STF 2015-16 Koppala

From Karnataka Open Educational Resources
Jump to navigation Jump to search

Science

Batch 1

Agenda

If district has prepared new agenda then it can be shared here

See us at the Workshop

Workshop short report

ಮೊದಲ ದಿನ : ದಿನಾಂಕ : 08-09-2015 ರಂದು ಎಸ್.ಟಿ.ಎಫ್.ತರಬೇತಿ 2015ರ ಮೊದಲನೇ ಬ್ಯಾಚ್ ಕೊಪ್ಪಳ ಡಯಟ್ ನಲ್ಲಿ ಪ್ರಾರಂಭವಾಯಿತು.ಈ ತರಬೇತಿಯ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಡಯಟ್ ನ ಪ್ರಾಂಶುಪಾಲರಾದ ಮಾನ್ಯಶ್ರೀ ಪರಮೇಶ್ವರ ರವರು ,ಎಸ್.ಟಿ.ಎಫ್ ನೋಡಲ್ ಅಧಿಕಾರಿಗಳಾದ ಶ್ರೀ ಕೃಷ್ಣ ಉಪನ್ಯಾಸಕರು ,ಶ್ರೀ ವಿರುಪಾಕ್ಷಯ್ಯ ಉಪನ್ಯಾಸಕರು ತರಬೇತಿಗೆ ಚಾಲನೆ ನೀಡಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ,ಕಂಪ್ಯೂಟರ್ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಗುಣಮಟ್ಟ ಶಿಕ್ಷಣಕ್ಕೆ ಶಿಕ್ಷಕರು ಶ್ರಮಿಸಬೇಕೆಂದು ಕರೆ ನೀಡಿದರು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ ಶಿಲ್ಪಿ ಇವರು 2015ರ ಎಸ್.ಟಿ.ಎಫ್.ಕಾರ್ಯಕ್ರಮದ ಮುಖ್ಯ ಧ್ಯೇಯವಾದ ವಿಜ್ಞಾನ ಪ್ರಯೋಗಾಲಯವನ್ನು ಸಕ್ರಿಯಗೊಳಿಸಿ ಸರಳ ಪ್ರಯೋಗಗಳ ಮೂಲಕ ವಿಜ್ಞಾನ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸುವುದರ ಜೊತೆಗೆ ಸರಳ ಪ್ರಯೋಗಗಳನ್ನು ವಿದ್ಯಾರ್ಥಿಗಳೇ ಸ್ವತಃ ಮಾಡುವ ಸಾಮರ್ಥ್ಯ ಬೆಳೆಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಪ್ರಸೆಂಟೇಶನ್ ಬಳಸಿ ವಿವರಿಸಿದರು.ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಯೋಗೆಪ್ಪ ಇವರು ಉಬುಂಟು ಪರಿಚಯ ಅದರ ಮಹತ್ವವನ್ನು ತಿಳಿಸಿದರು.ಹೊಸದಾಗಿ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಗೆ ಸೇರಬಯಸುವ ಶಿಕ್ಷಕರಿಗೆ ಇ-ಮೇಲ್ ಅಕೌಂಟ್ ರಚನೆ ,ಇ-ಮೇಲ್ ಕಳುಹಿಸುವುದು ಹಾಗೂ ತೆರೆಯುವುದು ,,ಇಮೇಜ್ ಡೌನಲೋಡ ಮಾಡುವುದು , ಫೋಲ್ಟರ್ ರಚನೆ, ಟೆಕ್ಸ್ತ್ ಪಾರ್ಮ್ಯಾಟ್ ಮುಂತಾದ ವಿಷಯಗಳ ಬಗ್ಗೆ ರಮೇಶ ರವರು ತಿಳಿಸಿದರು.
ಎರಡನೇ ದಿನ : ದಿನಾಂಕ: 09-09-2015 ರಂದು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ ಶಿಲ್ಪಿ ಹಾಗೂ ಶಿವಯೋಗೆಪ್ಪ ಇವರಗಳು ಕೊಯರ್ ನ ಮುಖಪುಟಗಳ ವೀಕ್ಷಣೆ , ವಿಜ್ಞಾನ ವಿಷಯಗಳ ಬಗ್ಗೆ ಕೊಯರ್ ನಲ್ಲಿ ಸೇರಿಸಿರುವ ಸಂಪನ್ಮೂಲಗಳನ್ನು ವೀಕ್ಷಿಸಿಸುವುದು ,ಉಬುಂಟುವಿನಲ್ಲಿ ಕನ್ನಡ ಟೈಪ್ ಮಾಡುವ ವಿಧಾನ , ವಿಜ್ಞಾನ ಪ್ರಯೋಗವಾದ ಬಾಯ್ಲನ ನಿಯಮದ ಚಟುವಟಿಕೆಯ ಒಂದು ಮಾದರಿಯನ್ನು ತೋರಿಸಿದರು.ಶಿಬಿರಾರ್ಥಿಗಳ ತಂಡ ರಚಿಸಿ ಪ್ರತಿ ತಂಡದವರು ವಿಜ್ಞಾನ ಚಟುವಟಿಕೆಯ ಮಾದರಿ ತಯಾರಿಸಿ ಪ್ರಸ್ತುತ ಪಡಿಸಲು ತಿಳಿಸಿದರು.ಪ್ರಯೋಗಕ್ಕೆ ಅಗತ್ಯವಾದ ಸಲಕರಣೆಗಳನ್ನು ಸ್ವತಃ ಶಿಭಿರಾರ್ಥಿಗಳೇ ಪಟ್ಟಿ ಮಾಡಿ ಮೂರನೇ ದಿನ ತರಬೇತಿಗೆ ಸಿದ್ಧಪಡಿಸಿದರು.ಕೊಯರ್ ವೆಬ್ ಪುಟ್ ಗಳ ವೀಕ್ಷಿಸಲು ಪ್ರಾಯೋಗಿಕಕ್ಕೆ ಅನವು ಮಾಡಿಕೊಡಲಾಯಿತು.
ಮೂರನೇ ದಿನ :ದಿನಾಂಕ : 10-09-2015 ರಂದು ಸ್ವತಃ ಶಿಭಿರಾರ್ಥಿಗಳೆ ಸಿದ್ಧಪಡಿಸಿಕೊಂಡ ವಿಜ್ಞಾನ ಚಟುವಟಿಕೆಯ ಸರಳ ಪ್ರಯೋಗಗಳ ಸಾಮಗ್ರಿಗಳನ್ನು ಜೋಡಿಸಿ ಪ್ರಯೋಗಕ್ಕೆ ಸಿದ್ಧವಾದರು.ಶ್ರೀಶಿವಯೋಗೆಪ್ಪ ಇವರ ಕ್ಯಾಮೆರ ಕಣ್ಣನಲ್ಲಿ ಸುಮಾರು ೧೦ ತಂಡಗಳ ವಿವಿಧ ವಿಜ್ಞಾನ ಚಟುವಟಿಕೆಗಳ ಪ್ರಯೋಗಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಿದರು.ನಂತರ ಫ್ರೀ ಮೈಂಡ್ ಬಳಕೆ , ಹಾಗೂ ವಿಜ್ಞಾನ ವಿಷಯ ಬೋಧನೆಯಲ್ಲಿ ಶಿಕ್ಷಕರು ಎದುರಿಸುವ ಸವಾಲಗಳೇನು ಎನ್ನುವುದರ ಬಗ್ಗೆ ರಮೇಶ ಶಿಲ್ಪಿ ಇವರು ಶಿಕ್ಷಕರನ್ನು ಚರ್ಚೆಗೆ ಒಳಪಡಿಸದರು.
ನಾಲ್ಕನೇ ದಿನ : ದಿನಾಂಕ : 11-09-2015ರಂದು ಪೇಟ್ ಸೆಮುಲೇಶನ್ ಗಳನ್ನು ವಿಜ್ಞಾನ ವರ್ಗಕೋಣೆ ಬೋಧನೆಯಲ್ಲಿ ಬಳಸುವ ವಿಧಾನ ಹಾಗೂ ಸಿಮುಲೇಶನ್ ಗಳನ್ನು ವಿಜ್ಞಾನದ ಒಂದು ಮೌಲ್ಯಮಾಪಪನ ಸಾಧನವಾಗಿ ಬಳಸುವುದು ಹೇಗೆ ? , ವಿಜ್ಞಾನವನ್ನು ಪರಿಣಾಮಕಾರಿಯಾಗಿಸಲು ಬಳಸುವ ವಿವಿಧ ವಿಧಾನಗಳು ಯಾವುವು ? ಎನ್ನುವುದರ ಚರ್ಚೆ , ಇವುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು.
ಐದನೇ ದಿನ : ದಿನಾಂಕ : 12-09-2015ರಂದು ಶಿಕ್ಷಕರು ತಯಾರಿಸಿದ ವಿಜ್ಞಾನ ಚಟುವಟಿಕೆಯ ವಿಡಿಯೋಗಳನ್ನು ಎಡಿಟ್ ಮಾಡುವುದು , ಉಬುಂಟು ಇನಸ್ಟಾಲ್ ಮಾಡುವ ಬಗೆ ಇವುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು.

