ಈ ಶಾಲೆಯ ಮುಖ್ಯ ಶಿಕ್ಷಕರು ರಜಾ ಹಾಕುವುದೇ ಅಪರೂಪ! ಹಾಕಿದರೆ ಅದೇ
ವಿಶೇಷ.ಸಹಶಿಕ್ಷಕರೂ ಅಷ್ಟೇ, ಡಿಸೆಂಬರ್ ತಿಂಗಳ ಅಂತ್ಯಕ್ಕೆ ರಜಾ ಉಳಿದಿರುತ್ತದೆ!
ಹೊಸವರ್ಷದ ಆರಂಭದ ದಿನ ,ಹಿಂದಿನ ವರ್ಷ ರಜಾ ಉಳಿಸಿ, ಶಾಲೆಯ ಮಾನವ ದಿನಗಳನ್ನು
ಉಳಿಸಿದ್ದಕ್ಕೆ ,ಶಾಲೆಯ ಅಭಿವೃದ್ಧಿಗೆ ಸಹಕರಿಸಿದ್ದಕ್ಕೆ ಸಹಶಿಕ್ಷಕರನ್ನು ಗುಲಾಬಿ
ಹೂವು ನೀಡಿ, ಮುಖ್ಯ ಶಿಕ್ಷಕರು ಅಭಿನಂದಿಸುವ ಸಂಪ್ರದಾಯವಿದೆ.
ಮುಖ್ಯ ಶಿಕ್ಷಕರು ಬೆಳಗ್ಗೆ 8.3೦ ರ ಒಳಗೆ ಶಾಲೆಯಲ್ಲಿ ಹಾಜರಿರುತ್ತಾರೆ.ಸಾಯಂಕಾಲ
6ರ ನಂತವೇ ಶಾಲೆಯಿಂದ ಹೊರಡುತ್ತಾರೆ.ಶನಿವಾರ ಪೂರ್ಣದಿನ &ಭಾನುವಾರ ಶಾಲೆಯಲ್ಲಿ ಇವರು
ಲಭ್ಯ.ಸಹಶಿಕ್ಷಕರೂ ಅಷ್ಟೇ.ಪಠ್ಯ &ಪಠ್ಯೇತರ ಚಟುವಟಿಕೆಯಲ್ಲಿ ಇವರು ಸದಾ ನಿರತ.
ವಿದ್ಯಾರ್ಥಿಗಳಲ್ಲಿ ಶಾಲೆಯ ಬಗ್ಗೆ ಅಭಿಮಾನ ,ಕಾಳಜಿ,ಶಾಲೆಯ ಸ್ವಚ್ಛತೆ ಬಗ್ಗೆ ಸದಾ ಗಮನ.
ಭೂತಗನ್ನಡಿ ಹಿಡಿದು ಹುಡುಕಿದರೂ ಸಹ ನಿಮಗೆ ಶಾಲೆಯ ಯಾವುದೇ ಕೋಣೆಯಲ್ಲಿ ಸಹ ಒಂದು
ಕಡ್ಡಿ ಕಸ,ಜೇಡರ ಬಲೆ ಎಲ್ಲಿಯೂ ಕಾಣಿಸದು.ಶಾಲೆಯಲ್ಲಿ ಉಪಯೋಗವಾಗದೇ ಉಳಿದ ಕೊಠಡಿ,ಸ್ಥಳ
ಇಲ್ಲವೇ ಇಲ್ಲ. ಸ್ವಚ್ಛತೆಗೆ ಮೊದಲ ಆದ್ಯತೆ.ವರ್ಷದ ಯಾವುದೇ ದಿನ ಈ ಶಾಲೆಗೆ ಭೇಟಿ
ನೀಡಿದರೂ ಇಲ್ಲಿ ಸ್ವಚ್ಛತೆ ಇದೇ ರೀತಿ ಇರುತ್ತದೆ.
ಶಾಲೆಯ ಕಟ್ಟಡ,ವಾತಾವರಣ ನೋಡಿದರೆ ನಿಮಗೆ ಇದು ಖಾಸಗಿ ಶಾಲೆ ಎನಿಸುತ್ತದೆ.
ವಾರದಲ್ಲಿ ಕನಿಷ್ಠ 01 ,ಅಥವಾ ತಿಂಗಳಲ್ಲಿ ಕನಿಷ್ಠ ಎರಡಾದರೂ ವಿವಿಧ ಕಾರ್ಯಕ್ರಮಗಳು
ನಡೆಯುತ್ತವೆ.,ಹಾಗೆಂದು ಪಾಠಗಳು ಅಡಚಣೆ ಇಲ್ಲದೇ ಸಾಗಿವೆ.
