Line 16: |
Line 16: |
| }} | | }} |
| ===Workshop short report=== | | ===Workshop short report=== |
− | Upload workshop short report here (in ODT format), or type it in day wise here
| + | |
| + | '''1st Day.''' |
| + | |
| + | ಬೆಳಿಗ್ಗೆ 9.30 ರಿಂದ 10.00 ಘಂಟೆಯವರೆಗೆ ತರಬೇತಿಗೆ ಹಾಜರಾಗಿರುವ ಶಿಕ್ಷಕರ ನೋಂದಣಿ ಮಾಡಲಾಯಿತು. 10.05 ಕ್ಕೆ ಸರಿಯಾಗಿ ಡಯಟ್‌ನ ಉಪಪ್ರಾಂಶುಪಾಲರಾದ ಶ್ರೀಯುತ ಕೆ.ಕಾಂತರಾಜುರವರು ತರಬೇತಿಯನ್ನು ಉದ್ಘಾಟಿಸಿ, ತಮ್ಮ ಉದ್ಘಾಟನಾ ಭಾಷಣದಲ್ಲಿ ಕಂಪ್ಯೂಟರ್ ಜ್ಞಾನದ ತಿಳುವಳಿಕೆಯ ಅಗತ್ಯತೆ ಮತ್ತು ಅನಿವಾರ್ಯತೆಯನ್ನು ತಿಳಿಸಿದರು. ನಂತರ ಈ ಎಸ್.ಟಿ.ಎಫ್.ತರಬೇತಿಯ ನೋಡಲ್ ಅಧಿಕಾರಿಯಾಗಿರುವ ಶ್ರೀಮತಿ ಲಕ್ಷ್ಮೀ ರವರು ಹಾಜರಾಗಿರುವ ಎಲ್ಲಾ ಶಿಕ್ಷಕರುಗಳ ಪರಿಚಯ ಮಾಡಿಕೊಂಡರು. ನಂತರ ಪೂರ್ವಪರೀಕ್ಷೆಯನ್ನು ಮಾಡುವ ಮೂಲಕ ಶಿಕ್ಷಕರುಗಳ ಕಂಪ್ಯೂಟರ್ ಜ್ಞಾನವನ್ನು ಅರಿಯಲಾಯಿತು. ನಂತರ ಶ್ರೀ ರಮೇಶ್ ರವರು ಕಂಪ್ಯೂಟರ್ ಬೇಸಿಕ್ ಬಗ್ಗೆ ಮಾಹಿತಿಯನ್ನು ನೀಡಿದರು. ಇದರಲ್ಲಿ ಇನ್‌ಪುಟ್, ಔಟ್‌ಪುಟ್, ಸಿ.ಪಿ.ಯು, ಮೆಮೊರಿ ಯುನಿಟ್‌ಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಮದ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಉಮೇಶ್ ಆಚಾರ್ಯರವರು ಉಬುಂಟು ಓ.ಎಸ್. ನ ಬಗ್ಗೆ ಪಿ.ಪಿ.ಟಿ.ಯನ್ನು ನೀಡಿ ಅದರ ಉಪಯುಕ್ತತೆಯನ್ನು ಹಾಗೂ ಅದರ ವಿಶೇಷತೆಯನ್ನು ವಿವರಿಸಿದರು. ನಂತರ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಸಂದೀಪ್‌ಕುಮಾರ್ ರವರು ಉಬುಂಟು ಅಪ್ಲಿಕೇಷನ್‌ಗಳಾದ ಟಕ್ಸ್ ಟೈಪಿಂಗ್, ಟಕ್ಸ್ ಮ್ಯಾಥ್ಸ್ ಮತ್ತು ಟಕ್ಸ್ ಪೇಂಟ್ ನ ಬಗ್ಗೆ ಮಾಹಿತಿ ನೀಡಿ, ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು. |
| + | |
| + | '''2nd Day.''' |
| + | |
| + | ಎರಡನೇ ದಿನದ ಕಾರ್ಯಾಗಾರದಲ್ಲಿ ಬೆಳಿಗ್ಗೆ ಉಮೇಶ್ ರವರು ಲಿಬ್ರೆ ಆಫೀಸ್ ರೈಟರ್‌ನ ಕುರಿತು ಮಾಹಿತಿ ನೀಡಿ, ಅದನ್ನು ಹೇಗೆ ಬಳಸಿಕೊಳ್ಳಬೇಕೆಂದು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ನಂತರ ಪ್ರತಿಯೊಬ್ಬರು ಒಂದೊಂದು ಕಛೇರಿ ಸಂಬಂಧಿತ ಪತ್ರವನ್ನು ಟೈಪ್ ಮಾಡಿದರು. ಮಧ್ಯಾಹ್ನದ ಅವಧಿಯಲ್ಲಿ ಸಂದೀಪ್‌ರವರು ಲಿಬ್ರೆಆಫೀಸ್ ಕ್ಯಾಲ್ಕ ನ ಕುರಿತು ಮಾಹಿತಿ ನೀಡಿ, ಅದದ ವಿಶೇಷತೆ ಮತ್ತು ಅದನ್ನು ಬಳಸುವ ವಿಧಾನವನ್ನು ತಿಳಿಸಿದರು. ಎಲ್ಲರೂ ಪ್ರಾಯೋಗಿಕವಾಗಿ ಸಿ.ಸಿ.ಇ. ಅಂಕಗಳನ್ನು ಕ್ಯಾಲ್ಕನಲ್ಲಿ ನಮೂದಿಸುವುದನ್ನು ಪ್ರಾಯೋಗಿಕವಾಗಿ ಕಲಿತರು. ಇದಾದ ನಂತರ ಲಿಬ್ರೆ ಆಫಿಸ್ ರೈಟರ್‌ನಲ್ಲಿ ಕನ್ನಡವನ್ನು ಬಳಸುವ ವಿಧಾನ ಹಾಗೂ ಟೈಪ್ ಮಾಡುವುದನ್ನು ಕಲಿತರು. ನಂತರ ಇಂಟ್‌ರ್‌ನೆಟ್ ಬಳಸುವ ವಿಧಾನ ಹಾಗೂ ಇ-ಮೈಲ್ ಐಡಿ ರಚಿಸುವ ವಿಧಾನ ತಿಳಿಸಿಕೊಡಲಾಯಿತು. ಪ್ರತಿಯೊಬ್ಬರು ತಮ್ಮ ತಮ್ಮ ಇ-ಮೈಲ್ ಐಡಿ ರಚಿಸಿಕೊಂಡರು. |
| + | |
| + | '''3rd Day.''' |
| + | |
| + | ಮೂರನೇ ದಿನ ಅಂದರೆ ದಿನಾಂಕ: 18.12.2014 ರ ಬೆಳಿಗ್ಗೆ ಉಮೇಶ್ ಮತ್ತು ಸಂದೀಪ್ ರವರು ಉಬುಂಟುವಿನಲ್ಲಿರು ಗಣಿತದ ಉಪಯುಕ್ತ ಅಪ್ಲಿಕೇಷನ್ ಜಿಯೋಜಿಬ್ರಾ ದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ, ಅದರಲ್ಲಿರುವ ವಿವಿಧ ಟೂಲ್‌ಗಳನ್ನು