GHS Honagera PHC Hospital

From Karnataka Open Educational Resources
Jump to navigation Jump to search

Objective of visit

Discussions with hospital team

ಸರಕಾರಿ ಪ್ರಾಥಮಿಕ ಆಸ್ಪತ್ರೆ ಹೊನಗೇರಾ. ತಾ|| ಜಿ|| ಯಾದಗಿರಿ.

ದಿನಾಂಕ: 29-01-2014 ರಂದು Digital story telling ಕಾರ್ಯಕ್ರಮದ ವರದಿ ಈ ಕೆಳಗಿನಂತೆ ನೀಡಲಾಗಿದೆ. ಮುಂಜಾನೆ 11-00 ಗಂಟೆಗೆ ಸರಿಯಾಗಿ 10 ಮಕ್ಕಳ ಸಂಖ್ಯೆ ಇರುವ ತಂಡದೊಂದಿಗೆ ICT for change ನಲ್ಲಿರುವ ಶ್ರೀ. ಮಹೇಶ ಹಾಗೂ ಶ್ರೀಮತಿ. ಮರಿಲಿಂಗಮ್ಮ ಸಹ ಶಿಕ್ಷಕಿ (PCM) ಸರಕಾರಿ ಪ್ರೌಢ ಶಾಲೆ ಹೊನಗೇರಾ ಮತ್ತು ನಾವೆಲ್ಲರು(ಮಕ್ಕಳು), ಸರಕಾರಿ ಪ್ರಾಥಮಿಕ ಆಸ್ಪತ್ರೆ ಹೊನಗೇರಾ ಕ್ಕೆ ಬೇಟಿ ನೀಡಿ ಆಸ್ಪತ್ರೆಯಲ್ಲಿಯ ಡಾ|| ರಮೇಶ MBBS. ರವರ ಪರಿಚಯ ಮಾಡಿಕೊಂಡು ನಂತರ ಡಾಕ್ಟರ ರವರು ತಮ್ಮ ಸೇವಾ ಅವಧಿಯ ಬಗ್ಗೆ ತಿಳಿಸಿದರು.

ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯವರು ಒಟ್ಟು 16 ಜನರು ಅದರಲ್ಲಿ ಡಾಕ್ಟರ್, ನರ್ಸ್ ಗಳು, ANM ಗಳು ಆಶಾ ಕಾರ್ಯಕರ್ತೆಯರು ಎಂದು ತಿಳಿಸಿದರು.

ಸಿಬ್ಬಂದಿಯ ಕಾರ್ಯ ಹಾಗೂ ಪರಿಚಯ

ಡಾಕ್ಟರ್ ರೊಂದಿಗೆ ಮಕ್ಕಳ ನೇರನಸಂವಾದ ನಡೆಸಿ ಮಕ್ಕಳು ಕೆಲವು ಮಾಹಿತಿಯನ್ನು ಪಡೆದರು. ಮಕ್ಕಳು ಆಸ್ಪತ್ರೆಯಲ್ಲಿನ ಸಿಬ್ಬಂದಿಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಶುಶ್ರಿಕಿಯರು ಪ್ರಸೂತುಯನ್ನು ಮಾಡುವರು, ತಪಾಸಣೆ ಮಾಡುವರು. ಆಶಾಕಾರ್ಯಕರ್ತೆಯರು 6 ಜನ ಕಾರ್ಯನಿರ್ವಹಿಸುವರು ಅವರ ಕಾರ್ಯಗಳು ಬಾಣಂತಿಯರನ್ನು ತಪಾಸಣೆ ಮಾಡುವರು. ಅನಿಮೀಯಾವನ್ನು ತಪಾಸಣೆ ಮಾಡಿಸಿ ಅದರ ಆರೋಗ್ಯದ ಬಗ್ಗೆ ಎಚ್ಚರಿಕೆಯ ಕ್ರಮಗಳನ್ನು ತಿಳಿಸುವರು. ಹಾಗೆಯೇ ಒಬ್ಬ ಲ್ಯಾಬ್ ತೇಕನೀಷಿಯನರು ಕಾರ್ಯ ನಿರ್ವಹಿಸುವರು. ಅವರ ಕಾರ್ಯ ರಕ್ತ ತಪಾಸಣೆ ಮಾಡಿಸುವುದು ಹಿಮೋಗ್ಲೋಬಿನ್‌ನ ಪರೀಕ್ಷೆಯನ್ನು ಮಾಡುವರು.

ಪೋಲಿಯೋ ಲಸಿಕೆ, ಮಕ್ಕಳಲ್ಲಿಯ ರಕ್ತ ಹೀನತೆ, ಹೀಮೋಗ್ಲೋಬಿನ ಕೊರತೆ, ಆರೋಗ್ಯ ತಪಾಸಣೆ ಇವು ಅನೇಕ ಕಾರ್ಯಕ್ರಮಗಳ ಮೂಲಕ ಶಾಲೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ.

