Changes

Jump to navigation Jump to search
26,223 bytes added ,  08:30, 31 December 2015
Line 96: Line 96:

===Workshop short report===

===Workshop short report===
Upload workshop short report here (in ODT format), or type it in day wise here

ಎಸ್.ಟಿ.ಫ್ ವಿಜ್ಞಾನ ತರಬೇತಿ ಕಾರ್ಯಾಗಾರ 2015

16-11-2-15 ರಿಂದ 20-11-2015

ಐದು ದಿನಗಳ ಕಾರ್ಯಾಗಾರದ

ವರದಿ

ಸ್ಥಳ : ಡಯಟ್, ಮೈಸೂರು

ಆಯೋಜಕರು/ಸಂಚಾಲಕರು :

ಶ್ರೀ ರಾಜು ಸರ್, ಉಪನ್ಯಾಸಕರು, ಡಯಟ್, ಮೈಸೂರು

ವಿಷಯ ಸಂಪನ್ಮೂಲ ವ್ಯಕ್ತಿಗಳು :

1) ಶ್ರೀ ಸತೀಶ್ ಸರ್, ಸ.ಶಿ. ಸರ್ಕಾರಿ ಪ್ರೌಢಶಾಲೆ,

ಹುಲ್ಲಳ್ಳಿ, ನಂಜನಗೂಡು ತಾ. ಮೈಸೂರು ಜಿಲ್ಲೆ.

2) ಶ್ರೀ ಹರ್ಷ ಸರ್, ಸ.ಶಿ. ಸರ್ಕಾರಿ ಪ್ರೌಢಶಾಲೆ,

ಹೆಡತಲೆ, ನಂಜನಗೂಡು ತಾ. ಮೈಸೂರು ಜಿಲ್ಲೆ

ಎಸ್.ಟಿ.ಎಫ್ ವಿಜ್ಞಾನ ತರಬೇತಿ ಕಾರ್ಯಾಗಾರದ ಮೊದಲ ದಿನ

ದಿನಾಂಕ 16-11-2015 ರ ಸೋಮವಾರದ ಬೆಳಗಿನ ಜಾವ ಎಸ್.ಟಿ.ಎಫ್ ಕಾರ್ಯಾಗಾರಕ್ಕೆ ಹಾಜರಾಗಬೇಕಾಗಿದ್ದ ಎಲ್ಲಾ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿಚನ್ನಮ್ಮ ಶಾಲೆ ಮತ್ತು ಆದರ್ಶ ವಿದ್ಯಾಲಯ ಶಾಲೆಗಳ ಒಟ್ಟು    ಶಿಕ್ಷಕರು ಸರಿಯಾಗಿ 9:00 ಗಂಟೆಗೆ ಕಾರ್ಯಾಗಾರಕ್ಕೆ ಹಾಜರಾದರು. ಹಾಜರಾದ ಎಲ್ಲಾ ಶಿಕ್ಷಕರ ನೋಂದಣಿ ಕಾರ್ಯವನ್ನು ಮಾಡಿಕೊಳ್ಳಲಾಯಿತು. ಇದಾದ ನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಯಾಗಾರದ ಸಂಚಾಲಕರಾದ ಶ್ರೀಯುತ ರಾಜು ಸರ್, ಉಪನ್ಯಾಸಕರು, ಡಯಟ್ ಮೈಸೂರು, ಸಂಪನ್ಮೂಲ ವ್ಯಕ್ತಿಗಳಾದ ಸತೀಶ್ ಮತ್ತು ಹರ್ಷರವರನ್ನು ಸ್ವಾಗತಿಸಿದರು.

'''1st Day'''

ಬೆಳಗ್ಗೆ 9:30ಕ್ಕೆ ಗಣಕ ಯಂತ್ರದ ಮೂಲಭೂತ ಪರಿಕಲ್ಪನೆಗಳ ಬಗ್ಗೆ ನಮಗೆ ತಿಳಿದಿರುವುದರ ಬಗ್ಗೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಯಿತು. ತದನಂತರ  ಗಣಕಯಂತ್ರದ ಮೂಲಭೂತ ಪರಿಕಲ್ಪನೆಗಳನ್ನು ತಿಳಿಸಿಕೊಟ್ಟರು. ಇದಾದ ಮೇಲೆ ಈ-ಮೇಲ್ ಖಾತೆ ಸೃಷ್ಠಿಸುವುದನ್ನು ತಿಳಿಸಿ ಕೊಟ್ಟರು. ನಂತರ ಎಲ್ಲಾ ಶಿಕ್ಷಕರು ಅವರವರ  ಈ-ಮೇಲ್ ಖಾತೆಯನ್ನು ತಾವೇ ಸೃಷ್ಠಿಸಿದರು.

