| ಅ ದರಲ್ಲಿ ಸಂದೇಶಗಳನ್ನು ಕಳಿಸುವುದು ಹೇಗೆ, ಬಂದ ಸಂದೇಶಗಳನ್ನು ಓ ದುವುದು ಹೇಗೆ ಇ ತ್ಯಾದಿ ವಿವರಗಳನ್ನು ಅ ರ್ಥವತ್ತಾಗಿ ತಿಳಿಸಿದರು. ಮಧ್ಯಾಹ್ನದ ಚಹಾ ವಿರಾಮದ ನಂತರ ಎ ಲ್ಲಾ ಶಿಕ್ಷಕರು | | ಅ ದರಲ್ಲಿ ಸಂದೇಶಗಳನ್ನು ಕಳಿಸುವುದು ಹೇಗೆ, ಬಂದ ಸಂದೇಶಗಳನ್ನು ಓ ದುವುದು ಹೇಗೆ ಇ ತ್ಯಾದಿ ವಿವರಗಳನ್ನು ಅ ರ್ಥವತ್ತಾಗಿ ತಿಳಿಸಿದರು. ಮಧ್ಯಾಹ್ನದ ಚಹಾ ವಿರಾಮದ ನಂತರ ಎ ಲ್ಲಾ ಶಿಕ್ಷಕರು |
| ಓ ಪನ್ ಮಾಡಿದ ಇ -ಮೇಲ್ ಅ ಡ್ರೆಸ್ ಮೂಲಕ ಅ ವರಿಗೆ ಸಂದೇಶ ಕಳಿಸುವಂತೆ ಹೇಳಿ ಎ ಲ್ಲರಿಗೂ ವಿಷಯ ಮನದಟ್ಟಾಗಿದೆಯೆಂಬುದನ್ನು ಖಚಿತಪಡಿಸಿಕೊಂಡರು. ಒಟ್ಟಿನಲ್ಲಿ ಮೊದಲ ದಿನದ ಕಾರ್ಯಾಗಾರವು ಎ ಲ್ಲರ ಮನದಾಳದಲ್ಲಿದ್ದ ಒ ತ್ತಡವನ್ನು ಹಾಗೂ ಗಣಕಯಂತ್ರದ ಬಗ್ಗೆ ಇ ರುವ ಭಯವನ್ನು ಹೋಗಲಾಡಿಸಲು ಸಹಕಾರಿಯಾಯಿತು. ನಾವು ಒಂ ದಿಷ್ಟು ಕಂಪ್ಯೂಟರ್ ಜ್ಞಾನ ಪಡೆದೆವು ಎಂಬ ಖುಷಿಯು ಎ ಲ್ಲಾ ಅ ಧ್ಯಾಪಕರ ಮನದಲ್ಲಿ ಮೂಡಿತು. 5.30 ಗಂಟೆಯ ಸುಮಾರಿಗೆ ಕಾರ್ಯಾಗಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. | | ಓ ಪನ್ ಮಾಡಿದ ಇ -ಮೇಲ್ ಅ ಡ್ರೆಸ್ ಮೂಲಕ ಅ ವರಿಗೆ ಸಂದೇಶ ಕಳಿಸುವಂತೆ ಹೇಳಿ ಎ ಲ್ಲರಿಗೂ ವಿಷಯ ಮನದಟ್ಟಾಗಿದೆಯೆಂಬುದನ್ನು ಖಚಿತಪಡಿಸಿಕೊಂಡರು. ಒಟ್ಟಿನಲ್ಲಿ ಮೊದಲ ದಿನದ ಕಾರ್ಯಾಗಾರವು ಎ ಲ್ಲರ ಮನದಾಳದಲ್ಲಿದ್ದ ಒ ತ್ತಡವನ್ನು ಹಾಗೂ ಗಣಕಯಂತ್ರದ ಬಗ್ಗೆ ಇ ರುವ ಭಯವನ್ನು ಹೋಗಲಾಡಿಸಲು ಸಹಕಾರಿಯಾಯಿತು. ನಾವು ಒಂ ದಿಷ್ಟು ಕಂಪ್ಯೂಟರ್ ಜ್ಞಾನ ಪಡೆದೆವು ಎಂಬ ಖುಷಿಯು ಎ ಲ್ಲಾ ಅ ಧ್ಯಾಪಕರ ಮನದಲ್ಲಿ ಮೂಡಿತು. 5.30 ಗಂಟೆಯ ಸುಮಾರಿಗೆ ಕಾರ್ಯಾಗಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. |
