Anonymous

Changes

From Karnataka Open Educational Resources
6,218 bytes added ,  05:46, 26 September 2015
Line 37: Line 37:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
'''ಮೊದಲನೇ ದಿನ ''' : ದಿನಾಂಕ :೨೧/೦೯/೨೦೧೫ನೇ ಸೋಮವಾರ ಬೆಳಿಗ್ಗೆ ೧೦:೦೦ ಉದ್ಘಾಟನೆಯನ್ನು ಮಾನ್ಯ ಪ್ರಾಚಾರ್ಯರಾದ ಶ್ರೀ ಪರಮೇಶ್ವರ.ಬಿ ಯವರು ನೆರವೇರಿಸಿ ತಂತ್ರಜ್ಞಾನದ ಬೆಳವಣಿಗೆ ಮತ್ತು ಶಿಕ್ಷಣದಲ್ಲಿ ಹೇಗೆ ಬಳಸಬೇಕೆಂದು ಹೇಳುತ್ತಾ, ತರಗತಿಯ ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ ಮಾಡಲು ತಿಳಿಸಿದರು. ಸದರಿ ಕಾಯ9ಕ್ರಮದಲ್ಲಿ ಶ್ರೀ ವಿರುಪಾಕ್ಷಯ್ಯ ಹಿರಿಯ ಉಪನ್ಯಾಸಕರು ಮಾತನಾಡಿ, ಶಿಕ್ಷಕರು ನಿಮ್ಮ ಶಾಲೆಯಲ್ಲಿರುವ ಗಣಕಯಂತ್ರ ಲ್ಯಾಬ್ ಮತ್ತು ಉಬಂಟು ತಂತ್ರಜ್ಞಾನದ ಬಳಸಿಕೊಂಡು ಪರಿಣಾಮಕಾರಿಯಾಗಿ ಬೋಧಿಸಲು ತಿಳಿಸಿದರು. ಶ್ರೀಮತಿ ರೇಖಾ ಹಿರಿಯ ಉಪನ್ಯಾಸಕರು ಉಪಸ್ಥಿತರಿದ್ದರು. ಸದರಿ ಕಾರ್ಯಕ್ರಮವನ್ನು ಶ್ರೀ ಜೋಷಿ ಶಿಕ್ಷಕರು ನಿರೂಪಿಸಿದರು. ಹಾಗು ಶ್ರೀ ಶಿವಯೋಗಿ ವಂದಿಸಿದರು.ಶ್ರೀ ಶಿವಯೋಗಪ್ಪ ಸಂಪನ್ಮೂಲ ವ್ಯಕ್ತಿಗಳು  ಉಬಂಟು ತಂತ್ರಜ್ಞಾನದ ಬೆಳವಣಿಗೆ ಹಾಗು ಗಣಕಯಂತ್ರ  ಖರೀದಿಸುವಾಗ ಗಮನಿಸಬೇಕಾದ  ಮುಖ್ಯ ವಿಷಯಗಳ ಬಗ್ಗೆ ಚರ್ಚೆ  ಮಾಡಿದರು.ನಂತರ ಶ್ರೀ ರಮೇಶ ಶಿಲ್ಪಿ ಸಂಪನ್ಮೂಲ ವ್ಯಕ್ತಿಗಳು ಕೊಯರ ಬಳಕೆ ಮಾಡುವುದು ಹಾಗೂ ಮಾಹಿತಿಯನ್ನು ಬಳಸುವ ಬಗ್ಗೆ ಮತ್ತು ಸೇರಿಸುವ ಬಗ್ಗೆ ತಿಳಿಸಿದರು.ನಂತರ ಶ್ರೀ ಶಿವಯೋಗಪ್ಪ ಸಂಪನ್ಮೂಲ  ವ್ಯಕ್ತಿಗಳು ಇ-ಮೇಲ್ ರಚಿಸುವುದು-ಬಳಕೆ  ವಿಷಯ ವೇದಿಕೆಗೆ ಸೇರ್ಪಡೆಯಾಗುವುದನ್ನು ತಿಳಿಸಿದರು.ನಂತರ ಎಲ್ಲಾ ಶಿಕ್ಷಕರು ತಮ್ಮ ಇ- ಮೇಲ್ ಗಳನ್ನು  ಖುಷಿಯಿಂದ ಕಲಿತರು.
 +
