GHS Girls Gurumitkal, Panchayat office
Objective of visit
Discussions with Panchayat office team
ನಮ್ಮ ಶಾಲೆಯಲ್ಲಿ ನಮ್ಮ ದೈಹಿಕ ಶಿಕ್ಷಕರು 4 ತಂಡಗಳನ್ನು ಮಾಡಿದರು. ಒಂದೊಂದು ತಂಡದಲ್ಲಿ 13 ರಿಂದ 20ರವರೆಗೆ ವಿದ್ಯಾರ್ಥಿನಿಯರು ಭಾಗವಹಿಸಿದರು. ಒಂದು ತಂಡದಲ್ಲಿ 4 ವಿದ್ಯಾರ್ಥಿನಿಯರಿಗೆ ತಂಡದ ಜೊತೆ ಇಬ್ಬರು ಶಿಕ್ಷಕರು ಬಂದಿದ್ದರು. ನಾಲ್ಕು ತಂಡಗಳಿಗೆ ನೀಡಿದ ಸ್ಥಳ ಪಟ್ಟಣ ಪಂಚಾಯಿತಿ ಕಾರ್ಯಾಲಯ ಗುರುಮಠಕಲ್.
ನಾವು ಮೊಟ್ಟಮೊದಲು ನಗರ ಬಡತನ ನಿರ್ಮೂಲನ ಕೋಶವನ್ನು ನೋಡಿದೆವು. ನಾವು ಒಬ್ಬ ಕಾರ್ಯದರ್ಶಿಯನ್ನು ನೋಡಿದವು. ಅವರ ಹೆಸರು ಮರಿಲಿಂಗಪ್ಪ ಅವರು ಸಮುದಾಯ ಸಂಘಟಕರು ಇವರು ನಮಗೆ ಸುಲಭವಾಗಿ ಮಾಹಿತಿಯನ್ನು ನೀಡಿದರು. ಮೊಟ್ಟ ಮೊದಲು ಹೋಗಿ ನಾವು ಅವರ ಬಳಿ ಪ್ರಶ್ನೆಗಳನ್ನು ಹಂಚಿಕೊಂಡೆವು. ಅವರಿಗೆ ನಿಮ್ಮ ಕಾಲ ಅವಧಿ ಎಷ್ಟು ಎಂದು ಕೇಳಿದೆವು. ಅವರು ನಮಗೆ ಸೇವೆ ಅವಧಿ 5 ವರ್ಷ ಎಮದು ಹೇಳಿದರು. ನಾವು ಅವರಿಗೆ ಅಲ್ಲಿನ ಮುಖ್ಯ ಅಧಿಕಾರಿಗಳು ಯಾರು ಎಂದು ಕೇಳಿದೆವು. ಅವರು ನಮಗೆ ಅಧಿಕಾರಿಗಳ ಹೆಸರು ರವೀಂದ್ರ ಲಂಬು ಎಂದು ಹೇಳಿದರು. ಮರಿಲಿಂಗಪ್ಪ ಸರ್ ಅವರು ನೀಡಿದ ಮಾಹಿತಿ ಈ ಕೆಳಗಿನಂತಿದೆ.
2011 ರ ಜನಗಣಿತಿಯ ಪ್ರಕಾರ ನಮ್ಮ ಪಟ್ಟಣದಲ್ಲಿ ಜನಸಂಖ್ಯೆ 20631 ಜನರು ಎಂದು ಹೇಳಿದರು. ಅಲ್ಲಿನ ವಾರ್ಡ್ ಸದಸ್ಯರು 17 ಜನ ಎಂದು ಹೇಳಿದರು. ಅದರಲ್ಲಿ ಇಬ್ಬರು ಪರಿಶಿಷ್ಟ ಜಾತಿ , ಜನರಲ್ ಒಬ್ಬರು ಮಹಿಳೆ , ಪರಿಶಿಷ್ಟ ಜಾತಿ ಮಹಿಳೆ ಒಬ್ಬರು, BCB ಒಬ್ಬ ಮಹಿಳೆ ಜನರಲ್ ಮೂವರು ಮಹಿಳೆ ಹಿಂದುಳಿದ ವರ್ಗ ಜನರಲ್ ಇಬ್ಬರು ಮತ್ತು ಇಬ್ಬರು ಮಹಿಳೆ.
ಸೌಲಭ್ಯಗಳು :
- ಕುಡಿಯುವ ನೀರಿನ ಸೌಲಭ್ಯ
- ಬೀದಿ ದೀಪಗಳ ಸೌಲಭ್ಯ
- ರಸ್ತೆಗಳ ನಿರ್ಮಾಣ
- ಚರಂಡಿ ವ್ಯವಸ್ಥೆ
- ವಾಣಿಜ್ಯ ಮೌಲ್ಯಗಳ ನಿರ್ಮಾಣ
- ಸೊಳ್ಳೆ ನಿರ್ಮೂಲನೆ
- ಸಾರ್ವಜನಿಕ ಮನೆ ಮತ್ತು ಜಾಗ ನಿರ್ಮಾಣ
- ಶಾಲೆಗಳಿಗಾಗಿ ಗ್ರಂಥಾಲಯ ಪುಸ್ತಕಗಳ ನಿರ್ಮಾಣ
- ಗುರುಮಠಕಲ್‌ನ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್
- ಜನನ ಮರಣ ನೊಂದಣಿ
- ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ
- ಮನೆಗಳಿಗೆ ಶೌಚಾಲಯದ ನಿರ್ವಹಣೆ
- ಬಡತನ ನಿರ್ಮುಲನೆ ಯೋಜನೆಗಳ ವಿವರ
- ಸ್ವರ್ಣ ಜಯಂತಿ ಶಹರಿ ರೋಜ್ಗಾರ ಯೋಜನೆ
- ನಮ್ಮ ಮನೆ/ವಾಜಪೇಯಿ ವಸತಿ ಯೋಜನೆ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಯೋಜನೆ ೨೨.೭೫ %
- ಇತರ ವರ್ಗದ ಬಡವರ ಕಲ್ಯಾಣ ಯೋಜನೆ ೭.೨೪%
- ವಿಕಲ ಚೇತನ ಕಲ್ಯಾಣ ಯೋಜನೆ ೩%
- ರಾಜೀವ್ ಆವಾಜ್ ಯೋಜನೆ ಮತ್ತು ಸಮೀಕ್ಷೆಗಳು
ಸ್ಥಳೀಯ ಉದ್ದೇಶ : ಸಾರ್ವಜನಿಕ ಸೇವೆ ಮಾಡುವುದೇ ಇದರ ಉದ್ದೇಶ.
ಪೌರ ಕಾರ್ಮಿಕ : ನಮ್ಮ ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವುದೇ ಪೌರಕಾರ್ಮಿಕ.
ಶಾಲೆ ಮತ್ತು ಪಟ್ಟಣ ಪಂಚಾಯಿತಿಗೆ ಇರುವ ಸಂಬಂಧ
- ಕುಡಿಯುವ ನೀರಿನ ವ್ಯವಸ್ಥೆ
- ಕಂಪ್ಯೂಟರ್ ನ ವ್ಯವಸ್ಥೆ.
- ಶೌಚಾಲಯದ ನಿರ್ಮಾಣ.
- ಗ್ರಂಥಾಲಯದ ವ್ಯವಸ್ಥೆ.
- ಸ್ಮಾರ್ಟ್ ಕ್ಲಾಸ್ ನಿರ್ಮಾಣ
- SSLC ವಿದ್ಯಾರ್ಥಿಗಳಿಗೆ 10000 ವೇತನ..