ಊಟದ ವಿರಾಮದ ನಂತರ ಒಬಂಟು ಸಾಫ್ಟ್ವೇರಿನಲ್ಲಿ “ಫ್ರೀ ಮೈಂಡ್” ನಲ್ಲಿ ಫ್ಲೊ ಚಾರ್ಟ್ ಅನ್ನು ತಯಾರಿಸಿ ಅದರಲ್ಲಿ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಕೆರಳಿಸಿ ಕಲಿಕೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದನ್ನು ತಿಳಿಸಿಕೊಟ್ಟರು. ಇಲ್ಲಿಗೆ ಸಮಯ ಸಂಜೆ 5:30 ಆಗಿ ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು.

'''2nd Day'''

ಬೆಳಗ್ಗೆ 9:30ಕ್ಕೆ ಶ್ರೀ ಹರ್ಷ ರವರು ಎಲ್ಲಾ ಶಿಕ್ಷಕರನ್ನು  ಎಸ್.ಟಿ.ಎಫ್ ಗುಂಪಿಗೆ ಸೇರಿಸಿದರು. ನಂತರ ಎಮ್.ಎಸ್.ವರ್ಡ್ ನಲ್ಲಿ ವೇಳಾಪಟ್ಟಿ ತಯಾರಿಸುವ ಬಗ್ಗೆ ತಿಳಿಸಿಕೊಟ್ಟರು, ನಂತರ ಎಲ್ಲಾ ಶಿಕ್ಷಕರು ಅಭ್ಯಾಸ ಮಾಡಿದರು. ಇದಾದ ಬಳಿಕ ಇಂಟರ್ನೆಟ್ನಿಂದ ಛಾಯಚಿತ್ರಗಳನ್ನು ಮತ್ತು ಅದರ ಬಗ್ಗೆ ವಿಷಯ ಸಂಗ್ರಹಿಸಿ ಫೋಲ್ಢರ್ನಲ್ಲಿ ಸೇವ್ ಮಾಡುವುದನ್ನು ಕಲಿಸಿದರು, ನಾವು ಅಭ್ಯಾಸ ಮಾಡಿದೆವು. ಇದೇ ವೇಳೆ ಪುಟಗಟ್ಟಲೇ ಇರಬಹುದಾದ ವಿಚಾರಗಳನ್ನು ಕೇವಲ ಒಂದೇ ವಾಕ್ಯದಲ್ಲಿ ತಿಳಿಸಬಹುದಾದ ಹೈಪರ್ ಲಿಂಕ್ ಬಗ್ಗೆ ತಿಳಿಸಿಕೊಟ್ಟರು.

ಊಟದ ವಿರಾಮದ ನಂತರ ಒಬಂಟು ಸಾಫ್ಟ್ವೇರಿನಲ್ಲಿ “ಕೆ-ಸ್ಟಾರ್”, ಫಾಸ್,ಕೋಯರ್, ಈ ಪರಿಕಲ್ಪನೆಗಳು ಶಿಕ್ಷಕರಾಗಿ ನಮಗೆ ವಿಜ್ಞಾನ ವಿಷಯ ಬೋಧಿಸಲು ಸಹಾಯವಾಗಿವೆ.  ನಾವು ಅಭ್ಯಾಸ ಮಾಡಿದೆವು. ಇಲ್ಲಿಗೆ ಸಮಯ ಸಂಜೆ 5:30 ಆಗಿ ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು

'''3rd Day'''

ಬೆಳಗ್ಗೆ 9:30ಕ್ಕೆ  ಶ್ರೀ ಹರ್ಷ ರವರು ಎಲ್ಲಾ ಶಿಕ್ಷಕರಿಗೆ ಫೆಟ್ ಸ್ಟಿಮ್ಯುಲೇಷನ್‍ಗಳ ಬಗ್ಗೆ ತಿಳಿಸಿ, ಸ್ಕ್ರೀನ್ ಶಾಟ್‍ಪಡೆದು ಪ್ರಾಯೋಗಿಕ ವಿಧಾನ ಹಾಳೆ ತಯಾರಿಸುವ ಬಗ್ಗೆ ತಿಳಿಸಿ ನಾವೆಲ್ಲರೂ ಅಭ್ಯಾಸ ಮಾಡಿದೆವು. ಪಿ.ಪಿ.ಟಿ ಪ್ರೆಸೆಂಟೇಷನ್ ಬಗ್ಗೆ ತಿಳಿಸಲಾಗಿ ಮಧ್ಯಾಹ್ನದ ಊಟದ ನಂತರ ನಾವೆಲ್ಲರೂ ಕನಿಷ್ಟ 10 ಸ್ಲೈಡ್ಗಳನ್ನು ತಯಾರಿಸಿದೆವು. ಇಲ್ಲಿಗೆ ಸಮಯ ಸಂಜೆ 5:30 ಆಗಿ ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು

'''4th Day'''

ಬೆಳಗ್ಗೆ 9:30ಕ್ಕೆ ಶ್ರೀ ಹರ್ಷ ಮತ್ತು ಶ್ರೀ ಸತೀಶ್ ರವರು ಈ ದಿನ ನಮಗೆ ಸ್ಟೆಲ್ಲೇರಿಯಂ, ಎಮ್ ಎಸ್ ಎಕ್ಸೆಲ್‍ನಲ್ಲಿ ಅಂಕ ಮತ್ತು ಗ್ರೇಡ್ ನೀಡುವ ಬಗ್ಗೆ ವಿವರವಾಗಿ ತಿಳಿಸಿದರು. ಮಧ್ಯಾಹ್ನದ ಊಟದ ನಂತರ ನಾವು ಅಭ್ಯಾಸ ಮಾಡಿದೆವು. ಇಲ್ಲಿಗೆ ಸಮಯ ಸಂಜೆ 5:30 ಆಗಿ ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು.