Batch 2

Agenda

If district has prepared new agenda then it can be shared here

See us at the Workshop

Workshop short report

ಮೊದಲನೇ ದಿನ  : ದಿನಾಂಕ :೨೧/೦೯/೨೦೧೫ನೇ ಸೋಮವಾರ ಬೆಳಿಗ್ಗೆ ೧೦:೦೦ ಉದ್ಘಾಟನೆಯನ್ನು ಮಾನ್ಯ ಪ್ರಾಚಾರ್ಯರಾದ ಶ್ರೀ ಪರಮೇಶ್ವರ.ಬಿ ಯವರು ನೆರವೇರಿಸಿ ತಂತ್ರಜ್ಞಾನದ ಬೆಳವಣಿಗೆ ಮತ್ತು ಶಿಕ್ಷಣದಲ್ಲಿ ಹೇಗೆ ಬಳಸಬೇಕೆಂದು ಹೇಳುತ್ತಾ, ತರಗತಿಯ ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ ಮಾಡಲು ತಿಳಿಸಿದರು. ಸದರಿ ಕಾಯ9ಕ್ರಮದಲ್ಲಿ ಶ್ರೀ ವಿರುಪಾಕ್ಷಯ್ಯ ಹಿರಿಯ ಉಪನ್ಯಾಸಕರು ಮಾತನಾಡಿ, ಶಿಕ್ಷಕರು ನಿಮ್ಮ ಶಾಲೆಯಲ್ಲಿರುವ ಗಣಕಯಂತ್ರ ಲ್ಯಾಬ್ ಮತ್ತು ಉಬಂಟು ತಂತ್ರಜ್ಞಾನದ ಬಳಸಿಕೊಂಡು ಪರಿಣಾಮಕಾರಿಯಾಗಿ ಬೋಧಿಸಲು ತಿಳಿಸಿದರು. ಶ್ರೀಮತಿ ರೇಖಾ ಹಿರಿಯ ಉಪನ್ಯಾಸಕರು ಉಪಸ್ಥಿತರಿದ್ದರು. ಸದರಿ ಕಾರ್ಯಕ್ರಮವನ್ನು ಶ್ರೀ ಜೋಷಿ ಶಿಕ್ಷಕರು ನಿರೂಪಿಸಿದರು. ಹಾಗು ಶ್ರೀ ಶಿವಯೋಗಿ ವಂದಿಸಿದರು.ಶ್ರೀ ಶಿವಯೋಗಪ್ಪ ಸಂಪನ್ಮೂಲ ವ್ಯಕ್ತಿಗಳು ಉಬಂಟು ತಂತ್ರಜ್ಞಾನದ ಬೆಳವಣಿಗೆ ಹಾಗು ಗಣಕಯಂತ್ರ ಖರೀದಿಸುವಾಗ ಗಮನಿಸಬೇಕಾದ ಮುಖ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಿದರು.ನಂತರ ಶ್ರೀ ರಮೇಶ ಶಿಲ್ಪಿ ಸಂಪನ್ಮೂಲ ವ್ಯಕ್ತಿಗಳು ಕೊಯರ ಬಳಕೆ ಮಾಡುವುದು ಹಾಗೂ ಮಾಹಿತಿಯನ್ನು ಬಳಸುವ ಬಗ್ಗೆ ಮತ್ತು ಸೇರಿಸುವ ಬಗ್ಗೆ ತಿಳಿಸಿದರು.ನಂತರ ಶ್ರೀ ಶಿವಯೋಗಪ್ಪ ಸಂಪನ್ಮೂಲ ವ್ಯಕ್ತಿಗಳು ಇ-ಮೇಲ್ ರಚಿಸುವುದು-ಬಳಕೆ ವಿಷಯ ವೇದಿಕೆಗೆ ಸೇರ್ಪಡೆಯಾಗುವುದನ್ನು ತಿಳಿಸಿದರು.ನಂತರ ಎಲ್ಲಾ ಶಿಕ್ಷಕರು ತಮ್ಮ ಇ- ಮೇಲ್ ಗಳನ್ನು ಖುಷಿಯಿಂದ ಕಲಿತರು.
ಎರಡನೇ ದಿನ  : ದಿನಾಂಕ: 22.09.2015ರಂದು ಎಸ್.ಟಿ.ಎಫ್. ತರಬೇತಿಯ 2ನೇ ದಿನದ ವರದಿಯನ್ನು ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ. ದಿನಾಂಕ 21.09.2015ರ ಮೊದಲ ದಿನದ ವರದಿ ವಾಚನವನ್ನು ಗಂಗಾವತಿ ತಾಲೂಕಿನ ವಿಜ್ಞಾನ ಶಿಕ್ಷಕರಾದ ಶ್ರೀ ಹೇಮಂತರಾಜ ಸರಕಾರಿ ಪ್ರೌಢಶಾಲೆ ವೆಂಕಟಗಿರಿ ಇವರು ಮಾಡುವ ಮೂಲಕ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು. ಈ ದಿನದ ತರಬೇತಿಯಲ್ಲಿ ಮೊದಲು ಸಂಪನ್ಮೂಲ ವ್ಯಕ್ತಿಯಾದ ಶ್ರೀ ರಮೇಶ ಶಿಲ್ಪಯವರು ಪ್ರಯೋಗಗಳನ್ನು ಹೇಗೆ ಮಾಡುವುದು ಅದಕ್ಕೆ ಅನುಸರಿಸಬೇಕಾದ ಅಂಶಗಳನ್ನು ತಿಳಿಸಿದರು. ಅದೇ ರೀತಿ ಪ್ರತಿಯೊಬ್ಬರಿಗೂ ಒಂದೊಂದು ಪ್ರಯೋಗಗಳನ್ನು ಆಯ್ಕೆಮಾಡಿಕೊಂಡು ಅದನ್ನು ಕೊಯರ್‍ನಲ್ಲಿ ಅಪ್‍ಲೋಡ್ ಮಾಡಲು ತಿಳಿಸಿದರು. ಎಲ್ಲಾ ಶಿಕ್ಷಕರು ಒಂದೊಂದು ಪ್ರಯೋಗಗಳನ್ನು ಆಯ್ಕೆಮಾಡಿಕೊಂಡು ತಯಾರಿಸಿಕೊಂಡು ಅದನ್ನು ಕೊಯರಗೆ ಅಪ್‍ಲೋಡ ಮಾಡಿದರು. ನಂತರ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಯೋಗಪ್ಪ ಸರಕಾರಿ ಪ್ರೌಢಶಾಲೆ ತಾಳಕೇರಿ ಇವರು ಗೂಗಲ್‍ನಿಂದ ಹೇಗೆ ಇಮೇಜ್‍ಗಳನ್ನು ಡೌನ್‍ಲೋಡ್ ಮಾಡುವುದು ಎಂಬುದನ್ನು ತಿಳಿಸಿದರು. ಮದ್ಯಾಹ್ನ ಊಟದ ನಂತರ ಮತ್ತೇ ಶ್ರೀ ರಮೇಶ ಶಿಲ್ಪಿಯವರು ವೆಬ್‍ಗಳ ಬಳಕೆ ಮತ್ತು ಅವುಗಳ ಮಹತ್ವ ತಿಳಿಸಿದರು. ಉಬುಂಟುವಿನ ಮತ್ತೊಂದು ಸಾಫ್ಟವೇರ್ ಫ್ರೀ ಮೈಂಡ್ ಮ್ಯಾಪ್ ಹೇಗೆ ಬಳಸಿಕೊಳ್ಳುವುದು ಇದರಿಂದ ಪ್ಲೋಚಾರ್ಟ್ ತಯಾರಿಕೆ ಸುಲಭ ಎಂಬುವುದನ್ನು ತೋರಿಸಿಕೊಟ್ಟರು. ತಾವು ತಯಾರಿಸಿಕೊಂಡ ಪ್ರಯೋಗಗಳನ್ನು ಎಲ್ಲಾ ತರಬೇತಿ ಶಿಕ್ಷಕರ ಮುಂದೆ ಶ್ರೀ ಕೃಷ್ಣಮೂರ್ತಿ ಭಟ್, ನ್ಯೂಟನ್ ಚಲನೆಯ ಎರಡನೇ ನಿಯಮದ ಮೇಲೆ ಹಾಗೂ ಶ್ರೀಮತಿ ವೇದಾವತಿ ಮೇಡಮ್‍ರವರು ಚಲನೆ ಮತ್ತು ದ್ರವ್ಯರಾಶಿಯ ಬಗ್ಗೆ, ಇನ್ನೊರ್ವ ಶಿಕ್ಷಕಿಯಾದ ಶ್ರೀಮತಿ ಜ್ಯೋತಿ ಮೇಡಮ್ ರಾಕೆಟ್‍ನ ಮೇಲೆ ಪ್ರಯೋಗಗಳನ್ನು ಮಾಡಿ ತೋರಿಸಿದರು. ಸಂಜೆ 5.30ಕ್ಕೆ ತರಬೇತಿಯನ್ನು ಅಂತ್ಯಗೊಳಿಸಿ ನಾಳೆಗೆ ಬೇಕಾಗುವ ಪ್ರಯೋಗಗಳಿಗೆ ಸಾಮಾನುಗಳನ್ನು ಹೊಂದಿಸಿಕೊಳ್ಳುವ ತಯಾರಿಯಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗೆ ನಡೆದೆವು.
ಮೂರನೇ ದಿನ :ದಿನಾಂಕ 23.09.2015,ಬುಧವಾರ 3ನೆಯ ದಿನದ ತರಬೇತಿಯೂ s.g.ಪ್ರೌಢ ಶಾಲೆ ಕುಕನೂರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಾದ ಶ್ರೀ ವಿ.ಆರ್.ಹಿರೇಮಠ ಸರ್ ಇ ವರ ವರದಿ ವಾಚನದೊಂದಿಗೆ ಪ್ರಾರಂಭವಾಯಿತು.ನಂತರದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಶಿವಯೋಗಿ ಸರ್ ಇ ವರು ಪ್ರಯೋಗ/ಚಟುವಟಿಕೆಯ ಟೆಂಪ್ಲೆಟ ಪ್ರಕಾರವಾಗಿ ಚಟುವಟಿಕೆಯನ್ನು ತೋರಿಸಲು ತಿಳಿಸಿದರು.ನಂತರದಲ್ಲಿ ಎಲ್ಲಾ ಶಿಕ್ಷಕರು ತಾವು ತಯಾರಿ ಮಾಡಿಕಂಡು ಬಂದ ಪದಾರ್ಥಗಳು/ವಸ್ತುಗಳನ್ನು ಬಳಸಿ ಚಟುವಟಿಕೆಯನ್ನು ಟೆಂಪ್ಲೆಟ ಅ ನುಸಾರವಾಗಿ ಸರಳವಾಗಿ ಮಾಡಿ ತೋರಿಸಿದರು.ಶಿಕ್ಷಕರು ಚಟುವಟಿಕೆ ಮಾಡುತ್ತಿರುವುದನ್ನುಸಂಪನ್ಮೂಲ ವ್ಯಕ್ತಿಯಾದ ಶ್ರೀ ಶಿವಯೋಗಿ ಸರ್ ಅವರು ವಿಡಿಯೋ ರೆಕಾರ್ಡ ಮಾಡಿದರು.ಹೀಗೆ ಇ ದೇ ರೀತಿಯಲ್ಲಿ ಎ ಲ್ಲಾ ಶಿಕ್ಷಕರು ಮಾಡಿರುವ ಚಟುವಟಿಕೆಯನ್ನು ವಿಡಿಯೋ ರೆಕಾರ್ಡ ಮಾಡಿದರು. ಇದರ ಮಧ್ಯದಲ್ಲಿ ಚಹಾ ವಿರಾಮ ನೀಡಲಾಯಿತು.ಚಹಾ ವಿರಾಮದ ನಂತರ ಇನ್ನುಳಿದ ಎಲ್ಲಾ ಶಿಕ್ಷಕರು ತಮ್ಮ ತಮ್ಮ ಸರಳ ಚಟುವಟಿಕೆಗಳನ್ನು ತೋರಿಸಿದರು. ಇವರು ಮಾಡಿದ ಚಟುವಟಿಕೆಯನ್ನು ಸಹಾ ವಿಡಿಯೋ ರೆಕಾರ್ಡ ಮಾಡಿದರು.ಎಲ್ಲಾ ವಿಡಿಯೋ ರೆಕಾರ್ಡ ಆದ ನಂತರದಲ್ಲಿ ಗಣಕಯಂತ್ರದ ಸಹಾಯದಿಂದ 2 ವಿಡಿಯೋಗಳನ್ನು ಪ್ಲೇ ಮಾಡಿ ತೋರಿಸಿದರು.ಇದರೊಂದಿಗೆ ಊಟದ ವಿರಾಮ ನೀಡಲಾಯಿತು. ಊಟದ ವಿರಾಮದ ನಂತರ ಎಲ್ಲಾ ಶಿಕ್ಷಕರು ಫ್ರೀ ಮೈಂಡನ್ನು ಬಳಸಿಕೊಂಡು ವಿವಿಧ ವಿಷಯಗಳ ಮೇಲೆ ಮೈಂಡ ಮ್ಯಾಪ್ ರಚಿಸಿದರು. ನಂತರ ಶ್ರೀ ಶಿವಯೋಗಿ ಸರ್ ಅವರು ಶಿಕ್ಷಕರಿಗೆ ನೀವು ತಯಾರಿಸಿದ ಮೈಂಡ ಮ್ಯಾಪ್ ನ್ನುಕೋಯರ್ ಗೆ ಕಾಂಟ್ರಿಬ್ಯುಟ ಮಾಡಿ ಎಂದು ತಿಳಿಸಿದರು. ಇದರ ನಂತರದಲ್ಲಿ ಡೌನ್ ಲೋಡ್ ಮಾಡಿದ ಇಮೇಜನ್ನು ಯಾವ ರೀತಿಯಲ್ಲಿ ಎಡಿಟ್ ಮಾಡಬಹುದೆಂಬುವುದನ್ನು GIMP ಇಮೇಜ ಎಡಿಟರ್ ನ್ನು ಬಳಸಿ ಸುಲಭವಾಗಿ ತಿಳಿಸಿದರು. ನಂತರ ಚಹಾ ವಿರಾಮ ನೀಡಲಾಯಿತು.ಚಹಾ ವಿರಾಮದ ನಂತರದಲ್ಲಿ ಎಲ್ಲಾ ಶಿಕ್ಷಕರು GIMP ಇಮೇಜ ಎಡಿಟರ್ ನ್ನು ಬಳಸಿ ತಾವು ಡೌನ್ ಲೋಡ್ ಮಾಡಿದ ಇಮೇಜನ್ನು ಎಡಿಟ್ ಮಾಡಿದರು.ಹಾಗೇ ಎಡಿಟ್ ಮಾಡಿದ ಇಮೇಜನ್ನು ಕೋಯರ್ ಗೆ ಕಾಂಟ್ರಿಬ್ಯುಟ ಮಾಡಿದರು.ಹೀಗೆ ಮೂರನೆಯ ದಿನದ ತರಬೇತಿಯೂ ಮುಕ್ತಾಯವಾಯಿತು.
