Workshop Summary

From Karnataka Open Educational Resources
Jump to navigation Jump to search

ಬೆಂಗಳೂರು ವಿಭಾಗದ ವಿಜ್ಞಾನ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ ಇಂದು ಯಶಸ್ವಿಯಾಗಿ ಮುಗಿದಿದ್ದು, ಈ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ತಾವು ಕಲಿತಿರುವ ವಿಷಯವನ್ನು ಜಿಲ್ಲಾ ಹಂತದಲ್ಲಿ ಶಿಕ್ಷಕರಿಗೆ ಕಲಿಸಲು ಹೊರಟಿದ್ದಾರೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಬೆಂಗಳೂರು ವಿಭಾಗದ ತರಬೇತಿಯ ಬಗ್ಗೆ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ.

ಬೆಂಗಳೂರು ವಿಭಾಗದ ೫ ಜನ ಎಸ್.ಆರ್. ಪಿ. ಗಳಲ್ಲಿ ಶ್ರೀಮತಿ ವಿನುತಾ ಮೇಡಮ್ ಉಪನ್ಯಾಸಕರು ಇವರನ್ನು ಹೊರತು ಪಡಿಸಿ ಉಳಿದ ಎಲ್ಲಾ ಎಸ್.ಆರ್. ಪಿ. ಗಳು ತುಂಬಾ ಉತ್ಸುಹಕರಾಗಿ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು.

ಮೊದಲಿಗೆ ಬೆಂಗಳೂರು ವಿಭಾಗದ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರದ ಎಲ್ಲ ವ್ಯವಸ್ಥೆಗಳು ಚೆನ್ನಾಗಿದ್ದವು, ಈ ಕಾರ್ಯಗಾರಕ್ಕೆ ಬೆಂ.ಗ್ರಾಮಾಂತರ, ಬೆಂ.ನಗರ , ಹಾಸನ, ತುಮಕೂರು, ರಾಮನಗರ, ಚಿಕ್ಕಬಳ್ಳಾಪೂರು ಮತ್ತು ಚಿತ್ರದುರ್ಗಾ ಜಿಲ್ಲೆಯಿಂದ ಸಂಪನ್ಮೂಲ ವ್ಯಕ್ತಿಗಳು ಬಂದಿದ್ದರು.

ಮೊದಲನೇ ದಿನ : ಹಾಸನ ಜಿಲ್ಲೆಯಿಂದ ಯಾವ ಶಿಕ್ಷಕರು ತರಬೇತಿಗೆ ಬಂದಿರುವದಿಲ್ಲ . ಜಿಲ್ಲೆಯ ಡಯಟ್ ನೋಡಲ್ ಅಧಿಕಾರಿಯನ್ನು ವಿಚಾರಿಸಿದಾಗ ಅವರು ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದರು .
ರಾಮನಗರ ಜಿಲ್ಲೆಯಿಂದ ಬಂದಿರುವ ೩ ಜನ ಶಿಕ್ಷಕರಲ್ಲಿ ಎಲ್ಲರು ವಿಜ್ಞಾನ (ಪಿ.ಸಿ.ಎಂ) ಶಿಕ್ಷಕರು ಇರುವದರಿಂದ ಅಲ್ಲದೆ ಎಲ್ಲಾ ಶಿಕ್ಷಕರು ಗಣಿತ ಪಾಠ ಬೋಧನೆ ಮಾಡುವದರಿಂದ ಈ ತರಬೇತಿಯು ಅವರಿಗೆ ಸೂಕ್ತವಾಗದೆ ಇರುವದರಿಂದ ಬಂದಿರುವ ಇಬ್ಬರು ಶಿಕ್ಷಕರು ವಾಪಸ ಮರಳಿದರು .
ಬೆಂಗಳೂರು ನಗರ ದಿಂದ ಕೇವಲ ಒಬ್ಬ ಶಿಕ್ಷಕರು ಮಾತ್ರ ಬಂದಿದ್ದರು .

