ಡಾ.ಸರ್.ಎಂ.ವಿಶ್ವೇಶ್ವರಯ್ಯ ದಿನಾಂಕ-15-9-2013

ಡಾ.ಸರ್.ಎಂ.ವಿಶ್ವೇಶ್ವರಯ್ಯ ದಿನಾಂಕ-15-9-2013

 

ಭಾರತಾಂಬೆಯ ಮೊಮ್ಮಗ,

ಕನ್ನಡಾಂಬೆಯ ಹೆಮ್ಮೆಯ ಪುತ್ರ,

ಇವರೇ ನಮ್ಮ ನಾಡಿನ ಧೀಮಂತ ವ್ಯಕ್ತಿ,

ಡಾ.ಸರ್.ಎಂ ವಿಶ್ವೇಶ್ವರಯ್ಯನವರು.

 

ಸರ್.ಎಂ.ವಿ. ಒಬ್ಬ ವ್ಯಕ್ತಿಯಲ್ಲ,

ಇವರು ಒಬ್ಬ ಅದಮ್ಯ ಶಕ್ತಿಯಾಗಿ,

ನಾಡಿನ ಹೆಸರನು ಅನವರತ,

ಭಾರತ ಭೂಪಟದಲಿ ಮಿಂಚಿಸಿದವರು.

 

ಮೈಸೂರು ವಿಶ್ವವಿದ್ಯಾಲಯ ನಿರ್ಮಿಸಿ,

ಮೈಸೂರು ಬ್ಯಾಂಕ್ ನು ಸ್ಥಾಪಿಸಿ,

ವಿದ್ಯಾ ಪ್ರಸಾರಕ್ಕಾಗಿ ಹಲವಾರು,

ಶಾಲಾ ಕಾಲೇಜು ಸ್ಥಾಪನೆಗೈದಿದ್ದಾರೆ.

 

ಇವರು ಹೊಂದಿದ್ದ ಅಪಾರ ಪ್ರತಿಭೆ,

ದಕ್ಷ ಹಾಗೂ ನಿಷ್ಠೆಯ ಕಾರ್ಯತತ್ಪರತೆ,

ನಿಸ್ವಾರ್ಥ ಸಮಾಜ ಸೇವೆ,

ಇಂದು ಎಲ್ಲರಿಗೂ ಮಾದರಿಯಾಗಿದೆ.

 

ಕೆ.ಆರ್.ಎಸ್. ಕಟ್ಟೆ ನಿರ್ಮಿಸಿ,

ಮಂಡ್ಯ, ಮೈಸೂರು ಜಿಲ್ಲೆಗಳ,

ಜನತೆಗೆ ಜೀವಜಲ ಪೊರೈಸಿ,

ನಾಡಿನ ಸೇವೆಗೈದ ಸಾಧಕರಿವರು.

 

ಅದ್ಬುತ ಬುದ್ಧಿ ಶಕ್ತಿ,

ಜ್ಞಾಪಕಶಕ್ತಿ ಹೊಂದಿ,

ಶಿಸ್ತು ಕಾರ್ಯಶ್ರದ್ದೆಯನು,

ಉಸಿರಾಗಿಸಿಕೊಂಡ ಕಾಯಕ ಯೋಗಿ ಇವರು.

 

ಮೈಸೂರು ರಾಜ್ಯದ ದಿವಾನರಾಗಿ,

ಇವರು ನಿರ್ವಹಿಸಿದ ಕಾಯಕಗಳು,

ಹತ್ತಾರು ಹಲವಾರು,

ಇವರಿಗೆ ಇವರೇ ಸಾಟಿ.

 

ಜನ ವಿದ್ಯೆ ಕಲಿಯ ಬೇಕು,

ವಿಜ್ಞಾನ-ತಂತ್ರಜ್ಞಾನ,

ಅಳವಡಿಸಿಕೊಂಡು ಜನರ,

ಏಳ್ಗೆಗೆ ಜಪಮಂತ್ರಗೈದ ಸಾಧಕರಿವರು.

 

ಕಾಯಕದಲಿ ಶ್ರದ್ಧೆ

ನಿರ್ಮಲ ಪ್ರಾಮಾಣೀಕತೆ,

ದೂರದೃಷ್ಠಿ ಮತ್ತು ಸಾಮರ್ಥ್ಯಗಳನು,

ಉಸಿರಾಗಿಸಿಕೊಂಡವರು ಸರ್.ಎಂ.ವಿ.

 

ಭದ್ರಾವತಿಯ ಕಬ್ಬಿಣ ಹಾಗೂ,

ಉಕ್ಕಿನ ಕಾರ್ಖಾನೆ ನಿರ್ಮಿಸಿ,

ಮೈಸೂರಲಿ ಗಂಧದೆಣ್ಣೆ,

ಹಲವಾರು ಕಾರ್ಖಾನೆಗಳ ಸ್ಥಾಪಕರಾಗಿದ್ದಾರೆ.

