Line 164: |
Line 164: |
| ಶ್ರೀಮತಿ ಭಾರತಿ ಎಸ್. ಸ.ಪ.ಪೂ ಕಾಲೇಜು ಉಡುಪಿ | | ಶ್ರೀಮತಿ ಭಾರತಿ ಎಸ್. ಸ.ಪ.ಪೂ ಕಾಲೇಜು ಉಡುಪಿ |
| ಶ್ರೀ ರತ್ನಾಕರ್ ಸ.ಫ್ರೌ. ಶಾಲೆ ಬಿಜೂರು . | | ಶ್ರೀ ರತ್ನಾಕರ್ ಸ.ಫ್ರೌ. ಶಾಲೆ ಬಿಜೂರು . |
| + | 5ನೇ ದಿನದ ತರಬೇತಿ |
| + | ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಡಯಟ್, ಉಡುಪಿ, ದಿನಾಂಕ:06-12-2013 |
| + | ಈ ದಿನದ ತರಬೇತಿಯು ಶ್ರೀಮತಿ ವಿಮಲ, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬೆಳಪು, ಉಡುಪಿ ಇವರ ಚಿಂತನ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ನಾವು ನಕಾರಾತ್ಮಕ ಯೋಚನೆಗಳ ಬದಲು ಸಕಾರತ್ಮಕವಾಗಿ ಯೋಚನೆ ಮಾಡಿದರೆ ಫಲಿತಾಂಶ ಕೂಡ ಸಕಾರಾತ್ಮಕವಾಗಿರುತ್ತದೆ. ಮಕ್ಕಳನ್ನು ಒಬ್ಬರೊಂದಿಗೆ ಇನ್ನೊಬ್ಬರನ್ನು ಹೋಲಿಕೆ ಮಾಡಿದಾಗ ಕೂಡ ಕೀಳರಿಮೆ ಭಾವನೆ ಬೆಳೆಯುತ್ತದೆ. ಹಾಗಾಗಿ ಮಕ್ಕಳನ್ನು ಪ್ರೋತ್ಸಾಹಿಸಬೇಕೇ ಹೊರತು ಹೋಲಿಕೆ ಮಾಡಬಾರದು ಎಂಬ ವಿಚಾರಗಳು ಚಿಂತನೆಯಲ್ಲಿ ಮೂಡಿ ಬಂತು. ಶ್ರೀ ಶೇಖರ ಭೋವಿ, ಸಹಶಿಕ್ಷಕರು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಉಡುಪಿ ಇವರು ನಾಲ್ಕನೇ ದಿನದ ಸವಿವರ ವರದಿಯನ್ನು ವಾಚಿಸಿದರು. |
| + | ಮೊದಲ ಅವಧಿಯಲ್ಲಿ ಹಿಂದಿನ ದಿನಗಳಲ್ಲಿ ತಯಾರಿಸಿದ ಸಂಪನ್ಮೂಲಗಳಿಗೆ ಅಂತಿಮ ರೂಪುರೇಷೆ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಭಾಗ್ವತ್ ಹಾಗೂ ಶ್ರೀಯುತ ಪ್ರದೀಪ ರವರು ಶಿಬಿರಾರ್ಥಿಗಳಿಗೆ ಸಹಕರಿಸಿದರು. ಅಲ್ಪಕಾಲದ ಚಹಾ ವಿರಾಮದ ನಂತರ ನಮ್ಮ ಸಂಪನ್ಮೂಲವನ್ನು ಕೋಯರ್ ಗೆ ಮತ್ತು ಎಸ್ ಟಿ ಎಫ್ ಸಮಾಜ ವಿಜ್ಞಾನ ಗ್ರೂಪ್ ಗೆ ಮತ್ತು ತರಬೇತಿಯ ನೋಡಲ್ ಅಧಿಕಾರಿಯಾಗಿರುವ ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರಿಗೆ ಮೇಲ್ ಮಾಡುವುದನ್ನು ನಮ್ಮಿಂದ ಪ್ರಾಯೋಗಿಕವಾಗಿ ಮಾಡಿಸಲಾಯಿತು. ಶ್ರೀಯುತ ಶ್ರೀರಂಗಧಾಮಪ್ಪ ಸರ್ ಇವರು