MDRS Ganjigatti
ನಮ್ಮ ಶಾಲೆಯ ಬಗ್ಗೆ / About MDRS Ganjigatti
ನಮ್ಮ ಶಾಲೆಯು ಹಾವೇರಿ ಜಿಲ್ಲೆಯ ಪ್ರತಿಷ್ಠಿತ ಶಿಗ್ಗಾಂವ್ ತಾಲೂಕಿನಲ್ಲಿ ಒಂದಾದ 10 ಹೆಕ್ಟೇರ್ ಜಮೀನಿನ ಗಂಜಿಗಟ್ಟಿ ಎಂಬ ಗ್ರಾಮದಲ್ಲಿ ನೆಲೆಗೊಂಡಿದೆ. ಇದು 10-07-2006 ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಾಗಿ ಆರಂಭವಾಗಿದೆ. ವಿಶಾಲವಾದ ಮೈದಾನದ ಸೌಲಭ್ಯವನ್ನು ಹೊಂದಿದ್ದು ಮಕ್ಕಳ ಸಹ ಪಠ್ಯ ಚಟುವಟಿಕೆಗಳಿಗೂ ಪೂರಕವಾಗಿದೆ. ಇಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಜೊತೆಗೆ ಸಂಗೀತದ ಶಿಕ್ಷಣ , ಆರೋಗ್ಯದ ಕಾಳಜಿಯನ್ನು ನೋಡಿಕೊಳ್ಳಲಾಗುತ್ತಿದೆ,ಗಣಕಯಂತ್ರದ ಮೂಲಕ ವಿಶೇಷ ಕಲಿಕೆಗಳನ್ನು ಪಠ್ಯಕ್ರಮದ ಜೊತೆ ಕಲಿಸಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ SSLC ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿರುವ ಶಾಲೆಗಳಲ್ಲಿ ಇದು ಸಹ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.,
ಗಂಜಿಗಟ್ಟಿ ಶಾಲೆ ನೆಲೆಸಿರುವ ನಕ್ಷೆ / Ganjigatti School Location Map
Loading map...
ವಿದ್ಯಾರ್ಥಿಗಳ ನುಡಿ / Student speak
ವಿನಾಯಕ ೧೦ನೇ ತರಗತಿ
ಮೊರಾರ್ಜಿ ಶಾಲೆ ಗಂಜಿಗಟ್ಟಿ ನಾವು ಸುಮಾರು ೫ ವರ್ಷಗಳಿಂದ ಇಲ್ಲಿ ಅಭ್ಯಾಸ ಮಾಡುತ್ತಿದ್ದು ಇಲ್ಲಿರುವ ಎಲ್ಲಾ ಶಿಕ್ಷಕರು ಉತ್ತಮವಾದ ಪಾಠ ಬೊಧನೆಯನ್ನು ಮಾಡುತ್ತಿದ್ದು ಇದರ ಜೋತೆಗೆ ಕಂಪ್ಯೂಟರ್ ಆಧಾರಿತ ಬೊಧನೆಯಿಂದ ಕಲಿಕೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಮುಂದೆ ನಡೆಯಲಿರುವ ೧೦ನೇ ತರಗತಿಯ ವಾರ್ಷಿಕ ಪರಿಕ್ಷೇಯಲ್ಲಿ ಉತ್ತಮವಾದ ಅಂಕವನ್ನು ಪಡೆಯಲು ಸಹಕಾರಿಯಾಗಿದೆ.
ಇಂತಹ ವಾತವರಣದಲ್ಲಿ ನಾವೆಲ್ಲ ಈ ಶಾಲೆಯಲ್ಲಿ ಕಲೆಯಲ್ಲು ಅದೃಷ್ಟ ಮಾಡಿದ್ದಿವಿ ಯಾಕಂದರೆ ಪ್ರತಿಯೊಬ್ಬ ಮಗುವಿಗೆ ಇಲ್ಲಿ ಉಚಿತ ಶಿಕ್ಷಣ ಜೋತೆ ಉಚಿತವಾದ ಊಟ ಮತ್ತು ವಸತಿಯ ವ್ಯವಸ್ಥೆಯೊಂದಿಗೆ ಎಲ್ಲ ವಿಧ್ಯಾರ್ಥಿಗಳಿಗೆ ಎಲ್ಲಾ ಶಿಕ್ಷಕರಿಂದ ಉತ್ತಮವಾದ ಸಲಹೆಗಳು ಮತ್ತು ಕಾಳಜಿ.
