Changes

Jump to navigation Jump to search
17,438 bytes added ,  10:30, 30 November 2015
Line 16: Line 16:
===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ್ ರಾಯಚೂರು

ಎಸ್.ಟಿ.ಎಫ್. ವಿಜ್ಞಾನ ತರಬೇತಿ ಕಾರ್ಯಾಗಾರ

ಒಂದನೆ ದಿನದ ವರದಿ :

ದಿನಾಂಕ : 17 -9 -2015 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯಶ್ರೀ ಮಲ್ಲಿಕಾರ್ಜುನ ಸ್ವಾಮಿ. ಉಪನಿದೇರ್ಶಕರು ( ಅಭಿವೃದ್ಧಿ ) ಹಾಗೂ ಪ್ರಾಚಾರ್ಯರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ್ ರಾಯಚೂರು ಇವರು ವಹಿಸಿದ್ದರು. ಕಾರ್ಯಕ್ರಮದ ಕುರಿತು ನೊಡಲ್ ಅಧಿಕಾರಿಗಳಾದ ಮಾನ್ಯಶ್ರೀ ಚಂದ್ರಶೇಖರ ಭಂಡಾರಿ ಪ್ರಸ್ತಾವಿಕ ಭಾಷಣ ಮಾತನಾಡಿದರು. ನಂತರ ಮಾನ್ಯಶ್ರೀ ಮಲ್ಲಿಕಾರ್ಜುನ ಸ್ವಾಮಿ. ಅಧ್ಯಕ್ಷೀಯ ಭಾಷಣ ಮಾಡಿ ತರಬೇತಿಯ ಮಹತ್ವ ತಿಳಿಸಿದರು.

ಕಾರ್ಯಕ್ರಮದ ನಂತರ ಎಲ್ಲಾ ಶಿಬಿರಾರ್ಥಿಗಳು ನೊಂದಣಿ ಮಾಡಿಕೊಂಡರು.ನೊಂದಣಿ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಸರಕಾರಿ ಪ್ರೌಢಶಾಲೆ ಮಾರಲದಿನ್ನಿ ತಾ : ಲಿಂಗಸೂಗೂರು ಜಿ : ರಾಯಚೂರು ಹಾಗೂ ಶ್ರೀ ಬಸವರಾಜ ಸರಕಾರಿ ಪ್ರೌಢಶಾಲೆ ಹೂನೂರು ತಾ : ಲಿಂಗಸೂಗೂರು ಜಿ : ರಾಯಚೂರು ಶಿಬಿರಾರ್ಥಿಗಳ ಪರಿಚಯ ಮಾಡಿಕೊಂಡರು.ಹಾಗೂ  ಶಿಬಿರಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿದರು. ನಂತರ ಎಸ್.ಟಿ.ಎಫ್.ನ ಮಹತ್ವ ಹಾಗೂ ಉದ್ದೇಶಗಳು. ಎಸ್.ಟಿ.ಎಫ್.ಗೆ ಸೇರುವುದರ ಲಾಭ ಏನು ? ಎಂಬುವುದರ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಸವಿವರವಾಗಿ ವಿವರಿಸಿದರು. ನಂತರ ಶಿಬಿರಾರ್ಥಿಗಳು ಮಧ್ಯಾಹ್ನ ಊಟಕ್ಕೆ ತೆರಳಿದರು.

ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಶಿಬಿರಾರ್ಥಿಗಳನ್ನು ಸ್ವಾಗತಿಸಿ,ಉಬುಂಟು ಸಾಪ್ಟವೇರ್ ಪರಿಚಯ ಮಾಡಿಕೊಟ್ಟರು.ಅದರ ಮಹತ್ವವನ್ನು ತಿಳಿಸಿಕೊಟ್ಟರು. ಹಾಗೂ ಜಿ ಮೇಲ್ ಐಡಿ ಕ್ರಿಯೇಟ್ ಮಾಡುವುದು ಹೇಗೆ ? ಎಂಬುವುದನ್ನು ತಿಳಿಸಿ ನಂತರ ಶಿಬಿರಾರ್ಥಿಗಳಿಗೆ ಜಿ ಮೇಲ್ ಐಡಿ ಕ್ರಿಯೇಟ್ ಮಾಡಿಸಿದರು.ನಂತರ ಎಸ್.ಟಿ.ಎಫ್.ಗೆ ಹೆಸರು ಸೇರ್ಪಡೆ ಮಾಡಿದರು.ವಿವಿಧ ತಂಡಗಳಿಗೆ ಪ್ರಾರ್ಥನೆ,ವರದಿ ವಾಚನ ಹಾಗೂ ವಿಜ್ಞಾನ ಕೌತುಕ, ,ಶುಭಚಿಂತನೆಗಳನ್ನು ನಾಳೆ ಓದಲು ತಿಳಿಸಿದರು.