ನಾಲ್ಕನೇ ದಿನ :ಎಂದಿನಂತೆ ನಿನ್ನೆಯ ದಿನ ಆಂದರೆ 24/09/2015 ರಂದು ಬೆಳಿಗ್ಗೆ 10.00 ಗಂಟೆಗೆ ಹಾಜರಾಗಿದ್ದ ನವಗೆಲ್ಲ ಹಿಂದಿನ ದಿನ ನಿರ್ವಹಿಸಿದ ಕಾರ್ಯಚಟುವಟಿಕೆಗಳನ್ನು ಸೌಮ್ಯ ಸರಕಾರಿ ಪೌಢಶಾಲೆ ಉದಮಕಲ್ಲ ರವರು ಪುನರಮನನ ಮಾಡಿದರು. ನಂತರ ಹಳೇ ಬೇರು ಹೊಸ ಚಿಗುರು ಎಂಬಂತೆ ಹಿಂದಿನ ದಿನದ ಕಾರ್ಯಚಟುವಟಿಕೆಗಳ ಆಧಾರದ ಮೇಲೆ ,ರಮೇಶ ಶಿಲ್ಪಿ ಸರ್ ರವರು , ಶ್ರೀಯತ ವಿರುಪಾಕ್ಷಯ್ಯ ಸರ್ ಮತ್ತು ಕೃಷ್ಣ ಸರ ಗಳ ಸ್ವಾಗತಿಸುತ್ತಾ ಆ ದಿನದ ಕಾರ್ಯಚಟುವಟಿಕೆಗಳ ರೂಪರೇಷಗಳನ್ನು ಸವಿವರವಾಗಿ ತಿಳಿಸಿದರು. ತದನಂತರ ವೀಡಿಯೋ ಎಡಿಟಿಂಗ್ ಮಾಡಿ ಆಪ್ಲೋಡ್ ಮಾಡುವುದನ್ನು ಮನದಟ್ಟು ಮಾಡಿದರು. ಆದರಂತೆ ವಿಜ್ಙಾನ ವಿಷಯದ ಭೋಧನೆಯಲ್ಲಿ science Tools ನಲ್ಲಿ kalzium, kStar ಮತ್ತು Stellarium ನಲ್ಲಿ ಗ್ರಹಗಳ ಚಲನೆ ,ರಾಶಿ ಪುಂಜಗಳ ಬಗೆಗಿನ ಮಾಹಿತಿಯನ್ನು ತಿಳಿಸಿದರು,ಆದರಂತೆ PhET simulations ಗಳನ್ನು ಬಳಸಿಕೋಳ್ಳುವ ಬಗ್ಗೆ ಮತ್ತು ಆದರ ಉಪಯುಕ್ತತೆಯ ನ್ನು ವಿಶ್ಷೇಷಿಸಿದರು. ಆದರಂತೆ ಪ್ರತಿಯೋಂದು ತಂಡಗಳಿಂದ ಒಂದೊಂದು ವಿಷಯವನ್ನು PhET simullationsಗಳ ಮೂಲಕ ಮಂಡನೆ ಮಾಡಲು ತಿಳಿಸಿದರು. ಆದರಂತೆ ಎಲ್ಲರೂ PhET simullations ಗಳ ನ್ನು ಬಳಸಿಕೊಳ್ಳುವದರಲ್ಲಿ ಮಗ್ನರಾಗಿದ್ದಾಗಲೇ ಟೀ ಬ್ರೇಕ್.ಟೀ ಬ್ರೇಕ್ ನಂತರ PhET simullations ಗಳನ್ನು ಮೌಲ್ಯಮಾಪನದ ಸಾಧನವನ್ನಾಗಿ ಬಳಸುವ ಬಗೆಯನ್ನು ಮತ್ತು ಚಟುವಟಿಕೆಗಳಿಗೆ ಸಂಪನ್ಮೂಲಗಳನ್ನು ಸೇರಿಸುವ ಬಗೆಯನ್ನು ತಿಳಿಸಿದರು . ಮಧ್ಯಾಹ್ನ1.30 ರಊಟದ ವಿರಾಮದ ನಂತರ ಪ್ರತಿಯೋಂದು ತಂಡ simulation ಗಳನ್ನು ಮೌಲ್ಯಮಾಪನದ ಸಾಧನವನ್ನಾಗಿ ತಯಾರಿಸಿ ಆದನ್ನು ಮಂಡನೆ ಮಾಡಲು ತಿಳಿಸಿದರು .ಆದರಂತೆ ಒಂದೊಂದು ಮೌಲ್ಯಮಾಪನ ಸಾಧನವನ್ನು ತಯಾರಿಸಿ ಕೋಯರ್ ಗೆ ಕಾಂಟ್ರಿಬ್ಯುಟ್ ಮಾಡುವದರಲ್ಲೇ ನಿನ್ನೆಯ ದಿನದ ದಿನಚರಿ ಮುಕ್ತಾಯಗೊಂಡಿತು.
ಐದನೇ ದಿನ :ಐದನೇ ದಿನದ ತರಬೇತಿಯು ನಾಲ್ಕನೇ ದಿನದ ಅಪೂರ್ಣಗೊಳಿಸಿದ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಲು ತಿಳಿಸುವ ಮೂಲಕ ಪ್ರಾರಂಭವಾಯಿತು.ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಶಿಲ್ಪಿ ಹಾಗೂ ಶಿವಯೋಗೆಪ್ಪ ಇವರು ಒಪನ್ ಶಾಟ್ ವಿಡಿಯೋ ಎಡಿಟ್ ಪ್ರೋಗ್ರಾಂ ಬಳಸಿ ಶಿಬಿರಾರ್ಥಿಗಳು ತಾವು ಸರಳ ಉಪಕರಣಗಳನ್ನು ಬಳಸಿಕೊಂಡು ತಯಾರಿಸಿದ ವಿಜ್ಞಾನ ಚಟುವಟಿಕೆ ಪ್ರಯೋಗದ ವಿಡಿಯೋವನ್ನು ಬಳಸಿ ಎಡಿಟ್ ಮಾಡುವ ವಿಧಾನವನ್ನು ತಿಳಿಸಿ ಪ್ರಾಯೋಗಿಕ ಮಾಡಲು ಅವಕಾಶ ನೀಡಿದರು. ನಂತರ ಉಬುಂಟು ಓಎಸ್ ನ್ನು ಕಂಪ್ಯೂಟರ್ ನಲ್ಲಿ ಇನ್ ಸ್ಟಾಲ್ ಮಾಡುವ ವಿಧಾನವನ್ನು ಕೊಯರ್ ನಲ್ಲಿರುವ ವಿಡಿಯೋವನ್ನು ಬಳಸಿ ಪ್ರೋಜೆಕ್ಟರ್ ನಲ್ಲಿ ತೋರಿಸಿ ವಿವರಿಸಲಾಯಿತು .ಎಸ್.ಟಿ.ಎಫ್.ವಿಜ್ಞಾನ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ ಕೃಷ್ಣರವರು ಡಯಟ್ ಉಪನ್ಯಾಸಕರು ಹಾಗೂ ಶ್ರೀ ವಿರುಪಾಕ್ಷಯ್ಯ ಉಪನ್ಯಾಸಕರು ಡಯಟ್ ಮುನಿರಾಬಾದ ಕೊಪ್ಪಳ ಜಿಲ್ಲೆ ಇವರುಗಳು ಐದು ದಿನಗಳ ತರಬೇತಿಯಲ್ಲಿ ಗಳಿಸಿದ ಜ್ಞಾನವನ್ನು ತಮ್ಮ ಶಾಲೆಗಳಲ್ಲಿ ತೆರಳಿ ಶಾಲಾ ಕಂಪ್ಯೂಟರ್ ಪ್ರಯೋಗಾಲಯ ಕೊಠಡಿಯನ್ನು ವಿಷಯ ಭೋಧನೆಯಲ್ಲಿ ಸಮರ್ಪಕವಾಗಿ ಬಳಸಿ ಗುಣಮಟ್ಟ ಶಿಕ್ಷಣಕ್ಕೆ ಶ್ರಮಿಸಬೇಕೆಂದು ಕರೆನೀಡುವುದರ ಮೂಲಕ ಐದು ದಿನಗಳ ತರಬೇತಿಗೆ ತೆರೆ ಎಳೆದರು.