ಎರಡನೇ ದಿನ : ರಾಮನಗರ - 2
ಹಾಸನ - 6
ಬೆಂ. ನಗರ -2
ಚಿಕ್ಕಬಳ್ಳಾಪೂರ -1

ಒಟ್ಟು 11 ಜನ ಶಿಕ್ಷಕರು 2ನೇ ದಿನ ತರಬೇತಿಗೆ ಹಾಜರಾದವರು .
ಒಟ್ಟು - 28 ಜನ ಶಿಕ್ಷಕರು

ಮೂರನೇ ದಿನ : ಪ್ರಯೋಗ ಶಾಲೆಯ ಕೋರತೆಯಿಂದ ನಾಲ್ಕನೇ ದಿನಕ್ಕೆ ಮುಂದುಡಲಾಗಿದೆ ಮತ್ತು ನಾಲ್ಕನೇ ದಿನದ ತರಬೇತಿಯನ್ನು ಮೂರನೇ ದಿನ ಮಾಡಲಾಯಿತು .
ನಾಲ್ಕನೇ ದಿನ : ವಿಜ್ಞಾನ ಪ್ರಯೋಗಾಲಯ ದಿನದ ಚಟುವಟಿಕೆ (ಸರಕಾರಿ ಪ್ರೌಢ ಶಾಲೆ ರಾಜಾಜಿನಗರದಲ್ಲಿ ಅಯೋಜಿಸಲಾಗಿತ್ತು) - ಹಾಸನ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಪ್ರಯೋಗ ಮಾಡುವ ಸಂದರ್ಬದಲ್ಲಿ ಪ್ರಬಲ ಹೈಡ್ರೋಕ್ಲೋರಿಕ ಆಮ್ಲ ಬಳಸುವಾಗ ಸರಿಯಾಗಿ ಗಮನಿಸದೆ ಸ್ವಲ್ಪ ಮಟ್ಟಿನ ಚಿಕ್ಕ ಗಾಯಗಳನ್ನು ಮಾಡಿಕೊಂಡಿದ್ದಾರೆ .
ಇನ್ನುಳಿದ ಎಲ್ಲಾ ಜಿಲ್ಲೆಯ ಶಿಕ್ಷಕರು ಯಾವುದೇ ಅಹಿತಕರ ಘಟನೇ ಆಗದೆ ಪ್ರಯೋಗಗಳನ್ನು ಮಾಡಲಾಯಿತು .

ಐದನೇ ದಿನ : ೫ ದಿನಗಳ ಕಾರ್ಯಗಾರ ಮುಗಿದ ನಂತರ ಬೇರೆ ಬೇರೆ ಜಿಲ್ಲೆಯ ಶಿಕ್ಷಕರನ್ನು ತುಲನೆ ಮಾಡಿ ನೊಡಿದಾಗ ಬಂದಿರುವ ಎಲ್ಲ ಶಿಕ್ಷಕರಿಗೆ ಕಂಪ್ಯೂಟರ ಬಳಕೆಯ ಜ್ಞಾನ ಹೊಂದಿದ್ದಾರೆ , ಅಲ್ಲದೆ ಬಂದಿರುವ ಎಲ್ಲಾ ಶಿಕ್ಷಕರು ತುಂಬಾ ಆಸಕ್ತಿಯಿಂದ ಭಾಗವಹಿಸಿ ಮುಂದೆ ನಡೆಯಲಿರುವ ಜಿಲ್ಲಾ ಹಂತದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ ಅದಕ್ಕೆ ಬೇಕಾಗಿರುವ ಸಂಪನ್ಮೂಲಗಳೊಂದಿಗೆ ಸಿದ್ದರಾಗಿದ್ದೆವೆ ಎಂಬ ಮಾಹಿತಿಯನ್ನು ನಿಡಿದರು .
ಎಲ್ಲಾ ಶಿಕ್ಷಕರು ಒಂದು ಬಯಕೆಯನ್ನು ಮುಂದಿಟ್ಟರು ಜಿಲ್ಲಾ ಹಂತದ ತರಬೇತಿಗೆ ಐ.ಟಿ.ಫಾರ್ ಚೇಂಜ್ ನ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನಡೆಯುವ ಸಂದರ್ಭದಲ್ಲಿ ಒಂದು ದಿನ ಬಂದರೆ ಸೂಕ್ತ ಎಂದು ತಿಳಿಸಿದರು (ಇಲ್ಲಿ ನಮ್ಮ ತಂಡದ ಸದಸ್ಯರ ದೂರವಾಣಿ ಸಂಖ್ಯೆಯನ್ನು ಕೊಡಲಾಗಿದೆ ಅಲ್ಲದೆ ತರಬೇತಿಯ ಸಂದರ್ಬದಲ್ಲಿ ಏನಾದರು ಸಮಸ್ಯೆ ಇದ್ದರೆ ಸಂಪರ್ಕಿಸಲು ತಿಳಿಸಲಾಗಿದೆ ).

ಒಟ್ಟಾರೆ 9 ಜನ ಶಿಕ್ಷಕರ ಲ್ಯಾಪಟಾಪ್ ಗಳಿಗೆ ಉಬುಂಟು ಸಾಪ್ಟವೇರ್ Install ಮಾಡಲಾಗಿದೆ .

ಕಾರ್ಯಗಾರ ಸ್ಥಳದ ವ್ಯವಸ್ಥೆಗಳು ಬಹಳ ಅಚ್ಚುಕಟ್ಟಾಗಿದ್ದು, ಯಾವುದೇ ರೀತಿಯ ಅನಾನುಕೂಲಗಳಾಗದಂತೆ ನೋಡಿಕೊಳ್ಳಲಾಯಿತು, ಇದಕ್ಕಾಗಿ ಬೆಂಗಳೂರು ಗ್ರಾಮಾಂತರ ಡಯಟ್ ನ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಈ ಕಾರ್ಯಾಗಾರದ ಎಲ್ಲಾ ವ್ಯವಸ್ಥೆಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗಲು ಶ್ರಮಿಸಿದ ನಿಮಗೆ ಮತ್ತು ನಿಮ್ಮ ತಂಡದವರಿಗೆ ನಮ್ಮ ತಂಡದ ಪರವಾಗಿ ಧನ್ಯವಾದಗಳು ಸರ್.

ಮುಂದಿನ ವಿಜ್ಞಾನ ಎಂ. ಆರ್. ಪಿ. 2 ರ ತರಬೇತಿಯು ಸಿ.ಟಿ.ಇ. ಮಂಗಳೂರ ನಲ್ಲಿ ದಿನಾಂಕ 27/07/15 ರಿಂದ 31/07/15 ರ ವರಗೆ ನಡೆಯಲಿದೆ .