'''2nd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ್ ರಾಯಚೂರು

ಎಸ್.ಟಿ.ಎಫ್. ವಿಜ್ಞಾನ ತರಬೇತಿ ಕಾರ್ಯಾಗಾರ

ಎರಡನೆಯ ದಿನದ ವರದಿ :

ದಿನಾಂಕ : 18 -9 -2015 ರಂದು ಬೆಳಿಗ್ಗೆ 10 ಗಂಟೆಗೆ ವಿವಿಧ ತಂಡಗಳಿಂದ ಪ್ರಾರ್ಥನೆ,ವರದಿ ವಾಚನ ಹಾಗೂ ವಿಜ್ಞಾನ ಕೌತುಕ,ಶುಭಚಿಂತನೆಗಳನ್ನು ಓದುವುದರ ಮೂಲಕ ಎರಡನೆಯ ದಿನವನ್ನು ಪ್ರಾರಂಭಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಶಿಬಿರಾರ್ಥಿಗಳನ್ನು ಸ್ವಾಗತಿಸಿ, ಕೊಯರ್ ವೆಬ್‍ಸೈಟ್ ಪರಿಚಯ ಹಾಗೂ ಅದರ ಲಾಭ,ಅದರಲ್ಲಿರುವ ವಿವಿಧ ವಿಷಯಗಳ ವಿವರಣೆಯನ್ನು ನೀಡಿದರು. ನಂತರ ಶಿಬಿರಾರ್ಥಿಗಳಿಗೆ ಕೊಯರ್ ವೆಬ್‍ಸೈಟ್‍ನ್ನು ನೋಡಲು ಹ್ಯಾಂಡ್ಸ ಆನ್ ಕೊಟ್ಟರು. ನಂತರ ಚಹಾ ವಿರಾಮವಾಯಿತು, ಚಹಾ ವಿರಾಮದ ನಂತರ ಶ್ರೀ ಎ.ಎ.ಹುನಗುಂದ. ಇವರು ಈ ವರ್ಷದ ಎಸ್.ಟಿ.ಎಫ್. ವಿಜ್ಞಾನ ತರಬೇತಿ ಕಾರ್ಯಾಗಾರದ ಮುಖ್ಯ ಉದ್ದೇಶ        ‘’ ಪ್ರಯೋಗಾಲಯದ ನಿರ್ವಹಣೆ ” ಕುರಿತು ಉದಾಹರಣೆ ಸಹಿತ ಪ್ರಯೋಗಾಲಯದ ಅರ್ಥ,ಅದರ ಮಹತ್ವ, ಹಾಗೂ ಅದರ ನಿರ್ವಹಣೆ ಕುರಿತು ವಿವರಿಸಿದರು. ಹಾಗೂ ಚಟುವಟಿಕೆಗಳನ್ನು ಹೇಗೆ ಬರೆಯಬೇಕು ಎಂಬುವುದರ ಬಗ್ಗೆ 10 ಅಂಶಗಳನ್ನು ಪಟ್ಟಿ ಮಾಡಿಸಿದರು. ಹಾಗೂ 10 ಅಂಶಗಳನ್ನು ಒಳಗೊಂಡಂತೆ ಅನೇಕ ಚಟುವಟಿಕೆಗಳನ್ನು ಪ್ರಾಜೆಕ್ಟರ್ ಮೂಲಕ ವಿವರಿಸಿದರು. ಹಾಗೂ ಶ್ರೀ ಬಸವರಾಜ ಇವರು ಹಾಡಿನ ಮೂಲಕ ಹೇಗೆ ವಿಜ್ಞಾನ ವಿಷಯವನ್ನು ಆಸಕ್ತಿದಾಯಕವಾಗಿ ಬೋಧಿಸಬಹುದು ಎನ್ನುವುದನ್ನು ತಿಳಿಸಿದರು. ನಂತರ ಶಿಬಿರಾರ್ಥಿಗಳು ಮಧ್ಯಾಹ್ನ ಊಟಕ್ಕೆ ತೆರಳಿದರು.

ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಶಿಬಿರಾರ್ಥಿಗಳನ್ನು ಸ್ವಾಗತಿಸಿ, 10 ಅಂಶಗಳನ್ನು ಒಳಗೊಂಡಂತೆ ಚಟುವಟಿಕೆಗಳನ್ನು ಶಿಬಿರಾರ್ಥಿಗಳಿಗೆ ಬರೆಯಲು ತಿಳಿಸಿದರು.ನಾಳೆ ದಿನ ಬರೆದ ಚಟುವಟಿಕೆಗಳನ್ನು ತಂಡವಾರು ವಿವರಿಸಲು ತಿಳಿಸಿದರು. .ವಿವಿಧ ತಂಡಗಳಿಗೆ ಪ್ರಾರ್ಥನೆ,ವರದಿ ವಾಚನ ಹಾಗೂ ವಿಜ್ಞಾನ ಕೌತುಕ,ಶುಭಚಿಂತನೆಗಳನ್ನು ನಾಳೆ ಓದಲು ತಿಳಿಸಿದರು.

'''3rd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ್ ರಾಯಚೂರು

ಎಸ್.ಟಿ.ಎಫ್. ವಿಜ್ಞಾನ ತರಬೇತಿ ಕಾರ್ಯಾಗಾರ

ಮೂರನೆಯ ದಿನದ ವರದಿ :

ದಿನಾಂಕ : 19 -9 -2015 ರಂದು ಬೆಳಿಗ್ಗೆ 10 ಗಂಟೆಗೆ ವಿವಿಧ ತಂಡಗಳಿಂದ ಪ್ರಾರ್ಥನೆ,ವರದಿ ವಾಚನ ಹಾಗೂ ವಿಜ್ಞಾನ ಕೌತುಕ,ಶುಭಚಿಂತನೆಗಳನ್ನು ಓದುವುದರ ಮೂಲಕ ಮೂರನೆಯ ದಿನವನ್ನು ಪ್ರಾರಂಭಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಶಿಬಿರಾರ್ಥಿಗಳನ್ನು ಸ್ವಾಗತಿಸಿ,ಶಿಬಿರಾರ್ಥಿಗಳು ತಾವು ಬರೆದ ಚಟುವಟಿಕೆಗಳನ್ನು ತಂಡವಾರು ವಿವರಿಸಿದರು. ಅದರ ವಿಶ್ಲೇಷಣೆ ಮಾಡಿದರು. ನಂತರ ಚಹಾ ವಿರಾಮವಾಯಿತು, ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಉಬುಂಟು ಸಾಪ್ಟವೇರ್‍ನ ಕೆಲವು ಅಪ್ಲೀಕೇಷನ್‍ಗಳ ಪರಿಚಯ ಮಾಡಿಕೊಟ್ಟರು.ಮೈಂಡ್ ಮ್ಯಾಪ,ಫೇಟ್ಟ್‍ಗಳನ್ನು ವಿವರವಾಗಿ ಪ್ರಯೋಗಿಕವಾಗಿ ವಿವರಿಸಿದರು.ನಂತರ ಶಿಬಿರಾರ್ಥಿಗಳಿಗೆ ಹ್ಯಾಂಡ್ಸ ಆನ್ ಕೊಟ್ಟರು. ನಂತರ ಶಿಬಿರಾರ್ಥಿಗಳು ಮಧ್ಯಾಹ್ನ ಊಟಕ್ಕೆ ತೆರಳಿದರು.

ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಶಿಬಿರಾರ್ಥಿಗಳನ್ನು ಸ್ವಾಗತಿಸಿ, ಪ್ರಯೋಗಗಳನ್ನು ಹೇಗೆ,ಯಾವ ತರನಾಗಿ ಮಾಡಬೇಕು ಎಂಬುವುದನ್ನು ವೀಡಿಯೋಗಳ ಮೂಲಕ ವಿವರಿಸಿದರು.ಅದಕ್ಕಾಗಿ ಅನೇಕ ಪ್ರಯೋಗದ ವೀಡಿಯೋಗಳನ್ನು ಶಿಬಿರಾರ್ಥಿಗಳಿಗೆ ತೋರಿಸಿದರು.ಹಾಗೂ ಶಿಬಿರಾರ್ಥಿಗಳಿಗೆ ತಂಡವಾರು ಒಂದು ಪ್ರಯೋಗವನ್ನು ಮಾಡಲು ಸೂಚಿಸಿದರು.ಅದರ ತಯಾರಿಗಾಗಿ ಶಿಬಿರಾರ್ಥಿಗಳನ್ನು ಆನಂದ ಪ್ರೌಢಶಾಲೆಯ ಪ್ರಯೋಗಾಲಯಕ್ಕೆ ಕರೆದುಕೊಂಡು ಹೋದರು.ನಂತರ .ವಿವಿಧ ತಂಡಗಳಿಗೆ ಪ್ರಾರ್ಥನೆ,ವರದಿ ವಾಚನ ಹಾಗೂ ವಿಜ್ಞಾನ ಕೌತುಕ,ಶುಭಚಿಂತನೆಗಳನ್ನು ನಾಳೆ ಓದಲು ತಿಳಿಸಿದರು.