Batch 3

Agenda

If district has prepared new agenda then it can be shared here

See us at the Workshop

Workshop short report

ಮೊದಲನೇ ದಿನದ ವರದಿ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಟಿ.ಬಿ.ಪಿ. ಮುನಿರಾಬಾದ್.
ದಿನಾಂಕ: 28/09/2015 ಎಸ್.ಎಟಿ.ಎಫ್ ವಿಜ್ಞಾನ ತರಬೇತಿಯ ವರದಿ ಮೊದಲನೇ ದಿನದಂದು ಸದರಿ ತರಬೇತಿಯ ಕಾರ್ಯಕ್ರಮವನ್ನು ಪ್ರಾರ್ಥಯೋಂದಿಗೆ ಪ್ರಾರಂಬಿಸಲಾಯಿತು.. ಶ್ರೀ ವಂಕಟೇಶ್ ಸರ್ ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ಉತ್ತಮ ಆರಂಭ ಒದಗಿಸಿದರು . ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಜೀವೇಶ್ ಸ.ಶಿ ರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇಡೀ ೫ ದಿನದ ತರಬೇತಿಯ ತಿರುಳನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಡಯಟ್ ಉಪನ್ಯಾಸಕರಾದ ಶ್ರೀಕೃಷ್ಣ ರವರು ವಿವರಿಸಿದರು. ಅವರು ಶಿಕ್ಷಕರಿಗೆ ಎಸ್.ಟಿ.ಎಫ್ ಹೇಗೆ ಉಪಯುಕ್ತ ಹಾಗೂ ಶಿಕ್ಷಕರಾದ ನಾವು ೪ಸಿ ಗಳನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಉದ್ಘಾಟಕರಾಗಿ ಉಪಸ್ಥಿತರಿದ್ದ ಡಯಟ್ ಪ್ರಾಂಶುಪಾಲರಾದ ಶ್ರೀ ಪರಮೇಶ್ವರಪ್ಪರವರು ಶಿಕ್ಷಕರಿಗೆ ಕಂಪ್ಯೂಟರ್ ಜ್ಞಾನದ ಮಹತ್ವ ಹಾಗೂ ಲಾಭಗಳನ್ನು ಇಂದಿನ ದಿನಮಾನಗಳಲ್ಲಿ ಕಂಪ್ಯೂಟರ್ ಜ್ಞಾನ ಹೊಂದದಿರುವವರು ನಿಜವಾದ ಅನಕ್ಷರಸ್ಥರೆಂದು ತಮ್ಮ ಮಾತುಗಳಲ್ಲಿ ಹೇಳಿದರು. ಈ ಮದ್ಯ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ವಿರುಪಾಕ್ಷಯ್ಯ ರವರು ತರಬೇತಿದಾರರ ಜೋತೆಗೆ ಅವರವರ ಶಾಲೆಯ ಕಂಪ್ಯೂಟರ್ ನ ಸ್ಥಿತಿಗತಿಗಳನ್ನು ವಿವರವಾಗಿ ಸಂವಾದ ನಡೆಸಿದರು. ಜೊತೆಗೆ ಬೆಳಗಿನ ಕಾರ್ಯಕ್ರಮದ ವಂದನಾರ್ಪಣೆಯನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀ ಶಿವಯೋಗಪ್ಪರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದ್ದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ರಮೇಶ್ ಶಿಲ್ಪಿ ಹಾಗೂ ಜಿಲ್ಲೆಯ ತರಬೇತಿಗೆ ಆಗಮಿಸಿದ ಶಿಕ್ಷಕರು ಹಾಜರಿದ್ದರು.ಚಹಾ ವಿರಾಮದ ನಂತರ ಶ್ರೀ ರಮೇಶ ಶಿಲ್ಪಿ ರವರು ಕಂಪ್ಯೂಟರ್ ನ ಮೂಲ ಜ್ಞಾನವನ್ನು ಕಂಪ್ಯೂಟರನ್ನು ಭಾಗಗಳನ್ನು ತೋರಿಸುತ್ತಾ ಅಚ್ಚುಕಟ್ಟಾಗಿ ವಿವರಿಸಿದರು.ಊಟದ ವಿರಾಮದ ನಂತರ ಶ್ರೀ ಶಿವಯೋಗಪ್ಪ ಸರ್ ರವರು ಶಿಕ್ಷಕರಾದ ನಾವು ಉಬಂಟು ತಂತ್ರಾಂಶವನ್ನೇಕೆ ಬಳಸಬೇಕು, ಅಲ್ಲದೆ ಈ ತಂತ್ರಾಂಶದ ಸಾಧಕ ಮತ್ತು ಬಾಧಕಗಳನ್ನು ವಂಡೋಸ್ ತಂತ್ರಾಂಶದೊಂದಿಗೆ ಹೋಲಿಕೆ ಮಾಡಿ ಸಮಗ್ರ ಮಾಹಿತಿಯನ್ನು ನೀಡಿದರು. ಮತ್ತೆ ಚಹಾ ವಿರಾಮದ ನಂತರ ರಮೇಶ ಶಿಲ್ಪಿ ಸರ್ ಕಂಪ್ಯೂಟರ್ ನಲ್ಲಿ ಕಡತಗಳನ್ನು ರಚಿಸುವುದು , ಉಳಿಸುವುದು ಹಾಗೂ ತೆರೆಯುವುದನ್ನು ಪ್ರಾತ್ಯಕ್ಷಿಕವಾಗಿ ತಿಳಿಸಿಕೊಟ್ಟರು.ಹಾಗೂ ಎಸ್.ಟಿ.