Changes

Jump to navigation Jump to search
Line 113: Line 113:     
'''5th Day. 09/01/2015'''
 
'''5th Day. 09/01/2015'''
 +
 +
ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಡಕ ಹೃದಯ ಶಿವ..
 +
ಕಾಣದ ಕಡಲಿಗೇ ಹಂಬಲಿಸಿದೇ ಮನ....
 +
 +
ಕಲಿಯೋಣ ಬನ್ನಿ  ಹೋಸದೊಂದು ವಿಚಾರವನು
 +
ಭವ್ಯ ಭಾರತದ ನವ ಚೇತನಗಳ  ನಿರ್ಮಿಸಲು ಬನ್ನಿ
 +
ಗುರುವಲ್ಲವೇ ಹೊಸಬಾಳ ರೂಪಿಸುವ  ಶಿಲ್ಪಿ
 +
ಎಲ್ಲರೂ ಒಂದಾಗಿ ಕಲಿಯುತ ಕಲಿಸುವ ಬನ್ನಿ…..
 +
ದೀಪದಿಂದ ದೀಪವ ಹಚ್ಚೋಣ ಬನ್ನಿ
 +
ಕನ್ನಡದ ಬೆಳಕಿಂದ ಹೊಸ ನಾಡ ಕಟ್ಟೋಣ ಬನ್ನಿ..
 +
 +
ಇಂದಿನ ನಮ್ಮ ಎಸ್.ಟಿ.ಎಫ್ ತರಬೇತಿಯಲ್ಲಿ ಪೂರ್ಣಿಮಾ  ರವರ ಸುಶ್ರಾವ್ಯವಾದ ಸುಮಧುರ ಪ್ರಾರ್ಥನೆಗೀತೆಯೊಂದಿಗೆ ಪ್ರಾರಂಭವಾಯಿತು ಮೊದಲಿಗೆ ಸಂಪನ್ಮೂಲ ವ್ಯಕ್ತಿಗಳಾದ ಗಂಗಾಧರಪ್ಪ ರವರು ಹಿಂದಿನ ದಿನ ನಾವೆಲ್ಲರೂ ಕಲಿತ ತರಬೇತಿಯ ಬಗ್ಗೆ ಮೆಲಕು ಹಾಕಿದರು. ಜೊತೆಗೆ ಶಿಕ್ಷಕರೂ ಸಹ ತಾವುಗಳು ಹಿಂದಿನ ದಿನ ಕಲಿತ ವಿಷಯ ಗಳನ್ನು ಮನನ ಮಾಡಿಕೊಂಡರು. ಮೊದಲನೇ ಅವಧಿಯಲ್ಲಿ ನಾವೆಲ್ಲರೂ ಇಂದಿನ ಹೊಸ ಕಲಿಕೆಗೆ ಉತ್ಸುಕರಾಗಿ ಕಾದು ಕುಳಿತಿದ್ದೆವು. ಇಂದು ಈಶ್ವರಪ್ಪನವರು ಮೊದಲಿಗೆ ನಮಗೆ ನಾವು ತಯಾರಿಸಿದ್ದ ಟೆಂಪ್ಲೆಟ್ಸ್ ನಲ್ಲಿ ನೆನ್ನೆ ದಿನ ಲಿಂಕ್ ಕೊಡುವುದನ್ನು ಹೇಳಿಕೊಟ್ಟಿದ್ದರು. ಅದನ್ನು ಪುನಃ ಹೇಳಿ ನಂತರ ಇಂದು ಅಡಿಬರಹಕ್ಕೆ ಲಿಂಕನ್ನು ಹೇಗೆ ಸೇರಿಸುವುದು ಎಂಬುದನ್ನು ಹೈಪರ್ ಲಿಂಕ್ ನಲ್ಲಿ ತಿಳಿಸಿದರು. ಗಂಗಾಧರಪ್ಪನವರು ಶಾರ್ಟಕಟ್ ಕೀಗಳನ್ನು ಪರಿಚಯ ಮಾಡಿಕೊಟ್ಟರು ಹಾಗೂ ಕೆ.ಬಿ. ಎಮ್.ಬಿ, ಜಿ.ಬಿ, ಟಿ.ಬಿ ಬಗ್ಗೆ ತಿಳಿಸಿದರು ಇದು ನಮಗೆ ತುಂಬಾ ಉಪಯುಕ್ತವಾಯಿತು ನಾವೆಲ್ಲರೂ ಅದನ್ನು ಅಭ್ಯಾಸ ಮಾಡಿದೆವು. ಗಂಗಾಧರಪ್ಪ, ಮಂಜುನಾಥ್ ಹಾಗೂ ಈಶ್ವರಪ್ಪನವರು ನಮ್ಮೆಲ್ಲರಿಗೂ ಅಭ್ಯಾಸ ಮಾಡಿಸಿದರು ಈಶ್ವರಪ್ಪನವರು ಪೋಟೋ ಮಂಜುನಾಥ್ ರವರು ನಮಗೆ ಗೂಗಲ್ ನ ಪ್ಯೂಚರ್ ಬಗ್ಗೆ ಒಂದೊಂದಾಗಿ ತಿಳಿಸಿದರು ಗೂಗಲ್+, ಗೂಗಲ್ ಮ್ಯಾಪ್, ಜಿಮೇಲ್, ಗೂಗಲ್‍ಸರ್ಚ, ಗೂಗಲ್‍ಪ್ಲೇ, ಪಿಕಾಸಾದಲ್ಲಿ ಪೋಟೋ ಅಪ್ ಲೋಡ್ ಮಾಡುವುದು ,ಯುಟೂಬ್‍ನಲ್ಲಿ ವೀಡಿಯೋ ನೋಡುವುದನ್ನು ಕಲಿಸಿದರು.