STF 2015-16 Chamarajanagar

From Karnataka Open Educational Resources
Jump to navigation Jump to search

Science

Batch 1

Agenda

If district has prepared new agenda then it can be shared here

See us at the Workshop

Workshop short report

1st Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಚಾಮರಾಜನಗರ
ಎಸ್‌.ಟಿ.ಎಫ್- ವಿಜ್ಞಾನ ತರಬೇತ
ದಿನಾಂಕ:04-12-2015
ಮೊದಲನೇ ದಿನದ ವರದಿ
ಈ ದಿನ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಸಂಯೋಜಕರಾದ ಶ್ರೀ. ಸುರೇಶ ರವರು ಎಲ್ಲಾರನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ. ನಾಗರಾಜು ರವರು ಆರ್‌.ಎಂ.ಎಸ್‌.ಎ. ವತಿಯಿಂದ ನೆಡೆಯುವ ತರಬೇತಿಗಳ ಬಗ್ಗೆ ತಿಳಿಸಿಕೊಟ್ಟರು. ಹಾಗೂ ತರಬೇತಿಗಳಿಂದ ಶಿಕ್ಷಕರು ಇನ್ನು ಹೆಚ್ಚಿನ ಮಾಹಿತಿ ಪಡೆದು ಸೃಜನಶೀಲರಾಗಬೇಕೆಂದು ತಿಳಿಸಿದರು. ಮತ್ತೊಬ್ಬ ಹಿರಿಯ ಉಪನ್ಯಾಸಕರಾದ ಪಿ. ಮುರುಳೀಧರ್‌ ರವರು ತರಬೇತಿಯ ಬಗ್ಗೆ ತಿಳಿಸುತ್ತಾ ವ್ಯಕ್ತಿಯ ವಿಕಸನಕ್ಕೆ ತರಬೇತಿಯು ಅತೀ ಅವಶ್ಯಕ ಎಂದು ತಿಳಿಸಿದರು. ವಿವಿಧ ತರಬೇತಿಗಳಿಂದ ವಿವಿಧ ಸಂಪನ್ಮೂಲ ವ್ಯಕ್ತಿಗಳ ಭೇಟಿಯಾಗಿ ಜ್ಞಾನದ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಇತರೆ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ರವರು ಮತ್ತು ರುದ್ರಾರ್ಚಾರಿ ರವರು ಇ-ಮೇಲ್‌ ಖಾತೆಯನ್ನು ತೆರೆಯುವುದು ಹೇಗೆ ಎಂದು ತಿಳಿಸಿ. ಶಿಕ್ಷಕರಿಂದ ಇ-ಮೇಲ್‌ ಖಾತೆಯನ್ನು ತೆರೆಸಿದರು. ಎಸ್‌ ಟಿ ಎಫ್‌ನ ಉದ್ದೇಶಗಳನ್ನು ಸಂಪನ್ಮೂಲ ವ್ಯಕ್ತಿಯಾದ ಸುರೇಶ್‌ರವರು ತಿಳಿಸಿಕೊಟ್ಟರು. ಮತ್ತು ಇ ಮೇಲ್‌ನ್ನು ಬರೆಯಬೇಕಾದಾಗ ಗಮನಿಸಬೇಕಾದ ಅಂಶಗಳ ಬಗ್ಗೆ ತಿಳಿಸಿಕೊಟ್ಟರು. Koer ನ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ ಊಟದ ವಿರಾಮಕ್ಕೆ ತೆರಳಿದೆವು. ಊಟದ ವಿರಾಮದ ನಂತರ ಕೀಲಿಮಣೆ ವಿನ್ಯಾಸದ ಬಗ್ಗೆ ತಿಳಿಸಿ ಕಲಿಕೆಗೆ ತೊಡಗಿಸಿದರು. ಅಧ್ಯಾಯ 1 ರಿಂದ 43ರ ವರೆಗೆ ಕಲಿಕೆಗೆ ತೊಡಗಿಸಿದರು ಹಾಗೂ ನುಡಿಯ ತಂತ್ರಾಂಶದ ಮಾಹಿತಿ ನೀಡಿ ಕನ್ನಡ ಟೈಪಿಂಗ್‌ಗೆ ತೊಡಗಿಸಿದರು ಆ ವೇಳೆಗಾಗಲೆ 5.30 ಗಂಟೆ ಆದುದರಿಂದ ನಾಳೆಯ ಕೆಲಸವನ್ನು ನೆನಪಿಸಿ ದಿನದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಈ ವರದಿಯನ್ನು ಕೊಳ್ಳೇಗಾಲ ವಲಯದಿಂದ ಶಿಕ್ಷಕರಾದ ಬಿ . ಶಿವಶಂಕರನಾಯಕರವರು ವಾಚಿಸಿದರು.

