GHS Girls Gurumitkal, KGB Bank

From Karnataka Open Educational Resources
Jump to navigation Jump to search

Objective of visit

Discussions with KGB bank team

ನಾವು ಬ್ಯಾಂಕನ ಮಾಹಿತಿ ತಿಳಿಯುವುದಕ್ಕೆ 18 ಜನ ಕೃಷ್ಣಾ ಗ್ರಾಮೀಣ ಬ್ಯಾಂಕ್ ಹೋಗಿದ್ದೇವು. ಕೃಷ್ಣ ಗ್ರಾಮೀಣ ಬ್ಯಾಂಕ್ 1978 ರಲ್ಲಿ ಪ್ರಾರಂಭವಾಗಿದೆ. ಇದು ಮೊದಲು Private Bank ಆಗಿತ್ತು. ಇತ್ತೀಚಿನ ಕಾಲದಲ್ಲಿ ಸರಕಾರಿ ಬ್ಯಾಂಕ್ ಆಗಿದೆ. ಅದರ ಬಗ್ಗೆ ನಮಗೆ ಪರಿಚಯ ಮಾಡಿಕೊಟ್ಟವರು ಪಿ.ಜೆ ದೇಸಾಯಿ ಅವರು 33 ವರ್ಷ ಮ್ಯಾನೆಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿ ಕೆಲಸ ನಿರ್ವಹಿಸುತ್ತಿರುವವರು 4 ಜನ.
ವ್ಯವಸ್ಥಾಪಕರು : ಇವರು ಎಲ್ಲಾ ಬ್ಯಾಂಕನ ಆಗು ಹೋಗುಗಳನ್ನು ನೋಡುವುದು.
ರೂರಲ್ ಡೆವಲೆಪ್‌ಮೆಂಟ್ ಅಧಿಕಾರಿ, ಗ್ರಾಮೀಣ ಅಭಿವೃದ್ದಿ ಅಧಿಕಾರಿ.
ಗುಮಾಸ್ಥ ಕ್ಯಾಸಿಯರ್
ಸಂದೇಶ ವಾಹಕ (ಪುನೆ)
ಕೃಷ್ಣ ಗ್ರಾಮೀಣ ಬ್ಯಾಂಕ ಕರ್ನಾಟಕದ ಗುಲಬರ್ಗಾ ಮತ್ತು ಬೀದರ್‌ಗೆ ವ್ಯಾಪ್ತಿ ಆಗಿದೆ.
ಈ ಬ್ಯಾಂಕನಲ್ಲಿ 3 ಸರಕಾರಿಗಳು ಕಾರ್ಯ ನಿರ್ವಹಿಸುತ್ತವೆ.
ಕೇಂದ್ರ ಸರಕಾರ.
ರಾಜ್ಯ ಸರಕಾರ.
ಪ್ರವರ್ತಕ ಸರಕಾರ.
ಈಗ ಕೃಷ್ಣಾ ಗ್ರಾಮೀಣ ಬ್ಯಾಂಕ್ 9 ಜಿಲ್ಲೆಯಲ್ಲಿ ವ್ಯಾಪ್ತಿ ಹೊಂದುತ್ತಿದೆ.

1. ಬೀದರ್
2. ಗುಲಬರ್ಗಾ
3. ಬಳ್ಳಾರಿ.
4. ಕೊಪ್ಪಳ.
5. ಕೋಲಾರ್.
6. ಶಿವಮೊಗ್ಗ.
7. ಚಿಕ್ಕ ಬಳ್ಳಾಪುರ.
8. ಚಿತ್ರದುರ್ಗಾ.
9. ಕೇರಳ.

ಖಾತೆಗಳಲ್ಲಿ ವಿಧಗಳು : 1. ಉಳಿತಾಯ ಖಾತೆ.
2. ಮುದ್ದತ್ತು ಖಾತೆ.
3. ವಿಶೇಷ ಮುದ್ದತ್ತು ಖಾತೆ.
4. ಆವರ್ತಕ ನಿರ್ವಹಣೆ ಖಾತೆ.

ಉಳಿತಾಯ ಖಾತೆಯನ್ನು ತೆಗೆಯಲು :- ಗುರುತಿನ ಚೀಟಿ, ರೇಷನ್ ಕಾರ್ಡ್ ಮತ್ತು ಆಧಾರ ಕಾರ್ಡ್ ಅಥವಾ ಪಾಸ್ ಪೋರ್ಟ್ ಡ್ರಾವಿಂಗ್ ಲೈಸನ್ಸ್ ಮತ್ತು ದಾಖಲಾತಿಗಳು. ಉಳಿತಾಯ ಖಾತೆಯನ್ನು ತೆಗೆಯಲು ಕನಿಷ್ಟ 1000 ರೂ. ಇರಬೇಕು.

