== ಜಿಲ್ಲಾ ತರಬೇತಿ ಕೇಂದ್ರ ಮುನಿರಾಬಾದ ತಾ||ಜಿ|| ಕೊಪ್ಪಳ. ==
+
+
ಇಂದು ದಿನಾಂಕ 23/12/13ರಿಂದ ಸಮಾಜ ವಿಜ್ಞಾನ ಶಿಕ್ಷಕರಿಗೆ ಎಸ್,ಟಿ ಎಫ್ ತರಬೇತಿಯನ್ನು ಪ್ರಾರಂಬಿಸಲಾಗಿದೆ ಈ ತರಬೇತಿಯಲ್ಲಿ ಮುಂಜಾನೆ ಪ್ರಾಸ್ತಾವಿಕವಾಗಿ ಮಾತನಾಡಿದ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಭಿಮಣ್ಣ ಸಾವಳಗಿಯವರು ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳಿಗೆ ಆಧುನಿಕ ತಂತ್ರಜ್ಞಾನ ಬಳಸಿ ಭೊದನೆ ಮಾ ಡುವ ದು ಅತ್ಯವಶ್ಯಕವಾಗಿದೆ, ಈನಿಟ್ಟಿನಲ್ಲಿ ಕಂಪ್ಯೂಟರಗಳನ್ನು ಬಳಸಿ ಭೋದಿಸಲು ಎಲ್ಲಾ ಶಿಕ್ಷಕರು ಕಂಪ್ಯೂಟರಬಳಕೆ ತಿಳಿಯುವುದು ಅನಿವಾರ್ಯ ಹಾಗೂ ಅಗತ್ಯ.ಅದಕ್ಕಾಗಿಯೆ ನಿಮಗೆ ಇಂದಿನಿಂದ 5 ದಿನಗಳಕಾಲ ಕಂಪ್ಯೂಟರ ಬಳಸುವುದು ಮೇಲ್ ರಚಿಸುವುದು, ಅಂತರಜಾಲದ ಬಳಕೆ ಮುಂತಾದ ವಿಷಯಗಳನ್ನು ತಿಳಿಸಿಕೊಡಲಾಗುವುದು ಎಂದು ತಿಳಿಸಿದರು. ನಂತರ ಮಾತನಾಡಿದ ನೊಡಲ್ ಅಧಿಕಾರಿಗಳಾದ ಶ್ರೀ ಬಸವರಾಜ ಪಾರಿ ಅವರು ಮಾತನಾಡಿ ಅಧುನಿಕ ಜಗತ್ತಿನಲ್ಲಿ ವಯಸ್ಸಿನ ಯಾವದೆ ತಾರತಮ್ಯವಿಲ್ಲದೆ ಕಂಪ್ಯೂಟರಬಳಸುವುದನ್ನು ಕಲಿಯಬೇಕಾಗಿದೆ ಇಲ್ಲವಾದಲ್ಲಿ ಸುಶಿಕ್ಷಿತ ಅವಿದ್ಯಾವಂತನೆನಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು ಅಲ್ಲದೆ ತರಬೇತಿ ಅವಧಿಯಲ್ಲಿ ಎಲ್ಲರು ಸಮಯ ಪಾಲನೆ ಹಾಗೂ ಕಡ್ಢಾಯ ಹಾಜರಾತಿ ಇರುವುದು ಅವಶ್ಯ ಎಂದು ತಿಳಿಸಿದರು ಇನ್ನೋರ್ವ ಸಂಪನ್ಮೂಲವ್ಯಕ್ತಿ ಶ್ರೀನಿವಾಸ ಮಾತನಾಡಿ ಇ-ಮೇಲ್ ಬಗ್ಗೆ ಹಾಗೂ ಲಿಬ್ರೋ ಆಫೀಸ ಬಗ್ಗೆ ತಿಳಿಸುತ್ತಾ ಕಾರ್ಯಕ್ರಮ ನಿರುಪಿಸಿದರು. ನಂತರ ಶಿಬಿರಾರ್ಥಿಗಳು ಆಸಕ್ತಿಯಿಂದ ಕಂಪ್ಯೂಟರಗಳನ್ನು ಬಳಸುತ್ತಾ ತಮ್ಮ ತಮ್ಮ ಜಿ-ಮೇಲ್ ಐಡಿಗಳನ್ನು ರಚಿಸಿ ಕೊಯರ್ ನಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಂಡು ತಮ್ಮ ಶಾಲೆಗಳ ಮಾಹಿತಿ ತುಂಬಿ ದರು. ವರದಿ ತಯ್ಯಾರಿಸಿದವರು ಶ್ರೀ ಬಿ.ಎಂ.ಸವದತ್ತಿ.ಸಪ್ರೌಢಶಾ ಹೊರತಟ್ನಾಳ,ತಾಜಿ||ಕೊಪ್ಪಳ. ಶ್ರೀ ಗಂಗಾಧರ ಖಾನಾಪೂರ,ಸಪ್ರೌಢಶಾಲೆ ಹಿರೇಬೊಮ್ಮನಾಳ.ತಾಜಿ|ಕೊಪ್ಪಳ.ಶ್ರೀ ವಿರುಪಾಕ್ಷಪ್ಪ ಮೇಟಿ.ಸಪ್ರೌಢ ಶಾಲೆ ಕರ್ಕಿಹಳ್ಳಿ,ತಾಜಿ|ಕೊಪ್ಪಳ.ಮಾರ್ಗದರ್ಶಿಗಳು ಶ್ರೀಭೀಮಪ್ಪ ಸಾವಳಗಿ ಮತ್ತು ಶ್ರೀನಿವಾಸ ಎಮ್.