2nd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಚಾಮರಾಜನಗರ ಜಿಲ್ಲೆ.
ಎರಡನೇ ವರದಿ ಮಂಡನೆ
ಬೆಳಿಗ್ಗೆ ೧೦ಗಂಟೆಗೆ ಸರಿಯಾಗಿ ತರಬೇತಿ ಪ್ರಾರಂಭವಾಯಿತು. ವೇದಿಕೆಯಲ್ಲಿ ತರಬೇತಿ ನೋಡೆಲ್‌ ಅಧಿಕಾರಿಗಳಾದ ಸುರೇಶ್‌ ರವರು ಉಪನ್ಯಾಸಕರಾದ ನಾಗರಾಜು ರವರು ಸಂಪನ್ಮೂಲ ವ್ಯಕ್ತಿಗಳಾದ ಮುರುಳೀಧರ್‌ರವರು, ಸುರೇಶ, ಹಾಗೂ ರುದ್ರಾಚಾರಿ ರವರು ಹಾಜರಿದ್ದರು ಮತ್ತು ಎಲ್ಲಾ ತಂಡದ ಶಿಬಿರಾರ್ಥಿಗಳು ಹಾಜರಿದ್ದರು. ಎರಡನೇ ದಿನದಲ್ಲಿ ಶಿಬಿರಾರ್ಥಿಗಳೆಲ್ಲಾರು ಕಂಪ್ಯೂಟರ್‌ ಮುಂದೆ ಕುಳಿತು ಕನ್ನಡ ಟೈಪಿಂಗ್‌ ಕಲಿಯಲು ಪ್ರಾರಂಭಿರಿಸಿದರು ಸುರೇಶ್ ರವರು ಕ್ಲಿಷ್ಟ ಪದಗಳನ್ನು ಹಾಗೂ ಒತ್ತಕ್ಷರಗಳನ್ನು ತಿಳಿಸಿಕೊಟ್ಟರು. ನಂತರ ರುದ್ರಚಾರಿರವರು ಕೊಯರ್‌ನಲ್ಲಿ ಸಂಪನ್ಮೂಲಗಳನ್ನು ಹುಡುಕುವ ಬಗ್ಗೆ ಎಸ್.ಟಿ.ಎಫ್‌ ಗೆ ಸೇರುವ ಬಗ್ಗೆ , ಆನ್‌ಲೈನ್‌ ಮತು ಆಫ್ಲೈನ್ ಕಯರ್‌ನ ಮುಖಪುಟದ ಬಗ್ಗೆ ತಿಳಿಸಿಕೊಟ್ಟರು. ಪ್ರತಿ ಸಿಸ್ಟಮ್‌ಗೆ ಮೂರು ಶಿಬಿರಾರ್ಥಿಗಳಂತೆ ಕೊರಿಸಿ ಲಾಟರಿ ಮೂಲಕ ವಿಷಯಗಳನ್ನು ಹಂಚಿದರು. ಚಟುವಟಿಕೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು.