ನಾವು ಕಳುಹಿಸಿದ ಮೇಲ್ ಗಳನ್ನು ಪರಿಶೀಲಿಸಿದರು. ಸಂಪನ್ಮೂಲ ವ್ಯಕ್ತಿಗಳು ಮೇಲ್ ಗಳಿಗೆ ವಿವಿಧ ಫೈಲ್ ಗಳನ್ನು ಅಟೇಚ್ಮೆಂಟ್ ಮತ್ತು ಗೂಗಲ್ ಡ್ರೈವ್ ನ ಮೂಲಕ ಅಟೇಚ್ ಮಾಡುವುದನ್ನು ಮತ್ತು ಮೇಲ್ ನಲ್ಲಿರುವ ಅಟೇಚ್ಮೆಂಟ್ ಗಳನ್ನು ಡೌನ್ ಲೋಡ್ ಮಾಡುವುದನ್ನು ಕಲಿಸಲಾಯಿತು. ನಂತರ ಕೊಯರ್ ನಲ್ಲಿರುವ ವಿವಿಧ ವಿಷಯಗಳನ್ನು ತೋರಿಸುತ್ತಾ ಮತ್ತಷ್ಟು ತಿಳಿದುಕೊಳ್ಳಲು ಆಸಕ್ತಿ ಮೂಡಿಸಿದರು. ಕೊಯರ್ ಗೆ ಸಂಪನ್ಮೂಲಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಮಾಹಿತಿ ನೀಡಿದರು. |
| + | ಮಧ್ಯಾಹ್ನದ ಊಟದ ವಿರಾಮದ ನಂತರ Youtube ನಲ್ಲಿ ವೀಡಿಯೋಗಳನ್ನು ಸರ್ಚ್ ಮಾಡಿ ಅದನ್ನು ನೋಡುವುದು ಮತ್ತು ಡೌನ್ ಲೋಡ್ ಮಾಡುವುದರ ಬಗ್ಗೆ ತಿಳಿಸಿಕೊಟ್ಟರು. ವಿಡಿಯೋಗಳನ್ನು edit ಮಾಡುವುದನ್ನು |
| + | ಪ್ರಾಯೋಗಿಕವಾಗಿ ಮಾಡಿಸಿದರು. ವಿಡಿಯೋಗಳಲ್ಲಿ ನಮಗೆ ಬೇಕಾದಷ್ಟನ್ನೇ ಬಳಸಿಕೊಳ್ಳುವ ಬಗ್ಗೆ, ಎರಡು ವಿಡಿಯೋಗಳನ್ನು ಸೇರಿಸುವ ಬಗ್ಗೆ , ಆಡಿಯೋ ವಿಡಿಯೋಗಳನ್ನು ಬೇರ್ಪಡಿಸುವ ಬಗ್ಗೆ ಇತ್ಯಾದಿಗಳ ಬಗ್ಗೆ ತಿಳಿಸಲಾಯಿತು. ಸೌಂಡ್ ರೆಕಾರ್ಡ್ ಮಾಡುವ ಬಗ್ಗೆ ಮತ್ತು ಅದನ್ನು ಬಳಸುವ ಬಗ್ಗೆ ತಿಳಿಸಿಕೊಟ್ಟರು. ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರ ಧ್ವನಿಯನ್ನು ರೆಕಾರ್ಡ್ ಮಾಡಿ ಪರೀಕ್ಷಿಸುವುದರ ಮೂಲಕ ನಮಗೆ ತಿಳಿಸಿಕೊಡಲಾಯಿತು. ರೆಕಾರ್ಡ್ ಮಾಡಿದ ಧ್ವನಿಯನ್ನು ಬೇರೆ ವಿಡಿಯೋಗಳಿಗೆ ಹಿನ್ನೆಲೆ ಯಾಗಿ ಕೊಡುವುದನ್ನು ಕೂಡ ಶ್ರೀಯುತ ಪ್ರದೀಪ್ ಸರ್ ಅವರು ಚೆನ್ನಾಗಿ ವಿವರಿಸಿದರು. |
| + | ಚಹಾ ವಿರಾಮದ ನಂತರ ಕಾರ್ಯಾಗಾರದ ಬಗೆಗಿನ ಅಭಿಪ್ರಾಯ ದಾಖಲಿಸಲು ಎಲ್ಲಾ ಶಿಬಿರಾರ್ಥಿಗಳಿಗೂ ಸೂಚಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ತದನಂತರ ಯಾದಗಿರಿ ತಂಡದೊಂದಿಗೆ G-TALK ಮಾಡಲಾಯಿತು. ೯ ನೇ ತರಗತಿಯ |
| + | ಹೊಸ ಪಠ್ಯಪುಸ್ತಕದ ಕುರಿತು ಶಿಕ್ಷಕರ ನಿರೀಕ್ಷೆಗಳನ್ನು ಚರ್ಚಿಸಲಾಯಿತು. ಸಮಸ್ಯೆಗಳನ್ನು ಮತ್ತು ಉತ್ತಮ ಅಂಶಗಳನ್ನು ಪಟ್ಟಿ ಮಾಡಿ ಕೊಯರ್ ಗೆ ಅಪ್ಲೋಡ್ ಮಾಡಲಾಯಿತು. |
