ಇಂಥ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ನಡೆಸುತ್ತಿರುವ ನಮ್ಮ ವೃತ್ತಿ ಬೆಳವಣಿಗೆಗೆ ಕಾರ್ಯಾಗಾರಗಳು ಅತೀ ಅವ ಶ್ಯಕ. ಏಕೆಂದರೆ ದೀಪವು ತಾನು ನಿರಂತರ ಉರಿಯುತ್ತಿದ್ದರೆ ಮಾತ್ರ ಇನ್ನೊಂದು ದೀಪವನ್ನು ಹೊತ್ತಿಸಲು ಸಾಧ್ಯ.. ಎಂಬ ರವೀಂದ್ರನಾಥ ಠಾಕೂರರ ಮಾತಿನಂತೆ ನಮಗೆ ಕನ್ನಡ ಶಿಕ್ಷಕರ ಅಭಿವೃದ್ಧಿಗಾಗಿ ಡಯಟ್ ಸಂಸ್ಥೆ ಹಮ್ಮಿಕೊಂಡ ಕನ್ನಡ ಭಾಷಾ ಶಿಕ್ಷಕರ ವೇದಿಕೆಯ ಕಾರ್ಯಾಗಾರದ ೨ನೇ ದಿನದ ವರದಿಯನ್ನು ನಮ್ಮ ಶರಾವತಿ ತಂಡದ ಪರವಾಗಿ ತಮ್ಮ ಮುಂದೆ ಓದಲು ಇಚ್ಚಿಸುತ್ತೇನೆ. ನಿನ್ನೆ ದಿನಾಂಕ ೨೦- ೦೧-೨೦೧೫ ರ ಮಂಗಳವಾರ ಬೆಳಿಗ್ಗೆ ೯.೩೦ ಕ್ಕೆ ಎಲ್ಲಾಕನ್ನಡ ಭಾಷಾ ಶಿಕ್ಷಕರ ಒಗ್ಗೂಡುವಿಕೆಯ ನಂತರ ತರಬೇತಿ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಕೀರಪ್ಪನವರು ಎಲ್ಲರನ್ನು ಸ್ವಾಗತಿಸಿ ಶರಾವತಿ ತಂಡದ ಶ್ರೀಮತಿ ಜ್ಯೋತಿಯವರು ವಿಘ್ನೇ ಶ್ವರನ ನ್ನ್ನು ಪ್ರಾರ್ಥಿಸಿದ ಬಳಿಕ ಶರಾವತಿ ತಂಡದ ಶ್ರೀವಿಷ್ಣುಗೌಡರು ಚಿಂತನೆಯನ್ನು ನಡೆಸಿಕೊಟ್ಟರು.ಬಳಿಕ ಸುಧೀರ್ಘ ವಾದ ಅಚ್ಚುಕಟ್ಟಾದ ವರದಿ ವಾಚನ ಮಾಡಿದರು. ಬಳಿಕ ೧,೧೫ಕ್ಕೆ ಫಕೀರಪ್ಪನವರು ಶಿಕ್ಷಕರು, ಶಿಕ್ಷಕರಿಗಾಗಿ, ಶಿಕ್ಷಕರಿಗೋಸ್ಕರ ತಯಾರಿಸಿದ Website KOER ನ ಪರಿಚಯ, ಬಳಕೆ ಅದರಲ್ಲಿ ನಮಗೆ ಲಭ್ಯವಾಗುವ ಕರ್ನಾಕ ಮುಕ್ತ ಶೈಕ್ಷಣಿಕ ಸಂಪನ್ಮೂಲದ ಕುರಿತು ವಿವರಿಸಿದರು. ಅಂತರ್ಜಾಲದ ಲೋಕದಲ್ಲಿ ಮುಳುಗಿದ್ದ ನಮಗೆ ಹಸಿವು ಮತ್ತು ಸಮಯದ ಅರಿವಿಲ್ಲದಿದ್ದರೂ ಊಟದ ನೆನಪು ಮಾಡಿದವರು ಫಕೀರಪ್ಪನವರು. ಊಟದ ಬಳಿಕ ಅತ್ತೂರು ಪ್ರೌಢಶಾಲೆಯ ಶ್ರೀ ಸುಬ್ರಹ್ಮಣ್ಯ ಉಪಾ ಧ್ಯರವರ ಸುಶ್ರಾವ್ಯ ಭಾವಗೀತೆ ಮತ್ತೊಮ್ಮೆ, ಇನ್ನೊಮ್ಮೆ, ಮಗದೊಮ್ಮೆ ನಮ್ಮನ್ನು ರಂಜಿಸಿತಲ್ಲದೆ ೩ನೇ ಅವಧಿಗೆ ಹೊಸಹುರುಪಿನಿಂದ ಪ್ರವೇಶಿಸಲು ಅನುವು ಮಾಡಿತು. ಮಧ್ಯಾಹ್ನ ೨ ಗಂಟೆಗೆ ೩ನೇ ಅವಧಿ ಲಘು ಹಾಸ್ಯದೊಂದಿಗೆತಮ್ಮ ತರತಿಯ ಅನುಭವಗಳನ್ನು ಹಂಚಿಕೊಂಡ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ವಿಶ್ವನಾಥಶೆಟ್ಟಿಯವರ ಅಗಾಧ ಜ್ಞಾನ ಮತ್ತು ಪಾಂಡಿತ್ಯಭರಿತ ಮಾತುಗಳು Android Phone ಇಲ್ಲದ ಹೆಚ್ಚಿನವರಲ್ಲಿ ಧೈರ್ಯವನ್ನು ತುಂಬಿತು ಎನ್ನಬಹುದು.ಅವರು ಭಾಷಾ ಕೌಶಲಗಳನ್ನು ಬಳಸಿಕೊಂಡು ಪಾಠಟಿಪ್ಪಣಿಯನ್ನು ತಯಾರಿಸುವುದು ಹೇಗೆ? ತಂತ್ರಜ್ಞಾನವನ್ನು ಬಳಸಿ ಪಾಠ ಮಾಡುವುದು ಹೇಗೆ? ಎಂಬ ಬಗ್ಗೆ ೧೦ನೇ ತರಗತಿಯ ಗದ್ಯಪಾಠ ಎದೆಗೆ ಬಿದ್ದ ಅಕ್ಷರ ಇದರ ಕಾಲ್ಪನಿಕ ನಕ್ಷೆಯ ಮೂಲಕ ಬಹಳ ಸೊಗಸಾಗಿ ತೋರಿಸಿಕೊಟ್ಟರು. ೩.೪೫ಕ್ಕೆ ಚಹಾವಿರಾಮದಲ್ಲಿ ಬಿಸಿಬಿಸಿ ಡ ಸೇವನೆಯ ಬಳಿಕ ೪ ಗಂಟೆಗೆ ಎಲ್ಲರ ಸಮಾಗಮ. ನಂತರ ಶ್ರೀ ವಿಶ್ವನಾಥ್ ಶೆಟ್ಟಿಯವರು ಅದೇ ಪಾಠದಲ್ಲಿ ಹಲವು ಚಿತ್ರಗಳನ್ನು ಬಳಸಿ ಜಾಗತೀಕರಣ ಮತ್ತು ವೈಚಾರಿಕತೆ ಯನ್ನು ಮಕ್ಕಳಲ್ಲಿ ಹೇಗೆ ಬೆಳೆಸಬಹುದೆಂದು,ಲಿಂಕ್ ಕೊಡುವ ಕೌಶಲ ಗಳಿಸುವುದು ಹೇಗೆ? ವ್ಯಾಕರಣಗಳನ್ನು ಹೇಗೆ ತಿಳಿಸಬಹುದೆಂದು ತೋರಿಸಿದರು. ತದನಂತರ ಪದ್ಯ ಪ್ರಾತ್ಯಕ್ಷಿಕೆ ಹಕ್ಕಿ ಹಾರುತಿದೆ ನೋಡಿದಿರಾ? ಪದ್ಯದ ಬಗ್ಗೆ ಪಾಠ ಪ್ರಾರಂಭಿಸುತ್ತಿದ್ದಂತೆ ತಂತ್ರಜ್ಞಾನ ಕೈಕೊಟ್ಟಿದ್ದು ಎಲ್ಲರಿಗೂ ಬೇಸರ ಮೂಡಿಸಿತ್ತು. ನಂತರ ಚರ್ಚೆಗೆ ಮುಕ್ತ ಅವಕಾಶ ನೀಡಲಾಯಿತು. | ಇಂಥ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ನಡೆಸುತ್ತಿರುವ ನಮ್ಮ ವೃತ್ತಿ ಬೆಳವಣಿಗೆಗೆ ಕಾರ್ಯಾಗಾರಗಳು ಅತೀ ಅವ ಶ್ಯಕ. ಏಕೆಂದರೆ ದೀಪವು ತಾನು ನಿರಂತರ ಉರಿಯುತ್ತಿದ್ದರೆ ಮಾತ್ರ ಇನ್ನೊಂದು ದೀಪವನ್ನು ಹೊತ್ತಿಸಲು ಸಾಧ್ಯ.. ಎಂಬ ರವೀಂದ್ರನಾಥ ಠಾಕೂರರ ಮಾತಿನಂತೆ ನಮಗೆ ಕನ್ನಡ ಶಿಕ್ಷಕರ ಅಭಿವೃದ್ಧಿಗಾಗಿ ಡಯಟ್ ಸಂಸ್ಥೆ ಹಮ್ಮಿಕೊಂಡ ಕನ್ನಡ ಭಾಷಾ ಶಿಕ್ಷಕರ ವೇದಿಕೆಯ ಕಾರ್ಯಾಗಾರದ ೨ನೇ ದಿನದ ವರದಿಯನ್ನು ನಮ್ಮ ಶರಾವತಿ ತಂಡದ ಪರವಾಗಿ ತಮ್ಮ ಮುಂದೆ ಓದಲು ಇಚ್ಚಿಸುತ್ತೇನೆ. ನಿನ್ನೆ ದಿನಾಂಕ ೨೦- ೦೧-೨೦೧೫ ರ ಮಂಗಳವಾರ ಬೆಳಿಗ್ಗೆ ೯.೩೦ ಕ್ಕೆ ಎಲ್ಲಾಕನ್ನಡ ಭಾಷಾ ಶಿಕ್ಷಕರ ಒಗ್ಗೂಡುವಿಕೆಯ ನಂತರ ತರಬೇತಿ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಕೀರಪ್ಪನವರು ಎಲ್ಲರನ್ನು ಸ್ವಾಗತಿಸಿ ಶರಾವತಿ ತಂಡದ ಶ್ರೀಮತಿ ಜ್ಯೋತಿಯವರು ವಿಘ್ನೇ ಶ್ವರನ ನ್ನ್ನು ಪ್ರಾರ್ಥಿಸಿದ ಬಳಿಕ ಶರಾವತಿ ತಂಡದ ಶ್ರೀವಿಷ್ಣುಗೌಡರು ಚಿಂತನೆಯನ್ನು ನಡೆಸಿಕೊಟ್ಟರು.ಬಳಿಕ ಸುಧೀರ್ಘ ವಾದ ಅಚ್ಚುಕಟ್ಟಾದ ವರದಿ ವಾಚನ ಮಾಡಿದರು. ಬಳಿಕ ೧,೧೫ಕ್ಕೆ ಫಕೀರಪ್ಪನವರು ಶಿಕ್ಷಕರು, ಶಿಕ್ಷಕರಿಗಾಗಿ, ಶಿಕ್ಷಕರಿಗೋಸ್ಕರ ತಯಾರಿಸಿದ Website KOER ನ ಪರಿಚಯ, ಬಳಕೆ ಅದರಲ್ಲಿ ನಮಗೆ ಲಭ್ಯವಾಗುವ ಕರ್ನಾಕ ಮುಕ್ತ ಶೈಕ್ಷಣಿಕ ಸಂಪನ್ಮೂಲದ ಕುರಿತು ವಿವರಿಸಿದರು. ಅಂತರ್ಜಾಲದ ಲೋಕದಲ್ಲಿ ಮುಳುಗಿದ್ದ ನಮಗೆ ಹಸಿವು ಮತ್ತು ಸಮಯದ ಅರಿವಿಲ್ಲದಿದ್ದರೂ ಊಟದ ನೆನಪು ಮಾಡಿದವರು ಫಕೀರಪ್ಪನವರು. ಊಟದ ಬಳಿಕ ಅತ್ತೂರು