ಮೊಟ್ಟ ಮೊದಲಿಗೆ ನಮ್ಮ ಶಾಲೆಯಲ್ಲಿ ವೆಬ್ ಸೈಟ್ ನಲ್ಲಿ ವಿಕ್ಷಣೆ ಮಾಡುತ್ತಿರುವುದು ತುಂಬಾ ಖುಶಿಯಾದ ವಿಚಾರ ಇನ್ನು ಇದೇ ತರಹ ನಮ್ಮ ಶಾಲೆಯು ಸಂಪೂರ್ಣ ತಂತ್ರಜ್ಞಾನ ಆಧಾರಿತ ಶಾಲೆಯಾಗಿ ಪರಿವರ್ತನೆ ಹೊಂದಲಿ ಎನ್ನುವ ಅಶಾಭಾವ ನನ್ನದು .
ಇಲ್ಲಿ ಅಭ್ಯಾಸ ಮಾಡಲು ಸಹಕರಿಸಿದ ಎಲ್ಲ ಸಿಬ್ಬಂದಿ ವರ್ಗದವರಿಗೆ , ಎಲ್ಲಾ ಮೇಲಾಧಿಕಾರಿಗಳಿಗೆ ನಮ್ಮ ನಮನಗಳು .
ದೀಪಾ ೯ನೇ ತರಗತಿ
ಮೊರಾರ್ಜಿ ಶಾಲೆ ಗಂಜಿಗಟ್ಟಿ ನಾವು ಇಂತಹ ವಾತವರಣದಲ್ಲಿ ನಾವೆಲ್ಲ ಈ ಶಾಲೆಯಲ್ಲಿ ಕಲೆಯಲ್ಲು ಅದೃಷ್ಟ ಮಾಡಿದ್ದಿವಿ ಯಾಕಂದರೆ ಪ್ರತಿಯೊಬ್ಬ ಮಗುವಿಗೆ ಇಲ್ಲಿ ಉಚಿತ ಶಿಕ್ಷಣ ಜೋತೆ ಉಚಿತವಾದ ಊಟ ಮತ್ತು ವಸತಿಯ ವ್ಯವಸ್ಥೆಯೊಂದಿಗೆ ಎಲ್ಲ ವಿಧ್ಯಾರ್ಥಿಗಳಿಗೆ ಎಲ್ಲಾ ಶಿಕ್ಷಕರಿಂದ ಉತ್ತಮವಾದ ಸಲಹೆಗಳು ಮತ್ತು ಕಾಳಜಿ. ಸುಮಾರು ೪ ವರ್ಷಗಳಿಂದ ಇಲ್ಲಿ ಅಭ್ಯಾಸ ಮಾಡುತ್ತಿದ್ದು ಇಲ್ಲಿರುವ ಎಲ್ಲಾ ಶಿಕ್ಷಕರು ಉತ್ತಮವಾದ ಪಾಠ ಬೊಧನೆಯನ್ನು ಮಾಡುತ್ತಿದ್ದು ಇದರ ಜೋತೆಗೆ ಕಂಪ್ಯೂಟರ್ ಆಧಾರಿತ ಬೊಧನೆಯಿಂದ ಕಲಿಕೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿದೆ.
ಇಲ್ಲಿ ಆಟಗಳು, ಪಾಠ, ಯೋಗಾಸನ, ಪ್ರಯೋಗಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಅತೀ ಹೆಚ್ಚಿನ ರೀತಿಯಲ್ಲಿ ಈ ವರ್ಷ ನಮ್ಮ ಶಾಲೆಯಲ್ಲಿ ಬದಲಾವಣೆಯನ್ನು ನೋಡಿದ್ದೇವೆ. ಎಲ್ಲ ವಿಷಯದ ಶಿಕ್ಷಕರು, ಪ್ರಯೋಗಾಲಯ, ಗ್ರಂಥಲಾಯ , ಎಲ್ಲ ಮಕ್ಕಳಿಗೆ ಸವಲತ್ತುಗಳು ಸಿಕ್ಕಿವೆ. ಇದನ್ನು ಸರಕಾರದವರು ಕೊತ್ತಿರುವುದನ್ನು ನಾವೆಲ್ಲರು ಉಪಯೋಗಿಸಿಕೊಂಡು ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು .
ಶಿಕ್ಷಕರುಗಳ ನುಡಿ / Teacher speak
ಮುತ್ತಪ್ಪ ಕೆಳಗಿನಮನಿ
೨೦೧೬-೧೭ ನೇ ಸಾಲಿನಲ್ಲಿ ಎಲ್ಲಾ ತರಗತಿಯ ಮಕ್ಕಳಿಗೆ ಭಾಷೆ ಕನ್ನಡದಲ್ಲಿ ಗದ್ಯ ಪದ್ಯ ವ್ಯಾಕರಣಕ್ಕೆ ಸಂಬಂದಿಸಿದಂತೆ ಚಟುವಟಿಕೆಗಳನ್ನು ರೂಪಿಸಿ ವಾರದಲ್ಲಿ ಒಂದು ದಿನ ತರಗತಿಯಲ್ಲಿ ವಿಶೇಷ ತರಗತಿಯನ್ನು ನಡೆಸುತ್ತಿದ್ದು ಕಲಿಕೆ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವು,ಕುತೂಹಲಕಾರಿಯೂ ಆಗಿದ್ದು ಕಲಿಕಾ ಪ್ರಗತಿಗೆ ಉತ್ತಮ ಮಾರ್ಗದರ್ಶನವಾಗಿದೆ. ದೃಕ್ ಮತ್ತು ಶ್ರವಣ ಮಾದ್ಯಮದ ಹಿನ್ನಲೆಯಲ್ಲಿ ಕಲಿಸುತ್ತಿರುವುದರಿಂದ ಕಲಿಕೆಯು ಸುಗಮವಾಗಿದೆ.ಇದರಿಂದ ಫಲಿತಾಂಶದಲ್ಲಿ ಹೆಚ್ಚಿನ ಸುಧಾರಣೆಯನ್ನು ತರಲು ಸಾದ್ಯವಾಗುತ್ತಿದೆ .ತರಗತಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ವಿಶೇಷ ಕಾಳಜಿವಹಿಸಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವುದು . SSLC ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನಿಡಿ ಕಾಳಜಿವಹಿಸಿ ಉತ್ತಮ ಫಲಿಂತಾಶವನ್ನು ಕೊಡುವುದು . ವಿಷಯಕ್ಕೆ ಸಂಭಂದಿಸಿದಂತೆ ಚಟುವಟಿಕೆಗಳನ್ನು ಮಾಡಿಸುವುದು, ವಿದ್ಯಾರ್ಥಿಗಳಿಗೆ ನೃತ್ಯ , ಹಾಡು, ನಾಟಕಗಳನ್ನು ಹಮ್ಮಿಕೊಳ್ಳಲಾಗಿದೆ ಇದರಿಂದ ಮಕ್ಕಳ ಪ್ರತಿಭೆಯನ್ನು ಗುರ್ತಿಸುವುದು.
