ಮಕ್ಕಳ ಹಕ್ಕುಗಳು ದಿನಾಂಕ- ೨೮-೮-೨೦೧೩

ಮಕ್ಕಳ ಹಕ್ಕುಗಳು                           ದಿನಾಂಕ- ೨೮-೮-೨೦೧೩
 
ಮಕ್ಕಳು ಶಿಕ್ಷಣ ಪಡೆಯುತಾ,
 ಬೌದ್ದಿಕ  ಹಾಗೂ ಮಾನಸಿಕ,
ಬೆಳವಣಿಗೆಗೆ ಸಹಕಾರಿಯಾಗುವ,
ಹಕ್ಕಿನ ಪರಿಸರ ನಿರ್ಮಾನವಾಗಬೇಕಾಗಿದೆ.
 
ತಂದೆ ತಾಯಿ -ಪೋಷಕರು,
ಪ್ರೀತಿ-ವಿಶ್ವಾಸ ಮಮತೆಯಿಂದ,
ಪೋಷಗೈಯ್ಯುತ ನವನಾಗರಿಕನಾಗಿ,
ಹೊರಹೊಮ್ಮುವ ಪರಿಸರ ನಿರ್ಮಾಣವಾಗಬೇಕು.
 
ಶಿಕ್ಷಣ -ರಕ್ಷಣೆ-ಚಿಕಿತ್ಸೆಗಾಗಿ,
ಸರ್ಕಾರಗಳು ಕಾಲಕಾಲಕೆ,
ಸೌಲಭ್ಯಗಳ ಒದಗಿಸುವ,
ಹಾದಿಯಲಿ ನಾವು ಸಹಕರಿಸಬೇಕು.
 
ಮಕ್ಕಳಿಗೆ  ಬೈದು-ತೆಗಳಿ,
ತೊಂದರೆ-ಹಿಂಸೆ ಕೊಡುವುದು,
ಕ್ಷಮಿಸಲಾಗದ ಒಂದು ಅಪರಾಧ,
ಇದ ಎಲ್ಲರೂ ಅರಿಯಬೇಕು.
 
ಮಕ್ಕಳಿಗೆ ಉಚಿತ,
ಕಡ್ಡಾಯ ಶಿಕ್ಷಣದ ಹಕ್ಕು,
ಗುಣ ಮಟ್ಟದ ಶಿಕ್ಷಣ ಒದಗಿಸುವುದು,
ನಮ್ಮ ನಿಮ್ಮೆಲ್ಲರ ಹಕ್ಕಾಗಿದೆ.
 
ಮಕ್ಕಳು ತಪ್ಪು ಮಾಡಿದಾಗ,
ತಿದ್ದುವ ತೀಡುವ,
ಪ್ರೀತಿ ವಿಶ್ವಾಸ ತೋರುವ,
ದೊಡ್ಡ ಗುಣ ನಮ್ಮದಾಗಬೇಕು.
 
ಮಕ್ಕಳ ಬದುಕುವ ಹಕ್ಕಿನಲಿ,
ಜಿವವಿಸುವ, ಆರೋಗ್ಯ ಸೇವೆ ಪಡೆಯುವ,
ಪೌಷ್ಠಿಕ ಅಹಾರ ಪಡೆಯುವ,
ಹಕ್ಕು ಹೊಂದುವುದಾಗಿದೆ.
 
ಮಕ್ಕಳ  ರಕ್ಷಣೆಯ ಹಕ್ಕಿನಲಿ,
ದಬ್ಬಾಳಿಕೆ ತೊಂದರೆ ಕಿರುಕುಳ,
ಹಿಂಸೆಗಳ ವಿರುದ್ದ ಹೋರಾಡುವ,
ದೂರು ನೀಡುವ ಹಕ್ಕು ಇದೆ.
 
ಮಕ್ಕಳ ವಿಕಾಸ ಹೊಂದುವ ಹಕ್ಕುಗಳಲಿ,
ಅಭಿಪ್ರಾಯಗಳಿಗೆ ಮನ್ನಣೆ ಪಡೆಯುತಾ,
ಬುದ್ಧಿ-ಬೌದ್ಧಿಕ ಬೆಳವಣಿಗೆಗೆ,
ಹಕ್ಕುಗಳ ಹೊಂದುವುದಾಗಿದೆ.
 
ಮಕ್ಕಳ ಹಕ್ಕುಗಳನು ಗೌರವಿಸುತಾ,
ಮನ್ನಣೆ ನೀಡುವ ಜವಾಬ್ದಾರಿ,
ಎಲ್ಲಾ ವಯಸ್ಕ ನಾಗರೀಕರ,
ಆದ್ಯ ಕರ್ತವ್ಯವೆನಿಸಿದೆ.
 
ಎಲ್ಲಾಮಕ್ಕಳಿಗೂ ಎಲ್ಲಾ,
ಹಕ್ಕುಗಳು ದೊರೆತು,
ಮುಂದೆ ನಾಡಿನ ಯುವಜನಾಂಗ,
ತಯಾರಿಸುವ ಪ್ರಯತ್ನ ನಮ್ಮದಾಗಬೇಕು.
 
ದೊಡ್ಡಮಲ್ಲಪ್ಪ.ಎಸ್
ಪ್ರಾಚಾರ್ಯರು
ಡಯಟ್- ಕೂಡಿಗೆ
ಕೊಡಗು-ಜಿಲ್ಲೆ