| + | ಆರ್. ಎಂ. ಎಸ್. ಎ. ವತಿಯಿಂದ ಉಡುಪಿ ಜಿಲ್ಲಾ ಕನ್ನಡ ಭಾಷಾ ಶಿಕ್ಷಕರ ಎಸ್.ಟಿ.ಎಫ್. ತರಬೇತಿಯ ೫ನೇ ದಿನದ ಕಾರ್ಯಾಗಾರವು ದಿನಾಂಕ ೨೩.೦೧.೨೦೧೫ರ ಶುಕ್ರವಾರದಂದು ಪೂರ್ವಾಹ್ನ ೯.೩೦ಕ್ಕೆ ಸರಿಯಾಗಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯ, ಬಂಟಕಲ್ಲು, ಉಡುಪಿ ಇಲ್ಲಿ ಜಿಲ್ಲಾ ಡಯಟ್ ಉಪನ್ಯಾಸಕರಾದ ಶ್ರೀ ಭಾಸ್ಕರ ಶೇಟ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಕೀರಪ್ಪ , ಶ್ರೀ ರಾಜೀವ ಪೂಜಾರಿಯವರ ಉಪಸ್ಥಿತಿಯಲ್ಲಿ ಪ್ರಾರಂಭವಾಯಿತು. ೬ನೇ ತಂಡದ ಶ್ರೀ ಗಣೇಶ್, ಸ.ಶಿ, ಶ್ರೀಮದ್ಭುವನೇಂದ್ರ ಪ್ರೌಢ ಶಾಲೆ, ಕಾರ್ಕಳ ಇವರು ಪ್ರಾರ್ಥನೆಗೈದರು. ಸುಂದರ್ ಪುರಾಣಿಕ ಸ್ಮಾರಕ ಪ್ರೌಢ ಶಾಲೆ, ಪೆರ್ವಾಜೆ, ಕಾರ್ಕಳ ಇಲ್ಲಿನ ಶ್ರೀಮತಿ ನಿರ್ಮಲಾ ಜಿ. ಭಟ್ ರವರು ಜ್ಞಾನದ ಮಹತ್ವದ ಕುರಿತು ಸೂಕ್ತ ಚಿಂತನೆ ನಡೆಸಿದರು. ೪ನೇ ತಂಡದ ಶ್ರೀ ವಿವೇಕಾನಂದ್, ಶಿಕ್ಷಕರು, ಎಸ್. ವಿ. ಎಸ್. ಪ್ರೌಢ ಶಾಲೆ, ಕಟಪಾಡಿ ಇವರು ೪ನೇ ದಿನದ ಕಾರ್ಯಾಗಾರದ ವರದಿ ವಾಚಿಸಿದರು. ವರದಿಯಬಗ್ಗೆ ಚರ್ಚೆಯ ಬಳಿಕ ಶಿಬಿರಾರ್ಥಿಗಳು ಪಾಠದ ಸಿದ್ಧತೆಯಲ್ಲಿ ತೊಡಗಿ ಸಿಕೊಂಡರು. ೧೦.೩೦ರ ಬಳಿಕ ಶ್ರೀ ರಾಜೀವ ಪೂಜಾರಿಯವರು ಪಾಠ ಸಿದ್ಧತೆಗೆ ಬೇಕಾದ ಚಿತ್ರಗಳನ್ನು ಚಿತ್ರ ಸಂಬಂಧಿ ತಂತ್ರಾಂಶದಿಂದ ಹೇಗೆ ಆರಿಸಿಕೊಳ್ಳಬಹುದೆಂದು ತಿಳಿಸಿಕೊಟ್ಟರು. ಶಿಬಿರಾರ್ಥಿಗಳು ಅದನ್ನು ಬಳಸಿಕೊಂಡು ಪಾಠವನ್ನು ಉತ್ತಮೀಕರಿಸಲು ಪ್ರಯತ್ನಿಸಿದರು. ಬಳಿಕ ಪುನಃ ಪಾಠದ ಸಿದ್ಧತೆಯಲ್ಲಿ ತೊಡಿಗಿಸಿಕೊಂಡರು. ೧೧.೩೦ರ ಚಾ ವಿರಾಮದ ಬಳಿಕ ಮತ್ತೆ ಶಿಬಿರಾರ್ಥಿಗಳು ಒಟ್ಟು ಸೇರಿದರು. ೧ನೇ ತಂಡದ ( ಸೀತಾನದಿ ತಂಡ ) ಶ್ರೀ ಪ್ರಭಾಕರ ಶೆಟ್ಟಿ, ವಿದ್ಯಾವರ್ಧಕ ಪ.