ಅಶೋಕ
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನಕ್ಕೆ ಸಂಭಂದಿಸಿದ ಪಿ.ಪಿ.ಟಿ , ವರ್ಚ್ಯೂವಲ್ ಪ್ರಯೋಗಲಯ ಮತ್ತು ಪ್ರತಿ ಪಾಠದ ಕೋನೆಯಲ್ಲಿ ವಿಡಿಯೋಗಳನ್ನು ತೋರಿಸುವದರಿಂದ ಮಕ್ಕಳಿಗೆ ಇದರ ಕಲಿಕೆಯಲ್ಲಿ ಮತ್ತಷ್ಟು ಹಿಡಿತವನ್ನು ಸಾಧಿಸಲು ಸಿದ್ಧರಾಗಿದ್ದಾರೆ . ಮಕ್ಕಳಿಗೆ ಕೇವಲ ಕಲಿಕೆ ಅಂದರೆ ತರಗತಿ ಕೋಣೆ ಮಾತ್ರ ಸಿಮೀತವಲ್ಲದೆ ಇತರೆ ಚಟುವಟಿಕೆಗಳ ಮೂಲಕ ಭೋಧನೆಯನ್ನು ಅತ್ಯಂತ ಪರಿಣಾಮಕಾರಿಯಾಗಲು ಸಹಕಾರಿಯಾಗಿದೆ . ಇವತ್ತಿನ ದಿನ ಮಕ್ಕಳು ತಂತ್ರಜ್ಞಾನದಲ್ಲಿ ತುಂಬಾ ಮುಂದುವರೆದರೆ ಶಿಕ್ಷಕರೆ ಹಿಂದೆ ಹಿದ್ದಾರೆ ಅದ್ದರಿಂದ ಶಿಕ್ಷಕರಾದವರು ಮೊದಲು ತಂತ್ರಜ್ಞಾನವನ್ನು ಅರಿತು ಮಕ್ಕಳ ಸಾಮಾರ್ಥ್ಯಕ್ಕನುಸಾರವಾಗಿ ಬೋಧನೆ ಮಾಡುವುದು ನಮ್ಮೇಲರ ಕರ್ತವ್ಯವಾಗಿದೆ .
ನಾವು ನಮ್ಮ ಶಾಲೆ ಇತರರಿಗಿಂತ ಬಿನ್ನವಾಗಿರಬೇಕು ಎಂಬುದು ನನ್ನ ಆಶೆಯ. ಇವತ್ತಿನ ದಿನ ಬದಲಾವನಣೆಯನ್ನು ಜನ ಬಯಸುತ್ತಾರೆ ಆ ಬದಲಾವಣೆ ನಮ್ಮಿಂದ ಆಗಬೇಕು ಮತ್ತು ಇದಕ್ಕಿಂತ ಮುಖ್ಯವಾದ ವಿಷಯವೆಂದರೆ ತಂತ್ರಜ್ಞಾನ ಅಧಾರಿತ ಶಿಕ್ಷಣ ನಿಡುವುದು ಹಾಗೂ ಯಾವುದೇ ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲಾ ನಾವು ಎಂಬುದನ್ನು ತೋರಿಸಿಕೊಡುವುದು.
ಪ್ರಾಂಶುಪಾಲರ ನುಡಿ / Principal speak
ಎಸ್. ಎಸ್. ಹೆಬ್ಬಳಿ
- ಕೆಲವು ವಿಶೇಷ ಚಿತ್ರಗಳನ್ನು ತೋರಿಸುವ ಮೂಲಕ ಮಕ್ಕಳ ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸುವುದು
- ಪ್ರತಿ ದಿನ ಯಾವುದಾದರು ಒಂದು ವಿಷಯದ ಬಗ್ಗೆ ಒಬ್ಬ ವಿದ್ಯಾರ್ಥಿ ಮಾತನಾಡುವುದು. ಈ ಮೂಲಕ ಮಾತನಾಡಿವ ಕೌಶಲವನ್ನುಮಕ್ಕಳಲ್ಲಿ ವೃದ್ದಿಸುವುದು
- ತಂತ್ರಜ್ಞಾನಧಾರಿತ ಬೊಧನೆಯಿಂದ ಮಕ್ಕಳಲ್ಲಿ ಹೆಚ್ಚಿನ ರೀತಿಯಾ ಜ್ಞಾನ ಸಂಪಾದನೆಯಲ್ಲಿ ಉಳಿಸಿಕೊಳ್ಳಲು ಸಹಕಾರಿಯಾಗಿದೆ.
