ಬದ್ಧತೆ (Commitment) ದಿನಾಂಕ ೩೧-೭-೨೦೧೩
ಬದ್ಧತೆ (Commitment) ದಿನಾಂಕ ೩೧-೭-೨೦೧೩
ಬದ್ಧತೆ ಎಂದರೆ ತೊಡಗಿಸಿಕೊಳ್ಳುವಿಕೆ,
ಇದಕೆ ಬೇಕು ಮನೋಇಚ್ಛೆ,
ಮನೋಸ್ಥೈರ್ಯ ಇದಕೆ ಬೇಕು,
ಇದುವೇ ಸಾಧಕನ ಜಪಮಂತ್ರ.
ಕಾಯಕದಲಿ ಮೇಲುಕೀಳುಗಳಿಲ್ಲ,
ಬದ್ಧತೆಯಲಿ ತೊಡಗಿಸಿಕೊಂಡು ,
ಕಾರ್ಯನಿರ್ವಹಣೆ ಮುಖ್ಯ,
ಇದುವೇ ಜಯದ ಮಂತ್ರ.
ಆನೆಯಂತಹ ಶರೀರದಲ್ಲಿ,
ಆಡಿನಂತಹ ಮನಸ್ಸಿರಬಾರದು,
ಆಡಿನಂತಹ ದೇಹದಲಿ,
ಆನೆಯಂತಹ ಮನಸ್ಸಿರಬೇಕು.
ಶರೀರ ಹೇಳಿದಂತೆ,
ಮನಸ್ಸು ಕೇಳಬಾರದು,
ಮನಸ್ಸು ಹೇಳಿದಂತೆ ,
ಶರೀರ ಕೇಳಬೇಕು.
ಮನೋಇಚ್ಚೆ- ಮನೋಸ್ಥೈರ್ಯಗಳು,
ಸಾಧಕನ ಜಪಮಂತ್ರಗಳು,
ಇದುವೇ ಕಾಯಕವೇ ಕೈಲಾಸವೆಂಬ,
ಮಂತ್ರಕೆ ದಾರಿ..
ಕಾಯಕದಿಂದ ಆರೋಗ್ಯ,
ಕೆಲಸದಿಂದ ಮಾನಸಿಕ ನೆಮ್ಮದಿ ,
ಕಾಯಕದಿಂದ ಸಿರಿವಂತಿಕೆ ,
ಕಾಯಕವೇ ಮನುಷ್ಯನ ಉಸಿರು.
ದೊಡ್ಡಮಲ್ಲಪ್ಪ.ಎಸ್
- doddamallappa's blog
- Log in to post comments