ಎಫ್ ಏಕೇ ಸೇರಬೇಕು? ಹೇಗೆ ಸೇರಬೇಕು? ಹಾಗೂ ಅದರಿಂದಾಗುವ ಉಪಯೋಗಗಳನ್ನು ಮನವರಿಕೆ ಮಾಡಿಕೊಟ್ಟರು. ಕೊನೆಯದಾಗಿ ಶ್ರೀ ಶಿವಯೋಗಪ್ಪ ರವರು ಕಂಪ್ಯೂಟರನ ಬೌತಿಕ ಸ್ವರೂಪವನ್ನು ಹಾಗೂ ಶಿಕ್ಷಕರು ಹೊಂದಬೇಕಾದ ಕಂಪ್ಯೂಟರ್ ಹಾಗೂ ಲ್ಯಾಪಟಾಪ್ ಹೇಗಿರಬೇಕೆಂದು ವಿವರಿಸಿದರು.ತರಬೇತಿ ವ್ಯವಸ್ಥಾಪಕರು ತರಬೇತುದಾರರಿಗೆ ಸಕಾಲಕ್ಕೆ ಚಹಾ ಹಾಗೂ ಊಟದ ವ್ಯವಸ್ಥೆಯನ್ನು ನೇರವೇರಿಸಿದ್ದು , ಮೋದಲನೇ ದಿನದ ತರಬೇತಿಯಲ್ಲಿ ಎಲ್ಲಾ ಶಿಬಿರಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು.
ಎರಡನೇ ದಿನದ ವರದಿ : ದಿನಾಂಕ: 29-09-2015 ರಂದು STF ಕಾರ್ಯಗಾರದ ಎರಡನೇ ದಿನದಂದು ಎಲ್ಲಾ ಕೊಪ್ಪಳ ಜಿಲ್ಲೆಯ ವಿಜ್ಞಾನ ಶಿಕ್ಷಕರು ಸರಿಯಾಗಿ ೧೦:೦೦ ಗಂಟೆಗೆ ಡಯಟ್ ಮುನಿರಾಬಾದ್ ನಲ್ಲಿ ಆಗಮಿಸಿದ್ದೇವು.ಶ್ರೀ ಮುತ್ತುರಾಜ ಶಿಕ್ಷಕರು ಪ್ರಾರಂಭದಲ್ಲಿ ತುಂಬಾ ಚೆನ್ನಾಗಿ ಮೊದಲೇ ದಿನದ ಕಾರ್ಯಗಾರದ ವರದಿ ವಾಚನ ಮಾಡಿದರು.ನಂತರ ಸಂಪನ್ಮೂಲ ಶಿಕ್ಷಕರಾದ ಶಿವಯೋಗೆಪ್ಪ ಹಾಗೂ ರಮೇಶ ಶಿಲ್ಪಿ ಮತ್ತು ಡಯಟ್ ನ ಉಪನ್ಯಾಸಕರಾದ ಶ್ರೀ ಕೃಷ್ಣ ಇವರು ಮೂರು ಜನ ಶಿಕ್ಷಕರನ್ನು ಒಳಗೊಂಡ ಒಂದೊಂದು ತಂಡವನ್ನು ರಚನೆ ಮಾಡಿದರು .ಒಂದೊಂದು ತಂಡಕ್ಕೂ ಒಂದೊಂದು ಗಣಕಯಂತ್ರವನ್ನು ನಿಯೋಜಿಸಿದರು..ಇ-ಮೇಲ್ ಅಕೌಂಟ್ ರಚನೆ , ಕಳಹುಹಿಸುವುದು ,ಇನ್ ಬಾಕ್ಸ ತೆರೆಯುವುದು ಹಾಗೂ ಇತರರಿಗೆ ಇ-ಮೇಲ್ ಕಳಹುಹಿಸುವುದನ್ನು ಸರಳ ಸುಲಭವಾಗಿ ನಮ್ಮ ಇಬ್ಬರು ಸಂಪನ್ಮೂಲ ಶಿಕ್ಷಕರು ಕಿಂಚಿತ್ತೂ ಬೇಸರಪಟ್ಟುಕೊಳ್ಳದೆ ಉತ್ಸಾಹದಿಂದ ಎಲ್ಲಾ ಶಿಕ್ಷಕರಿಗೂ ತಾಳ್ಮೆಯಿಂದ ತಿಳಿಸಿಕೊಟ್ಟರು. ನಂತರ ರಮೇಶ ಶಿಲ್ಪಿ ಸರ್ ಹಾಗೂ ಶಿವಯೊಗೆಪ್ಪ ಇವರು ಟೀ ವಿರಾಮವಿದೆ ಟೀ ಕುಡಿದು ನಿಮ್ಮ ಕಾರ್ಯಗಳು ಮುಂದುವರೆಸಿ ಎಂದಾಗ ಎಲ್ಲ ಶಿಕ್ಷಕರು ತಮ್ಮ ಕಂಪ್ಯೂಟರ್ ಮುಂದೆ ಇ-ಮೇಲ್ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಾ ಉತ್ಸಾಹದಿಂದ ಕುಳಿತಿದ್ದರು ಅಂತೂ ಮನಸ್ಸಿಲ್ಲದೆ ಟೀ ವಿರಾಮ ಮುಗಿಸಿ ಬೇಗನೆ ಶಿಕ್ಷಕರೆಲ್ಲರೂ ಕಂಪ್ಯೂಟರ್ ಮುಂದೆ ಕುಳಿತಿದ್ದರು .ಸಂಪನ್ಮೂಲ ಶಿಕ್ಷಕರಾದ ಶ್ರೀ ಶಿವಯೋಗಿ ಸರ್ ರವರು ಅಂತರ್ಜಾಲದಲ್ಲಿ ಕೊಯರ್ ನ್ನು ತೆರೆಯುವುದು ಹಾಗೂ ಎಲ್ಲಾ ಶಿಕ್ಷಕರು STF ಸದಸ್ಯತ್ವ ಹೇಗೆ ಪಡೆಯಬೇಕು ಎಂಬುದನ್ನು ತಿಳಿಸಿಕೊಟ್ಟರು.ಎಲ್ಲಾ ಶಿಕ್ಷಕರು ಲವಲವಿಕೆಯಿಂದ STF ಸದಸ್ಯತ್ವ ಅರ್ಜಿ ಭರ್ತಿ ಮಾಡಿದೆವು.ವಿಜ್ಞಾನ ವಿಷಯಾಧರಿತ ಚಟುವಟಿಕೆಗಳನ್ನು ಹೇಗೆ ನಿರ್ವಹಿಸಬೇಕೆಂದು ಎಂಬುದನ್ನು ನಮ್ಮ ಇಬ್ಬರು ಸಂಪನ್ಮೂಲ ಶಿಕ್ಷಕರು ಚಟುವಟಿಕೆಯ ಹತ್ತು ಹಂತಗಳನ್ನು ಸರಳವಾಗಿ ಮಾದರಿ ಬಳಸಿ ಸರಳವಾಗಿ ವಿವರಿಸಿದರು. ಪ್ರತಿಯೊಂದು ತಂಡಕ್ಕೂ ಒಂದೊಂದು ಚಟುವಟಿಕೆಯನ್ನು ಹಂಚಿಕೊಟ್ಟು ಭೋಜನ ವಿರಾಮ ನೀಡಿದರು ಎಲ್ಲ ಶಿಕ್ಷಕರು ಭೋಜನಕ್ಕೆ ಹೋಗದೆ ಕಂಪ್ಯೂಟರ್ ಮುಂದೆ ಚಟುವಟಿಕೆಯನ್ನು ಏಕಾಗ್ರತೆಯಿಂದ ಮಾಡುತ್ತಾ ಕುಳಿತಿದ್ದರು.ಭೋಜನಕ್ಕೆ ಹೋದಾಗಲೂ ಚಟುವಟಿಕೆ ಹೇಗೆ ಮಾಡುವುದು ? ಸಂಪನ್ಮೂಲಗಳನ್ನು ಹೇಗೆ ಸಂಗ್ರಹಿಸುವುದು ? ಹೀಗೆ ಮಾತನಾಡುತ್ತಾ ಭೋಜನವನ್ನು ಮುಗಿಸಿದರು. ಭೋಜನದ ನಂತರ ಪುನಃ ಕಂಪ್ಯೂಟರ್ ಮುಂದೆ ಚಟುವಟಿಕೆಯ ಹತ್ತು ಹಂತಗಳನ್ನು ಶಿಲ್ಪಿ ಸರ್ ಹಾಗೂ ಶೀವಯೋಗೆಪ್ಪ ಸರ್ ಇವರ ಸಲಹೆ , ಮಾರ್ಗದರ್ಶನದಂತೆ ಕಂಪ್ಯೂಟರ್ ನಲ್ಲಿ ಮುದ್ರಿಸುತ್ತಾ ಕುಳಿತ್ತಿದ್ದಾಗ ಚಹಾ ವಿರಾಮ ಆಗಿದ್ದು ಗೊತ್ತಾಗಲೇ ಇಲ್ಲ.ಚಹಾ ವಿರಾಮದ ನಂತರ ಪುನಃ ಎಲ್ಲ ಶಿಕ್ಷಕರು ಚಟುವಟಿಕೆಯಿಂದ ,,ಲವಲವಿಕೆಯಿಂದ ಕೊಯರ್ ಪೇಜ್ ನಲ್ಲಿ ಮಾಡಿರುವ ಟೆಂಪ್ಲೇಟ್ ಗಳನ್ನು ಕಂಟ್ರಿಬ್ಯೂಟ್ ಮಾಡಿ ಅಪಲೋಡ್ ಮಾಡಿದರು.