 

 

ಶಿಸ್ತು, ಪ್ರಮಾಣೀಕತೆ,

ಹಿಡಿತ ಛಲ ಸಾಧಿಸಬೇಕೆಂಬ,

ಹೆಬ್ಬಯಕೆಯನು ಹೊಂದಿ,

ಮುನ್ನುಗ್ಗಿದ ಮಹಾನುಭಾವ ಸರ್.ಎಂ.ವಿ.

 

ಬ್ರಿಟೀಷ್ ಆಳ್ವಿಕೆಯಲ್ಲಿ,

ಅವರ ವಿರೋಧದ ನಡೆವೆಯೂ,

ಸಾಧನೆಗೈದು ದೇಶದ ಹೆಸರು,

ಎತ್ತಿ ಹಿಡಿದವರು ಸರ್.ಎಂ.ವಿ.

 

ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯ,

ಜಯಚಾಮರಾಜೇಂದ್ರ ಕಾಲೇಜು,

ಹೀಗೆ ಹಲವಾರು ತಾಂತ್ರಿಕ ಶಿಕ್ಷಣ ಸಂಸ್ಥೆಗಳ,

ಸ್ಥಾಪನೆ ಅವರ ಸಾಧನೆಯ ಕೊಡುಗೆಗಳಾಗಿವೆ.

 

ವಾಣಿವಿಲಾಸ ಸಾಗರದ ನೀಲಿನಕ್ಷೆ ತಯಾರಿಕೆ,

ಹೈದ್ರಾಬಾದ್ ನ ಮೂಸಾನದಿಗೆ ಅಣೆಕಟ್ಟು,

ಜೋಗ್ ಜಲಪಾತದ ವಿದ್ಯುತ್ ಗಾರದ ಕ್ರಿಯಾಯೋಜನೆಯ,

ಹರಿಕಾರರಿವರು ನಮ್ಮಯ ಸರ್.ಎಂ.ವಿ.ಯವರು.

 

 

ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜು,

ಮೈಸೂರಿನ ಚಾಮರಾಜೇಂದ್ರ ಕಾಲೇಜುಗಳು,

ಹೀಗೆ ಹಲವಾರು ತಾಂತ್ರಿಕ ಶಿಕ್ಷಣ ಸಂಸ್ಥೆಗಳು,

ಅವರ ಶೈಕ್ಷಣಿಕ ಸಾಧನೆಯ ಕೊಡುಗೆಗಳಾಗಿವೆ.

 

 

ಇವರು ಒಬ್ಬ ಇಂಜಿನಿಯರಾಗಿ,

ನಿರ್ಮಿಸಿದ ಕಟ್ಟಡಗಳು ರಸ್ತೆಗಳು,

ಸೇತುವೆಗಳು ಹಿಂದಿಗೂ-ಇಂದೆಂದಿಗೂ,

ಅಜರಾಮರವಾಗಿ ಉಳಿದಿವೆ.

 

ಬೆಂಗಳೂರು- ಮೈಸೂರಲಿ,

ಮಾರುಕಟ್ಟೆ-ಬೀದಿ,

ಉದ್ಯಾನವನ- ನಗರ ನೈರ್ಮಲ್ಯಗಳ,

ಸೌಂದರ್ಯ ಒದಗಿಸಿದವರು ಸರ್.ಎಮ್.ವಿ.

 

ಕಾರ್ಯಯೊಜನೆಗೆ ತಕ್ಕ ಪೂರ್ವಸಿದ್ಧತೆ,

ಕ್ರಿಯಾಯೋಜನೆ, -ಆಯವ್ಯಯ ನಿರ್ಧಾರಗಳ,

ಮೂಲಕ ಕಾರ್ಯಗಳನು ನಿರ್ದಿಷ್ಠ,

ಸಮಯದಲ್ಲಿ ಮುಗಿಸುವ ಚಾಕಚಕ್ಯತೆ ಹೊಂದಿದ್ದರು.

 

ಸರಿಯಾದ ದಾರಿ ಎಂದು ಕಂಡೊಡನೆ,

ಹಠಕ್ಕೆ ಬಿದ್ದವರಂತೆ ಕೈಗೆತ್ತಿಕೊಂಡ,

ಕಾರ್ಯಗಳನು ಮುಗಿಸುವರು,

ನಿದ್ದೆ-ವಿಶ್ರಾಂತಿ ಮರೆತು ಸಾಗಿದವರು ಸರ.ಎಮ್.ವಿ.

 

ಮೈಸೂರು ದಿವಾನರಾಗಿ,

ಉತ್ತಮ ಆಡಳಿತಗಾರರಾಗಿ,

ಇವರ ಪ್ರತಿಭೆಗೆ -ನಿಷ್ಠೆಗೆ,

ಬ್ರಿಟೀಷ್ ಸರ್ಕಾರ ತಲೆದೂಗಿತು.