- ಪತ್ರಿಕೆಗಳನ್ನು ಓದುವ ಸಾಮರ್ಥ್ಯವನ್ನು ವೃದ್ದಿಸುವುದು ಪತ್ರಿಗಳಲ್ಲಿನ ವಿಶೇಷ ವಿಷಯಗಳನ್ನು ಮಕ್ಕಳಿಂದ ಸಾದರ ಪಡಿಸುವುದು
- ಹಾಡುಗಾರಿಕಾ ಕೌಶಲ ವೃದ್ಧಿಸುವುದು- ಪದ್ಯಗಳನ್ನು ತಂತ್ರಜ್ಞಾನವನ್ನು ಬಳಸಿ ಆಲಿಸುವುದು. ನಂತರ ಮಕ್ಕಳಿಂದ ಹಾಡಿಸುವುದು. ಈ ಮೂಲಕ ಆಲಿಸುವ ಮತ್ತು ಹಾಡುವ ಕೌಶಲಗಳನ್ನು ವೃದ್ಧಿಸುವುದು
- ಕನ್ನಡದಲ್ಲಿ ಸುಡುಕು ಮಾದರಿಗಳು,ಪದಬಂಧಗಳು ತುಂಬುವುದು ಈ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ವೃದ್ದಿಸುವುದು.
- ಮಕ್ಕಳಲ್ಲಿ ಓದುಗಾರಿಕೆ,ಮಾತುಗಾರಿಕೆ ಆಲಿಸುವಿಕೆ ಮೂಲಕೌಶಲದ ಜೊತೆಗೆ ಚಿಂತನಾ ಶೀಲ,ಕ್ರಿಯಾಶೀಲ,ಸೃಜನಾತ್ಮಕ ಕೌಶಲಗಳನ್ನು ಹೊರಸೆಳೆಯುವಲ್ಲಿ ಪ್ರಯತ್ನಿಸಲಾಗುತ್ತಿದೆ
ಎಸ್. ಎಸ್. ಹೆಬ್ಬಳಿ
ಪ್ರಾಂಶುಪಾಲರು
ಮೋ.ದೇ.ವ.ಶಾಲೆ ಗಂಜಿಗಟ್ಟಿ
ಶಾಲಾ ಪ್ರೊಫೈಲ್ / School Profile
ವಿದ್ಯಾರ್ಥಿಗಳ ಸಂಖ್ಯಾಬಲ / Student Strength
Class | Medium | Girls | Boys | Total! |
---|---|---|---|---|
6th | English | 22 | 28 | 50 |
7th | English | 22 | 35 | 57 |
8th | English | 22 | 26 | 48 |
9th | English | 23 | 34 | 57 |
10th | English | 24 | 26 | 50 |
Total | English | 149 | 113 | 262 |
ಶಿಕ್ಷಕರ ಮಾಹಿತಿ / Teacher Profile
ಹೆಸರು Name |
ಹುದ್ದೆ Designation |
ವಿದ್ಯಾರ್ಹತೆ Qualification |
ಬೋಧನಾ ಅನುಭವ Teaching Experience |
additional ಇತರೆ |
---|---|---|---|---|
ಶ್ರೀ ಶಂಭುಲಿಂಗಪ್ಪ ಸಿ. ಹಿತ್ತಲಮನಿ Sri Shambulingappa C Hittalamani |
ಪ್ರಾಂಶುಪಾಲರು Principal |
ಎಂ.ಎಸ್ಸಿ,ಬಿ ಎಡ್ M.Sc, B.Ed |
15 ವರ್ಷ 15 year |
ನಿಯೋಜನೆ Deputation |
ಶ್ರೀ ಎಸ್. ಎಸ್.ಹೆಬ್ಬಳಿ Sri S S Hebbali |
ಪ್ರಭಾರ ಪ್ರಾಂಶುಪಾಲರು I/C Principal |