'''5th Day'''

ಬೆಳಗ್ಗೆ 9:30ಕ್ಕೆ ಶ್ರೀ ಹನುಮಂತು ಮತ್ತು ಅನಂತುರವರು ತಿಳಿಸಿದಂತೆ ಕಲಿಕಾರ್ಥಿಗಳು 3 ಗುಂಪುಗಳಾಗಿ ಗುಂಪಿನಿಂದ ಒಂದೊಂದು ಒಟ್ಟು 3 ಪ್ರಯೋಗಗಳನ್ನು ಮಾಡಿದೆವು. ತದನಂತರ ಒಬುಂಟುವಿನಲ್ಲಿ ಕಾಲ್ಜಿಯಂ ಬಗ್ಗೆ ತಿಳಿದು ನಾವೆಲ್ಲರೂ ಅಭ್ಯಾಸ ಮಾಡಿದೆವು. ಮಧ್ಯಾಹ್ನದ ಊಟದ ನಂತರ ನಾವು ಎಸ್.ಟಿ.ಎಫ್ ಕಾರ್ಯಾಗಾರದ ಬಗ್ಗೆ ಆನ್‍ಲೈನ್ ಮೂಲಕ ಹಿಮ್ಮಾಹಿತಿಯನ್ನು ಅಪ್ಲೋಡ್ ಮಾಡಿದೆವು.

ಚಹಾ ವಿರಾಮದ ನಂತರ ಒಬಂಟು ಸಾಫ್ಟ್ವೇರ್ ಇನ್ಟಾಲ್ ಮಾಡುವ ಬಗ್ಗೆ ತಿಳಿದುಕೊಂಡೆವು. ತದ ನಂತರ ಎಲ್ಲಾ ಶಿಕ್ಷಕರಿಗೆ ಪ್ರಯಾಣ ಭತ್ಯೆ, ದಿನದ ಭತ್ಯೆ ಹಾಜರಾತಿ ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು. ಕಾರ್ಯಕ್ರಮದ ಕೊನೆಯ ಹಂತದಲ್ಲಿ ಕಾರ್ಯಾಗಾರದ ಸಂಚಾಲಕರಾದ ಶ್ರೀಯುತ ರಾಜು ಸರ್, ಉಪನ್ಯಾಸಕರು, ಡಯಟ್ ಮೈಸೂರು, ಇವರು ಹಿತನುಡಿಗಳನ್ನು ನುಡಿಯುತ್ತಾ ಸಂಪನ್ಮೂಲ ವ್ಯಕ್ತಿಗಳಿಗೆ ವಂದಿಸಿದೆವು.  ನಾವೂ ನಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿದೆವು. ಹೀಗಾಗಿ ಉತ್ಕøಷ್ಟವಾದ ಸ್ನೇಹಪರವಾದ ವಿಷಯ ಸಂಪದ್ಭರಿತ ತರಬೇತಿ ಕಾರ್ಯಾಗಾರವನ್ನು ಮುಗಿಸಿದೆವು.

ಧನ್ಯವಾದಗಳೊಂದಿಗೆ

=Kannada=

=Kannada=
Line 118: Line 149:
'''2nd Day'''

'''2nd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮೈಸೂರು.