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

Workshop short report

1st Day

2nd Day

3rd Day
ಜಿಲ್ಲಾ ಶಿಕ್ಷಣ ಮತ್ತ ತರಬೇತಿ ಸಂಸ್ಥೆ. ಚಾಮರಾಜನಗರ
ಕನ್ನಡ ವಿಷಯ ಶಿಕ್ಷಕರ ವೇದಿಕೆ ತರಬೇತಿ
ದಿ.19.11.15 ರಿಂದ 25.11.15
3ನೇ ದಿನದ ತರಬೇತಿ ಶಿಭಿರಾರ್ಥಿಗಳ ಪ್ರಾರ್ಥನೆ , ಚಿಂತನೆ,ಶುಭನುಡಿ, ಹಿಮ್ಮಾಹಿತಿ, ವರದಿ ವಾಚನದೊಂದಿಗೆ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪರಶುರಾಮ್ ರವರು ಈಮೈಲ್ ರಚನೆ,ಬಳಕೆ,ಅನುಕೂಲಗಳು, ವಹಿಸಬೇಕಾದ ಎಚ್ಚರಿಕೆ ಇತ್ಯಾದಿಗಳನ್ನು ತಿಳಿಸಿದರು .ಶಿಬಿರಾರ್ಥಿಗಳು ಅದರಂತೆ ಈಮೈಲ್ ರಚನೆ,ಬಳಕೆ ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮುರಳೀಧರ ರವರು ಈಮೈಲ್ ಕಳುಹಿಸುವಾಗ ಫೈಲ್ ಅಟ್ಯಾಚ್ ಮಾಡುವುದು ,ಫೋಟೋ ಕಳುಹಿಸುವುದು, ಸ್ಪ್ಯಾಮ್ ಫ್ಟಿಲ್ಟರ್ ಬಳಕೆ,ಕನ್ನಡ ಎಸ್.ಟಿ.ಎಫ್ ಗ್ರೂಪ್ ಗೆ ಸದಸ್ಯರನ್ನಾಗಿ ಎಲ್ಲಾ ಶಿಬಿರಾರ್ಥಿಗಳನ್ನು ಸೇರ್ಪಡೆ ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಕುಮಾರ್ ರವರು ಎಲ್ಲರಿಗೂ ಪಠ್ಯ ವಿಷಯ ಹಂಚಿಕೆ ಮಾಡಿ ಗೂಗಲ್ ನಲ್ಲಿ ಸಂಪನ್ಮೂಲ ಸಂಗ್ರಹಿಸುವ ವಿಧಾನ, ಸಂಗ್ರಹಿಸಿದ ಸಂಪನ್ಮೂಲವನ್ನು ಹೇಗೆ ಸೇವ್ ಮಾಡುವುದು , ಹಾಗೂ ಅದನ್ನು ಕನ್ನಡ ಎಸ್.ಟಿ.ಎಫ್ ಗ್ರೂಪ್ ಗೆ ಕಳುಹಿಸುವುದು ಎಂದು ತಿಳಿಸಿದರು. ಶಿಬಿರಾರ್ಥಿಗಳು ಅದರಂತೆ ಮಾಡಿದರು.