ಎಂ.ಎ,ಬಿ ಎಡ್ M.A.B.Ed |
12 ವರ್ಷ 12 year |
|
ಶ್ರೀ ಮಂಜುನಾಥ ಸಿ.ಪುರದ Sri Manjunath C Purad |
ಕನ್ನಡ ಸ.ಶಿ Assistant teacher (Kannada) |
ಬಿ ಎ,ಬಿ ಎಡ್ B A B.Ed |
13 ವರ್ಷ 13 year |
ನಿಯೋಜನೆ Deputation |
ಶ್ರೀ ನಿಂಗಪ್ಪ ಟಿ. ಲಮಾಣಿ Shri Ningappa T Lamani |
ಸಹ ಶಿಕ್ಷಕರು (ದೈ.ಶಿ) Assistant teacher (Physical education) |
ಬಿ ಎ,ಬಿ ಪಿ.ಇಡಿ B A B.PEd |
12 ವರ್ಷ 12 year |
|
ಶ್ರೀ ಎಸ್. ಎಮ್. ಮನಿಯಾರ Shri S.M. Maniyar |
ಸಹಶಿಕ್ಷಕರು (ಗಣಿತ) Assistant Teacher (English) |
ಎಂ ಎಸ್.ಸಿ,ಬಿ ಎಡ್ MSc,Bed |
5 ವರ್ಷ 5 year |
|
ಶ್ರೀಮತಿ ಸುಮಾ ಆರ್. ಮಗದೂರ Suma R Magadur |
ಸಹಶಿಕ್ಷಕರು (ವಿಜ್ಞಾನ) Assistant Teacher (Science) |
ಎಂ ಎಸ್.ಸಿ,ಬಿ ಎಡ್ MSc,Bed |
5 ವರ್ಷ 5 year |
ನಿಯೋಜನೆ Deputation |
ಶ್ರೀಮತಿ ಪೂರ್ಣಿಮಾ ನಂದಿಹಳ್ಳಿ Smt Purnima Nandihalli |
ಸಹಶಿಕ್ಷಕರು (ಕಂಪ್ಯೂಟರ) Assistant Teacher (Computer) |
ಬಿ.ಸಿ.ಎ , ಎಂ.ಸಿ.ಎ BCA MCA |
5 ವರ್ಷ 5 year |
ನಿಯೋಜನೆ Deputation |
ಶ್ರೀ ಬಸಯ್ಯ. ಎಚ್. ಹೀರೆಮಠ Sri Basayya H Hiremath |
ಸಹಶಿಕ್ಷಕರು (ಸಂಗೀತ) Assistant Teacher (Music) |
ಎಂ.ಎ (ಸಂಗೀತ) M.A (Music) |
5 ವರ್ಷ 5 year |
|
ಶ್ರೀಮತಿ ಲತಾ ರಜಪೂತ Smt Lata Rajaput |
ಸ್ಟಾಫ್ ನರ್ಸ್ Staff Nurse |
ಜಿ.ಎನ್.ಎಂ GNM |
5 ವರ್ಷ 5 year |
|
ಶ್ರೀ ರವಿ.ಸಿ Sri Ravi.C |
ಸಹಶಿಕ್ಷಕರು (ಸಮಾಜ ವಿಜ್ಞಾನ) Assistant Teacher (Social science) |
ಎಂ ಎ ಬಿ ಎಡ್ M.A Bed |
4 ವರ್ಷ 4 year |
|
ಶ್ರೀ ಅಶೋಕ ಎಂ.ಪೂಜಾರಿ Sri Ashok M Pujari |
ಸಹಶಿಕ್ಷಕರು (ವಿಜ್ಞಾನ) Assistant Teacher (Science) |
