GHS Girls Gurumitkal, Post office

From Karnataka Open Educational Resources
Jump to navigation Jump to search

Objective of visit

Discussions with Post office team

9 ನೇ ತರಗತಿಯಲ್ಲಿ 4 ಗುಂಪುಗಳನ್ನು ವಿಂಗಡಣೆ ಮಾಡಿದ್ದೇವೆ. ಒಂದೊಂದು ಗುಂಪಿನಲ್ಲಿ 4 ನಾಯಕೀಯರನ್ನು ಆಯ್ಕೆ ಮಾಡಿದ್ದೇವೆ. ಅದರಲ್ಲಿ ನಮ್ಮ ಗುಂಪು ಅಂಚೆ ಕಛೇರಿಗೆ ಹೋಗಿದ್ದೇವೆ.


ನಾವು ಅಂಚೆ ಕಛೇರಿಗೆ ಹೋದಾಗ ನಮ್ಮ ಶಿಕ್ಷಕರು ನಮಗೆ ಮಾಹಿತಿಯನ್ನು ನೀಡಿದರು. ಅಂಚೆ ಕಛೇರಿಯ ಮುಂದುಗಡೆ ಹೋದಾಗ ನಾವು ಪೊಸ್ಟ್ ಬಾಕ್ಸನ್ನು "ಭಾರತೀಯ ಡಾಕ್ ಬೊರ್ಡ್ ನ್ನು ನೋಡಿದೇವು.
ನಾವು ಅಂಚೆ ಕಛೇರಿಯ ಹೊಳಗಡೆ ಹೋಗಿ ನಮ್ಮ ಪರಿಚಯವನ್ನು ಹೇಳಿಕೊಂಡೆವು. ನಾವು ಅವರಿಗೆ ನಮ್ಮ ಶಾಲೆಯ ಹೆಸರನ್ನು ಹೇಳಿದ್ದೇವೆ. ಮೊದಲು 4 ವಿದ್ಯಾರ್ಥಿಗಳನ್ನು ಒಳಗಡೆ ಕರೆದುಕೊಮಡಿದ್ದಾರೆ. ಆದನಂತರ ಎಲ್ಲಾ ವಿದ್ಯಾರ್ಥಿಗಳನ್ನು ಕರೆದುಕೊಂಡಿದ್ದಾರೆ. ಅಂಚೆ ಕಛೇರಿಯಲ್ಲಿ ಒಬ್ಬರು ಪೋಸ್ಟ್ ಮ್ಯಾನ್ ಒಬ್ಬರು ಪೊಸ್ಟ್ ಮಾಸ್ಟರ್ ಇದ್ದರು. ಅಂಚೆಯ ಸಹಾಯಕರು ಇದ್ದರೆ ಅದರಲ್ಲಿ ಒಬ್ಬರು ನಮಗೆ ಅಂಚೆ ಕಛೇರಿಯ ಮಾಹಿತಿಯನ್ನು ನೀಡಿದ್ದಾರೆ. ನಾವು ಅವರಿಗೆ ಪ್ರಶ್ನೆಗಳನ್ನು ಕೇಳಿದೇವು ನಾವು ಅಂಚೆ ಎಂದರೆನು ? ಸರ್ ಅವರು ಉತ್ತರವನ್ನು ನೀಡಿದರು. ಏನೆಂದರೆ ಪತ್ರಗಳನ್ನು ಒಂದು ಊರಿನಿಂದ ಮತ್ತೊಂದು ಕಳುಹಿಸುವುದಕ್ಕೆ ಅಂಚೆ ಎನ್ನುವರು.
ಪತ್ರಗಳ ವಿಧಗಳು -
ಸಾದ ಅಂಚೆ.
ವೇಗದ ಅಂಚೆ.
ನೊಂದಣಿಯ ಅಂಚೆ.
ರಿಜಿಸ್ಟರ್ ಅಂಚೆ.

ಇವುಗಳಲ್ಲಿ ಸಾದ ಅಂಚೆ ಎಂದರೇ, ನಾವು ಪತ್ರವನ್ನು ಬರೆಯುವುದನ್ನು ಸಾದ ಅಂಚೆ ಎನ್ನುವರು.
ವೇಗದ ಅಂಚೆ ಎಂದರೆ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಒಂದು ದಿನದ ಒಳಗೆ ಕಳುಹಿಸುವದಕ್ಕೆ ವೇಗದ ಅಂಚೆ ಎನ್ನುವರು.