ಪೂ. ಕಾಲೇಜು, ಮುಂಡ್ಕೂರು- ಇವರು ೮ನೇ ತರಗತಿಯ ಪದ್ಯ ಪಾಠ 'ಕನ್ನಡಿಗರ ತಾಯಿ' ಯನ್ನು ಉತ್ತಮವಾಗಿ ಪ್ರದರ್ಶಿಸಿದರು. 'ದಿನದಂತೆ ದಿನವಿಲ್ಲ- ಮನದಂತೆ ಮನವಿಲ್ಲ, ದಿನದಿನವು, ಕ್ಷಣ-ಕ್ಷಣವು, ನವ ನವ್ಯ ಸೃಷ್ಠಿ, ರಸ ರುಚಿಗೆ ಕೊನೆಯಿಲ್ಲ, ಅನುಭವಕ್ಕೆ ಮಿತಿಯಿಲ್ಲ, ಅನವರತ ಚಲಿತ ಜಗ ಮಂಕುತಿಮ್ಮ' ಎಂಬ ಕಗ್ಗದೊಂದಿಗೆ ಈ ತರಬೇತಿಯ ಮಹತ್ವವನ್ನು ಸಾರಿದ ಅವರು ಉಪಯುಕ್ತ ಚಿತ್ರಗಳು, ಹಾಡಿನ ಧ್ವನಿ ಸುರುಳಿ ಮತ್ತು ವೀಡಿಯೋದೊಂದಿಗೆ ಅತ್ಯುತ್ತಮವಾಗಿ ಪ್ರದರ್ಶಿಸಿದರು. |
| + | ೫ನೇ ತಂಡ ( ಸೌಪರ್ಣಿಕಾ ತಂಡ ) ದ ಶ್ರೀ ಸುಧಾಕರ್ ಶೆಣೈರವರು 'ಅಂತರಾಳ ' ಪಾಠವನ್ನು , ಸೀತಾನದಿ ತಂಡದ ಶ್ರೀ ಆನಂದ ಮುದ್ರಾಡಿಯವರು ' ಜೀವನ ದರ್ಶನ' ದ ಕನಕದಾಸರ ಕೀರ್ತನೆ ಯನ್ನು ,೧ನೇ ತಂಡದ ಶ್ರೀ ನಾಗಪ್ಪ ನಾಯ್ಕ್, ಹೊಸ್ಮಾರು ರವರು 'ರಾಜಕುಮಾರಿಯ ಜಾಣ್ಮೆ ' ಎಂಬ ಜಾನಪದ ಗದ್ಯ ಕತೆಯನ್ನು ಆಯ್ಕೆಮಾಡಿಕೊಂಡು ಪಾಠ ಮಂಡನೆಮಾಡಿದರು. ಬಳಿಕ ಮಧ್ಯಾಹ್ನದ ಊಟಕ್ಕಾಗಿ ಶಿಬಿರಾರ್ಥಿಗಳು ತೆರಳಿದರು. ಊಟದ ವಿರಾಮದ ನಂತರ ಅಪರಾಹ್ನದ ಅವಧಿ ಶ್ರೀಮತಿ ಜ್ಯೋತಿ ಕೆ. ಪೂಜಾರಿಯವರ ಪಾಠ ಮಂಡನೆಯೊಂದಿಗೆ ಆರಂಭವಾಯಿತು. ಅವರು ' ಸರ್ವಜ್ಞನ ವಚನಗಳು ' ಎಂಬ ಪದ್ಯ ಪಾಠವನ್ನು ತಂತ್ರಜ್ಞಾನ ಬಳಸಿಕೊಂಡು ಮಂಡಿಸಿದರು. ತದನಂತರ ಶ್ರೀಮತಿ ಲಲಿತಾ, ಸ.ಶಿ, ಕಣಜಾರು ಇವರು ' ಅಜ್ಜಯ್ಯನ ಅಭ್ಯಂಜನ ' ಎಂಬ ಪಾಠವನ್ನು ತಂತ್ರಜ್ಞಾನದೊಂದಿಗೆ ನಿರ್ವಹಿಸಿದರು. ಇಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ ಸವಿವರವಾಗಿ ಚರ್ಚಿಸಲಾಯಿತು. ' ಸೌಪರ್ಣಿಕಾ ' ತಂಡದ ಶ್ರೀಮತಿ ನಿರ್ಮಲಾ ರವರು ' ಜೀವನ ದರ್ಶನ ' ದ ಪುರಂದರದಾಸರ ಕೀರ್ತನೆಯನ್ನು ಪಾಠಯೋಜನೆಯಾಗಿ ಮಂಡಿಸಿದರು. ತೀರ್ಥಸ್ನಾನ, ಧರ್ಮಗ್ರಂಥ, ಪಾಠದ ಹಂತಗಳ ಬಗ್ಗೆ ಚರ್ಚೆ ನಡೆಯಿತು. ಸೈಂಟ್ ಲಾರೆನ್ಸ್ ಪ್ರೌಢ ಶಾಲೆಯ ಸಿ|| ನಿವೇದಿತಾ ರವರು 'ಪರಿಸರ ಸಮತೋಲನ ' ಪಾಠಯೋಜನೆಯನ್ನು ಮಂಡಿಸಿದರು. ಪರಿಸರ, ಹಾವು ,ವೈರಿಗಳ ಬಗ್ಗೆ ಸವಿವರವಾಗಿ ಚರ್ಚಿಸಲಾಯಿತು. ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಶಿರಾರ್ಥಿಗಳು ತಮ್ಮ ಅನುಭವವನ್ನು ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ಶಿಬಿರ ನಿರ್ದೇಶಕರಾದ ಶ್ರೀ ಭಾಸ್ಕರ್ ಶೇಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು, ಕಂಪ್ಯೂಟರ್ ವಿಭಾಗದ ಮುಖ್ಯಸ್ಥರು, ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ತರಬೇತಿಯಲ್ಲಿ ಪಡೆದ ಜ್ಞಾನವನ್ನು ತಮ್ಮ ತಮ್ಮ ತರಗತಿಗಳಲ್ಲಿ ಅಳವಡಿಸಿ,ಬೋಧನೆಯನ್ನು ಪರಿಣಾಮಕಾರಿಯಾಗಿ ಹೇಗೆ ಮಾಡಬಹುದೆಂದು ತಿಳಿಸಿದರು. ೪ ಜನ ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಒಟ್ಟಿನಲ್ಲಿ ೫ ದಿನಗಳ ಈ ತರಬೇತಿಯು ತುಂಬಾ ಪರಿಣಾಮಕಾರಿಯಾಗಿ ಮೂಡಿ ಬಂತು. ಧನ್ಯತಾ ಭಾವದೊಂದಿಗೆ ಎಲ್ಲಾ ಶಿಬಿರಾರ್ಥಿಗಳು ತೆರಳಲು ಅನುವಾದರು. ರಾಷ್ಟ್ರ ಗೀತೆಯೊಂದಿಗೆ ಎಸ್. ಟಿ. ಎಫ್. ತರಬೇತಿಗೆ ಪೂರ್ಣ ವಿರಾಮ ಹಾಕಲಾಯಿತು. ಬಾಳ ಬಾನಿನಲಿ ಚಂದ್ರಯಾನದಲಿ ತೇಲಿ ಬಾ.....ಎಂಬ ಕವಿವಾಣಿಯಂತೆ ಎಲ್ಲಾ ಶಿಕ್ಷಕರು ಈ ಪರಿಣಾಮಕಾರಿ ತರಬೇತಿಯ ಪ್ರಯೋಜನವನ್ನು ಪಡೆಯಲಿ , ತರಗತಿಗಳು ಸಂತಸದಾಯಕವಾಗಲಿ, ಎಲ್ಲರ ಮನೆ-ಮನಗಳು ಬೆಳಗಲೆಂದು ಸಂಪ್ರಾರ್ಥಿಸುತ್ತಾ ಈ ವರದಿಗೆ ಪೂರ್ಣವಿರಾಮವನ್ನು ಹಾಕುತ್ತಿದ್ದೇವೆ. |