ಬಳಸುವ ವಿಧಾನ ತಿಳಿಸಿದರು. ನಂತರ ಪ್ರತಿಯೊಬ್ಬರು ಪ್ರಾಯೋಗಿಕವಾಗಿ ಜಿಯೋಜಿಬ್ರಾವನ್ನು ಬಳಸಿಕೊಂಡು, ಗಣಿತದ ವಿವಿಧ ವಿಷಯಗಳಿಗೆ ಸಂಬಂಧಿತ ಪರಿಕಲ್ಪನೆಗಳನ್ನು ಬಿಡಿಸಿದರು. ಉದಾಹರಣೆಗೆ ಕೋನಗಳನ್ನು, ತ್ರಿಭುಜಗಳನ್ನು ರಚಿಸಿದರು, ತ್ರಿಭುಜಗಳಿಗೆ ಅಂತಃವೃತ್ತ ಮತ್ತು ಪರಿವೃತ್ತ ರಚಿಸಿದರು, ಇನ್ನು ಕೆಲವರು ನೇರ ಮತ್ತು ವ್ಯತ್ಯಸ್ತ ಸಾಮಾನ್ಯ ಸ್ಪರ್ಶಕಗಳನ್ನು ಕೂಡ ರಚಿಸಿದರು. ಮದ್ಯಾಹ್ನದ ಅವಧಿಯಲ್ಲಿ ಫ್ರೀಮೈಂಡ್ ನ ಬಗ್ಗೆ ಮಾಹಿತಿ ನೀಡಿ, ಒಂದು ಘಟಕವನ್ನು ಹೇಗೆ ವಿವಿಧ ಹಂತಗಳಾಗಿ ಮಾಡಿಕೊಂಡು, ಪಾಠಬೋಧನೆ ಮಾಡಬಹುದು ಎಂಬುದನ್ನು ತಿಳಿಸಲಾಯಿತು. ಇದಾದ ಮೇಲೆ ಪ್ರತಿಯೊಬ್ಬರು ಒಂದೊಂದು ಘಟಕದ ಮೇಲೆ ಫ್ರೀಮೈಂಡ್ ರಚಿಸಿದರು. |
| + | |
| + | '''4th Day.''' |
| + | |
| + | ನಾಲ್ಕನೇ ದಿನ ಅಂದರೆ ದಿನಾಂಕ: 19.12.2014 ರಂದು ಲಿಬ್ರೆ ಆಫೀಸ್ ರೈಟರ್‌ನಲ್ಲಿ ಗಣಿತದ ಸೂತ್ರವನ್ನು ಬಳಸುವ ವಿಧಾನವನ್ನು ಕಲಿತುಕೊಂಡರು. ನಂತರ ಎಲ್ಲರೂ 10 ನೇ ತರಗತಿಯ ಗಣಿತ ಪಠ್ಯಪುಸ್ತಕದಲ್ಲಿರುವ ಎಲ್ಲಾ ಸೂತ್ರಗಳನ್ನುಟೈಪ್ ಮಾಡಿದರು. ಇದರ ಜೊತೆಗೆ ವಿವಿಧ ಆಕೃತಿಗಳನ್ನು ಸ್ಕ್ರೀನ್‌ಶಾಟ್ ಮೂಲಕ ಇನ್ಸರ್ಟ್ ಮಾಡುವುದನ್ನು ಕಲಿತರು. ನಂತರ ಉಮೇಶ್ ರವರು ಕೋಯರ್ ಬಗ್ಗೆ ಮಾಹಿತಿ ನೀಡಿ, ಕೋಯರ್ ನ ವಿವಿಧ ಪೇಜ್‌ಗಳು ಅದರ ವಿಶೇಷತೆ ಹಾಗೂ ಬಳಸುವ ವಿಧಾನವನ್ನು ವಿವರವಾಗಿ ತಿಳಿಸಿದರು. ಪ್ರತಿಯೊಬ್ಬರು ಕೋಯರ್ ನು ಸಂದರ್ಶಿಸಿ, ಅಲ್ಲಿರುವ ವಿವರಗಳನ್ನು ತಿಳಿದುಕೊಂಡರು. ನಂತರ ಶಿಕ್ಷಕರುಗಳನ್ನು ಐದು ಗುಂಪುಗಳನ್ನಾಗಿ ಮಾಡಿ, ಕೋಯರ್‌ಗೆ ಸಂಪನ್ಮೂಲಗಳನ್ನು ರಚಿಸಲಾಯಿತು, ಹಾಗೂ ಈ ಸಂಪನ್ಮೂಲವನ್ನು ಪ್ರೆಸೆಂಟ್ ಮಾಡಿ, ಚರ್ಚಿಸಲಾಯಿತು. |