ವಿಷಯ ಶಿಕ್ಷಕರ ವೇದಿಕೆ ತರಬೇತಿ ಕಾರ್ಯಕ್ರಮ

ದಿನಾಂಕ: 01/12/2015 - 05/12/2015

ಪ್ರಸ್ತುತಿ: ದತ್ತಾತ್ರೇಯ ರಾಮಚಂದ್ರ ಬೇಂದ್ರೆ ತಂಡ

ಮೊದಲ ಅವಧಿ

ಎರಡನೇ ದಿನದ ಕಾಯ್ರ್ರಕ್ರಮವು ಮಾಸ್ತಿ ತಂಡದ ಶ್ರೀ ಶ್ರೀಕಂಠಮೂರ್ತಿರವರು ಸುಶ್ರಾವ್ಯ ಕಂಠದ ಜೊತೆಗೆ ಭಕ್ತಿಭಾವತುಂಬಿ ಹಾಡಿದ ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಕುವೆಂಪು ತಂಡದವರಿಂದ ಚಿಂತನೆ ಮತ್ತು ವರದಿ ಮಂಡಿಸಲಾಯಿತು. ವರದಿಯ ಗುಣಮಟ್ಟವನ್ನು ಕುರಿತು ತರಬೇತಿ ಸಂಯೋಜಕರಾದ ಶ್ರೀ ಪ್ರಶಾಂತ್‍ರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಕನ್ನಡ ಭಾಷಾ ಶಿಕ್ಷಕರಿಂದ ನಿರೀಕ್ಷಿತ ಮಟ್ಟದಲ್ಲಿ ವರದಿ ಮೂಡಿಬರಲಿಲ್ಲವೆಂದು ಮತ್ತು ವರದಿ ಹೇಗಿರಬೇಕಿತ್ತು ಎಂಬುದರ ಬಗ್ಗೆ ಶಿಬಿರಾರ್ಥಿಗಳಿಗೆ ಹಿತವಚನವನ್ನು ಹೇಳಿದರು.

ನಂತರ ಸಂಪನ್ಮೂಲ ಶಿಕ್ಷಕರಾದ ಎಂ.ಎನ್.ನಾಗರಾಜುರವರು ಎಸ್.ಟಿ.ಎಫ್.ತರಬೇತಿಯ ಮಹತ್ವ, ಉಪಯುಕ್ತತೆ ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಬೋಧನೆಯಲ್ಲಿ ತಂತ್ರಜ್ಞಾನದ ಅಗತ್ಯತೆಯ ಕುರಿತು ಮಾತನಾಡಿದರು.  ನಂತರ ಹಿಂದಿನ ದಿನ ನೀಡಿದ ಪಾಠಗಳ ಕುರಿತು ಹೇಗೆ ಸಂಪನ್ಮೂಲ ಬಳಸಿ ಟಿಪ್ಪಣಿ ತಯಾರಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಈ ಮದ್ಯೆ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀಕಂಠಶೆಟ್ಟರು ಶ್ರೀ ನಾಗರಾಜುರವರು ಪರದೆ ಮೇಲೆ ತೋರಿಸಿದ ವಿಷಯಗಳಿಗೆ ವಿವರಣೆ ನೀಡುತ್ತಿದ್ದರು. ಎಲ್ಲರೂ ಕಂಪ್ಯೂಟರ್‍ನಲ್ಲಿ ಹೇಗೆ ಟೈಪ್‍ಮಾಡಬೇಕು ಎಂಬುದನ್ನು ತೋರಿಸಿಕೊಟ್ಟು ಎಲ್ಲರೂ ಟೈಪಿಂಗ್ ಕಲಿಯಲು ತೊಡಗುವಂತೆ ಮಾಡಿದರು ನಂತರ ಟೀ ವಿರಾಮ

ಎರಡನೇ ಅವಧಿ

ಟೀ ವಿರಾಮದ ನಂತರ ಒಂದು ಡಾಕುಮೆಂಟರಿ ಚಿತ್ರವನ್ನು ತೋರಿಸಲಾಯಿತು. ಗಡಿನಾಡಿನ ಕನ್ನಡ ಶಾಲೆಗಳ ಇಂದಿನ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವ ಈ ಚಿತ್ರದಲ್ಲಿ ಕನ್ನಡ ಶಿಕ್ಷಕರೊಬ್ಬರು ಶಾಲೆಯ ಮತ್ತು ಮಕ್ಕಳ ಬಗ್ಗೆ ತೋರುವ ಅತೀವ ಕಾಳಜಿ ಮತ್ತು ಶಾಲೆ ಮತ್ತು ಮಕ್ಕಳ ಬಗೆಗಿನ ಭಾವನಾತ್ಮಕ ಸಂಬಂಧಗಳು ಎಲ್ಲರ ಮನಕಲಕುವಂತಿದ್ದು. ಬಹುತೇಕ ಕಣ್ಣುಗಳು ಒದ್ದೆಯಾಗಿದ್ದು ಇದಕ್ಕೆ ಸಾಕ್ಷಿಯೆಂಬಂತಿತ್ತು, ನಂತರ ಪಾಠಗಳ ಕುರಿತು ವಿಷಯ ಟೈಪ್ ಮಾಡಲು ಸಮಯ ನೀಡಲಾಯಿತು.ನಂತರ 1-15 ಕ್ಕೆ ಊಟದ ವಿರಾಮ, ಎಂದಿನಂತೆ ಸೊಗಸಾದ ಊಟ ಎಲ್ಲರನ್ನು ತೃಪ್ತಿಪಡಿಸಿತ್ತು.