1996-97ನೇ ಸಾಲಿನಲ್ಲಿ ಆರಂಭವಾದ ಈ ಶಾಲೆಯ ಭೌತಿಕ ಪ್ರಗತಿ, ಶಾಲಾ ಪ್ರಗತಿ ಅದ್ಭುತ,
ಆಶ್ಚರ್ಯಕರ.ದಾನಿಗಳು ನೀಡಿದ ಹಣವೇ 60ಲಕ್ಷವನ್ನು ದಾಟುತ್ತದೆ.ದಾನಿಗಳ ನೆರವಿನಲ್ಲಿ
ಕಟ್ಟಲಾದ ಸಭಾಭವನ ದಶದೀಪ್ತಿ (ಶಾಲೆ ಆರಂಭವಾದ ಹತ್ತನೇ ವರ್ಷದಲ್ಲಿ ಕಟ್ಟದ್ದಕ್ಕಾಗಿ ಈ
ಸಭಾಭವನದ ಹೆಸರು ದಶದೀಪ್ತಿ),ದಾನಿಗಳ,ಜನಪ್ರತಿನಿಧಿಗಳ ನೆರವಿನಲ್ಲಿ ಕಟ್ಟಲಾದ
ಶ್ರದ್ಧಾವಾಚನಾಲಯ, ವಿಜ್ಞಾನ ಪ್ರಯೋಗಾಲಯ, ಸರಕಾರದ ಹಣದ ಜೊತೆ ದಾನಿಗಳ,
ಜನಪ್ರತಿನಿಧಿಗಳ ನೆರವಿನ ಬಿಸಿಯೂಟ ಕೊಠಡಿ ಅನ್ನಪೂರ್ಣ( ಸಂಪೂರ್ಣ,ಸುಸಜ್ಜಿತ
ಬಾಯ್ಲರ್ ವ್ಯವಸ್ಥೆ,ಹೊಂದಿದೆ).
ಮಧ್ಯಾಹ್ನ ಬಿಸಿಯೂಟ ವೆಂದರೆ ಅದು ಮೃಷ್ಠಾನ್ನ ಭೋಜನ. ಪ್ರತಿ ಮಧ್ಯಾಹ್ನ ಮಜ್ಜಿಗೆ
,ಉಪ್ಪಿನಕಾಯಿ ವ್ಯವಸ್ಥೆ, ವಾರದಲ್ಲಿ ಕನಿಷ್ಠ ಎರಡು ದಿನ ಪಾಯಸ, ಪ್ರತಿ ಶುಕ್ರವಾರ
ದಾಲ್ &ಇತರ ವ್ಯವಸ್ಥೆ . ಪ್ರಯೋಜನ ಪಡೆಯುವ ವಿದ್ಯಾರ್ಥಿಗಳು 650 .(ಸಂಯುಕ್ತ
ಪ್ರೌಢಶಾಲೆ-ಪ್ರೌಢಶಾಲಾ ವಿಭಾಗ-350ಕ್ಕೂ ಹೆಚ್ಚು+ಪ್ರಾಥಮಿಕ).
ಕ್ರೀಡೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪಾಠ ಎಲ್ಲದರಲ್ಲಿ ಇಲ್ಲಿನ
ವಿದ್ಯಾರ್ಥಿಗಳು ಎತ್ತಿದ ಕೈ.ಗಳಿಸಿದ ಪ್ರಶಸ್ತಿಗಳು , ಫಲಕಗಳು ಹತ್ತು
ಹಲವು.ಅವುಗಳನ್ನು ಜೋಡಿಸಿದ ರೀತಿ ಅತಿ ವಿಶಿಷ್ಠ.
ಮಾಹಿತಿ ಸಿಂಧು ಕಾರ್ಯಕ್ರಮವನ್ನು ಸ್ವಯಂ SDMCನೆರವಿನಲ್ಲಿ ಇಲ್ಲಿಯವರೆಗೂ
ಮುಂದುವರೆಸಿದ್ದಾರೆ.ವಿದ್ಯಾರ್ಥಿಗಳೇ ಪ್ರಾಜೆಕ್ಟರ್ ಬಳಸಿ ಪಾಠಮಾಡುತ್ತಾರೆ.ಸ್ವಯಂ
ಕಲಿಕೆ ಸಹ ಇದೆ.
ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ.
ಎಸ್,ಎಸ್ಎಲ್ ಸಿ ಫಲಿತಾಂಶ ಇಲ್ಲಿಯವರೆಗೆ ಸರಾಸರಿ ಶೇಕಡ 95. 2011-12ರಲ್ಲಿ ಶೇಕಡ 100.