| + | |
| + | '''5th Day.''' |
| + | |
| + | ಕೊನೆಯ ದಿನ ಅಂದರೆ ದಿನಾಂಕ: 20.12.2014 ರಂದು ಮೊದಲಿಗೆ ಉಮೇಶ್‌ರವರು ತುಂಬಾ ಆಸಕ್ತಿದಾಯಕವಾದ ಅಪ್ಲಿಕೇಷನ್ ಸ್ಟೆಲೇರಿಯಂ ಬಗ್ಗೆ ಮಾಹಿತಿ ನೀಡಿ, ಅದರ ಮೇಲೆ ಎಲ್ಲರೂ ಪ್ರಾಯೋಗಿಕವಾಗಿ ವಿಷಯ ತಿಳಿದುಕೊಳ್ಳುವಂತೆ ಮಾಡಿದರು. ನಂತರ ಸಂದೀಪ್‌ರವರು ಫೆಟ್ ನ ಕುರಿತು ತಿಳಿಸಿ, ಅದರಲ್ಲಿರುವ ಇನ್ನಿತರ ವಿಷಯಗಳನ್ನು ಅವಲೋಕಿಸುವಂತೆ ತಿಳಿಸಿದರು. ಮದ್ಯಾಹ್ನದ ಅವಧಿಯಲ್ಲಿ ಜಿಂಪ್ ಇಮೇಜ್ ಎಡಿಟರ್ ಮೂಲಕ ಫೊಟೋವನ್ನು ಎಡಿಟ್ ಮಾಡುವುದು ತಿಳಿಸಲಾಯಿತು. ಇದಾದ ಮೇಲೆ ಉಬುಂಟುವನ್ನು ಕಂಪ್ಯೂಟರ್‌ಗೆ ಇನ್‌ಸ್ಟಾಲ್ ಮಾಡುವುದನ್ನು ತಿಳಿಸಲಾಯಿತು. |
| + | |
| + | |
| + | |
| + | ಐದು ದಿನಗಳು ನಡೆದ ಈ ತರಬೇತಿಯಲ್ಲಿ ಕಂಪ್ಯೂಟರ್ ಜ್ಞಾನದ ಕೊರತೆ ಇರುವವರು, ಸಂಪೂರ್ಣ ವಾಗಿ ತಿಳಿದಿರುವಂತವರು ಒಟ್ಟಾರೆ ಎಲ್ಲಾ ರೀತಿಯಾದ ಶಿಕ್ಷಕರು ಹಾಜರಾಗಿದ್ದು,ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಕಾರಿಯಾತ್ತು. ಕೆಲವರು ಕಂಪ್ಯೂಟರ್ ಅಪರೇಟ್ ಮಾಡುವುದು ತಿಳಿದುಕೊಂಡರೆ, ಹೆಚ್ಚಿನವರು ಉಬುಂಟುವನ್ನು ಆಸಕ್ತಿದಾಯಕವಾಗಿ ತಿಳಿದುಕೊಂಡು, ತಮ್ಮ ಸ್ವಂತ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಗಳಲ್ಲಿ ಬಳಸಿ ಇನ್ನಷ್ಟು ಹೆಚ್ಚಿನ ಅಧ್ಯಯನವನ್ನು ಮಾಡುವುದಾಗಿ ವಾಗ್ದಾನವಿತ್ತರು. ಒಟ್ಟಾರೆಯಾಗಿ ಈ ಐದು ದಿನಗಳ ತರಬೇತಿಯು ಅದರ ಮೂಲ ಉದ್ದೇಶವನ್ನು ಈಡೆರಿಸಿಕೊಂಡು ಸಂಪೂರ್ಣವಾಗಿ ಯಶಸ್ವಿಯಾಯಿತು. |
| | | |
| ==Batch 2== | | ==Batch 2== |