| + | ಕೊನೆಯಲ್ಲಿ ನಡೆದ ಸರಳ ಸಮಾರೋಪ ಸಮಾರಂಭದಲ್ಲಿ ಶ್ರೀಯುತ ಜಯಪ್ರಕಾಶ್ ನಾಯಕ್, ಸರ್ಕಾರಿ ಪ್ರೌಢಶಾಲೆ, ತೆಂಕನಿಡಿಯೂರು ಮತ್ತು ಸರ್ಕಾರಿ ಪ್ರೌಢಶಾಲೆ, ಕಾಳಾವರದ ಶಿಕ್ಷಕಿ ಶ್ರೀಮತಿ ಯಶೋದಾ ಅವರು ಅನಿಸಿಕೆಯನ್ನು ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿ ಶ್ರೀಯುತ ಮಹಾಬಲೇಶ್ವರ ಭಾಗ್ವತ್ ಶಿಬಿರಾರ್ಥಿಗಳು ಕಂಪ್ಯೂಟರ್ ನಲ್ಲಿ ಅನ್ವೇಷಣಾ ಮನೋಭಾವನೆಯನ್ನು ಬೆಳೆಸಿಕೊಂಡರೆ ನಾವು ಮುಂದುವರೆಯಲು ಸಾಧ್ಯ ಎಂಬ ಸಲಹೆ ನೀಡಿದರು. ಸಂಪನ್ಮೂಲ ವ್ಯಕ್ತಿ ಶ್ರೀಯುತ ಪ್ರದೀಪ್ ಸರ್ ಅವರು ಅಂತರ್ಜಾಲವನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ತಿಳಿಹೇಳಿದರು. ನೋಡಲ್ ಅಧಿಕಾರಿಯಾಗಿರುವ ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರು ಕೊಯರ್ ಗೆ ಮತ್ತಷ್ಟು ಸಂಪನ್ಮೂಲಗಳನ್ನು ಅಪ್ಲೋಡ್ ಮಾಡಲು ಕರೆ ನೀಡಿದರು. |
| + | ಈ ದಿನ ಕಲಿತ ಎಲ್ಲಾ ವಿಚಾರಗಳನ್ನು ಮತ್ತೊಮ್ಮೆ ನೆನಪಿಸಿಕೊಂಡು ಈ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು. "ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು" ಎಂಬಂತೆ ನಮ್ಮ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ಬೋಧನೆ ಆಕರ್ಷಕವಾಗುವುದರ ಜೊತೆಗೆ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂಬ ಆಶಯದೊಂದಿಗೆ ವರದಿಯನ್ನು ಮುಕ್ತಾಯಗೊಳಿಸುತ್ತಿದ್ದೇವೆ. |
| + | ವರದಿಗಾರರು: |
| + | ಅಕ್ಷತಾ ಕಿಣಿ ಪಿ, |
| + | ಸರ್ಕಾರಿ ಪ್ರೌಢಶಾಲೆ, |
| + | ಕೂಡಬೆಟ್ಟು- ಮಾಳ, ಕಾರ್ಕಳ ತಾ. |
| + | ಅಖಿಲಾ ಶೆಟ್ಟಿ |
| + | ರಾಧಾ ನಾಯಕ್ ಸರ್ಕಾರಿ ಪ್ರೌಢಶಾಲೆ, |
| + | ಎಣ್ಣೆಹೊಳೆ- ಕಾರ್ಕಳ ತಾ. |
| + | ವೀಣಾ ಆರ್.ಎನ್ |
| + | ಸರ್ಕಾರಿ ಪ್ರೌಢಶಾಲೆ, |
| + | ಹೊಸ್ಮಾರು , ಕಾರ್ಕಳ ತಾ. |