ಮಳೆಕೊಯ್ಲು ಪ್ರಯೋಗ ದಿನಾಂಕ 17-7-2013
ಮಳೆಕೊಯ್ಲು ಪ್ರಯೋಗ ದಿನಾಂಕ 17-7-2013
ಮಳೆ ಕೊಯ್ಲು ಒಂದು ವೈಜ್ಞಾನಿಕ ಕ್ರಮ,
ಇದನು ಎಲ್ಲರೂ ಅನುಸರಿಸಿ,
ನೀರಿನ ಸದ್ಭಳಕೆಯನು ಮಾಡಿಕೊಳ್ಳೋಣ,
ನಮ್ಮಯ ಇಚ್ಛಾ ಶಕ್ತಿಯಲಿ.
ಮನೆ ಕಛೇರಿ ಚಾವಣಿಗಳಲಿ,
ಹರಿದುಹೋಗುವ ನೀರನು,
ಒಂದೆಡೆ ಸಂಗ್ರಹಿಸುವುದೇ,
ಮಳೆ ಕೊಯ್ಲಿನ ಉದ್ದೇಶ.
ನೀರು ಒಂದು ಅಮೃತ ಬಿಂದು,
ಇದು ಬೇಕು ಸಕಲ ಪ್ರಾಣಿಪಕ್ಷಿಗಳಿಗೆ,
ಅಂದಾಗ ನೀರಿನ ಸದ್ಭಳಕೆಯನು,
ಮಾಡಿಕೊಳ್ಳೋಣ ಅವಿರತ- ಅನವರತ.
ಮಳೆ ಕೊಯ್ಲಿನ ರೂಪದಿ,
ನೀರನು ಒಂದೆಡೆ ಸಂಗ್ರಹಿಸಿ,
ಅವಶ್ಯಕತೆ ಇದ್ದಾಗ ನಾವು,
ಬಳಸೋಣ ನಮ್ಮಗಳ ಬಳಕೆಗೆ.
ಮಳೆ ನೀರನು ವೈಜ್ಞಾನಿಕವಾಗಿ,
ಸಂಗ್ರಹಿಸಿ ಕ್ರಮಗೊಂಡರೆ,
ನಂತರ ಅದರ ಉಪಯೋಗ,
ಬಹುದಿನಗಳ ಕಾಲ ನಮಗೆ.
ಮಳೆಕೊಯ್ಲು ಪ್ರಯೋಗಕೆ,
ನಮ್ಮ ಇಚ್ಛಾಶಕ್ತಿ ಒಂದೆಡೆ,
ಇನ್ನೊಂದೆಡೆ ನಮ್ಮ ಬುದ್ದಿ ಶಕ್ತಿ,
ಬಳಸಬೇಕು ವೈಜ್ಞಾನಿಕವಾಗಿ.
ಶಾಲಾ ಕಾಲೇಜು,
ಮನೆಮಠ ಕಛೇರಿ ಶಾಲೆಗಳ,
ತಾರಸಿ ಮೇಲೆ ವ್ಯರ್ಥವಾಗಿ ಹೋಗುವ,
ನೀರನು ಸಂಗ್ರಹಿಸಿಡುವುದೇ ಮಳೆಕೊಯ್ಲು.
ದೊಡ್ಡ ತೊಟ್ಟಿಯಲಿ,
ನೀರನು ವೈಜ್ಞಾನಿಕವಾಗಿ ಸಂಗ್ರಹಿಸಿ,
ಶುದ್ದೀಕರಿಸಿದ ನೀರನು,
ನಾವು ಬಳಸೋಣ ಮಳೆಕೊಯ್ಲು ರೂಪದಿ.
ದೊಡ್ಡಮಲ್ಲಪ್ಪ.ಎಸ್.
ಪ್ರಾಚಾರ್ಯರು
ಡಯಟ್-ಕೂಡಿಗೆ
ಕೊಡಗು-ಜಿಲ್ಲೆ
Doddamallappa.S
Principal
- doddamallappa's blog
- Log in to post comments