ನಾನು ಈಗ ಬೆಂಗಳೂರಿಗೆ ನಮ್ಮ ತಂದೆಯವರಿಗೆ ದುಡ್ಡು ಬೇಕಾದ ಕಾರಣ ಅರ್ಜೆಂಟಾಗಿ ಬೇಕಾದ ಕಾರಣದಿಂದ ನನಗೆ ಒಂದು ದಿನದ ಒಳಗಡೆ ಅಲ್ಲಿಂದ ಕಳುಹಿಸುವುದಕ್ಕೆ ವೇಗದ ಅಂಚೆ ಎನ್ನುವರು.ಉದಾ : ನನಗೆ ಜ್ವರ ಬಂದರೆ ಅರ್ಜೆಂಟಾಗಿ ತಂದೆಗೆ ಪತ್ರವನ್ನು ಕಳುಹಿಸುವುದರ ಕಾರಣ ಒಮದು ದಿನದಲ್ಲಿ ಕಳುಹಿಸುವುದಕ್ಕೆ ವೇಗದ ಅಂಚೆ ಎಂದು ಕರೆಯುತ್ತೇವೆ.
SB ಎಂದರೆ ಉಳಿತಾಯದ ಖಾತೆ ನಾವು ಹಣವನ್ನು ಪೊಸ್ಟ್ ನಲ್ಲಿ ಉಳಿತಾಯ ಮಾಡುವುದು.
RD ಎಂದರೆ ಅವರ್ತಿಕ ಖಾತೆ : 18 ವರ್ಷದ ಮಕ್ಕಳಿಗೆ ಖಾತೆಯನ್ನು ತೆಗೆಯಲು ತಂದೆಯ ಎಲೆಕ್ಷನ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಪಾಸ್‌ಪೋರ್ಟ್ ಸೈಜ್ ಫೋಟೊದೊಂದಿಗೆ ಅರ್ಜಿಯಲ್ಲಿರುವ ಎಲ್ಲಾ ಮಾಹಿತಿಗಳನ್ನು ತುಂಬಿ ಕೊಡಬೇಕು. ಅವರು ನಮಗೆ ಖಾತೆಯನ್ನು ಕೊಡುತ್ತಾರೆ.ಪ್ರಮುಖವಾದುದೆಂದರೆ ನಾವು ವೇಗವಾಗಿ ಪತ್ರವನ್ನು ಕಳಿಸಲು ರೈಲ್ವೆ ಮೂಲಕ ಕಳಿಸಬಹುದು ಅಥವಾ ನಾವು ಅಮೇರಿಕಾಗೆ ವೇಗವಾಗಿ ಪತ್ರವನ್ನು ಕಳುಹಿಸಲು ವಿಮಾನ ಮೂಲಕ ಕಳುಹಿಸಬಹುದು. PLI ಎಂದರೆ ಅಂಚೆ ಜೀವವಿ ಮೆ.
ನಾವು ಪತ್ರವನ್ನು ಕಳುಹಿಸಬೇಕಾದರೆ ನಮ್ಮ ಹೆಸರು ನಮ್ಮ ಪಿನ್‌ ಕೋಡ್‌ ನಂಬರ್ ಬರೆಯಬೇಕು.ಉದಾ :- ಪತ್ರವನ್ನು ಕಳುಹಿಸಲು ಅದರ ಮೇಲೆ ನಮ್ಮ ಅಡ್ರೆಸ್ ಮನೆ ನಂಬರ್ ಬರೆಯಬೆಕು, ಬರೆಯದಿದ್ದರೆ ಅವರಿಗೆ ಈ ಪತ್ರ ಮುಟ್ಟುವುದಿಲ್ಲ. ಲಕೋಟೆ ಬೆಲೆ ಐದು ರೂಪಾಯಿಗಳು ಇದ್ದರೆ 25 ಗ್ರಾಂ ತೂಕ ಇರಬೇಕು.
ಅಂಚೆ ಕಛೇರಿಯಲ್ಲಿ ಪತ್ರಗಳ ಸಂಗ್ರಹ ಇರುತ್ತದೆ.
ಹಳ್ಳಿಗಳಲ್ಲಿರುವ ಜನರು ಪಟ್ಟಣಕ್ಕೆ ಬಂದು ಪತ್ರ ಹಾಕುತ್ತಾರೆ.
ಪೊಸ್ಟ್ ಬಾಕ್ಸ್‌ ನಲ್ಲಿರುವ ಪತ್ರಗಳನ್ನು ಪೋಸ್ಟ್‌f ಮ್ಯಾನ್‌ಗಳು ತೆಗೆದುಕೊಂಡು ಬರುತ್ತಾರೆ.
ಪೋಸ್ಟ್ ಬಾಕ್ಸ್ ನಲ್ಲಿರುವ ಪತ್ರಗಳನ್ನು ಅವರವರ ವಿಳಾಸಕ್ಕೆ ಕಳುಹಿಸುತ್ತಾರೆ.ನಾವು ಅಂಚೆ ಕಛೇರಿಯಲ್ಲಿ ಕಂಪ್ಯೂಟರ್, ಪ್ರಿಂಟರ್ ಪತ್ರಗಳನ್ನು ತೂಕ ಮಾಡುವುದು ಇದೆ.. ಮತ್ತು ಸಣ್ಣ ಡಬ್ಬಗಳಿವೆ. ಒಂದೊಂದು ಡಬ್ಬಗಳಲ್ಲಿ ಬೇರೆ ಬೇರೆ ಹಳ್ಳಿ ಅಥವ ಪಟ್ಟಣ ಇದರಲ್ಲಿ ಪತ್ರಗಳ ಸಂಗ್ರಹಣೆಯಾಗಿದೆ. ಕಂಪ್ಯೂಟರ್
ಕಂಪ್ಯೂಟರ್‌ನಿಂದ ವೇಗವಾಗಿ ಪತ್ರಗಳನ್ನು ಕಳುಹಿಸಲು ಸಹಅಯ ಮಾಡುತ್ತದೆ.ಉದಾಹರಣೆಗೆ, ಪತ್ರವನ್ನು ಅಂತರ್ಜಾಲ ದ ಮೂಲಕ ಪತ್ರವನ್ನು ವೇಗವಾಗಿ ಕಳುಹಿಸುತ್ತಾರೆ.ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹಣವನ್ನು ವೇಗವಾಗಿ ಕಳುಹಿಸುತ್ತದೆ.ದೇಶ ವಿದೇಶದಿಂದ ಒಮದು ಪತ್ರವನ್ನು 10 ಗಂಟೆ ಅಥವಾ 12 ಗಂಟೆಗಳ ಒಳಗೆ ಕಳುಹಿಸುತ್ತದೆ.

Learnings

Album

Videos