Changes

Jump to navigation Jump to search
11,501 bytes added ,  13:12, 21 January 2014
Line 91: Line 91:     
ಇದರೊಂದಿಗೆ 5 ದಿನಗಳ ತರಬೇತಿ ಶಿಬಿರ ಮುಕ್ತಾಯವಾಯಿತು.
 
ಇದರೊಂದಿಗೆ 5 ದಿನಗಳ ತರಬೇತಿ ಶಿಬಿರ ಮುಕ್ತಾಯವಾಯಿತು.
 +
 +
 +
 +
HTF 2nd batch Workshop Report 2013 - 14
 +
 +
ದಿನಾಂಕ 06/01/2014 ರಿಂದ 10/01/2014
 +
 +
'''ಮೊದಲನೇ ದಿನದ ವರದಿ'''
 +
 +
ದಿನಾಂಕ 06/01/2014 ರಂದು ಆರ್.ಎಂ.ಎಸ್.ಎ. ಕಾರ್ಯಕ್ರಮದಡಿಯಲ್ಲಿ  ಎರಡ ತಂಡದ HTF ಕಾರ್ಯಾಗಾರವನ್ನು  ಪ್ರಾರಂಭಿಸಲಾಯಿತು. ಡಯಟ್ ನ ಹಿರಿಯ ಉಪನ್ಯಾಸಕಿ ಶ್ರೀಮತಿ ಉಮಾದೇವಿ ಸೊನ್ನದ ಅವರು HTF ತರಬೇತಿಯ ಬಗ್ಗೆ ಪ್ರಾಸ್ತಾವಿಕವಾಗಿ ನುಡಿದರು.ನಂತರ ಶಿಬಿರಾರ್ಥಿಗಳ ಪರಿಚಯವನ್ನು ಮಾಡಿಕೊಳ್ಳಲಾಯಿತು.ನಂತರ ಶಿಬಿರಾರ್ಥಿಗಳು ಕನಸಿನ ಶಾಲೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಚಹಾ ವಿರಾಮದ ನಂತರ  ಶಿಬಿರಾರ್ಥಿಗಳಿಗೆ HTF ಏಕೆ? ಗುರಿ ಮತ್ತು ಉದ್ದೇಶಗಳನ್ನು    ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಘವೇಂದ್ರ ರವರು ತಿಳಿಸಿಕೊಟ್ಟರು. ನಂತರ ಶ್ರೀ ಭೂಷಣ ಪತ್ತಾರರವರು ಉಬುಂಟು ಪರಿಚಯ ಹಾಗೂ ಸಾರ್ವಜನಿಕ ತಂತ್ರಾಶದ ಅನುಕೂಲತೆಗಳನ್ನು ಪೋಸ್ಟರ್‌ಗಳ ಮೂಲಕ ವಿವರಿಸಿದರು. ನಂತರ ಶ್ರೀ ಮುತ್ತಣ್ಣ ಅವರು  ವೇಗವಾಗಿ ತಪ್ಪುಗಳಾಗದಂತೆ ಟೈಪ್‌ ಮಾಡುವ ಬಗೆ ಹಾಗೂ ಇತರೆ ಟೈಪಿಂಗ್‌ ಕೌಶಲ್ಯಗಳನ್ನು ತಿಳಿಸಿಕೊಟ್ಟರು.ಟಕ್ಸ ಟೈಪಿಂಗ್ ನ್ನು ಹೇಳಿಕೊಟ್ಟು ಎಲ್ಲ ಶಿಬಿರಾರ್ಥಿಗಳಿಗೆ ಟೈಪಿಂಗ್‌ ಅಭ್ಯಾಸ ಮಾಡಲು ಬಿಡಲಾಯಿತು. ಊಟದ ವಿರಾಮದ ನಂತರ ಭೂಷಣ ರವರು ಈಮೇಲ್ ಅಕೌಂಟ್ ರಚಿಸುವುದನ್ನು ತಿಳಿಸಿಕೊಟ್ಟರು. ನಂತರ ಶಿಬಿರಾರ್ಥಿಗಳಿಗೆ ತಮ್ಮ ಈ ಮೇಲ್ ಅಕೌಂಟ್‌ಗಳನ್ನು ರಚಿಸಲು ಬಿಡಲಾಯಿತು.
 +
 