ಆಸ್ಪತ್ರೆಯ ಈ ವರ್ಷದ ಯೋಜನೆಗಳು - ಆಸ್ಪತ್ರೆಯು ಅನೇಕ ಯೋಜನೆಗಳನ್ನು ಹೊಂದಿದೆಅವುಗಳಲ್ಲಿ ಪ್ರಮುಖವಾದವು ಆನೆಕಾಲು, ಕುಷ್ಟರೋಗ, ಪೋಲಿಯೋ, ಡಯಾಬಿಟಿಸ್, ಡಿಫ್ತೀರಯಾ ಮುಂತಾದ ರೋಗ ನಿವಾರಣೆ ಮಾಡಲು ಅನೇಕ ಯೋಜನೆಗಳನ್ನು ಹೊಂದಿದೆ.

ಆಸ್ಪತ್ರೆಯ ಸಮಸ್ಯೆಗಳು: ಶ್ರೀ, ಡಾ|| ರಮೇಶರವರು ಹೇಳಿದರು. ಇದು ಪ್ರಾಥಮಿಕ ಆಸ್ಪತ್ರೆಯಾಗಿರುವುದರಿಂದ ಸಣ್ಣ ಪುಟ್ಟ ರೋಗಗಳಿಗೆ ನಾವೇ ಚಿಕಿತ್ಸೆ ನೀಡುತ್ತೇವೆ. ಹೆಚ್ಚಿನವು ಇದ್ದರೆ ಜಿಲ್ಲಾ ಆಸ್ಪತ್ರೆಗೆ ಬರೆದು ಕಳುಹಿಸುತ್ತೇವೆ. ಹೊಸ ಯೋಜನೆಗಳಿಂದಾದ ತಂತ್ರಜ್ಞಾನದ ಉಪಕರಣಗಳನ್ನು ಬಳಸಿಕೊಂಡು ಯಾವುದೇ ಬದಲಾವಣೆ ಮಾಡಲು ಆಗುವುದಿಲ್ಲ ಏಕೆಂದರೆ ಇದು ಪ್ರಾಥಮಿಕ ಆಸ್ಪತ್ರೆ ಇರುವುದರಿಂದ.

Learnings

ಶ್ರೀ. ಡಾ|| ರಮೇಶ ಅವರಿಂದ ಮಕ್ಕಳಿಗೆ ಅವರ ಅನಿಸಿಕೆಗಳ ಮೂಲಕ ಸಲಹೆಗಳನ್ನು ಅಚ್ಚುಕಟ್ಟಾಗಿ ನೀಡಿದರು. ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ವ್ಯಾಯಾಮ ಮಾಡಬೇಕು, ದಿನಾಲು (4-5) ನಾಲ್ಕರಿಂದ ಐದು ಲೀಟರ್ ನೀರು ಕುಡಿಯ ಬೇಕು. ಸ್ವಚ್ಛವಾದ ವಾತಾವರಣವನ್ನು ಇಟ್ಟುಕೊಳ್ಳಬೇಕು.

ಶ್ರೀ. ರಮೇಶ ರವರು ಆಸ್ಪತ್ರೆಯ ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ತಿಳಿಸಿದರು. ರೋಗಗಳನ್ನು ಹೇಗೆ ತಡೆಗಟ್ಟಬೇಕು ಎಂಬುದರ ಬಗ್ಗೆ ಮಾಹತಿ ನೀಡಿದರು. ಆಸ್ಪತ್ರೆಯಲ್ಲಿಯ ಉಚಿತ ತಪಾಸಣೆ ಹಾಗೂ ಸವಲತ್ತುಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದು. ಮಾರಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಈ ಪರಿಸರದಲ್ಲಿ ಹೆಚ್ಚಾಗಿ ಕಂಡುಬರುವ ರೋಗಳು ವಾಂತಿ ಭೇಧಿ, ನೆಗಡಿ, ಕೆಮ್ಮು, ಕ್ಷಯ ರೋಗ, ಕಜ್ಜಿ ಇವುಗಳು ಕಂಡುಬರುವುದರಿಂದ ದೇಹವನ್ನು ಮತ್ತು ನಮ್ಮ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಆಸ್ಪತ್ರೆಯಿಂದ ಸಮಾಜಕ್ಕೆ ಆಗುವ ಲಾಭಗಳನ್ನು ಡಾ|| ಅವರು ವಿವರವಾಗಿ ವಿವರಣೆ ನೀಡಿದರು. ಮಕ್ಕಳಿಗೆ ಲಸಿಕೆಯ ಕಾರ್ಯಕ್ರಮದ ಪೋಲಿಯೋ, ಟಿಟಿ ಇಂಜೆಕ್ಷನ್‌ಗಳು ಗರ್ಬೀಣಿ ಹೆಣ್ಣು ಮಕ್ಕಳಿಗೆ ಟಿ.ಟಿ 1. ಟಿ.ಟಿ 2 ಹೆಚ್.ಬಿ. ಪಿಪಿಟಿ ಲಸಿಕೆಗಳನ್ನು ನೀಡುವುದರ ಮೂಲಕ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು. ಹೆಚ್.ಐ.ವಿ ಮಾರಕ ರೋಗವನ್ನು ಹೇಗೆ ತಡೆಗಟ್ಟಬೇಕು ಎಂಬುದರ ಬಗ್ಗೆ ಇನ್ನಿತರ ರೋಗಗಳ ಬಗ್ಗೆಯೂ ಮಾಹಿತಿ ನೀಡಿದರು.

Album

Videos