"ಕಂಪ್ಯೂಟರ್ ಕಲಿಯುವುದು ಕಷ್ಟ,ಕಲಿತ ಮೇಲೆ ಇಷ್ಟ,ಕಲಿಯದಿದ್ದರೆ ನಷ್ಟ"ಎನ್ನುವ ಪರಿಜ್ಞಾನದ ಹಿನ್ನಲೆಯಲ್ಲಿ ೧೯-೧೨-೨೦೧೪ ರ ನಾಲ್ಕನೇದಿನದ ಪ್ರಥಮ ಅವಧಿಯಲ್ಲಿ ಶ್ರೀ ವಿಶ್ವನಾಥ ಶೆಟ್ಟಿಯವರು ತರಗತಿ ಕೋಣೆಯಲ್ಲಿ ಪರಿಣಾಮಕಾರಿಯಾದ ಬೋಧನೆಯಲ್ಲಿ ಅಂತರ್ ಜಾಲ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಗದ್ಯ ಮತ್ತು ಪದ್ಯ ಬೋಧನೆಯ ಹಂತಗಳನ್ನು ವಿವರಿಸುತ್ತಾ ಚರ್ಚೆಗೆ ಅವಕಾಶ ನೀಡಿದರು.ಚಹಾ ವಿರಾಮದ ನಂತರ ೩ ನೇ ಅವಧಿಯಲ್ಲಿ ಗದ್ಯಭಾಗದಲ್ಲಿ "ಎದೆಗೆ ಬಿದ್ದ ಅಕ್ಷರ" ಆಯ್ಕೆ ಮಾಡಿಕೊಂಡು ತಂತ್ರಜ್ಞಾನವನ್ನು ವಿವಿಧ ಹಂತಗಳಲ್ಲಿ ಹೇಗೆ ಬಳಸಿಕೊಳ್ಳಬಹುದೆಂದು ವಸ್ತುನಿಷ್ಠವಾಗಿ ವಿವರಣೆ ನೀಡಿದರು. ಇದರೊಂದಿಗೆ ಶಿಬಿರಾರ್ಥಿಗಳ ಹೊಸ ಯೋಜನೆ- ಯೋಚನೆಗಳಿಗೆ ಅವಕಾಶವನ್ನು ಕೊಟ್ಟು ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯಲ್ಲಿ ನಾವು ಪಾಲುದಾರರಾದೆವು.ಪದ್ಯಭಾಗದಲ್ಲಿ "ಹಕ್ಕಿ ಹಾರುತಿದೆ ನೋಡಿದಿರಾ " ಇದಕ್ಕೆ ಸಂಬಂದಿಸಿದ ಪದ್ಯಭಾಗದ ವಿವಿಧ ಹಂತವನ್ನು ತಲುಪಿದ್ದಲ್ಲದೇ ಪದಕ್ಕೆ ಬೇಕಾದ ಭಾವ ,ಅದಕ್ಕೆ ಸಂಬಂಧಿಸಿದ ಚಿತ್ತವನ್ನು ಕ್ಷಣಾರ್ಧಾದಲ್ಲಿ ಒದಗಿಸಿ ಬೆರಗುಗಣ್ಣಿನ ಭಾವ ನಮ್ಮದಾಯಿತು ನಂತರ ಶಿಬಿರಾರ್ಥಿಗಳು ಮೊದಲೇ ಹಂಚಿಕೊಂಡಂತೆ ಗದ್ಯ ಮತ್ತು ಪದ್ಯಕ್ಕೆ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಬಳಸಿ ೫ ನೇ ದಿನದ ಪ್ರಾತ್ಯಕ್ಷಿತೆಗೆ ತಯಾರಿಯನ್ನು ಮಾಡುವುದರಲ್ಲಿ ತನ್ಮಯರಾದರು.
+
ಊಟದ ವಿರಾಮದ ನಂತರ ಮೊದಲ ಅವಧಿಯಲ್ಲಿ ಮಂಗಳೂರಿನ ಸಿ .ಟಿ.ಇ ನ ಹಿರಿಯ ಉಪನ್ಯಾಸಕರಾದ ಡಾ,ಕುಮಾರಸ್ವಾಮಿಯವರ ಜೊತೆ ವಿಡಿಯೋ ಕಾನ್ಪರೆನ್ಸನಲ್ಲಿ ಮಾತನಾಡಿ ಇಂಥಹದೊಂದುರ ತಂತ್ರಜ್ಞಾನ ಬಳಸಿ ತರಗತಿ ಕೋಣೆಯಲ್ಲಿ ಅಗತ್ಯ ಬಿದ್ದಾಗ ಸಂಬಂಧಪಟ್ಟ ಸಂಪನ್ಮೂಲವನ್ನು ಹೇಗೆ ಬಳಕೆಮಾಡಬಹುದು ಎನ್ನುವುದನ್ನು ಕಾಣಿಸಲಾಯಿತು. ನಂತರದ ಅವಧಿಯಲ್ಲಿ ಶಿಬಿರಾರ್ಥಿಗಳು ೫ ನೇ ದಿನದ ಅವಧಿಗೆ ನೀಡಬೇಕಾದ ಪಾಠದ ತಯಾರಿಯಲ್ಲಿ ಮಗ್ನರಾದಂತೆ ಕಂಡು ಬಂದರೂ ಅದರ ಸಾರ್ಥಕತೆಯ ಭಾವ ೫ ನೇ ದಿನಕ್ಕೆ ಎನ್ನುವ ತವಕ ಕಾಣುವಂತಿತ್ತು. ಕೊನೆಯ ಅವಧಿಯನ್ನು ಶಶಾಂಕರವರು ಕ್ರೋಢಿಕ್ರತ ದಾಖಲೆ ನಿರ್ವಹಣೆಯ(spread sheet)ನ ಬಗೆಗೆ ಹೇಳಿದಾಗ ಪೆನ್ನು ,ಪೇಪರಿಗೆ ಎಳ್ಳುನೀರು ಬಿಡಬಹುದೆನೋ.......! ಎನಿಸಿತು.ಸಂಜೆಯ ಸಾಂಸ್ರ್ಕತಿಕ ಕಾರ್ಯಕ್ರಮ ವಿಭಿನ್ನವಾಗಿ ಮೂಡಿಬಂತು. ಕಗ್ಗದ ಈ ಸಾಲುಗಳನ್ನು ಹೇಳಿ ನಮ್ಮ ತಂಡದ ವರದಿಯನ್ನು ಮುಗಿಸುತ್ತಿದ್ದೆವೆ.