ಹಾಗೆಯೇ ವೀಡಿಯೋಗಳನ್ನು ಅಪ್ ಲೋಡ್ ಮಾಡುವುದನ್ನು ಕಲಿಸಿದರು  ನಾವೆಲ್ಲರೂ ಅಭ್ಯಾಸ ಮಾಡಿದೆವು ನಂತರ ನಮಗೆ ನೀಡಿದ್ದ ಪಾಠಗಳಿಗೆ ಗುಂಪಿನಲ್ಲಿ ಪಾಠದ ಸಿದ್ದತೆ ನಡೆಸಿದೆವು ಕಡೆಯಲ್ಲಿ ಸಿದ್ದಗೊಂಡ ಪಾಠಗಳನ್ನು ನಮ್ಮ ಎಸ್.ಟಿ.ಎಪ್ ಗುಂಪಿಗೆ ಹೇಗೆ ಸೇರಿಸಬೇಕು ಎಂಬುದನ್ನು ಈಶ್ವರಪ್ಪನವರು ತಿಳಿಸಿದರು ಅದರಂತೆ ನಾವೆಲ್ಲರೂ ಪಾಠಗಳನ್ನು ಮಿಂಚಂಚೆಯಲ್ಲಿ ಕಳಿಸಿದೆವು. ನಂತರ ನಮ್ಮ  ಐದು ದಿನ ತರಬೇತಿಯಲ್ಲಿ ಕಲಿತ ವಿಷಯಗಳ ಹಿಮ್ಮಾಹಿತಿ ಯನ್ನು ದಾಖಲಿಸಿ ಅದನ್ನೂ ಸಹ ಕಳಿಸಿದೆವು. ಆಮೇಲೆ ಎಲ್ಲರಿಗೂ ಸಮಯ ಹೋಗಿದ್ದೇ ತಿಳಿಯಲಿಲ್ಲ ಸಂಜೆ ಸಮಾರೋಪ ಬೀಳ್ಕೊಡುಗೆ ಸಮಾರಂಭ ಪ್ರಾರಂಭಗೊಂಡಿತು ಸೋಮಶೇಖರ್ ರವರು ಮಧುರವಾಗಿ ವಚನವನ್ನು ಹಾಡಿದರು ಮಂಜುಳಾರವರು ಎಸ್.ಟಿ.ಎಪ್ ತರಬೇತಿ ಕುರಿತು ಕವನ ರಚಿಸಿ ಹಾಡಿದರು. ಅದರಂತೆ ಸೋಮಶೇಖರ್ ಸಹಾ ಕವನ ವಾಚಿಸಿದರು. ಜೊತೆಗೆ ತರಬೇತಿ ತೃಪ್ತಿಕರವಾಗಿತ್ತು.ಎಂದು ತಿಳಿಸಿದರು.  ಸವಿತಾರವರು ತರಬೇತಿಯಲ್ಲಿ ಮೋದಲನೇ ದಿನ ಭಯ ಎನ್ನಿಸುತ್ತಿತ್ತು ಆದರೆ ಐದನೇ ದಿನ ಇನ್ನೂ ಕಲಿಯಬೇಕು ಎಂಬ ಉತ್ಸಾಹ ಹೆಚ್ಚುತ್ತಿರುವಾಗಲೇ ಈ ತರಬೇತಿ ಮುಗಿದಿದ್ದು ಬೇಸರವಾಯಿತು ಇನ್ನೂ ಸ್ವಲ್ಪದಿನ ಈ ತರಬೇತಿ ಬೇಕಾಗಿತ್ತು ಎಂಬ ಅನಿಸಿಕೆ ವ್ಯಕ್ತ ಪಡಿಸಿದರು.ನಮ್ಮ ಸಂಪನ್ಮೂಲ ವ್ಯಕ್ತಿಗಳಾದ ಈಶ್ವರಪ್ಪನವರು ಮುಂದಿನ ದಿನಗಳಲ್ಲಿ ನಾವೆಲ್ಲರೂ ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು  ನಮ್ಮ ನೋಡಲ್ ಅಧಿಕಾರಿಗಳಾಗಿದ್ದಂತಹ ವಿಜಯಕುಮಾರ್ ರವರು ಶಿಕ್ಷಕರನ್ನು ಉದ್ದೇಶಿಸಿ ನಿಮ್ಮ ಶಾಲಾ ತರಗತಿಗಳಲ್ಲಿ ಹೇಗೆ ಈ ಸಂಪನ್ಮೂಲ ಬಳಸಬೇಕು ಹಾಗೆಯೇ ಕೋಯರ್ ಗೆ ಮುಂದಿನ ದಿನಗಳಲ್ಲಿ ನಾವು ಹೇಗೆ ಸಂಪನ್ಮೂಲ ಕ್ರೂಢೀಕರಿಸಬೇಕು ಎಂಬುದರ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ್ ನಡೆಸಿದರು ಎಲ್ಲರನ್ನೂ  ಗಂಗಾಧರಪ್ಪನವರು ಸ್ವಾಗತಿಸಿದರು. ಈಶ್ವರಪ್ಪನವರು ವಂದಿಸಿದರು. ಕಾರ್ಯಕ್ರಮ ಚೆನ್ನಾಗಿ ಮುಕ್ತಾಯಗೊಂಡಿತು  ಎಲ್ಲರೂ ಹೊಸದೊಂದು ವಿಷಯ ಕಲಿತ ಹುಮ್ಮಸ್ಸಿನಿಂದಲೇ ಪರಸ್ಪರರಿಗೆ ಶುಭಾಷಯ ತಿಳಿಸಿ ಬೀಳ್ಕೊಂಡೆವು.
    
==Batch 2==
 
==Batch 2==
1,287

edits

Navigation menu