ಮೂರನೇ ಅವಧಿ

ಊಟದ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿ  ಶ್ರೀಯುತ ಸಂಜಯ್‍ರವರು ಯಾವುದೇ ವಸ್ತು ವಿಷಯದ ಕುರಿತು ಪರಿಕಲ್ಪನೆಯನ್ನು ಹೇಗೆ ಬೆಳೆಸಿಕೊಳ್ಳುತ್ತೇವೆ ಎಂಬುದರ ಬಗ್ಗೆ ವಿವರಿಸುತ್ತಾ ಎಂ.ಎನ್.ನಾಗರಾಜುರವರ ಸಹಕಾರದೊಂದಿಗೆ ಮೈಂಡ್ ಮ್ಯಾಪಿಂಗ್ ಬಗ್ಗೆ ಎಲ್ಲರಿಗೂ ತಿಳಿಸಿಕೊಟ್ಟರು. ಮೈಂಡ್ ಮ್ಯಾಪಿಂಗ್ ಪ್ರಾಯೋಗಿಕವಾಗಿ ಮಾಡಲು ಎಲ್ಲರಿಗೂ ಸೂಚಿಸಲಾಯಿತು. ಎಂ,.ಎನ್, ನಾಗರಾಜುರವರು ಮ್ಯಾಪಿಂಗ್‍ನ ರೇಖಾಚಿತ್ರಗಳನ್ನು ಮತ್ತು ಡಿಸೈನ್‍ಗಳನ್ನು ಹೇಳಿಕೊಟ್ಟರು. ಎಲ್ಲರೂ ಉತ್ಸಾಹದಿಂದ ಮೈಂಡ್ ಮ್ಯಾಪಿಂಗ್ ಚಿತ್ರಗಳನ್ನು ಬಿಡಿಸುವುದರಲ್ಲಿ ತಲ್ಲೀನರಾದರು. ಈ ನಡುವೆ ಎಲ್ಲರಿಗೂ ಟಿ.ಎ. ಮತ್ತು ಡಿ.ಎ. ಫಾರಂಗಳನ್ನು ಕೊಟ್ಟು ಭರ್ತಿಮಾಡಿಸಲಾಯಿತು. ನಂತರ ಟೀ ವಿರಾಮ

ನಾಲ್ಕನೇ ಅವಧಿ

ಟೀ ವಿರಾಮದ ನಂತರ ಮೈಂಡ್‍ಮ್ಯಾಪಿಂಗ್É್ರೀಖಾ ಚಿತ್ರಗಳಿಗೆ ಅಲಂಕಾರ ಮಾಡುವುದು ಮತ್ತು ಅದನ್ನು ಹೇಗೆ ಸೇವ್ ಮಾಡುವುದು ಹಾಗೂ ಕಾಪಿ ಮಾಡುವುದು ಇವೆಲ್ಲವನ್ನು ಶ್ರೀ ನಾಗರಾಜುರವರು ಹೇಳಿಕೊಟ್ಟರು. ನಂತರ ಈ ಹಿಂದಿನ ದಿನ ಎಲ್ಲರೂ ಪ್ರಾರಂಬಿಸಿದ್ದ ವಿದ್ಯುನ್ಮಾನ ಅಂಚೆಯನ್ನು(ಇಮೇಲ್) ತೆರೆದು ನೋಡುವುದು, ಟೆಕ್ಸ್ಟ್ ಮೆಸೇಜ್ ಮತ್ತು ಪೈಲ್‍ಗಳನ್ನು ಬೇರೆಯವರಿಗೆ ಕಳಿಸುವುದು ಹೇಗೆ ಎಂಬುದನ್ನು ಶ್ರೀ ನಾಗರಾಜುರವರು ಸಾವಧಾನವಾಗಿ ಎಲ್ಲರಿಗೂ ಹೇಲಿಕೊಟ್ಟು ಪ್ರತಿಯೊಬ್ಬರೂ ಒಂದೊಂದು ಇಮೇಲ್ ಕಳಿಸುವಂತೆ ತಿಳಿಸಿದರು. ಎಲ್ಲರೂ ಈ ಕಾರ್ಯದಲ್ಲಿ ಸಮಯದ ಪರಿವೇ ಇಲ್ಲದೆ ತೊಡಗಿದ್ದುದು ಶಿಬಿರಾರ್ಥಿಗಳು ಈ ತರಬೇತಿಯಲ್ಲಿ ಎಷ್ಟು ತಲ್ಲೀನರಾಗಿದ್ದಾರೆ ಎಂಬುದನ್ನು ಸೂಚಿಸುವಂತಿತ್ತು ಅಷ್ಟೊತ್ತಿಗೆ ಸಂಜೆ 5.30 ಸಮಯ ಓಡೋಡಿ ಬಂದೇ ಬಿಟ್ಟಿತ್ತು ಎಲ್ಲರೂ ಹಸನ್ಮಖರಾಗಿಯೇ ಎರಡನೇ ದಿನದ ತರಬೇತಿಗೆ ವಿದಾಯ ಹೇಳಿದ್ದರು

'''3rd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮೈಸೂರು.