ಎಂ.ಎಸ್ಸಿ,ಬಿ ಎಡ್ M.Sc,Bed |
1.5 ವರ್ಷ 1.5 year |
ನಿಯೋಜನೆ Deputation |
ಶ್ರೀ ಮುತ್ತಪ್ಪ ಫ. ಕೆಳಗಿನಮನಿ Sri Muttappa F Kelaginamani |
ಸಹಶಿಕ್ಷಕರು (ಕನ್ನಡ) Assistant Teacher (Kannada) |
ಎಂ ಎ,ಬಿ ಎಡ್ MA,Bed |
8 ವರ್ಷ 8 year |
ನಿಯೋಜನೆ Deputation |
ಶ್ರೀ ದಯಾನಂದ ಎಸ್. ಹಿರೇಮಠ Sri Dayanand S Hiremath |
ಸಹಶಿಕ್ಷಕರು (ಹಿಂದಿ) Assistant Teacher (P.E) |
ಎಂ ಎ,ಬಿ ಎಡ್ MA,Bed |
10 ವರ್ಷ 10 year |
470px
Please click on details staff photos
ನಮ್ಮ ಸಮುದಾಯ/ My Community
ಶಾಲಾ ಸಂಸತ್ತು / School Parliment
ಖಾತೆಗಳು | ಮಂತ್ರಿಗಳು | ಮಾರ್ಗದರ್ಶಿ ಶಿಕ್ಷಕರು |
---|---|---|
ವಿಧ್ಯಾರ್ಥಿ ಪ್ರತಿನಿಧಿಗಳು | ವಿನಾಯಕ ಹಡಪದ ಮತ್ತು ಅಶ್ವೀನಿ ಆನೇಪ್ಪನವರ | ಶ್ರೀ ಎಸ್. ಎಸ್.ಹೆಬ್ಬಳ್ಳಿ |
ಪ್ರಾರ್ಥನಾ | ಪ್ರವೀಣ ಮೂಡಬಾಗಿಲ ಮತ್ತು ಅನ್ನಪೂರ್ಣ ಲಕ್ಕಮ್ಮನವರ | ಶ್ರೀ ರವಿ . ಸಿ |
ಶಿಕ್ಷಣ | ವೀರನಗೌಡಾ ಪಾಟೀಲ ಮತ್ತು ಭಿಮವ್ವ ಲಕ್ಕಿಕೊಪ್ಪ | ಶ್ರೀ ರವಿ . ಸಿ |
ಸಾಂಸ್ಕೃತಿಕ | ಪ್ರಶಾಂತ ಉಡಚಮ್ಮನವರ ಮತ್ತು ಕೀರ್ತಿ ಜಲ್ಲಪೂರ | ಶ್ರೀ .ಬಿ.ಎಚ್. ಹಿರೇಮಠ |
ಪರೀಕ್ಷಾ | ಅರುಣ ಶೇರಖಾನೆ ಮತ್ತು ನೇತ್ರಾವತಿ ಕಟ್ಟಿಮನಿ | ಶ್ರೀ ಎಸ್. ಎಮ್. ಮನಿಯಾರ |
ಗ್ರಂಥಾಲಯ | ಫಕ್ಕೀರೇಶ ಸಣ್ಣಮನಿ ಮತ್ತು ದೀಪಾ ಮಾಳಗಿ | ಶ್ರೀ ಎಂ.ಎಫ್. ಕೆಳಗಿನಮನಿ |
ಕ್ರೀಡಾ ಮತ್ತು ಶಿಸ್ತು | ಭಿಮಣ್ಣ ತಳಗೇರಿ ಮತ್ತು ಸ್ವಾತಿ ಗಾಣಿಗೇರ | ಶ್ರೀ ಎನ್. ಟಿ . ಲಮಾಣಿ |
ಆರೋಗ್ಯ ಮತ್ತು ಸ್ವಚ್ಚತೆ | ಗೌತಮ ಮೈಲಮ್ಮನವರ ಮತ್ತು ಕಾವ್ಯ ತಿಗಡಿ | ಶ್ರೀಮತಿ ಲತಾ ರಜಪೂತ |
ಆಹಾರ ಮತ್ತು ವಸತಿ | ಅರ್ಜುನ ಲಮಾಣಿ ಮತ್ತು ಶಿವಲೀಲಾ ಭಾವಿಕಟ್ಟಿ | ಶ್ರೀ ಎನ್. ಟಿ . ಲಮಾಣಿ |
