ಎ.ಟಿ.ಎಫ್. ತರಬೇತಿಯ ೨ ನೇಯ ದಿನ. ಶಿಬಿರಾರ್ಥಿಗಳ ಮುಖದಲ್ಲಿ ಕೌತುಕ . ಹಿಂದಿನ ದಿನ ತೆರೆದ ತಮ್ಮ ಮೇಲ್ ಗಳಿಗೆ ಯಾವ ಯಾವ/ ಯಾರಯಾರ ಸಂದೇಶಗಳು ಬಂದಿರಬಹುದೆಂಬ ಕಾತರ. ತೆರೆದು ನೋಡಿದವರ ವದನಗಳಲ್ಲಿ ಸಾರ್ಥಕಥೆಯ ಮಹಾಪೂರ. ಶ್ರೀ ಸಂತೋಷ ಗುಣಾರೆಯವರು ಮೇಲ್ ನ್ನು ತೆರೆದು ನೋಡುವ , ಉತ್ತರಿಸುವ, ಉಳಿಸುವ ವಿಧಾನಗಳನ್ನು ಸವಿವರವಾಗಿ ಹಂತ ಹಂತವಾಗಿ ತಿಳಿಸಿದರು. ನಂತರದ ಅವಧಿ ಪ್ರಾಯೋಗಿಕ ಕಾರ್ಯಕ್ಕಾಗಿ. ಚಹಾ ವಿರಾಮದ ನಂತರವೂ ಶಿಬಿರಾರ್ಥಿಗಳು ಅಂತರ್ಜಾಲದಲ್ಲಿರುವ ವಿವರ, ಚಿತ್ರ ಹಾಗೂ ಲಿಂಕ್ ಗಳನ್ನು ಉಳಿಸುವ, ಕಾಪಿ ಮಾಡುವ, ಪೇಸ್ಟ್ ಮಾಡುವ ಕೆಲಸದಲ್ಲಿ ಪೇಸ್ಟ್ ಆಗಿಯೇ ಹೋಗಿದ್ದರು. ಅಷ್ಟರಲ್ಲಿ ಅಂತರ್ಜಾಲದ ಬಲೆ ಹರಿದು ಹೋಗಿದ್ದು ಗಮನಕ್ಕೆ ಬಂದಾಗ ಆತಂಕ ಆಕಳಿಕೆ ಆರಂಭ ವಾದರೂ ಕೆಲವೇ ಕ್ಷಣಗಳಲ್ಲಿ ಬಲೆ ಸರಿಯಾದದ್ದು ತಂತ್ರಜ್ಞರ ಕೈಚಳಕಕ್ಕೆ ಸಾಕ್ಷಿಯಾಗಿತ್ತು. ನಂತರ ಶ್ರೀಯುತ ಅರ್ಜುನ ಲಮಾನಿಯವರು ಬುಕ್ ಮಾರ್ಕ್ ಮತ್ತು ಇತಿಹಾಸಗಳ ಬಗ್ಗೆ ತಿಳಿಸಿಕೊಟ್ಟರು. ಕೊನೆಯಲ್ಲಿ ಕೀಲಿಮಣೆಯಲ್ಲಿ ಎಲ್ಲೆಲ್ಲಿ ಯಾವ ಬೆರಳುಗಳನ್ನು ಇಟ್ಟು ಅಕ್ಷರಗಳನ್ನು ಅಚ್ಚು ಮಾಡಬೇಕೆಂದು ತಿಳಿಸಿದರು. ಎರಡನೆಯ ದಿನದ ತರಬೇತಿ ಸಾರ್ಥಕವೆನಿಸುವುದರಲ್ಲಿ ಸಮದೇಹವೇ ಇಲ್ಲ. ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.. | ಎ.ಟಿ.ಎಫ್. ತರಬೇತಿಯ ೨ ನೇಯ ದಿನ. ಶಿಬಿರಾರ್ಥಿಗಳ ಮುಖದಲ್ಲಿ ಕೌತುಕ . ಹಿಂದಿನ ದಿನ ತೆರೆದ ತಮ್ಮ ಮೇಲ್ ಗಳಿಗೆ ಯಾವ ಯಾವ/ ಯಾರಯಾರ ಸಂದೇಶಗಳು ಬಂದಿರಬಹುದೆಂಬ ಕಾತರ. ತೆರೆದು ನೋಡಿದವರ ವದನಗಳಲ್ಲಿ ಸಾರ್ಥಕಥೆಯ ಮಹಾಪೂರ. ಶ್ರೀ ಸಂತೋಷ ಗುಣಾರೆಯವರು ಮೇಲ್ ನ್ನು ತೆರೆದು ನೋಡುವ , ಉತ್ತರಿಸುವ, ಉಳಿಸುವ ವಿಧಾನಗಳನ್ನು ಸವಿವರವಾಗಿ ಹಂತ ಹಂತವಾಗಿ ತಿಳಿಸಿದರು. ನಂತರದ ಅವಧಿ ಪ್ರಾಯೋಗಿಕ ಕಾರ್ಯಕ್ಕಾಗಿ. ಚಹಾ ವಿರಾಮದ ನಂತರವೂ ಶಿಬಿರಾರ್ಥಿಗಳು ಅಂತರ್ಜಾಲದಲ್ಲಿರುವ ವಿವರ, ಚಿತ್ರ ಹಾಗೂ ಲಿಂಕ್ ಗಳನ್ನು ಉಳಿಸುವ, ಕಾಪಿ ಮಾಡುವ, ಪೇಸ್ಟ್ ಮಾಡುವ ಕೆಲಸದಲ್ಲಿ ಪೇಸ್ಟ್ ಆಗಿಯೇ ಹೋಗಿದ್ದರು. ಅಷ್ಟರಲ್ಲಿ ಅಂತರ್ಜಾಲದ ಬಲೆ ಹರಿದು ಹೋಗಿದ್ದು ಗಮನಕ್ಕೆ ಬಂದಾಗ ಆತಂಕ ಆಕಳಿಕೆ ಆರಂಭ ವಾದರೂ ಕೆಲವೇ ಕ್ಷಣಗಳಲ್ಲಿ ಬಲೆ ಸರಿಯಾದದ್ದು ತಂತ್ರಜ್ಞರ ಕೈಚಳಕಕ್ಕೆ ಸಾಕ್ಷಿಯಾಗಿತ್ತು. ನಂತರ ಶ್ರೀಯುತ ಅರ್ಜುನ ಲಮಾನಿಯವರು ಬುಕ್ ಮಾರ್ಕ್ ಮತ್ತು ಇತಿಹಾಸಗಳ ಬಗ್ಗೆ ತಿಳಿಸಿಕೊಟ್ಟರು. ಕೊನೆಯಲ್ಲಿ ಕೀಲಿಮಣೆಯಲ್ಲಿ ಎಲ್ಲೆಲ್ಲಿ ಯಾವ ಬೆರಳುಗಳನ್ನು ಇಟ್ಟು ಅಕ್ಷರಗಳನ್ನು ಅಚ್ಚು ಮಾಡಬೇಕೆಂದು ತಿಳಿಸಿದರು. ಎರಡನೆಯ ದಿನದ ತರಬೇತಿ ಸಾರ್ಥಕವೆನಿಸುವುದರಲ್ಲಿ ಸಮದೇಹವೇ ಇಲ್ಲ. ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.. |