ಕನ್ನಡ ಎಸ್.ಟಿ.ಎಫ್ ತರಬೇತಿಯ ಮೂನೆಯ ತರಬೇತಿಯು ಬೆಳಗ್ಗೆ ರವರ ಸುಮಧುರವಾದ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಈ ದಿನ ಮೊದಲಿಗೆ ಎಲ್ಲರನ್ನೂ ಹಾಡು ಮನರಂಜನೆ ನೀಡುವ ಮೂ ಲಕ ಪ್ರಾರಂಬಿಸಿ ನಂತರ ಹಿಂದಿನ ದಿನದಲ್ಲಿ ಕಲಿತ ವಿಷಯಗಳ ಬಗ್ಗೆ ಮನನ ಮಾಡಿಕೊಳ್ಳಲಾಯಿತು. ಈ ದಿನ ಎಲ್ಲ ಶಿಕ್ಷಕರು ಅತ್ಯಂತ ಸಂತೋಷದಿಂದ ಉತ್ಸಾಹದಿಂದ ಕಲಿಯಲು ಆಸಕ್ತಿ ತೋರಿಸಿದ್ದರು . ಇದು ನಿಜಕ್ಕು ನಮಗೆ ಬಹಳ ಸಂತಸದ ವಿಷಯವಾಯಿತು ನಂತರ ನಾವೆಲ್ಲರು ಕನ್ನಡ ಭಾಷಾ ವಿಷಯದಲ್ಲಿ ಈಶ್ವರಪ್ಪನವರು ಕೋಯರ್ ಬಗ್ಗೆ ತರಬೇತುದಾರರಿಗೆ ಪರಿಚಯ ಮಾಡಿಕೊಟ್ಟರು. ಮಿಂಚಂಚೆ ಖಾತೆಯಲ್ಲಿ ಪ್ರಾಯೋಗಿಕವಾಗಿ ತನ್ನ ಖಾತೆಗೆ ಮಿಂಚಂಚೆ ಕಳುಹಿಸುವಂತೆ ಹೇಳಿ ಅಗತ್ಯ ಮಾರ್ಗದರ್ಶನ ಒದಗಿಸಿದರು. ನಾವೆಲ್ಲರೂ ಮಿಂಚಂಚೆ ತೆರೆಯು ವುದು ಹೊಸ ಸಂದೇಶ ನೋಡು ವು ದು ಹಾಗೂ ನಾವು ನಮ್ಮ ಖಾತೆಯಿಂದ ನಮ್ಮ ಎಸ್.ಡಿ.ಎಪ್ ಗುಂಪಿಗೆ ಮಿಚಂಚೆ ಕಳುಹಿಸುವುದನ್ನು ಅತ್ಯಂತ ಉತ್ಸಾಹದಿಂದ ಕಲಿತೆವು. ಮಧ್ಯಾಹ್ನದ ಊಟ ಬಹಳ ಚೆನ್ನಾಗಿತ್ತು ನಂತರ ನಮಗೆ ಗೂ ಗಲ ಸರ್ಚ ಬಗ್ಗೆ ತಿಳಿಸಿದರು ಹಾಗೂ ಅಲ್ಲಿನ ಚಿತ್ರಗಳನ್ನು ಲಿಂಕ್ ಗಳನ್ನು ಬಳಸಿ ಲಿಂಕ್ ಸೇವ್ ಮಾಡುವುದನ್ನು ಹಾಗೂ ನಮಗೆ ನೀಡಿದ್ದ ಪಾಠಗಳಿಗೆ ಸಂಬಂಧಿಸಿದಂತೆ ಮಾಹಿತಿ ಚಿತ್ರ ಹಾಗೂ ವೆಬ್ ಲಿಂಕ್ ಗಳನ್ನು ಸರ್ಚ್ ಮಾಡಿ ಹುಡುಕಿದೆವು ನಂತರ ಟೀ ವಿರಾಮ,ವಿರಾಮದ ನಂತರ ಇಂದಿನ ದಿನದಲ್ಲಿ ಹೇಳಿಕೊಟ್ಟ ಎಲ್ಲ ಅಂಶಗಳನ್ನು ಚೆನ್ನಾಗಿ ಅಬ್ಯಾಸ ಮಾಡಿದೆವು ಇಮೇಲ್ ವೆಬ್ ಸರ್ಚ್ ಹಾಗೂ ಲಿಂಕ್ ಮಾಹಿತಿ ಚಿತ್ರಗಳನ್ನು ಸೇವ್ ಮಾಡುವುದನ್ನು ಕಲಿತೆವು ಈ ದಿನ ಉತ್ತಮವಾಗಿ ಕಲಿತೆವು ಬಹಳ ಚೆನ್ನಾಗಿತ್ತು ತರಬೇತಿ ಚೆನ್ನಾಗಿತ್ತು.