ವಿಷಯ ಶಿಕ್ಷಕರ ವೇದಿಕೆ ತರಬೇತಿ ಕಾರ್ಯಕ್ರಮ

ದಿನಾಂಕ: 01/12/2015 - 05/12/2015

ಪ್ರಸ್ತುತಿ: ಶಿವರಾಮಕಾರಂತ ತಂಡ

'''3rd Day'''

ಮೊದಲ ಅವಧಿ

ಮೂರನೆಯ ದಿನದ ಕಾಯ್ರ್ರಕ್ರಮವು ಬೇಂದ್ರೆ  ತಂಡದವರ ಪ್ರಾರ್ಥನೆ, ಚಿಂತನೆ ಮತ್ತು ವರದಿ ಮಂಡನೆಯೊಂದಿಗೆ ಪ್ರಾರಂಭವಾಯಿತು. ವರದಿಯನ್ನು ಎ,ಎಸ್,ಗುರುಸ್ವಾಮಿಯವರು ಪಿ.ಪಿ.ಟಿ. ಮುಖಾಂತರ ಉತ್ತಮವಾಗಿ ಪ್ತಸ್ತುತ ಪಡಿಸಿದರು.

ನಂತರ ಸಂಪನ್ಮೂಲ ಶಿಕ್ಷಕರಾದ ಎಂ.ಎನ್.ನಾಗರಾಜುರವರು ನಿನ್ನೆ ಎಲ್ಲ ಶಿಬಿರಾರ್ಥಿಗಳಿಗೂ ಜಿ.ಮೆಲ್ ಅಕೌಂಟ್ ತೆರೆದಿದ್ದು, ಇಂದು ಅಂತರ್ಜಾಲದಲ್ಲಿ ತಮ್ಮ ತಮ್ಮ ಜಿಮೆಲ್ ತೆರೆದು ಅಲ್ಲಿ ತಮಗೆ ಬಂದಿರುವ ಮೇಸೆಜ್‍ಗಳನ್ನು ತೆರೆದು ನೋಡುವುದರ ಬಗ್ಗೆ ಚರ್ಚಿಸಲಾಯಿತು. ಶಿಬಿರಾರ್ಥಿಗಳು ತಮ್ಮ ತಮ್ಮ ಜಿಮೇಲ್‍ಗಳನ್ನು ತೆರೆದು ಓದಿ ಪರಸ್ಪರ ವಿನಿಮಯ ಮಾಡುವ ಹೊತ್ತಿಗೆ ಟೀ ವಿರಾಮ ಬಂದೇ ಬಿಟ್ಟಿತು.

ಎರಡನೇ ಅವಧಿ

ಟೀ ವಿರಾಮದ ನಂತರ ಎಮ್.ಎನ್ ನಾಗರಾಜು ರವರು ಉಂಬುಂಟು ತಂತ್ರಾಂಶದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಎಮ್.ಎಸ್,ಗೆ ಪರ್ಯಾಯವಾಗಿ ಉಂಬುಂಟುವನ್ನು ಭಾರತ ಸರ್ಕಾರ ಭಾರತದ ಅಧೀಕೃತ ತಂತ್ರಜ್ಞಾನವಾಗಿ ಬಳಕೆಗೆ ತಂದಿದ್ದು, ಇದರ ಬಳಕೆಯಿಂದ ಭಾರತ  ವರ್ಷಕ್ಕೆ ಇಪ್ಪತ್ತು ಸಾವಿರ ಕೋಟಿ ಉಳಿಸಬಹುದೆಂದು ಹೇಳಿದರು. ಇದರ ಬಳಕೆಯ ವಿಧಾನವನ್ನು ಹಂತಹಂತವಾಗಿ ವಿವರಿಸುತ್ತಾ,ರವೀÀ್ರಶ್‍ರÀ್ರವರ ಪಿಡಿಫ್‍ನ ಪ್ರಶ್ನೆಗೆ ಉತ್ತರ ನೀಡಿದರು. ತದನಂತರ ಗುರುಸ್ವಾಮಿಯವರ ಲಾಗೌಟ್ ,ಶಟ್‍ಡೌನ್ ಗೆ ಇರುವ ವ್ಯತ್ಯಾಸದ ಪ್ರಶÉ್ನಗೆ ಉತ್ತರನೀಡಿದರು. ವೈರಸ್ ಗೆ ಟಾಟಾ ಬೈಬೈ ಹೇಳಿ, ಸುರಕ್ಷತೆಗೆ ಲಿನಕ್ಸ್ ಸಾರ್ವಜನಿಕ ತಂತ್ರಾಂಶ ಬಳಸಿ,ಅದನ್ನು ನಿಮ್ಮ ಭಾಷೆಯಲ್ಲೆ ಬಳಕೆ ಮಾಡಿ ಎಂದು ಹೇಳಿದರು. ಈಮಧ್ಯೆ ಪ್ರಶಾಂತ್ ಸರ್ ರವರು ಪಿಡಿಫ್ ಬಗ್ಗೆ ಮಾಹಿತಿ ನೀಡಿದರು. ಉಂಬುಂಟುವಿನಿಂದ ಪಿಡಿಫ್ ಗೆ ಕನ್ವರ್ಟ ಮಾಡುವ ಬಗೆಯನ್ನು ತಿಳಿಸಿ ಕೊಟ್ಟರು. ಹಲವು ಭಾಷೆಗಳನ್ನು ಏಕಕಾಲದಲ್ಲಿ ಉಂಬುಂಟುವಿನಲ್ಲಿ ಬಳಸಬಹುದೆಂದು ಹೇಳಿದರು..ನಂತರ 1-15 ಕ್ಕೆ ಊಟದ ವಿರಾಮ, ಎಂದಿನಂತೆ ಸೊಗಸಾದ ಊಟ ಎಲ್ಲರನ್ನು ತೃಪ್ತಿಪಡಿಸಿತ್ತು.