 +
'''ಎರಡನೇ ದಿನದ ವರದಿ'''
 +
 +
ಎರಡನೇ ದಿನವನ್ನು ಶಿಬಿರಾರ್ಥಿಗಳ ಮಾಹಿತಿಯನ್ನು ಗೂಗಲ್ ಡಾಕ್‌ನಲ್ಲಿ ತುಂಬುವುದರೊಂದಿಗೆ ಪ್ರಾರಂಭಿಸಲಾಯಿತು.ನಂತರ ಶಿಕ್ಷಣದ ಗುರಿಗಳು ಹಾಗೂ ಶಾಲಾ ಅಭಿವೃದ್ಧಿ ಅಂಶಗಳ ಬಗ್ಗೆ ಚರ್ಚಿಸುತ್ತಾ ಮೈಂಡ್ ಮ್ಯಾಪ್‌ನ ಅನ್ವಯನ್ನು ಶ್ರೀ ರಾಘವೇಂದ್ರ ಅವರು  ತಿಳಿಸಿಕೊಟ್ಟರು.ನಂತರ ಶ್ರೀ ಮುತ್ತಣ್ಣ ಅವರು ಪ್ರಭಾವ ವಲಯ ಹಾಗೂ ಕಾಳಜಿ ವಲಯಗಳ ಬಗ್ಗೆ ಚರ್ಚಿಸಿದರು.ಚಹಾ ವಿರಾಮದ ನಂತರ ಭೂಷಣ ಅವರು ಈ ಮೇಲ್‌ನಲ್ಲಿ ಫೈಲ್ ಅಟ್ಯಾಚ್‌ ಮಾಡುವುದು ಹಾಗೂ ಡೌನ್‌ಲೋಡ್‌ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು. ಊಟದ ವಿರಾಮದ ನಂತರ ಲಿಬ್ರೆ ಅಫಿಸ್, ಲೆಟರ್ ಟೈಪಿಂಗ್ , ಕನ್ನಡ ಟೈಪಿಂಗ್ ಬಗ್ಗೆ ರಾಘವೇಂದ್ರರವರು ತಿಳಿಸಿ ಶಿಬಿರಾರ್ಥಿಗಳನ್ನು ಪ್ರಾಯೋಗಿಕ ಅಭ್ಯಾಸಕ್ಕೆ ಬಿಡಲಾಯಿತು.
 +
 +
'''ಮೂರನೇ ದಿನದ ವರದಿ'''
 +
 +
ದಿನಾಂಕ 8/1/2014 ರಂದು  ಬೆಳಗಿನ  ಅವಧಿಯಲ್ಲಿ ಶ್ರೀ  ಮು ತ್ತಣ್ಣ  ಅವರು  SWOT ಬಗ್ಗೆ ಚರ್ಚೆ ನಡೆಸಿದರು .  ಶಾಲೆಗೆ ಸಂಬಂಧಪಟ್ಟಂತೆ ಎದುರಾಗು ವ ಸಮಸ್ಯೆಗಳಿಗೆ ಹೇಗೆ  SWOT    ಮೂಲಕ ಪರಿಹಾರ ಕಂಡುಕೊಳ್ಳಬಹುದು  ಎಂಬುದನ್ನು  ಶಿಬಿರಾರ್ಥಿಗಳೊಂದಿಗೆ  ಚರ್ಚಿಸಿದರು .ಚಹಾ ವಿರಾಮದ ನಂತರ ಶ್ರೀ ಭೂಷಣ  ಪತ್ತಾರ  ಇವರು  ಮೈಂಡಮ್ಯಾಪ್‌ನಲ್ಲಿ  ಕನ್ನಡವನ್ನು ಹೇಗೆ  ಟೈಪ್  ಮಾಡುವುದು  ಎಂಬುದನ್ನು  ತಿಳಿಸಿಕೊಟ್ಟರು  .ಇದಾದ ನಂತರ ಶ್ರೀ ರಾಘವೇಂದ್ರ  ಇವರು  KOER  ಬಗ್ಗೆ ಪರಿಚಯ    ಮಾಡಿಕೊಟ್ಟರು . KOER ನಲ್ಲಿ ಮಾಹಿತಿ ಹುಡುಕುವುದು ಮತ್ತು  ಹೇಗೆ ಸಂಪನ್ಮೂ ಲವನ್ನು  ಅಭಿವೃದ್ದಿಪಡಿಸಬೇಕೆಂಬುದನ್ನು  ತಿಳಿಸಿದರು .ಊಟದ ವಿರಾಮದ ನಂತರ ಶಿಬಿರಾರ್ಥಿಗಳಿಗೆ ಅಂತರ್ಜಾಲದ ಮೂಲಕ ಶಾಲಾ ನಾಯಕತ್ವದ ಬಗ್ಗೆ ಸಂಪನ್ಮೂ ಲ ಕ್ರೋಢೀಕರಿಸಲು  ಹೇಳಲಾಯಿತು .