  • ಉಳಿತಾಯ ಖಾತೆಯಲ್ಲಿ ಹಣ ತೆಗೆಯಲು ಪಾಸ್ ಬುಕ್‌ ಅನ್ನು ಖಡ್ಡಾಯವಾಗಿ ಸಂಗಡ ತರಬೇಕು. ಇಲ್ಲದಿದ್ದರೆ ಉಳಿತಾಯ ಖಾತೆಯಲ್ಲಿರುವ ಹಣ ಕೊಡಲಾಗುವುದಿಲ್ಲ.
  • ಮುದ್ದತ್ತು ಖಾತೆ : ಮುದ್ದತ್ತು ಖಾತೆಯಲ್ಲಿ ಜಂಟಿಯಾಗಿ ಕೂಡ ಖಾತೆ ತೆಗೆಯವಹುದು.
  • ಮುದ್ದತ್ತು ಖಾತೆಯಲ್ಲಿ 15 ದಿನಗಳ ಗರಿಷ್ಟ 1 ವರ್ಷ ಮತ್ತು ಕನಿಷ್ಟ 7 ದಿನಗಳವರೆಗೆ ಹಣವನ್ನು ಪಾವತಿಸಬಹುದು.ಹೀಗೆ ಪಾವತಿಸಿದರೆ 8% ರಷ್ಟು ಬಡ್ಡಿ ಕೊಡುತ್ತಾರೆ.
  • ವಿಶೇಷ ಮುದ್ದತ್ತು ಖಾತೆ : ವಿಶೇಷ ಮುದ್ದತ್ತು ಖಾತೆಯನ್ನು 10 ವರ್ಷದ ಒಳಗಿನ ಮಕ್ಕಳು ಕೂಡ ಖಾತೆ ತೆಗೆಯಬೇಕಾದರೆ ಕನಿಷ್ಟ ಅವರ ಹೆಸರಿನ ಮೇಲೆ 25000 ರೂ. ಹಣ ಇರಬೇಕು. 10 ವರ್ಷದ ಮೇಲ್ಪಟ್ಟ ಮಕ್ಕಳು ಖಾತೆಯನ್ನು ತೆಗೆಯಬೇಕಾದರೆ ಅವರಿಗೆ ತಿಳಿವಳಿಕೆ ಬಂದಿರುವುದರಿಂದ ಅವರ ಸಹಿ ತೆಗೆದುಕೊಳ್ಳುವರು.
  • ಆವರ್ತಕ ಠೇವಣಿ ಖಾತೆ : ಮುದ್ದತ್ತು ಖಾತೆ ಮತ್ತು ವಿಶೇಷ ಮುದ್ದತ್ತು ಖಾತೆಯಲ್ಲಿರುವ ಹಣವನ್ನು ನಾವು ಆವರ್ತಕ ಠೇವಣಿ ಖಾತೆಯಲ್ಲಿಯು ಕೂಡ ತೆಗೆಯಬಹುದು. ಇದರಲ್ಲಿ ಹಣವನ್ನು 10 ವರ್ಷಗಳ ಕಾಲ ಕೂಡಿಡಬಹುದು. ಇಲ್ಲಿ ಕನಿಷ್ಟ 6000 ಕ್ಕೆ 75% ಬಡ್ಡಿ ಸಿಗುತ್ತದೆ.
  • ಲಾಕರ್ ಸೌಲಭ್ಯ : ಲಾಕರ್ ಕೀ ಅನ್ನು ತೆಗೆಯಲು 500 ರೂ. ರೆಜಿಸ್ಟರ್ ಮಾಡಬೇಕು. ಲಾಕರ್ ಕೀಗಳಲ್ಲಿ 3 ವಿಧಗಳಿವೆ.

1. ಸಣ್ಣ ಲಾಕರ್. 2. ಮದ್ಯಮ ಲಾಕರ್ 3. ದೊಡ್ಡ ಲಾಕರ್.

ಲಾಕರ್ ಅನ್ನು ತೆಗೆಯಬೇಕಾದರೆ ಇಬ್ಬರ (ವ್ಯವಸ್ಥಾಪಕರ ಕೀ ಮತ್ತು ಸಂಗ್ರಹಿಸಿರುವವರ ಕೀ ) ಇರಬೇಕು ಇದರಲ್ಲಿ ಯಾವುದಾದರು ಒಂದು ಕೀ ಇಲ್ಲದಿದ್ದರೆ ಓಪೆನ್ ಆಗುವುದಿಲ್ಲ.

ಒಂದು ವರ್ಷದಲ್ಲಿ 12 ಬಾರಿ ಮಾತ್ರ ಓಪೆನ್ ಮಾಡಬಹುದು. ನಾವು ಇನ್ನೂ ಹೆಚ್ಚು ಬಾರಿ ಓಪೆನ್ ಮಾಡಬೆಕಾದರೆ 50 ರೂ. ದಂಡವನ್ನು ಕೊಡಬೇಕು.

Learnings

Album

Videos