'''4th Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ್ ರಾಯಚೂರು

ಎಸ್.ಟಿ.ಎಫ್. ವಿಜ್ಞಾನ ತರಬೇತಿ ಕಾರ್ಯಾಗಾರ

ನಾಲ್ಕನೆಯ ದಿನದ ವರದಿ :

ದಿನಾಂಕ : 20 -9 -2015 ರಂದು ಬೆಳಿಗ್ಗೆ 10 ಗಂಟೆಗೆ ವಿವಿಧ ತಂಡಗಳಿಂದ ಪ್ರಾರ್ಥನೆ,ವರದಿ ವಾಚನ ಹಾಗೂ ವಿಜ್ಞಾನ ಕೌತುಕ,ಶುಭಚಿಂತನೆಗಳನ್ನು ಓದುವುದರ ಮೂಲಕ ನಾಲ್ಕನೆಯ ದಿನವನ್ನು ಪ್ರಾರಂಭಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಶಿಬಿರಾರ್ಥಿಗಳನ್ನು ಸ್ವಾಗತಿಸಿ,ಶಿಬಿರಾರ್ಥಿಗಳನ್ನು ಆನಂದ ಪ್ರೌಢಶಾಲೆಯ ಪ್ರಯೋಗಾಲಯಕ್ಕೆ ಕರೆದುಕೊಂಡು ಹೋದರು.ಅಲ್ಲಿ ಪ್ರಯೋಗಾಲಯದಲ್ಲಿರುವ ಹಾಗೂ ಕೆಲವು ಶಿಕ್ಷಕರು ಸ್ವತಃ ಪ್ರಯೋಗಗಳಿಗೆ ಬೇಕಾಗುವ ವಸ್ತುಗಳನ್ನು ತಂದಿದ್ದರು. ಶಿಬಿರಾರ್ಥಿಗಳು ತಂಡಗಳವಾರು ಪ್ರಯೋಗಗಳನ್ನು ಮಾಡಿದರು.ಶಿಕ್ಷಕರು ಮಾಡಿರುವ ಪ್ರಯೋಗಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ.ಇವರು ಆ ಪ್ರಯೋಗಗಳ ವೀಡಿಯೋ ಚಿತ್ರೀಕರಣ ಮಾಡಿದರು. ನಂತರ ಶಿಬಿರಾರ್ಥಿಗಳು ಮಧ್ಯಾಹ್ನ ಊಟಕ್ಕೆ ತೆರಳಿದರು.

ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಶಿಬಿರಾರ್ಥಿಗಳನ್ನು ಸ್ವಾಗತಿಸಿ,ಮತ್ತೆ ಬಾಕಿ ಉಳಿದಿರುವ ತಂಡಗಳ ಪ್ರಯೋಗಗಳನ್ನು ಶ್ರೀ ಎ.ಎ.ಹುನಗುಂದ.ಇವರು ಆ ಪ್ರಯೋಗಗಳ ವೀಡಿಯೋ ಚಿತ್ರೀಕರಣ ಮಾಡಿದರು. .ವಿವಿಧ ತಂಡಗಳಿಗೆ ಪ್ರಾರ್ಥನೆ,ವರದಿ ವಾಚನ ಹಾಗೂ ವಿಜ್ಞಾನ ಕೌತುಕ, ,ಶುಭಚಿಂತನೆಗಳನ್ನು ನಾಳೆ ಓದಲು ತಿಳಿಸಿದರು.

'''5th Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ್ ರಾಯಚೂರು

ಎಸ್.ಟಿ.ಎಫ್. ವಿಜ್ಞಾನ ತರಬೇತಿ ಕಾರ್ಯಾಗಾರ

ಐದನೆಯ ದಿನದ ವರದಿ :