ಅದರಂತೆ ಶಿಬಿರಾರ್ಥಿಗಳು  ಉತ್ಸಾಹದಿಂದ ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕಿ ತಮ್ಮ ಫೋಲ್ಡರ್‌ಗಳಲ್ಲಿ  ಸಂಗ್ರಹ  ಮಾಡಿದರು. ಚಹಾವಿರಾಮದ ನಂತರ ಸಿ.ಸಿ.ಇ. ( CCE) ಬಗ್ಗೆ ವಿಸ್ತಾರವಾಗಿ  ಭೂಷಣ ಪತ್ತಾರ ಅವರು  ತಿಳಿಸಿಕೊಟ್ಟರು  . ಇದರ ಬಗ್ಗೆ ಶಿಬಿರಾರ್ಥಿಗಳೊಂದಿಗೆ  ಚರ್ಚಿಸಲಾಯಿತು.
 +
 +
'''ನಾಲ್ಕನೇ  ದಿನದ ವರದಿ'''
 +
 +
ನಾಲ್ಕನೇ ದಿನ ಬೆಳಗಿನ ಅವಧಿಯಲ್ಲಿ ಲಿಬ್ರೆ ಆಫೀಸ್ ಕ್ಯಾ ಲ್ಕ (spreadsheet) ಬಗ್ಗೆ  ಶ್ರೀ ಭೂಷಣ ಪತ್ತಾರ ಅವರು ಮಾಹಿತಿ ನೀಡಿದರು. ಅದರಲ್ಲಿ ಶಾಲಾ ದಾಖಲೆಗಳನ್ನು ತಯಾರಿಸಲು , ಸಂರಕ್ಷಿಸಲು ಹಾಗೂ ವಿಶ್ಲೇಷಣೆ ಮಾಡಲು ಇದು ಹೇಗೆ ಸಹಾಯಕಾರಿ ಎಂಬುದನ್ನು ಉದಾಹರಣೆಗಳ ಸಮೇತ ತಿಳಿಸಿಕೊಟ್ಟರು. ನಂತರ ಕ್ಯಾ ಲ್ಕನಲ್ಲಿ ಕೆಲಸ ಮಾಡುವುದು, ಫಾರ್ಮುಲಾಗಳನ್ನು ಬಳಸುವುದು , ಪೇಜ ಸೆಟ್ಟಿಂಗ್ ಮತ್ತು ಪ್ರಿಂಟ್ ಮಾಡುವುದರ ಬಗ್ಗೆ ತಿಳಿಸಿ ಕೊಡಲಾಯಿತು. ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ಕ್ಯಾ ಲ್ಕನಲ್ಲಿ ಡಾಟಾ ಎಂಟ್ರಿ ಮಾಡಲು ಹಾಗು ಸರಳ ಫಾರ್ಮುಲಾಗಳನ್ನು ರಚಿಸಲು ಬಿಡಲಾಯಿತು.ಚಹಾ ವಿರಾಮದ ನಂತರ ಶ್ರೀ ಮುತ್ತಣ್ಣ ಅವರು ಗೂಗಲ್ ಗ್ರೂಪ್ಸನಲ್ಲಿ ಮಾಹಿತಿಯನ್ನು ಹೇಗೆ ಹಂಚಿಕೊಳ್ಳಬೇಕೆಂಬುದನ್ನು ತಿಳಿಸಿಕೊಟ್ಟರು.ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ತಮ್ಮ ಮಾಹಿತಿ ಅಥವಾ ಸಂಪನ್ಮೂಲವನ್ನು ಗೂಗಲ್ ಗ್ರೂಪ್‌ಗೆ ಹಾಕಲು ಸಮಯ ನೀಡಲಾಯಿತು.ನಂತರ ಶ್ರೀ ರಾಘವೇಂದ್ರ ಅವರು ಶಿಬಿರಾರ್ಥಿಗಳಿಗೆ ತಮ್ಮ ಡಾಕ್ಯುಮೆಂಟ್‌ಗಳಲ್ಲಿ  ಹೈಪರ್‌ಲಿಂಕ್‌ಗಳನ್ನು ರಚಿಸುವುದು ಹೆಗೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಊಟದ ವಿರಾಮದ ನಂತರ ಶ್ರೀ ಶ್ರೀನಿವಾಸ ಅವರು HRMS ಬಗ್ಗೆ ಸಂಪೂರ್ಣ ಮಾಹಿತಿಯನ್ನು  ನೀಡಿದರು. HRMS ನಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಗಳು ಹಾಗೂ ಮಾಹಿತಿಯನ್ನು ಕಡ್ಡಾ ಯವಾಗಿ ಅಪ್‌ಡೇಟ್‌ ಮಾಡುವುದರ ಬಗ್ಗೆ  ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