ಮೂರನೇ ಅವಧಿ

ಊಟದ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿ  ಶ್ರೀಯುತ ಶ್ರೀಕಂಠ ಶೆಟ್ಟರು ಎನ್ ಸಿ ಪ್  ‘ಪೊಜಿಷÀನ್ ಪೇಪರ್’  ಬಗ್ಗೆ ಮಾಹಿತಿ ನೀಡಿದರು. ಭಾಷೆಯ ಆಯಾಮಗಳ ಪರಿಚಯ, ಸಮಾಜದಲ್ಲಿ ಭಾಷೆಯ ಸ್ಥಾನಮಾನ,ವಿಶÀ್ವದಲ್ಲಿ ಹೆಚ್ಚುಬಳಕೆಯಾಗುವ ಭಾಷೆ ಚೀನಾ ಭಾಷೆ,ಹಾಗೆಯೇ ಭಾರತದಲ್ಲಿ ಹಿಂದಿ ಭಾಷೆ.ಭಾರತದಲ್ಲಿ 47 ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಭಾಷಾ ಶಿಕ್ಷಕರಾದ ನಾವು ಭಾಷೆಯ ಉಳಿಸುವಿಕೆ, ಬೆಳೆಸುವಿಕೆಯು ನಮ್ಮ ಕೈಯಲ್ಲಿದೆ ಎಂದು ಹೇಳುತ್ತಾ ಶಿಬಿರಾರ್ಥಿಗಳನ್ನು 4 ಗುಂಪುಗಳಾಗಿ ಮಾಡಿ ಎನ್ ಸಿ ಪ್ ಚೌಕಟ್ಟಿನಡಿ ಚರ್ಚಿಸಿ ವರದಿ ಮಂಡಿಸಲು ಅವಕಾಶ ನೀಡಲಾಯಿತು.  ನಂತರ ಟೀ ವಿರಾಮ ಟೀ ಜೊತೆ ಬಾಳೆಕಾಯಿ ಬಜ್ಜಿಯನ್ನು ನೀಡಿದ್ದು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿ, ನವ ಚೈತನ್ನವನ್ನು ನೀಡಿತು.

