| + | ನಂತರ ಎಲ್ಲಾ ತಂಡದವರಿಗೂ ಕನ್ನಡ ಟೈಪಿಂಗ್ ಮಾಡುವುದರ ಬಗ್ಗೆ ತಿಳಿಸಿ ಕೊಟ್ಟರು, ಎಲ್ಲರೂ ಕನ್ನಡ ಟೈಪಿಂಗ್ ನ್ನು ಉತ್ಸಾಹದಿಂದ ಕಲಿತೆವು. 1:15-2:00 ವರಗೆ ಊಟದ ವಿರಾಮ.ನಂತರ ಉಬುಂಟು ಲಿಬ್ರೆ ಪ್ರೋಗ್ರಾಂನಲ್ಲಿ ಪಾಠ ಯೋಜನೆ ಟೈಪಿಸಿ ಪೂರಕ ಚಿತ್ರಗಳನ್ನು ಅಂತರ್ಜಾಲದಿಂದ ಪಡೆದು ಸೇರಿಸುವುದನ್ನು ಮೀರಾ ಮೇಡಮ್ ,ಸಿದ್ದೆಶ್ ಸರ್, ಶ್ರೀಧರ ಮಯ್ಯ ಸರ್,ವೀರೇಶ್ ಸರ್ ಉತ್ತಮವಾಗಿ ತಿಳಿಸಿಕೊಟ್ಟರು,ಎಲ್ಲರೂ ಪಾಠ ಯೋಜನೆ ತಯಾರಿಸಿದೆವು. ತದನಂತರ ಅದನ್ನು ಇ-ಮೇಲ್ ಮೂಲಕ S T F group ಗೆ ವಿನಿಮಯ ಮಾಡುವುದನ್ನು ಕಲಿತೆವು, ನಂತರ ಪ್ರಯೊಗ ಮಾಡಲು ಅನುಸರಿಸಬಹುದಾದ ಹಂತಗಳನ್ನು ತಿಳಿಸಿಕೊಟ್ಟರು, ಹಾಗೆಯೇ S T F group ನಲ್ಲಿರುವ ಕೆಲವು ಪ್ರಯೊಗಗಳನ್ನು ವೀಕ್ಷಿಸುವುದರೊಂದಿಗೆ ಎರಡನೇದಿನದ ತರಬೇತಿಯು 5:10pmಗೆ ಮುಗಿಯಿತು. <br> |