ದಿನಾಂಕ : 21 -9 -2015 ರಂದು ಬೆಳಿಗ್ಗೆ 10 ಗಂಟೆಗೆ ವಿವಿಧ ತಂಡಗಳಿಂದ ಪ್ರಾರ್ಥನೆ,ವರದಿ ವಾಚನ ಹಾಗೂ ವಿಜ್ಞಾನ ಕೌತುಕ,ಶುಭಚಿಂತನೆಗಳನ್ನು ಓದುವುದರ ಮೂಲಕ ಐದನೆಯ ದಿನವನ್ನು ಪ್ರಾರಂಭಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಶಿಬಿರಾರ್ಥಿಗಳನ್ನು ಸ್ವಾಗತಿಸಿದರು.ಹಾಗೂ ತಂಡಗಳವಾರು ಮಾಡಿರುವ ಪ್ರಯೋಗಗಳ ವಿಶ್ಲೇಷಣೆ ಮಾಡಲಾಯಿತು.ನಂತರ ಪ್ರಯೋಗಗಳ ವೀಡಿಯೋಗಳನ್ನು ಉಪಯೋಗಿಸುವುದರಿಂದ ಆಗುವ ಪ್ರಯೋಜನಗಳನ್ನು ( ಅನುಕೂಲ ) ಹಾಗೂ ಅನಾನುಕೂಲಗಳನ್ನು ಚರ್ಚಿಸಿದರು. ನಂತರ ಶ್ರೀ ಎ.ಎ.ಹುನಗುಂದ ಸರ್ ಇವರು ಓಪನ್ ವೀಡಿಯೋ ಶಾಟ್ ಅಪ್ಲೀಕೇಷನ್ ಉಪಯೋಗಿಸಿ ವೀಡಿಯೋಗಳನ್ನು ಎಡಿಟ್ ಮಾಡುವುದು ಹೇಗೆ ಎಂಬುವುದನ್ನು ಮಾಡಿ ತೋರಿಸಿದರು. ಸ್ಕ್ರೀನ್‍ಶಾಟ್, ಹಾಗೂ ಸೌಂಡ್ ರೆಕಾರ್ಡ ಮಾಡುವುದು ಹೇಗೆ ? ಎಂಬುವುದನ್ನು ಮಾಡಿ ತೋರಿಸಿದರು. ನಂತರ ಚಹಾ ವಿರಾಮವಾಯಿತು, ಚಹಾ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಶಿಬಿರಾರ್ಥಿಗಳಿಗೆ ಹ್ಯಾಂಡ್ಸ ಆನ್ ಕೊಟ್ಟರು. ನಂತರ ಶಿಬಿರಾರ್ಥಿಗಳು ಮಧ್ಯಾಹ್ನ ಊಟಕ್ಕೆ ತೆರಳಿದರು.

ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎ.ಎ.ಹುನಗುಂದ. ಇವರು ಶಿಬಿರಾರ್ಥಿಗಳನ್ನು ಸ್ವಾಗತಿಸಿ,ನಕ್ಷತ್ರ ರಾಶಿ ಪುಂಜಗಳು,ಗ್ರಹಗಳು,ಉಪಗ್ರಹಗಳು,ಗ್ರಹಣಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಉಬುಂಟುನ ಸ್ಟೇಲೇರಿಯಮ್ ಎಂಬ ಅಪ್ಲೀಕೇಷನ್‍ನ್ನು ಸವಿವರವಾಗಿ ಪ್ರತಿಯೊಂದನ್ನು ಪ್ರಾಜೆಕ್ಟರ್ ಮೂಲಕ ವಿವರಿಸಿದರು.ನಂತರ ಶಿಬಿರಾರ್ಥಿಗಳಿಗೆ ಹ್ಯಾಂಡ್ಸ ಆನ್ ಕೊಟ್ಟರು.

ನಂತರ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮ ಪ್ರಾರಂಭವಾಯಿತು. ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯಶ್ರೀ ಮಲ್ಲಿಕಾರ್ಜುನ ಸ್ವಾಮಿ. ಉಪನಿದೇರ್ಶಕರು ( ಅಭಿವೃದ್ಧಿ ) ಹಾಗೂ ಪ್ರಾಚಾರ್ಯರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ್ ರಾಯಚೂರು ಇವರು ವಹಿಸಿದ್ದರು. ಕಾರ್ಯಕ್ರಮದ ನೊಡಲ್ ಅಧಿಕಾರಿಗಳಾದ ಮಾನ್ಯಶ್ರೀ ಚಂದ್ರಶೇಖರ ಭಂಡಾರಿ ಉಪಸ್ಥಿತರಿದ್ದರು.ತರಬೇತಿಯ ಕುರಿತು ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.ನಂತರ ಮಾನ್ಯಶ್ರೀ ಮಲ್ಲಿಕಾರ್ಜುನ ಸ್ವಾಮಿ. ಅಧ್ಯಕ್ಷೀಯ ಭಾಷಣ ಮಾಡಿದರು.

==Batch 2==

==Batch 2==

Navigation menu