 

ವಿಜ್ಞಾನದಲಿ ಹಿಂದುಳಿದ ಕಾಲದಲಿ

ಆಂಗ್ಲರ ಆಡಳಿತದಲಿ

ಹಲವು ಹನ್ನೊಂದು ಜನರ ವಿರೋಧದ,

ನಡುವೆಯು ಧೀಮಂತ ವ್ಯಕ್ತಿಯಾಗಿದ್ದರು,.

 

ವಿದ್ಯೆ ಯೇ ಜನರ ಶಕ್ತಿ,

ಎಂದು ಬಗೆದು ಹಲವಾರು,

ಶಾಲಾ ಕಾಲೇಜು ತೆರೆದು,

ವಿದ್ಯಾರ್ಜನೆಗೆ ದಾರಿ ತೋರಿದರು.

 

ಮೈಸೂರು ಸಂಸ್ಥಾನದಲಿ,

ಮೋಟಾರು ತಯಾರಿಕಾ ಕಾರ್ಖಾನೆ,

ವಿಮಾನ ತಯಾರಿಕಾ ಕಾರ್ಖಾನೆ,

ಸ್ಥಾಪಿಸಿದ ಸಾಧಕರಿವರು.

 

ನಾಡಿನ ಅಭಿವೃದ್ಧಿಯ ಹರಿಕಾರ,

ಕನಸನು ನನಸಾಗಿಸಲು,

ಹಗಲಿರುಳು ದುಡಿದ,

ಧೀಮಂತ ವ್ಯಕ್ತಿ ಸರ್.ಎಮ್.ವಿ

 

ಕಾಯಕಗಳ ಸಾಧಿಸಲು,

ದೂರದೃಷ್ಠಿ ಮತ್ತು ಸಾಮರ್ಥ್ಯ,

ಆಳವಾದ ಶ್ರದ್ಧೆಯೊಡನೆ ಸಾಗಿ ದ,

ನಿರ್ಮಲ ವ್ಯಕ್ತಿಯೇ ನಮ್ಮ ಸರ್.ಎಂ.ವಿ

 

ಗಂಧದೆಣ್ಣೆ ಕಾರ್ಖಾನೆ,ಸಾಬೂನು ಕಾರ್ಖಾನೆ,

ಲೋಹದ ಕಾರ್ಖಾನೆ, ಭದ್ರಾವತಿಯ,

ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ,

ರೂವಾರಿಗಳು ಸರ್.ಎಂ.ವಿ.

 

ನಮ್ಮ ದೇಶದ ಶಾಪ ಎಂದರೆ,

ಸೋಮಾರಿತನ ಎಂದರಿತು,

ಇದರಿಂದ ಹೊರಬರಲು,

ಜನಜಾಗೃತಿ ಮೂಡಿಸಿದವರು ಸರ್.ಎಂ.ವಿ.

 

ಕನ್ನಡ ನಾಡಿನ ಹೆಸರು,

ದೇಶ ವಿದೇಶಗಳಲಿ ವಿಖ್ಯಾತರಾಗಲು,

ಕಾರಣರಾಗಿ ಇಂದಿಗೂ ಇತಿಹಾಸದಲಿ,

ಸರ್.ಎಂ.ವಿ ಹೆಸರು ಅಜರಾಮರವಾಗಿದೆ.

 

ದೇಶ ವಿದೇಶದವರು,

ತಲೆದೂಗುವಂತಹ ಕಾಯಕಗಳನು,

ಮಾಡಿದ ಅವರ ಹೆಸರು ಭಾರತದ,

ಚರಿತ್ರೆಯಲಿ ಹೆಸರು ಅಜರಾಮರವಾಗಿದೆ.

 

ಕೃಷಿ-ಸಾರಿಗೆ ವ್ಯವಸ್ಥೆ,

ರಸ್ತೆ-ಸೇತುವೆ- ಆರೋಗ್ಯ,

ವಿದ್ಯುತ್ ಕೇತ್ರಗಳ ಅಭಿವೃದ್ಧಿಗೆ,

ಭಗೀರಥ ಪ್ರಯತ್ನ ಮಾಡಿದವರು

 

ಸರ್ಕಾರದ ಸೌಲಭ್ಯಗಳನು,

ಇತಮಿತವಾಗಿ ಬಳಸುತಾ,

ಖಾಸಗಿ-ವೈಯಕ್ತಿಕ ಬದುಕಿಗೆ,

ಸ್ವಂತ ಖರ್ಚುನು ಭರಿಸುವವರಾಗಿದ್ದರು.

 

ನೂರ ಎರಡು ವರ್ಷ,

ಬದುಕಿ ಬಾಳಿ,

ಇಡೀ ಮನುಕುಲಕೆ,

ಆರ್ದಶಪ್ರಾಯರಾದವರು ಸರ್.ಎಂ.ವಿ.

 

 

ದೊಡ್ಡಮಲ್ಲಪ್ಪ.ಎಸ್

ಪ್ರಾಚಾರ್ಯರು

ಡಯಟ್-ಕೂಡಿಗೆ

ಕೊಡಗು-ಜಿಲ್ಲೆ