ಪರಿಸರ ಮತ್ತು ಸಹಕಾರ | ವಿನಯ ಹಿರೇಮಠ ಮತ್ತು ಲಕ್ಷ್ಮೀ . ಡಿ. ಸವಣೂರ | ಶ್ರೀ ಡಿ.ಎಸ್. ಹಿರೇಮಠ |
ಶಾಲಾ ಸಂಘ / School Club
ಸಂಘಗಳು | ಮಾರ್ಗದರ್ಶಿ ಶಿಕ್ಷಕರು | ಕಾರ್ಯದರ್ಶಿಗಳು |
---|---|---|
ಭಾಷಾ ಸಂಘ - ಕನ್ನಡ, ಇಂಗ್ಲೀಷ್, ಹಿಂದಿ | ಶ್ರೀ ಎಂ.ಎಫ್. ಕೆಳಗಿನಮನಿ, ಶ್ರೀ ಎಸ್. ಎಸ್.ಹೆಬ್ಬಳ್ಳಿ, ಶ್ರೀ ಡಿ.ಎಸ್. ಹಿರೇಮಠ | ಶಿವಲೀಲಾ ಭಾವಿಕಟ್ಟಿ, ಸಚೀನ ಸವಣೂರ, ಸೋನು ಕರಿಯಪ್ಪನವರ |
ವಿಜ್ಞಾನ ಸಂಘ | ಶ್ರೀ ಅಶೋಕ. ಎಸ್. | ರಕ್ಷಿತ ಅಂಕಲಕೋಟಿ, ನಂದಾ ಗಾಣಿಗೇರ |
ಗಣಿತ ಸಂಘ | ಶ್ರೀ ಎಸ್. ಎಮ್. ಮನಿಯಾರ | ವೀರಣಗೌಡ ಪಾಟೀಲ, ಸುನಿತಾ ತಳವಾರ |
ಇತಿಹಾಸ ಸಂಘ | ಶ್ರೀ ರವಿ. ಸಿ | ಅರುಣ ಶೇರಖಾನೆ , ಪುಷ್ಪಾ ಕಾಮನಹಳ್ಳಿ |
ಕ್ರೀಡಾ ಸಂಘ | ಶ್ರೀ ಎನ್. ಟಿ . ಲಮಾಣಿ | ಮಹೇಶ ಸುರಣಗಿ, ಸುಕನ್ಯಾ ಹಿರೇಮಠ |
ಕಲೆ ಮತ್ತು ಸಂಸ್ಕೃತಿ ಸಂಘ | ಶ್ರೀ .ಬಿ.ಎಚ್. ಹಿರೇಮಠ | ಶೈಲೇಂದ್ರ ಬಳಿಗಾರ , ಮಲ್ಲಮ್ಮ ಪಾಗಲೆಣ್ಣವರ |
ಶಾಲಾ - ಸಂಚಿಕೆ ಸಂಘ | ಶ್ರೀ ಎಂ.ಎಫ್. ಕೆಳಗಿನಮನಿ | ನಾಗರಾಜ ಕತ್ತಿ, ಅನ್ನಪೂರ್ಣ ಲಕ್ಕಮ್ಮನವರ |
ಶಾಲಾ ಸಹಕಾರ ಸಂಘ | ಶ್ರೀ ಎಂ.ಎಫ್. ಕೆಳಗಿನಮನಿ, ಶ್ರೀ ಡಿ.ಎಸ್. ಹಿರೇಮಠ | ಹನಮಂತರೆಡ್ಡಿ ಸಂಂಅಯಲ್ಲಪ್ಪನವರ, ಸುನೀಲ ತಳ್ಳಳ್ಳಿ, ಸಂಗೀತಾ ಮೂಡಿ, ನೇಹಾ ನಾರಾಯಣಪೂರ |
ಪ್ರವಾಸ ಮತ್ತು ಹೊರ ಸಂಚಾರ ಸಂಘ | ಶ್ರೀ ಅಶೋಕ ಎಸ್, ಶ್ರೀ ರವಿ.ಸಿ | ಪ್ರಿಯಾ ಸವನೂರ, ವಿನಾಯಕ ಅಂಗಡಿ |
ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು or ದಾನಿಗಳು / Non Governmental organizations supporting the school or donours
- ಶ್ರೀಕಾಂತ ದುಂಡಿಗೌಡ - ಭರತ ಸೇವಾ ಸಂಸ್ಥೆ / shrikanth dundigaouda - Bharat seva samsthe.
- ಅಂಬುಜಾ ಮೇಜ್ ಕಂಪನಿ, ಮಡ್ಲಿ / Ambuja maij factory Madli.
- ಎಂ. ಪಿ. ಪಾಟೀಲ್ ಅಡ್ವೋಕೇಟ್ ಶಿಗ್ಗಾಂವ್. / M.P.Patil Advocate Shiggaon.