ಮೂರನೇ ದಿನದ ವರದಿ :ದಿನಾಂಕ : 30-09-2015 ರಂದು ಸ್ವತಃ ಶಿಭಿರಾರ್ಥಿಗಳೆ ಸಿದ್ಧಪಡಿಸಿಕೊಂಡ ವಿಜ್ಞಾನ ಚಟುವಟಿಕೆಯ ಸರಳ ಪ್ರಯೋಗಗಳ ಸಾಮಗ್ರಿಗಳನ್ನು ಜೋಡಿಸಿ ಪ್ರಯೋಗಕ್ಕೆ ಸಿದ್ಧವಾದರು.ಶ್ರೀಶಿವಯೋಗೆಪ್ಪ ಇವರ ಕ್ಯಾಮೆರ ಕಣ್ಣನಲ್ಲಿ ಸುಮಾರು ೧೪ ತಂಡಗಳ ವಿವಿಧ ವಿಜ್ಞಾನ ಚಟುವಟಿಕೆಗಳ ಪ್ರಯೋಗಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಿದರು.ನಂತರ ಫ್ರೀ ಮೈಂಡ್ ಬಳಕೆ , ಹಾಗೂ ವಿಜ್ಞಾನ ವಿಷಯ ಬೋಧನೆಯಲ್ಲಿ ಶಿಕ್ಷಕರು ಎದುರಿಸುವ ಸವಾಲಗಳೇನು ಎನ್ನುವುದರ ಬಗ್ಗೆ ರಮೇಶ ಶಿಲ್ಪಿ ಇವರು ಶಿಕ್ಷಕರನ್ನು ಚರ್ಚೆಗೆ ಒಳಪಡಿಸದರು.
ನಾಲ್ಕನೇ ದಿನದ ವರದಿ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮುನಿರಾಬಾದ ತಾ: ಮತ್ತು ಜಿ: ಕೊಪ್ಪಳ ಎಸ್ ಟಿ ಎಪ್ ವಿಜ್ಞಾನ ವಿಷಯದ ಕಾರ್ಯಾಗಾರ 2015-16. ದಿನಾಂಕ: 02: 10:2015 **** ಅಮೃತವಾಣಿ **** “ ಒಂದು ಧನಾತ್ಮಕ ಆಲೋಚನೆ ನೂರು ಸಮಸ್ಯೆಗಳನ್ನು ಪರಿಹರಿಸುತ್ತದೆ. ಒಂದು ಋಣಾತ್ಮಕ ಆಲೋಚನೆ ನೂರು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ” ದಿನಾಂಕ: 01/10/2015 ರಂದು ನಡೆದ ಕಾರ್ಯಾಗಾರದ ಚಟುವಟಿಕೆಗಳ ವರದಿ ವಾಚನ. ಮುಂಜಾನೆ 10=00 ಗಂಟೆಗೆ ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಾಗಾರವು ಪ್ರಾರಂಭವಾಹಿತು ದಿನಾಂಕ:30/09/2015 ರಂದು ನಡೆದ ಚಟುವಟಿಕೆಗಳ ವರದಿಯನ್ನು ಶ್ರೀ ಉಮೇಶ ಎತ್ತಿನಮನಿ ಸ.ಶಿ. ಸರಕಾರಿ ಪ್ರೌಢ ಶಾಲೆ ಬಂಡಿ ತಾ:ಯಲಬುರ್ಗಾ ಇವರು ಸ್ವಾರಶ್ಯಕರವಾಗಿ ವಾಚಿಸಿದರು.10:30ಕ್ಕೆ GIMP Image Apllication ಮೂಲಕ ಬಾವಚಿತ್ರಗಳನ್ನು ಹೇಗೆ ಏಡಿಟ್ ಮಾಡುವುದು ಎಂಬುವುದನ್ನು ಕುರಿತು ಶ್ರೀ ಶಿವಯೋಗಪ್ಪ ರವರು ವಿವರಿಸಿದರು ಹಾಗೂ ಸದರಿ ಬಾವಚಿತ್ರವನ್ನು ಹೇಗೆ mathssciencestf@googlegroups.com ಗೆ ಹೇಗೆ ಅಪ್‍ಲೋಡ ಮಾಡಬೇಕೆಂದು ಸೂಚಿಸಿದರು.ಆ ನಿಟ್ಟಿನಲ್ಲಿ ಪ್ರತಿಯೋಬ್ಬರು ಪ್ರಯತ್ನಿಸಿ ಯಶÀಸ್ವಿಯಾದರು. ತದ ನಂತರ 11:30 ರಿಂದ ಶ್ರೀ ಕೃಷ್ಣ ಸರ್ ಡಯಟ್ ಉಪನ್ಯಾಸಕರು ಇವರ ನಿರ್ದೇಶನದ ಮೇರೆಗೆ ವಿಜ್ಞಾನ ವಿಷಯದಲ್ಲಿನ ಕಠಿಣ ವಿಷಯಗಳ ಕುರಿತು ಚರ್ಚಿಸಿದರು. ಉದಾಹರಣೆ: ಅಯಾನಿಕ ವಾಹಕತೆಯ ಕುರಿತು ಶ್ರೀ ರಾಜೇಶ ಅಂಗಡಿಯವರು ಗಹನವಾದ ಪ್ರಶ್ನೆ ಎತ್ತಿದರು. ಆU ಶ್ರೀ ಮತಿ ಸುಜಾತಾ ಅಣ್ಣೀಗೇರಿ,ಶ್ರೀ ಜೀವೇಶ ಕುಲಕರ್ಣಿ ಹಾಗೂ ಶ್ರೀ ನಿರಂಜನ ಇವರು ಅದಕ್ಕೆ ಉತ್ತರಿಸಲು ಯತ್ನಿಸಿದರು. ಪ್ರಶ್ನೆ ಪತ್ರಿಕೆ ಕುರಿತು ಶ್ರೀ ವಿಕ್ರಾಂತ ರವರು ಹಾಗೂ ಕ್ಲೋರಿನ್ ಅನಿಲದ ತಯಾರಿಕೆಯ ಕುರಿತು ಶ್ರೀ ಮತಿ ಭಾಗ್ಯಲಕ್ಷ್ಮಿಯವರು ವಿಷಯ ಮಂಡಿಸಿದರು. ಸರಿಯಾಗಿ 12:00 ಗಂಟೆಗೆ ಟೀ ವಿರಾಮವನ್ನು ನೀಡಲಾಯಿತು. ನಂತರ 12:10 ರಿಂದ Free mind map application ಕುರಿತು ವಿವರಣೆ ನೀಡಿದರು. ಎಲ್ಲರೂ ವಿವಿದ ಘಟಕಗಳನ್ನು ಆಯ್ಕೆಮಾಡಿಕೊಂಡು Free mind map ರಚಿಸಿ ಅವುಗಳನ್ನು ತಮ್ಮ ಮೇಲ್ ಐಡಿಯನ್ನು ಉಪಯೋಗಿಸಿ mathssciencestf@googlegroups.com ಗೆ ಕಳುಹಿಸಿದರು ಹಾಗೂ ಆ ಕಾರ್ಯದಲ್ಲಿ ಊಟದ ವಿರಾಮದ ವರಗೂ ತೊಡಗಿಸಿಕೊಂಡಿದ್ದರು. 2:00 ಗಂಟೆಗೆ ಊಟದ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ ಶಿಲ್ಪಿಯವರು ಉಬಂಟು ಸಾಪ್ಟವೇರನಲ್ಲಿರುವ ಸೈನ್ಸ ಮೆನುವಿನಲ್ಲಿ ಆವರ್ತಕ ಕೋಷ್ಟಕ ಅಪ್ಲಿಕೇಶನ ಪರಿಚಯ ನೀಡಿದರು.ಇದರ ಸಹಾಯದಿಂದ ದಾತುಗಳ ಸಂಕೇತ,ಪರಮಾಣು ಸಂಖ್ಯೆ,ಪರಮಾಣು ರಾಶಿ ಸಂಖ್ಯೆ,ಪರಮಾಣು ರಚನೆ,ಮುಂತಾದ ಹತ್ತು ಹಲವು ವಿಷಯಗಳನ್ನು ಅದರ ಸಹಾಯದಿಂದ ಪಡೆದೆವು. ಹಾಗೆಯೇ Stellarium ಅಪ್ಲಿಕೇಶನ್ ನ ಸಹಾಯದಿಂದ ಭೂಮಿಯ ವಿವಿದ ಬಾಗಗಳಲ್ಲಿನ ಆಕಾಶ ವೀಕ್ಷಣೆ,ಗ್ರಹಗಳ ಸ್ಥಾನ ಗುರುತಿಸಲು,ಅಕ್ಷಾಂಶ ಮತ್ತು ರೇಖಾಂಶಗಳನ್ನು ,ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಮತ್ತಿತರ ಅಗತ್ಯ ಮಾಹಿತಿಗಳನ್ನು ನೀಡಿದರು.PhET Simulation ನ ಸಹಾಯದಿಂದ ಚಾರ್ಲ್ಸಾ ನಿಯಮ ನಿರೂಪಣೆ ,ಅಣುರಚನೆ,ಉಷ್ಣತೆಯ ಪರಿಣಾಮ ಮುಂತಾದ ಭೌತ ಶಾಸ್ತ್ರ ಬೋದನೆಗೆ ಸಂಬಂದಿಸಿದ ಅನೇಕ ಉದಾಹರಣೆಗಳನ್ನು ನೀಡಿದರು.
ಐದನೇ ದಿನದ ವರದಿ :ಐದನೇ ದಿನದ ತರಬೇತಿಯು ನಾಲ್ಕನೇ ದಿನದ ಅಪೂರ್ಣಗೊಳಿಸಿದ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಲು ತಿಳಿಸುವ ಮೂಲಕ ಪ್ರಾರಂಭವಾಯಿತು.ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಶಿಲ್ಪಿ ಹಾಗೂ ಶಿವಯೋಗೆಪ್ಪ ಇವರು ಒಪನ್ ಶಾಟ್ ವಿಡಿಯೋ ಎಡಿಟ್ ಪ್ರೋಗ್ರಾಂ ಬಳಸಿ ಶಿಬಿರಾರ್ಥಿಗಳು ತಾವು ಸರಳ ಉಪಕರಣಗಳನ್ನು ಬಳಸಿಕೊಂಡು ತಯಾರಿಸಿದ ವಿಜ್ಞಾನ ಚಟುವಟಿಕೆ ಪ್ರಯೋಗದ ವಿಡಿಯೋವನ್ನು ಬಳಸಿ ಎಡಿಟ್ ಮಾಡುವ ವಿಧಾನವನ್ನು ತಿಳಿಸಿ ಪ್ರಾಯೋಗಿಕ ಮಾಡಲು ಅವಕಾಶ ನೀಡಿದರು. ನಂತರ ಉಬುಂಟು ಓಎಸ್ ನ್ನು ಕಂಪ್ಯೂಟರ್ ನಲ್ಲಿ ಇನ್ ಸ್ಟಾಲ್ ಮಾಡುವ ವಿಧಾನವನ್ನು ಕೊಯರ್ ನಲ್ಲಿರುವ ವಿಡಿಯೋವನ್ನು ಬಳಸಿ ಪ್ರೋಜೆಕ್ಟರ್ ನಲ್ಲಿ ತೋರಿಸಿ ವಿವರಿಸಲಾಯಿತು .ಎಸ್.ಟಿ.ಎಫ್.ವಿಜ್ಞಾನ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ ಕೃಷ್ಣರವರು ಡಯಟ್ ಉಪನ್ಯಾಸಕರು ಹಾಗೂ ಶ್ರೀ ವಿರುಪಾಕ್ಷಯ್ಯ ಉಪನ್ಯಾಸಕರು ಡಯಟ್ ಮುನಿರಾಬಾದ ಕೊಪ್ಪಳ ಜಿಲ್ಲೆ ಇವರುಗಳು ಐದು ದಿನಗಳ ತರಬೇತಿಯಲ್ಲಿ ಗಳಿಸಿದ ಜ್ಞಾನವನ್ನು ತಮ್ಮ ಶಾಲೆಗಳಲ್ಲಿ ತೆರಳಿ ಶಾಲಾ ಕಂಪ್ಯೂಟರ್ ಪ್ರಯೋಗಾಲಯ ಕೊಠಡಿಯನ್ನು ವಿಷಯ ಭೋಧನೆಯಲ್ಲಿ ಸಮರ್ಪಕವಾಗಿ ಬಳಸಿ ಗುಣಮಟ್ಟ ಶಿಕ್ಷಣಕ್ಕೆ ಶ್ರಮಿಸಬೇಕೆಂದು ಕರೆನೀಡುವುದರ ಮೂಲಕ ಐದು ದಿನಗಳ ತರಬೇತಿಗೆ ತೆರೆ ಎಳೆದರು.

Hindi

Batch 1

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.