ಪ್ರತಿದಿನ ಪ್ರಾರ್ಥನೆ ವೇಳೆ ಮುಖ್ಯ ಶಿಕ್ಷಕರೂ ಸೇರಿದಂತೆ ಎಲ್ಲ ಸಹಶಿಕ್ಷಕರು
ದಿನಕ್ಕೊಬ್ಬರಂತೆ ವಿಶೇಷ ನುಡಿಗಳನ್ನು ,ಜ್ಞಾನವನ್ನು ನೀಡುವ ಸಂಪ್ರದಾಯವಿದೆ.ಇನ್ನು
ಹಲವು ವೈಶಿಷ್ಠ್ಯಗಳನ್ನು ಈ ಶಾಲೆ ಹೊಂದಿದೆ.ಸುಂದರ ಸಭಾ ವೇದಿಕೆ,ಸ್ವಾಗತ ಗೋಪುರ
ಎಲ್ಲವೂ ಇದೆ.ಶಾಲೆಯಲ್ಲಿ ಶಿಸ್ತು ,ಅಲ್ಲಿನ ವಾತಾವರಣ ಬೇರೆ ಎಲ್ಲಿ ಸಹ ಕಾಣಸಿಗದು.
ಅಕ್ಷರಶಃ ಇದೊಂದು ದೇವಸ್ಥಾನ. ಅಷ್ಟು ಪವಿತ್ರವಾಗಿದೆ. . ಹೆಸರಿಗೆ ತಕ್ಕ ಹಾಗೆ
ಸುಂದರ ಈ ಶಾಲೆ ,ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ "ಕಾರ್ಕಳ ಸುಂದರ ಪುರಾಣಿಕ
ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ,ಕಾರ್ಕಳ .ನಿಜವಾಗಿ
"ಜ್ಞಾನ ದೇಗುಲವೆಂದರೆ ಅದೇ ಇದು.ಇದುವೇ ಅದು.”
ನಾನು ಈ ಶಾಲೆಯಲ್ಲಿ ಸಹಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೆ ಎನ್ನುವುದು ನನಗೆ ಹೆಮ್ಮೆಯ ಸಂಗತಿ.
ಈ ಶಾಲೆಯನ್ನು ಕಟ್ಟಿ , ಸುಮಾರು 13 ವರ್ಷಕ್ಕೂ ಹೆಚ್ಚು ಕಾಲ ಈ ಶಾಲೆಯ ಹತ್ತು ಹಲವು
ಅಭಿವೃದ್ಧಿಗೆ ಕಾರಣಕರ್ತರು ಬೆಂಗಳೂರಿನ ,ಮಾಗಡಿಯ ಶ್ರೀ K.L ಬೋರೇಗೌಡರವರು. ಅವರ
ಆದರ್ಶಗಳು ಇಲ್ಲಿ ಹಾಗೆ ಮುಂದುವರಿಯುತ್ತಿವೆ . ಬೋರೇಗೌಡರ ಆದರ್ಶ ಈ ಶಾಲೆಯ
ಜೀವಾಳ..ಪ್ರಸ್ತುತ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ
ಹರ್ಷಿಣಿ ಜೈನ್ ಇವರು ಗಣಿತ ಶಿಕ್ಷಕಿ ಸಹ.ಇವರ ವೈಶಿಷ್ಠ್ಯವೆಂದರೆ ಇಲ್ಲಿಯವರೆಗೆ ಇವರು
ಗಣಿತ ಪಾಠ ಮಾಡುವಾಗ ಕೈಯಲ್ಲಿ ಕೋಲು ಹಿಡಿದಿಲ್ಲ ಎನ್ನುವುದು.
ಕರ್ನಾಟಕದ ಎಲ್ಲ ಶಾಲೆಗಳು ಈ ಶಾಲೆಯ ಮಾದರಿಯಲ್ಲಿ ಅಭಿವೃದ್ಧಿ ಹೊಂದಬೇಕು. ಎಲ್ಲ ಕಡೆ
SDMC, ದಾನಿಗಳು, ,ಸಹಶಿಕ್ಷಕರು ,ಪಾಲಕರು ಸಹಕರಿಸಿದರೆ ಆಗ ಇನ್ನಷ್ಟು ಶಾಲೆಗಳು
ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ.
ಪ್ರವಾಸಕ್ಕೆ ಅಥವಾ ಇತರೆ ಕಾರಣಗಳಿಗೆ ಉಡುಪಿ ಜಿಲ್ಲೆಗೆ ಬಂದರೆ ಖಂಡಿತ ಈ ಶಾಲೆಗೆ
ಭೇಟಿ ಕೊಡುವಿರಲ್ಲವೇ?
ಶಾಲಾ ವಿಳಾಸ
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ, ಕಾರ್ಕಳ
ಉಡುಪಿ ಜಿಲ್ಲೆ
ಅಂಚೆ:ಕಾರ್ಕಳ
ದೂರವಾಣಿ:08258-235034
Email:kspmghs_pervaje@yahoo.in
--