 +
 +
'''ಐದನೇ  ದಿನದ ವರದಿ'''
 +
 +
ಐದನೇ ದಿನದ ಪ್ರಾರಂಭವನ್ನು ಶ್ರೀ ಮುತ್ತಣ್ಣ ಅವರು screenshot  ಮತ್ತು GIMP ನೊಂದಿಗೆ ಆರಂಭಿಸಿದರು. ಇದರಲ್ಲಿ ಅವರು screenshot  ನ ಅನ್ವಯ ಹಾಗೂ GIMP ನಲ್ಲಿ ಫೋಟೊಗಳನ್ನು ಎಡಿಟ್ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ನಂತರ ಶ್ರೀ ರಾಘವೇಂದ್ರ ಅವರು picasa  ನಲ್ಲಿ ಫೋಟೊಗಳನ್ನು ಅಪ್‌ಲೋಡ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಚಹಾ ವಿರಾಮದ ನಂತರ ಭೂಷಣ ಪತ್ತಾರ ಅವರು youtube ಬಗ್ಗೆ ಹಾಗೂ ಇದರಲ್ಲಿ ವಿಡಿಯೋಗಳನ್ನು  upload ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಊಟದ ವಿರಾಮದ ನಂತರ ಶಿಬಿರಾರ್ಥಿಗಳಿಗೆ youtube ಬಗ್ಗೆ ಹಾಗೂ ಇದರಲ್ಲಿ ವಿಡಿಯೋಗಳನ್ನು  upload ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಬಿಡಲಾಯಿತು.
 +
ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳ ಅನಿಸಿಕೆಗಳನ್ನು ಪಡೆಯಲಾಯಿತು ಮತ್ತು  KOER ನಲ್ಲಿ feedback format ನ್ನು ಭರ್ತಿ ಮಾಡಿಸಲಾಯಿತು.
 +
 +
ಇದಾದ ನಂತರ ಸಮಾರೋಪ ಸಮಾರಂಭವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಬಿರಾರ್ಥಿಗಳು ತಮ್ಮ ಐದು ದಿನಗಳ ಈ ತರಬೇತಿಯ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ನೋಡಲ್ ಅಧಿಕಾರಿಣಿ ಹಾಗೂ ಡಯಟ್‌ನ ಹಿರಿಯ ಉಪನ್ಯಾಸಕಿ ಶ್ರೀಮತಿ ಉಮಾದೇವಿ ಸೊನ್ನದ ಇವರು ತರಬೇತಿ ಪಡೆದ ಎಲ್ಲ ಮುಖ್ಯ ಶಿಕ್ಷಕರಿಗೆ ಶುಭವನ್ನು ಕೋರಿದರು. ಇದರೊಂದಿಗೆ 5 ದಿನಗಳ ತರಬೇತಿ ಶಿಬಿರ ಮುಕ್ತಾಯವಾಯಿತು.
    
=Mathematics=
 
=Mathematics=
1,287

edits

Navigation menu