4th Day
ಜಿಲ್ಲಾ ಶಿಕ್ಷಣ ಮತ್ತ ತರಬೇತಿ ಸಂಸ್ಥೆ. ಚಾಮರಾಜನಗರ
ಕನ್ನಡ ವಿಷಯ ಶಿಕ್ಷಕರ ವೇದಿಕೆ ತರಬೇತಿ
ದಿ.19.11.15 ರಿಂದ 25.11.15
4ನೇ ದಿನದ ವರದಿ
ತರಬೇತಿಯ ೪ನೇ ದಿನವಾದ ದಿನಾಂಕ ೨೪.೧೧.೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರಸ್ವಾಮಿರವರು ಶಿಬಿರಾರ್ಥಿಗಳನ್ನು ಸ್ವಾಗತಿಸುತ್ತಾ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕೊಳ್ಳೇಗಾಲದ ತಂಡದವರು ಪ್ರಾರ್ಥನೆ ನೆರವೇರಿಸಿದರು. ಚಾಮರಾಜನಗರ ತಂಡದವರು ಚಿಂತನೆಯನ್ನು , ಯಳಂದೂರು ತಂಡದವರು ಶುಭನುಡಿಯನ್ನು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಿಕ್ಷಕರಾದ ಬಸವಣ್ಣನವರು ಹಿಂದಿನ ದಿನದ ವರದಿಯನ್ನು ವಾಚಿಸಿದರು. ಸಂಪನ್ಮೂಲ ಶಿಕ್ಷಕರಾದ ಪರಶುರಾಮ್ ರವರು ಇ ಮೇಲ್ ನಲ್ಲಿ ಸಿಗ್ನೇಚರ್ ಅಳವಡಿಸುವುದು ,ಪೋಟೋ ಅಳವಡಿಸುವುದು ,ಇ ಮೇಲ್ ಫಿಲ್ಟರ್ ಮಾಡುವುದು, ಇತ್ಯಾದಿ ವಿಚಾರಗಳ ಬಗ್ಗೆ ತಿಳಿಸಿದರು. ನಂತರ ಶಿಬಿರಾರ್ಥಿಗಳು ಅದನ್ನು ಪ್ರಾಕ್ಟೀಸ್ ಮಾಡಿದರು. ಎದಾದ ನಂತರ ಯೂ ಟೂಬ್ ನಲ್ಲಿ ನಮಗೆ ಬೇಕಾದ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದು ಮತ್ತು ನಾವು ತಯಾರಿಸಿದ ಸಂನ್ಮೂಲಗಳನ್ನು ಅಪ್ ಲೋಡ್ ಮಾಡುವುದರ ಬಗ್ಗೆ ತಿಳಿಸಿದರು . ನಂತರ ಮುರುಳೀಧರ್ ರವರು ಕೋಯರ್ ಎಂದರೇನು , ಅದರಲ್ಲಿರುವ ಮಾಹಿತಿಗಳೇನು , ಅದನ್ನು ಹೇಗೆ ನಾವು ಬಳಸಿಕೊಳ್ಳಬಹುದು ಎನ್ನುವ ವಿಚಾರಗಳನ್ನು ತಿಳಿಸಿದರು. ಹಾಗೆಯೇ ಗೂಗಲ್ ಟ್ರಾನ್ಸ್ ಲೇಟ್ ಬಗ್ಗೆ ತಿಳಿಸಿದರು .ಅದನ್ನು ಶಿಬಿರಾರ್ಥಿಗಳು ಅಭ್ಯಾಸ ಮಾಡಿದರು.
ಎಲ್ಲರಿಗೂ ವಂದನೆ ಸಲ್ಲಿಸಿ ಮುಕ್ತಾಯ ಗೊಳಿಸಲಾಯಿತು.

5th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಾಮರಾಜನಗರ
ಕನ್ನಡ ವಿಷಯ ಶಿಕ್ಷಕರ ವೇದಿಕೆ ತರಬೇತಿ
ದಿನಾಂಕ. 19.11.15 ರಿಂದ 25.11.15
5 ನೇ ದಿನದ ವರದಿ
5ನೇ ದಿನದ ತರಬೆತಿ ಶಿಭಿರಾರ್ಥಿಗಳ ಪ್ರಾರ್ಥನೆ, ಚಿಂತನೆ, ಶುಭನುಡಿ ಹಿಮ್ಮಾಹಿತಿ ವರದಿವಾಚನದೊಂದಿಗೆ ಪ್ರಾರಂಭವಾಯಿತು. ಸಂಪವನ್ಮೂಲ ವ್ಯಕ್ತಿಗಳಾದ ಶ್ರೀ ಮುರಳಿ ಸರ್ ರವರು ಲೆಟರ್ ಟೈಪ್ ಮಾಡಿ ಪ್ರಿಂಟ್ ಕೊಡುವ ವಿಧಾನ , ಹೈಪರ್ ಲಿಂಕ್ ಕೊಡುವುದು , ಆಡಿಯೋ-ವೀಡಿಯೋ ರೆಕಾರ್ಡಿಂಗ್ ಮಾಡುವುದು, ಎನ್ ಸಿ ಎಫ್ ಪೊಜಿಷನ್ ಪೇಪರ್ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟರು. ನಂತರದ ತರಗತಿಯಲ್ಲಿ ಎಲ್ಲರಿಗೂ ಕೊಯರ್ ಮೂಲಕ ಹಿಮ್ಮಾಹಿತಿ ಕಳುಹಿಸುವುದನ್ನು ಹೇಳಿಕೊಡಲಾಯಿತು. ಅದರಂತೆ ಎಲ್ಲರೂ ತಮ್ಮ ತಮ್ಮ ಹಿಮ್ಮಾಹಿತಿಗಳನ್ನು ವೈಯುಕ್ತಿಕವಾಗಿ ಕಳುಹಿಸಿದರು

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.