿ,

ಇದು ಎಲ್ಲಾ ವಯೋಮಾನದವರ ಹಂಬಲ,

ಸಂಗೀತವು ಹಲವು ಪ್ರಕಾರದ ಬಲೆಯು.

ಸಂಗೀತ ನೀಡುವುದು ಮನಸ್ಸಿಗೆ ಮುದ,

ಇದಕೆ ಮನಸೋಲದವರಿಲ್ಲ,

ಇದುವೇ ಇಲ್ಲಾ ವಯೋಮಾನದವರ ಬಯಕೆ,

ಇದು ಎಲ್ಲಾ ಕಾಲದ ಜೀವಂತ ಸಂಜೀವಿನಿ.

 

ಸಂಗೀತ ಹಾಡುವುದೊಂದು ಕಲೆ,

ಸಂಗೀತ ಕೇಳುವುದೊಂದು ಹವ್ಯಾಸ,

ಇದುವೇ ಎಲ್ಲರಿಂದ ಕೋಡಿದ ಆಸಕ್ತಿ,

ಸಂಗೀತ ಯಾವಾಗಲೂ ಜೀವಂತ ಬಲೆ.

ಸಂಗೀತದಿಂದ ನಿಶ್ಯಬ್ಧ ವಾತಾವರಣ,

ಮನ- ಮನಸ್ಸುಗಳ ಐಕ್ಯತೆ,

ಇದುವೇ ಆಉಸ್ಕಾಂತ ರೀತಯ ಆಕಷFಣೆ,

ಇದುವೇ ಒಂದು ಚುಂಬಕ ಶಕ್ತಿ.

ದೊಡ್ಡಮಲ್ಲಪ್ಪ.ಎಸ್

ಪ್ರಾಂಶುಪಾಲರು

ಡಯಟ್- ಕೂಡಿಗೆ

ಕೊಡಗು- ಜಿಲ್ಲೆ

Doddamallappa.S