ನಾಲ್ಕನೇ ಅವಧಿ

ಟೀ ವಿರಾಮದ ನಂತರ ವರದಿ ಮಂಡನೆ ಮೊದಲನೆಯ ತಂಡದವರು ಭಾಷಾ ಪರಿಸರ, ಕುರಿತು ಭಾµಸಂವಹನಶೀಲವಾಗಿದ್ದು,ಭಾಷೆ ಆಡಳಿತ ವ್ಯವಸ್ಥೆಯಾಗಿ ರೂಢಿಯಲ್ಲಿರಬೇಕು ಹಾಗೂ ನಾವಾಡುವ ಭಾಷೆ ಗ್ರಂಥಸ್ಥ ಭಾಷೆಯಾಗಿರಬೇಕು. ಭಾಷೆ ಸಮೃದ್ಧಿಗೊಳಿಸಲು ಕನ್ನಡ ಭಾಷೆಗೆ ಪ್ರೇರಣೆ ಕೊಟ್ಟು ಇದಕ್ಕೆ ಶಿಕ್ಷಕರ, ಪಾಲಕರ ಪ್ರೋತ್ಸಾಹ ಕೊಡಬೇಕು ಎಂದು ತಿಳಿಸಿದರು. ಎರಡನೆಯ ತಂಡದಿಂದ ಶಾಲಾಪಠ್ಯತ್ರಮದಲ್ಲಿ ಇತರ ಭಾಷಾ ಸಮಸ್ಯೆಗಳು ಎನ್ನುವ ಶಿರೋನಾಮೆಯ ಅನ್ವಯ 1]ಯಾವುದೆ ಪ್ರದೇಶದಲ್ಲಿ ಆಶಾಲೆಯು ಇರುವ ಪರಿಸರದ ಭಾಷೆ ಪ್ರಭುತ್ವ ಸಾಧಿಸಿರುತ್ತದೆ. 2]ಇತರೆ ಭಾಷೆಗಳಿಂದ ಕರ್ನಾಟಕ ರಾಜ್ಯ ಭಾಷೆಯಾದ ಕನ್ನಡಕ್ಕೆ ಬಲವಾದ ಪೆಟ್ಟು ಬೀಳುತ್ತಿದೆ ಮತ್ತು ನಿರ್ಲಕ್ಷಿಷಲಾಗುತ್ತಿದೆ. 3] ಸರ್ಕಾರವು ನಮ್ಮ ಭಾಷೆಯನ್ನು ಉಳಿಸಿಬೆಳೆಸಬೇಕಾದರೆ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿದವರಿಗೆ ವಿಶೇಷ ಯೋಜನೆಗಳ ಪ್ರೋತ್ಸಾಹವನ್ನು ಪ್ರಕಟಿಸಬೇಕು ಎಂದು ತಿಳಿಸಿದರು.ಈ ವಿಷಯವು ಚರ್ಚೆಗೆ ಗ್ರಾಸವಾಗಿ ಶಿಬಿರಾರ್ಥಿಗಳಲ್ಲಿ ಪರಸ್ಪರ ಮುಕ್ತವಾಗಿ ಚರ್ಚಿಸಲು ಅನುಕೂಲವಾಯಿತು. 3ನೇತಂಡವು ತ್ರಿಭಾಷಾ ಸೂತ್ರದ ಸಾಧಕ-ಭಾದಕಗಳ ಬಗ್ಗೆ ತಮ್ಮ ಚರ್ಚೆ ಮಂಡಿಸಿ,ಅದರಂತೆ ಪ್ರಾಥಮಿಕ ಹಂತದಲ್ಲಿ  ಮಾತೃ ಭಾಷೆಯೇ ಶಿಕ್ಷಣ ಮಾದ್ಯಮವಾಗಬೇಕೆಂದು ತಿಳಿಸಿಕೊಟ್ಟರು. ಇದು ಸಾಕಷ್ಟು ಚರ್ಚೆನಡೆಸಿ ವಿವಿಧದೃಷ್ಟಿಕೋನಗಳಿಂದ ತಮ್ಮ ಅಭಿಪ್ರಾಯ ,ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 4ನೇ ತಂಡವು ಭಾಷಾ ಕಲಿಕೆಯ ಪರಿಚಯ ಎಂಬ ವಿಷಯದ ಬಗ್ಗೆ ತಮ್ಮ ಚರ್ಚೆಯನ್ನು ಮಂಡಿಸುತ್ತಾ 2-3ವರ್ಷದ ಮಗುವಿನಲ್ಲಿ 3-4 ಭಾಷೆ ಕಲಿಯುವ ಸಾಮಥ್ರ್ಯವಿರುತ್ತದೆ ಆದರೂ ಮೊದಲು ಮಾತೃ ಭಾಷೆ ಕಲಿಕೆಗೆ ಆದ್ಯತೆ ನೀಡಬೇಕು. ನಂತರ ಸಂಕೀರ್ಣ ಭಾಷೆ ಕಲಿಕೆಗೆ ಒತ್ತು ನೀಡಬೇಕು ಎಂದು ತಿಳಿಸಿದರಲ್ಲದೆÉ, ಭಾಷಾ ಬೋಧನೆಯ ಪ್ರಮುಖ ಉದ್ದೇಶಗಳ ಬಗ್ಗೆ ತಿಳಿಸಿದರು.ಇದಕ್ಕೆ ಪೂರಕವಾಗಿ ಗಡಿನಾಡ ಪ್ರದೇಶಗಳಲ್ಲಿ ಕನ್ನಡಿಗರು ಮತ್ತು ಕನ್ನಡಭಾಷೆಗೆ ಒದಗುತ್ತಿರುವ ದುಸ್ಥಿತಿಯ ಬಗ್ಗೆ ಗುರುಸ್ವಾಮಿಯವರು ಸುದೀರ್ಘವಾಗಿ ಚರ್ಚಿಸಿದರು. ತದನಂತರ ಕನ್ನಡ ಭಾಷಾಭಿವೃದ್ಧಿಯ ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಎಲ್ಲ ಶಿಕ್ಷಕರು ಬರೆದು ಪರಸ್ಪರ ಜಿಮೇಲ್ ಮೂಲಕ ಸಂದೇಶ ರವಾನಿಸಲು ಸೂಚಿಸಿದರು.ಎಲ್ಲರೂ ಇದರಲ್ಲಿ ತಲ್ಲೀನರಾಗಿರುವಾಗಲೇ ನೇಸರನು ಪಡುವಣದ ಕಡೆ ತನ್ನ ಪಯಣ ಬೆಳೆಸಿದಂತೆ,ಶಿಬಿರಾರ್ಥಿಗಳು ತಮ್ಮಮನೆಯೆಡೆಗೆ ಮನವಿಲ್ಲದ ಮನಸ್ಸಿನಿಂದ ನಿರ್ಗಮಿಸಿದರು.

'''4th Day'''

'''4th Day'''

'''5th Day'''.

'''5th Day'''.

==Batch 2==

==Batch 2==
1,287

edits

Navigation menu