ಪ್ರೌಢಶಾಲೆಯ ಶ್ರೀ ಸುಬ್ರಹ್ಮಣ್ಯ ಉಪಾ ಧ್ಯರವರ ಸುಶ್ರಾವ್ಯ ಭಾವಗೀತೆ ಮತ್ತೊಮ್ಮೆ, ಇನ್ನೊಮ್ಮೆ, ಮಗದೊಮ್ಮೆ ನಮ್ಮನ್ನು ರಂಜಿಸಿತಲ್ಲದೆ ೩ನೇ ಅವಧಿಗೆ ಹೊಸಹುರುಪಿನಿಂದ ಪ್ರವೇಶಿಸಲು ಅನುವು ಮಾಡಿತು. ಮಧ್ಯಾಹ್ನ ೨ ಗಂಟೆಗೆ ೩ನೇ ಅವಧಿ ಲಘು ಹಾಸ್ಯದೊಂದಿಗೆತಮ್ಮ ತರತಿಯ ಅನುಭವಗಳನ್ನು ಹಂಚಿಕೊಂಡ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ವಿಶ್ವನಾಥಶೆಟ್ಟಿಯವರ ಅಗಾಧ ಜ್ಞಾನ ಮತ್ತು ಪಾಂಡಿತ್ಯಭರಿತ ಮಾತುಗಳು Android Phone ಇಲ್ಲದ ಹೆಚ್ಚಿನವರಲ್ಲಿ ಧೈರ್ಯವನ್ನು ತುಂಬಿತು ಎನ್ನಬಹುದು.ಅವರು ಭಾಷಾ ಕೌಶಲಗಳನ್ನು ಬಳಸಿಕೊಂಡು ಪಾಠಟಿಪ್ಪಣಿಯನ್ನು ತಯಾರಿಸುವುದು ಹೇಗೆ? ತಂತ್ರಜ್ಞಾನವನ್ನು ಬಳಸಿ ಪಾಠ ಮಾಡುವುದು ಹೇಗೆ? ಎಂಬ ಬಗ್ಗೆ ೧೦ನೇ ತರಗತಿಯ ಗದ್ಯಪಾಠ ಎದೆಗೆ ಬಿದ್ದ ಅಕ್ಷರ ಇದರ ಕಾಲ್ಪನಿಕ ನಕ್ಷೆಯ ಮೂಲಕ ಬಹಳ ಸೊಗಸಾಗಿ ತೋರಿಸಿಕೊಟ್ಟರು. ೩.೪೫ಕ್ಕೆ ಚಹಾವಿರಾಮದಲ್ಲಿ ಬಿಸಿಬಿಸಿ ಡ ಸೇವನೆಯ ಬಳಿಕ ೪ ಗಂಟೆಗೆ ಎಲ್ಲರ ಸಮಾಗಮ. ನಂತರ ಶ್ರೀ ವಿಶ್ವನಾಥ್ ಶೆಟ್ಟಿಯವರು ಅದೇ ಪಾಠದಲ್ಲಿ ಹಲವು ಚಿತ್ರಗಳನ್ನು ಬಳಸಿ ಜಾಗತೀಕರಣ ಮತ್ತು ವೈಚಾರಿಕತೆ ಯನ್ನು ಮಕ್ಕಳಲ್ಲಿ ಹೇಗೆ ಬೆಳೆಸಬಹುದೆಂದು,ಲಿಂಕ್ ಕೊಡುವ ಕೌಶಲ ಗಳಿಸುವುದು ಹೇಗೆ? ವ್ಯಾಕರಣಗಳನ್ನು ಹೇಗೆ ತಿಳಿಸಬಹುದೆಂದು ತೋರಿಸಿದರು. ತದನಂತರ ಪದ್ಯ ಪ್ರಾತ್ಯಕ್ಷಿಕೆ ಹಕ್ಕಿ ಹಾರುತಿದೆ ನೋಡಿದಿರಾ? ಪದ್ಯದ ಬಗ್ಗೆ ಪಾಠ ಪ್ರಾರಂಭಿಸುತ್ತಿದ್ದಂತೆ ತಂತ್ರಜ್ಞಾನ ಕೈಕೊಟ್ಟಿದ್ದು ಎಲ್ಲರಿಗೂ ಬೇಸರ ಮೂಡಿಸಿತ್ತು. ನಂತರ ಚರ್ಚೆಗೆ ಮುಕ್ತ ಅವಕಾಶ ನೀಡಲಾಯಿತು. |