'''ಎರಡನೇ ದಿನ ''' : ದಿನಾಂಕ: 22.09.2015ರಂದು ಎಸ್.ಟಿ.ಎಫ್. ತರಬೇತಿಯ 2ನೇ ದಿನದ ವರದಿಯನ್ನು ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ. ದಿನಾಂಕ 21.09.2015ರ ಮೊದಲ ದಿನದ ವರದಿ ವಾಚನವನ್ನು ಗಂಗಾವತಿ ತಾಲೂಕಿನ ವಿಜ್ಞಾನ ಶಿಕ್ಷಕರಾದ ಶ್ರೀ ಹೇಮಂತರಾಜ ಸರಕಾರಿ ಪ್ರೌಢಶಾಲೆ ವೆಂಕಟಗಿರಿ ಇವರು ಮಾಡುವ ಮೂಲಕ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು. ಈ ದಿನದ ತರಬೇತಿಯಲ್ಲಿ ಮೊದಲು ಸಂಪನ್ಮೂಲ ವ್ಯಕ್ತಿಯಾದ ಶ್ರೀ ರಮೇಶ ಶಿಲ್ಪಯವರು ಪ್ರಯೋಗಗಳನ್ನು ಹೇಗೆ ಮಾಡುವುದು ಅದಕ್ಕೆ ಅನುಸರಿಸಬೇಕಾದ ಅಂಶಗಳನ್ನು ತಿಳಿಸಿದರು. ಅದೇ ರೀತಿ ಪ್ರತಿಯೊಬ್ಬರಿಗೂ ಒಂದೊಂದು ಪ್ರಯೋಗಗಳನ್ನು ಆಯ್ಕೆಮಾಡಿಕೊಂಡು ಅದನ್ನು ಕೊಯರ್‍ನಲ್ಲಿ ಅಪ್‍ಲೋಡ್ ಮಾಡಲು ತಿಳಿಸಿದರು. ಎಲ್ಲಾ ಶಿಕ್ಷಕರು ಒಂದೊಂದು ಪ್ರಯೋಗಗಳನ್ನು ಆಯ್ಕೆಮಾಡಿಕೊಂಡು ತಯಾರಿಸಿಕೊಂಡು ಅದನ್ನು ಕೊಯರಗೆ ಅಪ್‍ಲೋಡ ಮಾಡಿದರು. ನಂತರ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಯೋಗಪ್ಪ ಸರಕಾರಿ ಪ್ರೌಢಶಾಲೆ ತಾಳಕೇರಿ ಇವರು ಗೂಗಲ್‍ನಿಂದ ಹೇಗೆ ಇಮೇಜ್‍ಗಳನ್ನು ಡೌನ್‍ಲೋಡ್ ಮಾಡುವುದು ಎಂಬುದನ್ನು ತಿಳಿಸಿದರು. ಮದ್ಯಾಹ್ನ ಊಟದ ನಂತರ ಮತ್ತೇ ಶ್ರೀ ರಮೇಶ ಶಿಲ್ಪಿಯವರು ವೆಬ್‍ಗಳ ಬಳಕೆ ಮತ್ತು ಅವುಗಳ ಮಹತ್ವ ತಿಳಿಸಿದರು. ಉಬುಂಟುವಿನ ಮತ್ತೊಂದು ಸಾಫ್ಟವೇರ್ ಫ್ರೀ ಮೈಂಡ್ ಮ್ಯಾಪ್ ಹೇಗೆ ಬಳಸಿಕೊಳ್ಳುವುದು ಇದರಿಂದ ಪ್ಲೋಚಾರ್ಟ್ ತಯಾರಿಕೆ ಸುಲಭ ಎಂಬುವುದನ್ನು ತೋರಿಸಿಕೊಟ್ಟರು.
 +
ತಾವು ತಯಾರಿಸಿಕೊಂಡ ಪ್ರಯೋಗಗಳನ್ನು ಎಲ್ಲಾ ತರಬೇತಿ ಶಿಕ್ಷಕರ ಮುಂದೆ ಶ್ರೀ ಕೃಷ್ಣಮೂರ್ತಿ ಭಟ್, ನ್ಯೂಟನ್ ಚಲನೆಯ ಎರಡನೇ ನಿಯಮದ ಮೇಲೆ ಹಾಗೂ ಶ್ರೀಮತಿ ವೇದಾವತಿ ಮೇಡಮ್‍ರವರು ಚಲನೆ ಮತ್ತು ದ್ರವ್ಯರಾಶಿಯ ಬಗ್ಗೆ, ಇನ್ನೊರ್ವ ಶಿಕ್ಷಕಿಯಾದ ಶ್ರೀಮತಿ ಜ್ಯೋತಿ ಮೇಡಮ್ ರಾಕೆಟ್‍ನ ಮೇಲೆ  ಪ್ರಯೋಗಗಳನ್ನು ಮಾಡಿ ತೋರಿಸಿದರು. ಸಂಜೆ 5.30ಕ್ಕೆ ತರಬೇತಿಯನ್ನು ಅಂತ್ಯಗೊಳಿಸಿ ನಾಳೆಗೆ ಬೇಕಾಗುವ ಪ್ರಯೋಗಗಳಿಗೆ ಸಾಮಾನುಗಳನ್ನು ಹೊಂದಿಸಿಕೊಳ್ಳುವ ತಯಾರಿಯಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗೆ ನಡೆದೆವು.
    
==Batch 3==
 
==Batch 3==